ಮನೆ Latest News ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ; ಕೊಲೆಯಾದ ರೇಣುಕಾಸ್ವಾಮಿ ತಂದೆ ಶಿವನ ಗೌಡರ್ ಹೇಳಿದ್ದೇನು?

ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ; ಕೊಲೆಯಾದ ರೇಣುಕಾಸ್ವಾಮಿ ತಂದೆ ಶಿವನ ಗೌಡರ್ ಹೇಳಿದ್ದೇನು?

0

ಚಿತ್ರದುರ್ಗ: ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ಡಿ ಗ್ಯಾಂಗ್ ನಿಂದ ಕೊಲೆಯಾದ  ರೇಣುಕಾಸ್ವಾಮಿ ತಂದೆ ಶಿವನ ಗೌಡರ್ ಪ್ರತಿಕ್ರಿಯಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು ದರ್ಶನ್ ಅವರ ಫೋಟೋ ನೋಡಿದ್ರೆ ಅವರಿಗೆ ತಪ್ಪು ಮಾಡಿದ್ದೇನೆ ಎಂಬ ಭಾವನೆ ಕಾಣಿಸುತ್ತಿಲ್ಲ. ನಮಗೆ ಆ ಫೋಟೋ ನೋಡಿ ಶಾಕ್ ಆಯ್ತು. ತನಿಖೆ ಆಗಲಿ, ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಈ ಘಟನೆ ನೋಡಿ ನನಗೆ ಪರಮಾಶ್ವರ್ಯ ಆಗಿದೆ ಎಂದಿದ್ದಾರೆ.

ಜೈಲು ಜೈಲೇ ಆಗಿರ್ಬೇಕು ಹೊರತು ಅದು ಮತ್ತೊಂದು ಆಗಿರಬಾರ್ದು ಎಂದು ಬೇಸರ ಹೊರ ಹಾಕಿದ್ದಾರೆ. ಕುರ್ಚಿ ಮೇಲೆ ಕುಳಿತು ಚಹಾ , ಸಿಗರೇಟ್ ಹಿಡಿದು ಕೂತಿದ್ದಾರೆ. ರೆಸಾರ್ಟ್ ನಲ್ಲಿ ಕುಳಿತಂತೆ ಕುಳಿತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ಪೊಲೀಸರ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ.ನನ್ನ ಮಗನ ಕಳೆದುಕೊಂಡಿದ್ದು ನನಗೆ ಗೊತ್ತಿದೆ. ನನ್ನ ಮಗನಿಗೆ ಶಾಂತಿ ಸಿಗಬೇಕು, ಅವರಿಗೆ ಶಿಕ್ಷೆಯಾಗಬೇಕು. ಸರ್ಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಬೇಕು. ಕೈಮುಗಿದು ಸರ್ಕಾರವನ್ನ ನಾನು ಕೇಳುತ್ತೇನೆ ಎಂದಿದ್ದಾರೆ.ಗೃಹ ಸಚಿವರು ಕೂಡಾ ಈ ಬಗ್ಗೆ ಗಮನ ಹರಿಸಬೇಕು. ನಮ್ಮ ಮನೆತನ ಕಣ್ಣೀರಲ್ಲಿ ಕೈತೊಳೆದಿದ್ದೇವೆ. ಇಂಥವರಿಗೆ ಮನುಷ್ಯತ್ವ ಇದಿಯಾ ಎಂದು ಪ್ರಶ್ನೆ ಮಾಡಿದ್ದಾರೆ.

ದಿನ ಬೆಳಕಾದ್ರೆ ಸೊಸೆ ಜೀವನದ ಬಗ್ಗೆ ಸಂಕಟ ಆಗುತ್ತದೆ. ಇಂಥ ದೃಶ್ಯ ನಮ್ಮ ಹೊಟ್ಟೆ ಉರಿಸುತ್ತದೆ.ದಯವಿಟ್ಟು ಅರ್ಥ ಮಾಡಿಕೊಂಡು ಸಮಗ್ರ ತನಿಖೆ ಆಗಬೇಕು. ಈ ಥರಾ ಆಗುವುದರಿಂದ ಸಿಬಿಐ ತನಿಖೆ ನಡೆಸಬೇಕು ಎಂದು ಶಿವನಗೌಡರ್ ಒತ್ತಾಯಿಸಿದ್ದಾರೆ.

ಇನ್ನು ಕೊಲೆಯಾದ ರೇಣುಕಾಸ್ವಾಮಿ ಸಂಬಂಧಿ ಷಡಕ್ಷರಯ್ಯ ಪ್ರತಿಕ್ರಿಯಿಸಿ ಮಾಧ್ಯಮದಲ್ಲಿ ನೋಡಿ ನನಗೆ ಶಾಕ್ ಆಯ್ತು.ತನಿಖೆ ಸರಿ ದಾರಿಯಲ್ಲಿತ್ತು, ಆ ಭಾವನೆ ಕೂಡಾ ಇತ್ತು.ಆದರೆ ಈ ಫೋಟೋ ನೋಡಿ ಶಾಕ್ ಆಗಿದೆ.ಈ ರೀತಿಯಲ್ಲಿ ಹೇಗೆ ನಡೀತು ಎಂಬ ಸಂಶಯ ಕಾಡುತ್ತಿದೆ.ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ, ನ್ಯಾಯ ಸಿಗುವ ಭರವಸೆ ಇದೆ.ಇದು ಖಂಡಿತವಾಗಲಿ ಸ್ವಲ್ಪ ಶಾಕ್ ಕಾಡುತ್ತಿದೆ.ಈ ಫೋಟೋ ಘಟನೆ ನಡೆದಿದ್ರೆ, ಅದನ್ನ ತನಿಖೆ ನಡೆಸಬೇಕಿದೆ.ಸರ್ಕಾರ& ಪೊಲೀಸ್ ಇಲಾಖೆ ಕೂಡಾ ಎಲ್ಲರನ್ನ ಭೇಟಿ ಮಾಡಿದ್ದೇವೆ.ನಮಗೆ ನ್ಯಾಯ ಸಿಗುವ ಭರವಸೆ ನೀಡಿದ್ದರು.ಮುಂದೆ ಈ ರೀತಿ ಆಗಬಾರ್ದು ಎಂದು ನಾವು ಕೇಳಿ ಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಾರೆ.

ಜೈಲಿನಲ್ಲಿ ಬಿಂದಾಸ್ ಆಗಿರುವ ನಟ ದರ್ಶನ್ : ವಿಲ್ಸನ್ ಗಾರ್ಡನ್ ನಾಗ , ಮ್ಯಾನೇಜರ್ ನಾಗರಾಜ್ ಜೊತೆ ಹರಟೆ ಹೊಡೆಯುತ್ತಿರುವ ವೀಡಿಯೋ ವೈರಲ್

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲು ಸೇರಿ ಬರೋಬ್ಬರಿ ಎರಡು ತಿಂಗಳಾಯ್ತು. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಾಗಿನಿಂದ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಊಟ ಸೇರುತ್ತಿಲ್ಲ , ಅನಾರೋಗ್ಯ ಕಾಡುತ್ತಿದೆ ಎಂದೆಲ್ಲಾ ಸುದ್ದಿಯಾಗುತ್ತಲೇ ಇತ್ತು. ಆದ್ರೀಗ ಜೈಲಿನಲ್ಲಿ ದರ್ಶನ್ ಹೇಗಿದ್ದಾರೆ ಎಂಬ ಫೋಟೋ ಒಂದು ವೈರಲ್. ಫೋಟೋ ನೋಡಿದವರು ಫುಲ್ ಶಾಕ್ ಆಗಿದ್ದಾರೆ.

ಹೌದು.. ಜೈಲಿನಲ್ಲಿ ನಟ ದರ್ಶನ್ ಅವರನ್ನು ಮೂರನೇ ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಆದರೆ ಇಷ್ಟು ದಿನ ಅವರು ಜೈಲಿನೊಳಗೆ ಸಾಕಷ್ಟು ನೋವಲ್ಲಿದ್ದಾರೆ. ಅವರಿಗೆ ಊಟ ಸೇರ್ತಿಲ್ಲ. ನಿದ್ದೆ ಮಾಡ್ತಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿತ್ತು.ಆದ್ರೀಗ ದರ್ಶನ್ ಹಾಗಿಲ್ಲ ಅನ್ನೋದು ಫೋಟೋ ನೋಡಿದ್ಮೇಲೆ ಗೊತ್ತಾಗಿದೆ. ತಮ್ಮ ಸ್ಪೆಷಲ್ ಬ್ಯಾರಕ್ ನಿಂದ ಹೊರಗೆ ಬಂದಿರುವ ನಟ ದರ್ಶನ್ ಹೊರಗೆ ಜೈಲಿನ ವರಾಂಡದಲ್ಲಿ ಡಾನ್ ವಿಲ್ಸನ್ ಗಾರ್ಡನ್ ನಾಗ ಹಾಗೂ ದರ್ಶನ್ ಅವರ ಮ್ಯಾನೇಜರ್ ನಾಗರಾಜ್ ಸೇರಿದಂತೆ ಮತ್ತೊಬ್ಬ ವ್ಯಕ್ತಿಯ ಜೊತೆ ದರ್ಶನ್ ಕುಳಿತುಕೊಂಡು ಆರಾಮವಾಗಿ ನಗ್ತಾ ಸಿಗರೇಟ್ ಸೇದ್ತಾ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿದೆ. ವಿಗ್ ಇಲ್ಲದೇ ದರ್ಶನ್ ಜೈಲಿನಲ್ಲಿದ್ದಾರೆ ಅನ್ನೋದು ಫೋಟೋ ನೋಡಿದ್ರೆ ಕ್ಲಿಯರ್ ಆಗುತ್ತೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ ವೇಲು ಅನ್ನೋರು ಈ ಫೋಟೋವನ್ನು ತೆಗ್ದಿದ್ದಾರೆ. ಅಲ್ಲದೇ ಆ ಫೋಟೋವನ್ನು ತನ್ನ ಪತ್ನಿಗೆ ಕಳುಹಿಸಿದ್ದಾರೆ.ಅದೀಗ ವೈರಲ್ ಆಗಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಜೈಲಿನ ಒಳಗೆ ಕೈದಿಗಳಿಗೆ ಯಾವ ರೀತಿ ಆತಿಥ್ಯ ನೀಡಲಾಗುತ್ತಿದೆ ಅನ್ನೋದು ಬಯಲಾಗಿದೆ. ಅಲ್ಲದೇ ದರ್ಶನ್ ಬಗ್ಗೆ ಹರಿದಾಡುತ್ತಿದ್ದ ಸುದ್ದಿ ಎಷ್ಟರಮಟ್ಟಿಗೆ ನಿಜ ಅಂತಾ ಜನ ಪ್ರಶ್ನೆ ಮಾಡುವಂತಾಗಿದೆ.