ಚಿತ್ರದುರ್ಗ; ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಒಟ್ಟು ಇದುವರೆಗೂ 19 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಪ್ರಕರಣದ 7ನೇ ಆರೋಪಿ ಅನುಕುಮಾರ್ ಅಲಿಯಾಸ್ ಅನು ನನ್ನು ಇಂದು ಚಿತ್ರದುರ್ಗ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ದರ್ಶನ್ ಬಳಿಗೆ ಕರೆ ತರುವಲ್ಲಿ ನಾಲ್ಕನೇ ಆರೋಪಿ ರಘು ಗೆ ಅನು ಕುಮಾರ್ ಸಹಕರಿಸಿದ್ದ. ಈ ಹಿನ್ನೆಲೆ ತಲೆಮರೆಸಿಕೊಂಡಿದ್ದ ಅನು ಕುಮಾರ್ ನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಇತ್ತ ಮಗನನ್ನು ಅರೆಸ್ಟ್ ಮಾಡುತ್ತಿದ್ದಂತೆ ಅನು ಕುಮಾರ್ ತಂದೆ ತಾಯಿ ಆಘಾತಕ್ಕೆ ಒಳಗಾಗಿದ್ದರು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅನು ಕುಮಾರ್ ತಂದೆ ಚಂದ್ರಣ್ಣ (60) ಮಗ ಅಂದ್ರೆ ನನ್ಗೆ ಪ್ರಾಣ. ಆತ ಇಂತಹ ಕೆಲಸ ಮಾಡಿರಲ್ಲ. ಆತ ಒಳ್ಳೆಯವನು ಎಂದಿದ್ದರು. ಇದಾದ ಸ್ವಲ್ಪ ಹೊತ್ತಿಗೆ ಅನು ಕುಮಾರ್ ತಂದೆ ಚಂದ್ರಣ್ಣ ಕುಸಿದು ಬಿದ್ದಿದ್ದಾರೆ. ಹೀಗೆ ಬಿದ್ದವರು ಹೃದಯಾಘಾತದಿಂದ ಅಲ್ಲೇ ಸಾವನ್ನಪ್ಪಿದ್ದಾರೆ. ಅತ್ತ ಮಗ ಅರೆಸ್ಟ್ ಆದ ಆಘಾತದಲ್ಲಿದ್ದ ಅನು ತಾಯಿಗೆ ಇತತ ಪತಿಯೂ ಸಾವನ್ನಪ್ಪಿದ್ದು ಆಘಾತದ ಮೇಲೆ ಆಘಾತ ಉಂಟು ಮಾಡಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದು ನಾಲ್ವರ ಬಂಧನ
ಇನ್ನು ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಚಿತ್ರದುರ್ಗದಲ್ಲಿ ಪ್ರಕರಣದ 7ನೇ ಆರೋಪಿ ಅನು ಕುಮಾರ್ ಹಾಗೂ ಎಂಟನೇ ಆರೋಪಿ ಜಗದೀಶ್ ನನ್ನು ಚಿತ್ರದುರ್ಗ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ.
ಇನ್ನು ಇತ್ತ ಪ್ರಕರಣದ 18ನೇ ಹಾಗೂ 19ನೇ ಆರೋಪಿಗಳಾದ ಪುನೀತ್ ಹಾಗೂ ಹೇಮಂತ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಪುನೀತ್ ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಸ್ಕಾರ್ಫಿಯೋ ಕಾರು ನೀಡಿದ್ದ. ಇನ್ನು ಹೇಮಂತ್ ಸ್ಕಾರ್ಫಿಯೋ ಕಾರಿನಲ್ಲಿ ಆಗಿದ್ದ ರಕ್ತದ ಕಲೆಗಳನ್ನು ವಾಸ್ ಮಾಡಿದ್ದ ಎನ್ನಲಾಗಿದೆ. ಈ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಇನ್ನೋರ್ವ ಆರೋಪಿ ರಾಜು ಎಂಬಾತ ತಲೆಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದೆಲ್ಲದರ ನಡುವೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿಯನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿ ಬೆಂಗಳೂರಿಗೆ ಕರೆ ತರುವ ಸಿಸಿಟಿವಿಯ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ. ಮತ್ತೊಂದೆಡೆ ಪೊಲೀಸ್ ಅಧಿಕಾರಿ ಅವರ ಸ್ನೇಹಿತರೊಂದಿಗೆ ಕೊಲೆ ಪ್ರಕರಣದ ಕುರಿತಾಗಿ ಮಾತನಾಡುವ ಆಡಿಯೋ ಕೂಡ ವೈರಲ್ ಆಗಿದೆ.