ಮನೆ Blog ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ಸ್ ಚಳಿ ಬಿಡಿಸಿದ ಬ್ಯೂಟಿ ಕ್ವೀನ್ ರಮ್ಯಾ

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ಸ್ ಚಳಿ ಬಿಡಿಸಿದ ಬ್ಯೂಟಿ ಕ್ವೀನ್ ರಮ್ಯಾ

0

ಬೆಂಗಳೂರು; ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಧ್ವನಿ ಎತ್ತಿದ ಮೊದಲ ನಟಿ ಅಂದ್ರೆ ಅದು ರಮ್ಯಾ. ಎಕ್ಸ್ ನಲ್ಲಿ ಹಳೆಯ ಪೋಸ್ಟ್ ಒಂದನ್ನು ರೀ ಪೋಸ್ಟ್ ಮಾಡಿದ ರಮ್ಯಾ ದರ್ಶನ್ ಗೆ ಜೀವಾವಧಿ ಶಿಕ್ಷೆಯಾಗುತ್ತಾ ಎಂದು ಪ್ರಶ್ನಿಸಿದ್ದರು.ಅದಾದ ಬೆನ್ನಲ್ಲೇ ಇದೀಗ ರಮ್ಯಾ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಹಾಕಿ ಟ್ರೋಲರ್ಸ್ ಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ದರ್ಶನ್ ಪ್ರಕರಣವನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ಅವರು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್ ಅನ್ನೋ ಆಪ್ಶನ್ ಇದೆ. ಸಾಮಾಜಿಕ ಮಾಧ್ಯಮದಲ್ಲಿ ಬ್ಲಾಕ್ ಅನ್ನೋ ಒಪ್ಶನ್ ಇದೆ.ನಮಗೆ ಇಷ್ಟ ಇಲ್ಲದವರು, ಟ್ರೋಲ್ ಮಾಡುವವರು, ಕೆಟ್ಟ ಕಾಮೆಂಟ್ಸ್ ಮೂಲಕ ಕಿರುಕುಳ ಕೊಡುವವರು ಇದ್ದೇ ಇರ್ತಾರೆ .ನಾನು ಸೇರಿದಂತೆ ನಟ ನಟಿಯರನ್ನು ಟ್ರೋಲ್ ಮಾಡೋ ದುರುಳರಿರ್ತಾರೆ.ಕೆಟ್ಟ ಮೆಸೇಜ್ ಕಳಿಸಿದ್ರೆ ಕೊಂದೇ ಬಿಡುವ ಶೋಚನೀಯ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಕಾನೂನು ಪಾಲಿಸುವ ನಾಗರಿಕರು ಮಾಡಬೇಕಾದಂತಹ ಪ್ರಕರಣಗಳನ್ನು ನಾನು ದಾಖಲಿಸಿದ್ದೇನೆ.

ಟ್ರೋಲ್ ಮಾಡುವವರು ಕಿರುಕುಳ ನೀಡಿದ್ರೆ, ಪೊಲೀಸರಿಂದ ಎಚ್ಚರಿಕೆ ಕೊಡಿಸಬೇಕು.ಟ್ರೋಲರ್ಸ್  ಜೀವನವನ್ನು ಹಾಳುಮಾಡುತ್ತಿದ್ದಾರೆ.ಯಾರೂ ಕಾನೂನಿಗಿಂತ ಮೇಲಲ್ಲ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಯಾರಿಗೂ ಹೊಡೆಯಲು ಮತ್ತು ಕೊಲ್ಲಲು ಹಕ್ಕಿಲ್ಲ ನ್ಯಾಯ ಸಿಗುತ್ತೋ, ಇಲ್ಲವೋ , ಒಂದು ಕಂಪ್ಲೇಂಟ್ ಕೊಡಿ ಪೊಲೀಸರು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಪೋಲೀಸರು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯುವುದಿಲ್ಲ .ರೇಣುಕಾಸ್ವಾಮಿಗೆ ನ್ಯಾಯ ಕೊಡಿ ದರ್ಶನ್ ಎಂದು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ರಮ್ಯಾ ಬರೆದುಕೊಂಡಿದ್ದಾರೆ.ಅಲ್ಲದೇ ಹ್ಯಾಶ್ ಟ್ಯಾಗ್ ಬಳಸಿ ದರ್ಶನ್, ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ ಹೆಸರನ್ನು ರಮ್ಯಾ ಉಲ್ಲೇಖಿಸಿದ್ದಾರೆ.

ತಂದೆಯ ಪರವಾಗಿ ಧ್ವನಿ ಎತ್ತಿದ ದರ್ಶನ್ ಪುತ್ರ; ಕೆಟ್ಟ ಕಮೆಂಟ್ ಹಾಕೋರಿಗೆ ಥ್ಯಾಂಕ್ಸ್ ಎಂದ ವಿನೀಶ್

ಬೆಂಗಳೂರು;  ತನ್ನ ಅಭಿಮಾನಿಯನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ದರ್ಶನ್ , ಅವರ ಸ್ನೇಹಿತೆ ಪವಿತ್ರ ಗೌಡ ಸೇರಿ ಒಟ್ಟು 15 ಮಂದಿಯನ್ನು ಬಂಧಿಸಲಾಗಿದ್ದು, ಕಳೆದ ಮೂರು ದಿನಗಳಿಂದ ಅವರನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾ ದರ್ಶನ್ ಒಂದಷ್ಟು ಅಭಿಮಾನಿಗಳು ನಮ್ಮ ಬಾಸ್ ಮಾಡಿದ್ದು ಸರಿ ಅವರದ್ದೇನು ತಪ್ಪಿಲ್ಲ ಅಂತಿದ್ರೆ ಇನ್ನೊಂದಷ್ಟು ಮಂದಿ ಅಶ್ಲೀಲ ಕಮೆಂಟ್ ಗಳ ಮೂಲಕ ದರ್ಶನ್ ಅವರನ್ನು ನಿಂದಿಸುತ್ತಿದ್ದಾರೆ.

ಇದರ ಬೆನ್ನಲ್ಲೇ ಇದೀಗ ತಮ್ಮ ತಂದೆಯ ಪರವಾಗಿ ದರ್ಶನ್ ಪುತ್ರ ವಿನೀಶ್ ಧ್ವನಿ ಎತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ವಿನೀಶ್ ನನ್ನ ತಂದೆಯ ಬಗ್ಗೆ ಕೆಟ್ಟ ಕಮೆಂಟ್ ಗಳನ್ನು ಮಾಡುತ್ತಿರುವವರಿಗೆ ಹಾಗೇ ತಂದೆಯ ಬಗ್ಗೆ ಅಶ್ಲೀಲ ಭಾಷೆ ಬಳಸುತ್ತಿರುವವರಿಗೆ ಧನ್ಯವಾದಗಳು. ನನಗೆ 15 ವರ್ಷ. ನನಗೂ ಮನಸ್ಸಿದೆ.ಇಂತಹ ನಮ್ಮ ಕಷ್ಟದ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ.ನೀವು ನನಗೆ ಶಾಪ ಹಾಕೋದರಿಂದ ಯಾವುದೇ ಬದಲಾವಣೆ ಆಗೋದಿಲ್ಲ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

 

ಇನ್ನು ನಿಮಗೆಲ್ಲಾ ಗೊತ್ತಿರೋ ಹಾಗೇ ಘಟನೆ ನಡೆದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಡಿಪಿಯನ್ನು ತೆಗೆದು ಹಾಕಿದ್ದರು. ಅಲ್ಲದೇ ದರ್ಶನ್ ಸೇರಿದಂತೆ ಎಲ್ಲರನ್ನೂ ಅನ್ ಫಾಲೋ ಮಾಡಿದ್ದರು. ಇದೆಲ್ಲಾ ಆದ ಬಳಿಕ ಇದೀಗ ದರ್ಶನ್ ಪುತ್ರ ವಿನೀಶ್ ಅಪ್ಪನ ಪರವಾಗಿ ಪೋಸ್ಟ್ ಮೂಲಕ ಧ್ವನಿಯೆತ್ತಿದ್ದಾರೆ. ಇನ್ನು ವಿಜಯಲಕ್ಷ್ಮೀ ಅವ್ರು ಏನಾದ್ರು ಈ ಬಗ್ಗೆ ಮಾತನಾಡುತ್ತಾರಾ ಅನ್ನೋದು ಕಾದು ನೋಡಬೇಕಿದೆ.