ಮನೆ Latest News ಬೆಂಗಳೂರಿನಲ್ಲಿ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸುದ್ದಿಗೋಷ್ಠಿ

ಬೆಂಗಳೂರಿನಲ್ಲಿ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸುದ್ದಿಗೋಷ್ಠಿ

0

ಬೆಂಗಳೂರಿನಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರಾಗಿರುವ  ರಾಮದಾಸ್ ಅಠಾವಳೆ ಸುದ್ದಿಗೋಷ್ಠಿ ನಡೆಸಿದ್ರು.

ಈ ವೇಳೆ ಮಾತನಾಡಿದ ಅಹಮದಾಬಾದ್ ವಿಮಾನ ದುರಂತ ದುರದೃಷ್ಟಕರ. ಇದು ಎಲ್ಲರಿಗೂ ಹೆಚ್ಚಿನ ನೋವುಂಟು ಮಾಡುವ ದುರ್ಘಟನೆ. ಮಾಜಿ ಸಿಎಂ ವಿಜಯ್ ರೂಪಾನಿ ಸಹ ನಿಧನರಾಗಿದ್ದಾರೆ. ನಾಳೆ ನಾನೂ ಅಹಮದಾಬಾದ್ ಗೆ ಹೋಗುತ್ತಿದ್ದೇನೆ ಎಂದಿದ್ದಾರೆ.

ಕೇಂದ್ರ ಸರ್ಕಾರದಿಂದ ಜಾತಿ ಜನಗಣತಿ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಜಾತಿ ಜನಗಣತಿ ಮಾಡಲು ಮುಂದಾಗಿದೆ. ನಾನು ಹಿಂದೆಯೇ ಒಬಿಸಿ ಸಮುದಾಯದ ಜನಗಣತಿ ಮಾಡುವಂತೆ ಆಗ್ರಹಿಸಿದ್ದೆ. ಈಗ ಕೇಂದ್ರ ಸರ್ಕಾರ ಎಲ್ಲಾ ಜಾತಿಗಳ ಜನಗಣತಿ ಮಾಡುತ್ತಿದೆ. ಒಬಿಸಿ ಜಾತಿ ಎಷ್ಟಿದೆ ಅಂತ ನಿಶ್ಚಿತವಾದ ಅಂಕಿ ಅಂಶ ಇಲ್ಲ. ಕಾಲೇಲ್ಕರ್ ವರದಿ 52% ಒಬಿಸಿ ವರ್ಗ ದೇಶದಲ್ಲಿದೆ ಎಂದು ಹೇಳಿತ್ತು. ನಿರ್ದಿಷ್ಟ ಅಂಕಿ ಅಂಶ ಈಗ ಕೇಂದ್ರ ಸರ್ಕಾರದ ಜಾತಿ ಜನಗಣತಿಯಿಂದ ಗೊತ್ತಾಗಲಿದೆ. ರಾಹುಲ್ ಗಾಂಧಿಯೂ ಜಾತಿ ಜನಗಣತಿಗೆ ಆಗ್ರಹಿಸಿದ್ದರು.ಈಗ ಕೇಂದ್ರ ಸರ್ಕಾರವೇ ಜಾತಿ ಗಣತಿ ಮಾಡುತ್ತಿರುವುದಕ್ಕೆ ಅವರು ಸಹಕರಿಸಬೇಕು ಎಂದರು.

ಅತ್ಯಾಚಾರ  ಪ್ರಕರಣಗಳ ಸಂಬಂಧ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಕಡಿವಾಣ ಹಾಕಲಿ. ಪ್ರತಿ ಆರು ತಿಂಗಳಿಗೆ ಒಮ್ಮೆ  ಸಿಎಂ ಪರಿಶೀಲನಾ ಸಭೆ ನಡೆಸಲಿ ಎಂದ ಅವರು  ಭಾರತ ಪಿಒಕೆಯನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಲೇಬೇಕು. ಇದಕ್ಕಾಗಿ ಪಾಕಿಸ್ತಾನದ ಜೊತೆ ಒಂದು ಸಲ ಯುದ್ಧ ಆಗಲೇಬೇಕು. ವಿಮಾನದ ಎರಡೂ ಇಂಜಿನ್ ಗಳು ವಿಫಲವಾದ ಕಾರಣ ಅಹಮದಾಬಾದ್ ನಲ್ಲಿ ದುರಂತ ನಡೆಯಿತು. ತಾಂತ್ರಿಕ ಕಾರಣ ಏನು ಎನ್ನುವ ಪರಿಶೀಲನೆಯನ್ನು ತಜ್ಞರ ಸಮಿತಿ ನಡೆಸುತ್ತಿದೆ. ಯಾರ ತಪ್ಪು, ಏನು ಕಾರಣ ಅಂತ ಸಮಿತಿ ಪತ್ತೆ ಹಚ್ಚಲಿದೆ. ಕೇಂದ್ರದ ವಿಮಾನಯಾನ ಸಚಿವರ ರಾಜೀನಾಮೆಗೆ ವಿಪಕ್ಷ ಆಗ್ರಹಿಸಿದೆ. ರಾಜೀನಾಮೆ ಕೊಡುವುದು ಪರಿಹಾರ ಅಲ್ಲ.ವಿಪಕ್ಷಗಳು ರಾಜಕೀಯ ಕಾರಣಕ್ಕೆ ರಾಜೀನಾಮೆ ಕೇಳುವುದು ಸಹಜ ಎಂದ್ರು.

ಮಹಾರಾಷ್ಟ್ರ ಸೇರಿ ಬೇರೆ ರಾಜ್ಯಗಳಲ್ಲಿ ರಿಪಬ್ಲಿಕನ್ ಪಾರ್ಟಿ ಎನ್ ಡಿಎ ಜೊತೆಯಲ್ಲಿ ಇದೆ.ಕರ್ನಾಟಕದಲ್ಲಿ ಕೂಡಾ ರಿಪಬ್ಲಿಕನ್ ಪಕ್ಷ ಎನ್ ಡಿಎಯಲ್ಲಿ ಇರಬೇಕು.ಸದ್ಯ ಕರ್ನಾಟಕದಲ್ಲಿ ಎನ್ ಡಿಎ ಜೊತೆ ರಿಪಬ್ಲಿಕನ್ ಪಾರ್ಟಿ ಇಲ್ಲ.ಈ ಸಂಬಂಧ ರಾಜ್ಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಯುತ್ತಿದೆ. ಕೇಂದ್ರ ಸರ್ಕಾರವೇ ಜಾತಿ ಜನಗಣತಿ ನಡೆಸುತ್ತಿದೆ. ಕರ್ನಾಟಕ ಸರ್ಕಾರ ಜಾತಿ ಜನಗಣತಿ ನಡೆಸುವ ಅಗತ್ಯ ಇಲ್ಲ. ಕೇಂದ್ರ ಸರ್ಕಾರವೇ ಸಮೀಕ್ಷೆ ನಡೆಸುತ್ತದೆ. ಅದರಲ್ಲೇ ಕರ್ನಾಟಕದ ಜಾತಿಗಳ ಮಾಹಿತಿಯೂ ಸಿಗುತ್ತದೆ ಎಂದರು.