ಮನೆ Latest News ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ- 2024 ಸಮಾರಂಭ; ಕಾರ್ಯಕ್ರಮದಲ್ಲಿ ಮುಖಾಮುಖಿಯಾದ ಸಿಎಂ ಹಾಗೂ ಬಿಜೆಪಿ ನಾಯಕರು

ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ- 2024 ಸಮಾರಂಭ; ಕಾರ್ಯಕ್ರಮದಲ್ಲಿ ಮುಖಾಮುಖಿಯಾದ ಸಿಎಂ ಹಾಗೂ ಬಿಜೆಪಿ ನಾಯಕರು

0

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಮಣಶ್ರಿ ಶರಣ ಪ್ರಶಸ್ತಿ ಪ್ರದಾನ- 2024 ಸಮಾರಂಭ ನಡೆಯಿತು. ಸಿಎಂ ಸಿದ್ದರಾಮಯ್ಯ ಸಮಾರಂಭವನ್ನು ಉದ್ಘಾಟಿಸಿದರು.  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ರಮಣಶ್ರೀ ಪ್ರತಿಷ್ಠಾನ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮುಖಾಮುಖಿಯಾಗಿದ್ದಾರೆ.ಈ ವೇಳೆ ಉಭಯ ನಾಯಕರು ಪರಸ್ಪರ ಕುಶಲೋಪಚರಿ ವಿಚಾರಿಸಿಕೊಂಡಿದ್ದಾರೆ. ಸಣ್ಣ, ವಿಚಾರಕ್ಕೆ ಇಷ್ಟೆಲ್ಲಾ ಆಗ ಹೋಯಿತು. ನನ್ನ ಮಾತು ಅವತ್ತೆ ಕೇಳ ಬೇಕಿತ್ತು. ಆ ಸೈಟ್ ಆವಾಗಲೇ ವಾಪಸ್ ಕೊಟ್ಟಿದ್ರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ನಾನು ಅವತ್ತೇ ಹೇಳದೇ ಎಂದು ಸೋಮಣ್ಣ ಈ ವೇಳೆ ಹೇಳಿದ್ದಾರೆ. ಹಾಗಲ್ಲಾ ನನ್ನ ಮಾತು ಕೇಳು ಎಂದು ಈ ವೇಳೆ ಸಿಎಂ ಸಮಜಾಯಿಷಿ ನೀಡಿದ್ದಾರೆ . ಲ್ಯಾಂಡ್ ಗ್ರಾಬಿಂಗ್ ಆಕ್ಟ್ ಬಗ್ಗೆ ಹೇಳಿ, ಗೊತ್ತಿಲ್ಲದೇ ಮಾತಾಡಬೇಡ ಎಂದು ಸಿಎಂ ಸಿದ್ದರಾಮಯ್ಯ ಸೋಮಣ್ಣ ಅವರಿಗೆ ಹೇಳಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು. ಒಂದೇ ವೇದಿಕೆಯಲ್ಲಿ ಹಾಲಿ‌ ಸಿಎಂ ಮಾಜಿ ಸಿಎಂ ಮುಖಾಮುಖಿಯಾಗಿದ್ದಾರೆ. ಕಾರ್ಯಕ್ರಮಕ್ಕೆ‌ ಸಿಎಂ ಬಂದ ಬಳಿಕ ತಡವಾಗಿ ಆಗಮಿಸಿದ ಸಂಸದ/ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಇಬ್ಬರು ಪರಸ್ಪರ ಭೇಟಿಯಾಗಿ ಮುಗುಳು ನಕ್ಕಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಕುಳಿತಿದ್ದಾರೆ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರ ರಾಜ್ಯ ರೈಲ್ವೆ‌ ಸಚಿವ ವಿ.ಸೋಮಣ್ಣ  ವಿಮಾನ ನಿಲ್ದಾಣ ಮಾದರಿಯಲ್ಲಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡುತ್ತೇವೆ. ಈಗಾಗಲೇ ಡಿಪಿಆರ್ ಸಿದ್ದವಾಗಿದೆ. ಬೋರ್ಡ್ ಮುಂದೆ ಇಟ್ಟಾಗ ಕೆಲವೊಂದು ಸ್ಪಷ್ಟನೆ ಕೇಳಿದ್ರು. ಮುಂದಿನ ರೈಲ್ವೇ ಬೋರ್ಡ್ ಮುಂದೆ ಇಡುತ್ತೇವೆ. ಪ್ರಧಾನಿ ಮೋದಿ ಉತ್ತಮ ಕೆಲಸಕ್ಕೆ ಬೇಡ ಅನ್ನೊಲ್ಲ.ಸಚಿವ ಅಶ್ವಿನ್ ವೈಷ್ಣವ ಅವರೊಂದಿಗೆ ಮಾತನಾಡಿ ಆದಷ್ಟು ಬೇಗ ಕೆಲಸ ಆರಂಭ ಮಾಡುತ್ತೇವೆ ಎಂದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ  ಕಳೆದ ವರ್ಷವೂ ನಾನು ರಮಣಶ್ರೀ ಶರಣ ಪ್ರಶಸ್ರಿ ಪ್ರದಾನ ಮಾಡಿದ್ದೆ.ಬಸವರಾಜ ಬೊಮ್ಮಾಯಿ‌ ಕಳೆದ ವರ್ಷವೂ ಬಂದಿದ್ದರು. ಬರಲೇಬೇಕು ಅಂತ ಒತ್ತಾಯ ಮಾಡಿದ್ರು. ನಾನು ಬಸವೇಶ್ವರ ಕಾರ್ಯಕ್ರಮಕ್ಕೆ ತಪ್ಪಿಸಿಕೊಳ್ಳಲ್ಲ. ಬಸವಾದಿ ಶರಣರಿಂದ ಮೂಡಿ ಬಂದ ಸಾಹಿತ್ಯ. ಬಸವ ತತ್ವವನ್ನ 100ಕ್ಕೆ‌ 100 ರಷ್ಟು ಪಾಲನೆ ಮಾಡುವ ಪ್ರಯತ್ನ ಮಾಡಬೇಕು ಎಂದು ಪ್ರಶಸ್ತಿ ಪುರಸ್ಕೃತರನ್ನು ಸಿಎಂ ಅಭಿನಂದಿಸಿದ್ದಾರೆ. ಕಿರಿಯರಿಗೆ‌ ಸಾಕಷ್ಟು ಸಮಯವಿದೆ, ಹಿರಿಯರೂ ಪ್ರಶಸ್ರಿ ಪಡೆದುಕೊಂಡಿದ್ದಾರೆ. 100 ವರ್ಷ ಬದುಕಿ ಅಂತ ಗಾಂಧೀಜಿ‌ ಅಭಿಮಾನಿಯೊಬ್ಬರು ಪತ್ರ ಬರೆಯುತ್ತಾರೆ. ನಾನು 125 ವರ್ಷ ಬಾಳಬೇಕು ಅಂತ ಗಾಂಧೀಜಿ ಹೇಳುತ್ತಾರೆ. ನೀವು 100 ಇರಬೇಕು ಎಂದು ಹಿರಿಯ ಪ್ರಶಸ್ತಿ ಪುರಸ್ಕೃತರು. ಹೇ.. ನನಗೆ‌ ಶುಗರ್ ಇದೆ, 100 ವರ್ಷ ಇರೋಕೆ ಆಗೊಲ್ಲ ಬಿಡಿ. ಬೊಮ್ಮಾಯಿಗೂ ಶುಗರ್ ಇದೆ ಅಂದುಕೊಂಡಿದ್ದೇನೆ. ಎಲ್ಲ ರಾಜಕಾರಣಿಗಳಿಗೂ ಶುಗರ್ ಕರೋದು ಸಾಮಾನ್ಯ.ನೂರು ವರ್ಷ ಬದುಕಬೇಕೆಂಬ ಆಸೆ ಇದೆ. ಆದರೆ ವ್ಯಾಯಾಮ, ಯೋಗ ಕ್ರಮಬದ್ದವಾಗಿ ಮಾಡೋಕೆ ಆಗೊಲ್ಲ ಎಂದ ಸಿಎಂ ಸಿದ್ದರಾಮಯ್ಯ ಇದೇ ವೇಳೆ ಹೇಳಿದ್ದಾರೆ.

ಇನ್ನು  ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ  ಡಿಜಿಟಲ್ ಸಾಹಿತ್ಯಕ್ಕೆ ಸರ್ಕಾರದಿಂದ ಬೆಂಬಲ‌ ಸಿಗಬೇಕು. ಶರಣ ಸಾಹಿತ್ಯ, ಕನ್ನಡ ಸಾಹಿತ್ಯದ ಪ್ರಮುಖ ಭಾಗ. ನಮ್ಮ‌ ಸಮಾಜದಲ್ಲಿ ಆರ್ಥಿಕ ವ್ಯತ್ಯಾಸ ಇದೆ. ಇದು ಹೋದರೆ ಸಮಾಜದ ಬೇಧಭಾವ ಕಡಿಮೆ ಆಗುತ್ತೆ. ಆರ್ಥಿಕತೆ ಬದಲಾವಣೆ ಆಗಬೇಕು.100 ಕೋಟಿ ರೂ. ನಾವು ಬಿಡುಗಡೆ ಮಾಡಬಹುದು. ಆಗ ಅಭಿವೃದ್ಧಿ ಆಗುತ್ತೆ ಅಂತ ಹೇಳೋಕೆ ಆಗೊಲ್ಲ. ಡಾಂಬರು ಹಾಕಿದ್ರೆ ಸಾಲದು, ವಾಹನ ಓಡಾಡಿದ್ರೆ ಅಲ್ವಾ ಬದಲಾವಣೆ ಆಗೋದು. ಇಡೀ ದೇಶದಲ್ಲಿ ಈ ಬಗ್ಗೆ ಚರ್ಚೆ, ಬದಲಾವಣೆ ಆಗ್ಬೇಕು. 21ನೇ ಶತಮಾನದ ಸವಾಲುಗಳನ್ನ ಎದುರಿಸಬೇಕು.ಕೆಳ ಸಮುದಾಯದ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.