ಬೆಂಗಳೂರು; ದರ್ಶನ್ ಫೋಟೋ ವೈರಲ್ ಪ್ರಕರಣದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಸಚಿವ, ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ.ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಆಫೀಸರ್ ಗಳನ್ನು ಇಂಥ ಸ್ಥಳಗಳಿಗೆ ನಿಯೋಜಿಸಬೇಕು.ಆಗ ಮಾತ್ರ ಈ ರೀತಿ ಘಟನೆಗಳು ಆಗೋದನ್ನು ತಡೆಯಬಹುದು.ಯಾರು ಫೆಸಿಲಿಟಿಗಳನ್ನು ಕೊಟ್ಟಿದ್ದಾರೆ ಅಂತ ಗೃಹ ಮಂತ್ರಿಗಳಿಗೆ ಗೊತ್ತಿದೆ .ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಈ ಪ್ರಕರಣದಲ್ಲಿ ಕೆಳಹಂತದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡೋದರಿಂದ ಯಾವುದೇ ಪ್ರಯೋಜನ ಇಲ್ಲ.ಈ ಘಟನೆಯಲ್ಲಿ ಯಾವ ದೊಡ್ಡ ಅಧಿಕಾರಿ ಇದ್ರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು.ಆಗ ಮಾತ್ರ ಇಂತಹ ಘಟನೆ ಮುಂದೆ ಆಗಲ್ಲ ಎಂದಿದ್ದಾರೆ.
ಇಂತಹ ಘಟನೆಗಳ ಡಿಜಿ ಅವರಿಗೆ ಎಲ್ಲಾ ಗೊತ್ತಿರುವುದಿಲ್ಲ.ಆದರೆ ಅವರು ಪರಿಶೀಲನೆ ಮಾಡುತ್ತಿರಬೇಕಿತ್ತು. ಜೈಲಿಗೆ ಭೇಟಿ ಕೊಡಬೇಕು ಆಫೀಸರ್ ನ ಕರೆದು ವಾರ್ನ್ ಮಾಡಬೇಕಿತ್ತು.ನಮ್ಮ ಗೃಹ ಮಂತ್ರಿಗಳು ಅನುಭವಿಗಳಿದ್ದಾರೆ.ಈ ಘಟನೆ ಪುನರಾವರ್ತನೆ ಆಗದ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ.ಇದು ರಾಜ್ಯ ಸರ್ಕಾರದ ಹೊಣೆಯಲ್ಲ ಆದರೆ ಲೋಪ ಆಗಿರೋದು ನಿಜ.ಅಲ್ಲಿ ಫೋನ್ ಇಟ್ಕೊಂಡಿರೋದು ಸತ್ಯ. ಲೋಪ ಅಂತೂ ಆಗಿದೆ.ಎಲ್ಲೋ ಒಂದು ಕಡೆ ರೈಲ್ ಆಕ್ಸಿಡೆಂಟ್ ಆದಾಗ ರೈಲ್ವೆ ಸಚಿವ ರಾಜೀನಾಮೆ ಕೇಳೋಕೆ ಆಗುತ್ತಾ..?ಎಲ್ಲೋ ಜೈಲಲ್ಲಿ ಇಂತಹ ಘಟನೆಯಾದಾಗ ಗೃಹ ಮಂತ್ರಿ ರಾಜೀನಾಮೆ ಕೊಟ್ರೆ ದೇಶದಲ್ಲಿರುವ ಯಾವ ಸರ್ಕಾರ, ಯಾವ ಮಂತ್ರಿಗಳು ಕೂಡ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ದರ್ಶನ್ ಪತ್ನಿ ಶಾಲೆಯ ಸೀಟ್ ವಿಚಾರಕ್ಕೆ ಡಿಸಿಎಂ ಭೇಟಿ ಮಾಡಿದ್ದು.ಸಾರ್ವಜನಿಕವಾಗಿ ಡಿಕೆಶಿ ಅವರು ಯಾವುದೇ ಹೇಳಿಕೆ ನೀಡಿಲ್ಲ.ಅವರ ಭೇಟಿ ಬಗ್ಗೆ ಡಿಸಿಎಂ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ . ಈ ಪ್ರಕರಣದಲ್ಲಿ ಯಾರು ಮಧ್ಯಪ್ರವೇಶ ಮಾಡಿಲ್ಲ.ರಾಜಾತಿಥ್ಯ ನೀಡಲು ಯಾರೂ ಕೂಡ ಒತ್ತಡ ಹಾಕಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಇದೇ ವೇಳೆ ತಿಳಿಸಿದ್ದಾರೆ.
ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ; ಕೇಸನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದ ಸಿಎಂ ಸಿದ್ದರಾಮಯ್ಯ
ಬೆಂಗಳೂರು; ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡುತ್ತಿರುವ ಕೇಸ್ ಅನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕೇಸ್ ಗೆ ಸಂಬಂಧಪಟ್ಟಂತೆ 7 ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಅಲ್ಲದೇ ಇದೇ ವೇಳೆ ಮಾತನಾಡಿದ ಅವರು ದರ್ಶನ್ ಹಾಗೂ ಇತರರನ್ನು ತಕ್ಷಣವೇ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.