ಮನೆ Latest News ಆಪ್ತ ಸ್ನೇಹಿತನನ್ನು ಭೇಟಿಯಾದ ರಕ್ಷಿತಾ- ಪ್ರೇಮ್; ಡಿ ಬಾಸ್ ಭೇಟಿಯ ಬಳಿಕ ಕ್ರೇಜಿ ಕ್ವೀನ್ ಹೇಳಿದ್ದೇನು?

ಆಪ್ತ ಸ್ನೇಹಿತನನ್ನು ಭೇಟಿಯಾದ ರಕ್ಷಿತಾ- ಪ್ರೇಮ್; ಡಿ ಬಾಸ್ ಭೇಟಿಯ ಬಳಿಕ ಕ್ರೇಜಿ ಕ್ವೀನ್ ಹೇಳಿದ್ದೇನು?

0

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನ ಅವರ ಆಪ್ತ ಸ್ನೇಹಿತೆ ಕ್ರೇಜಿ ಕ್ವೀನ್ ರಕ್ಷಿತಾ ಹಾಗೂ ಅವರ ಪತಿ ನಿರ್ದೇಶಕ, ನಟ ಪ್ರೇಮ್ ಇಂದು ಭೇಟಿಯಾಗಿದ್ದಾರೆ.

ದರ್ಶನ್‌ರನ್ನ ಭೇಟಿಯಾದ ಬಳಿಕ ನಟಿ ರಕ್ಷಿತಾ ತೀರಾ ಭಾವುಕರಾದಂತೆ ಕಂಡು ಬಂದರು. ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬರುತ್ತಿರೋದನ್ನು ನೋಡುತ್ತಿದ್ದೇವೆ.ಘಟನೆಯಿಂದ ಬೇಸರವಾಗಿದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಎಲ್ಲರಿಗೂ ನ್ಯಾಯ ಸಿಗಲಿ ಅಂದರು.

ಇನ್ನು ಇದೇ ವೇಳೆ ಮಾತನಾಡಿದ ಪ್ರೇಮ್ ದರ್ಶನ್ ನನಗೂ ರಕ್ಷಿತಾಗೂ ಇಬ್ಬರಿಗೂ ಸ್ನೇಹಿತ. ಈಗ ಪ್ರಕರಣ ಕೋರ್ಟ್ ನಲ್ಲಿದೆ. ಈಗ ನಾವೇನು ಮಾತನಾಡೋದು ಸರಿಯಿರಲ್ಲ. ದಯವಿಟ್ಟು ಇನ್ನು ಹೆಚ್ಚೇನು ಕೇಳಬೇಡಿ ಎಂದರು.ಅಲ್ಲದೇ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ನನ್ನನ್ನು ಭೇಟಿಯಾಗಲು ಬರಬೇಡಿ ಎಂದು ಅಭಿಮಾನಿಗಳಿಗೆ ಡಿ ಬಾಸ್ ಮನವಿ

ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಾಗಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನತ್ತ ಅವರನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಆದರೆ ಬಂದು ಭೇಟಿ ಸಾಧ್ಯವಾಗದೇ ನಿರಾಸೆಯಿಂದ ವಾಪಾಸ್ ಹೋಗ್ತಿದ್ದಾರೆ.

ಇದೀಗ ತಮ್ಮನ್ನು ಭೇಟಿ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಜೈಲಿನತ್ತ ಅಭಿಮಾನಿಗಳು ಬರುತ್ತಿದ್ದಾರೆ ಎಂಬ ವಿಚಾರ ಡಿ ಬಾಸ್ ದರ್ಶನ್ ಅವರಿಗೆ ಜೈಲಾಧಿಕಾರಿಗಳ ಮೂಲಕ ಗೊತ್ತಾಗಿದ್ದು, ಜೈಲಾಧಿಕಾರಿಗಳ ಮೂಲಕವೇ ಅಭಿಮಾನಿಗಳಿಗೆ ದರ್ಶನ್ ಸಂದೇಶ ರವಾನಿಸಿದ್ದಾರೆ, ನನ್ನ ಭೇಟಿಗಾಗಿ ಅಭಿಮಾನಿಗಳು ಯಾರೂ ಕೂಡ ಜೈಲಿನ ಬಳಿಗೆ ಬರಬೇಡಿ ಎಂದು ಸಂದೇಶ ರವಾನಿಸಿದ್ದಾರೆ.

ನನ್ನ ಭೇಟಿಗಾಗಿ ಸಾವಿರಾರುಗಟ್ಟಲೇ ದೂರದಿಂದ  ನಿಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ನನಗಾಗಿ ಕಾಯೋದು, ಬಳಿಕ ನನ್ನನ್ನು ಭೇಟಿ ಮಾಡಲು ಸಾಧ್ಯವಾಗದೇ ನಿರಾಸೆಯಿಂದ ಹೋಗೋದು ಬೇಡ. ಹಾಗಾಗಿ ನನ್ನ ಭೇಟಿಗಾಗಿ ಯಾರೂ ಕೂಡ ಬರಬೇಡಿ ಎಂದು ದರ್ಶನ್ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಇನ್ನು ಮೊನ್ನೆ ದರ್ಶನ್ ಅಭಿಮಾನಿಯಾಗಿರುವ ವಿಕಲ ಚೇತನ ಯುವತಿಯೊಬ್ಬಳು ದರ್ಶನ್ ಅವರು ಕೊಡಿಸಿದ ಆಟೋದಲ್ಲಿ ಪೋಷಕರ ಜೊತೆ ಪರಪ್ಪನ ಅಗ್ರಹಾರ ಜೈಲು ಬಳಿ ಬಂದಿದ್ದಳು. ಅಲ್ಲದೇ ನೀರು ಆಹಾರ ಸೇವಿಸದೇ ದರ್ಶನ್ ಅವರನ್ನು ನೋಡಲೇ ಬೇಕು ಎಂದು ಪಟ್ಟು ಹಿಡಿದಿದ್ದಳು.ಈ ವಿಚಾರ ದರ್ಶನ್ ಅವರ ಕಿವಿಗೆ ಬಿದ್ದಿದ್ದು ಅವರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದೇ ರೀತಿ  ಮೂರು ದಿನಗಳ ಹಿಂದೆ ಯಾದಗಿರಿಯಿಂದ ವಿಶೇಷ ಚೇತನ ಯುವಕ ಸೂರ್ಯಕಾಂತ ಎಂಬಾತ ಜೈಲು ಬಳಿ ಆಗಮಿಸಿದ್ದ. ಥ್ರೀ ವೀಲ್ಹರ್ ಬೈಕ್ ನಲ್ಲಿ ಬಂದಿದ್ದ ಆತ ದರ್ಶನ್ ಅವರನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದ. ಆದರೆ ದರ್ಶನ್ ಅವರನ್ನು ಹಾಗೇ ಎಲ್ಲರಿಗೂ ನೋಡುವ ಅವಕಾಶ ಇಲ್ಲದೇ ಇರೋದರಿಂದ ಆ ಯುವಕ ನಿರಾಸೆಯಿಂದ ವಾಪಾಸ್ ಹೋಗಿದ್ದ ಎನ್ನಲಾಗಿದೆ. ಇನ್ನು ದರ್ಶನ್ ಜೈಲಿನಲ್ಲಿ ಮೌನಕ್ಕೆ ಶರಣಾಗಿದ್ದು ಯಾರ ಜೊತೆನೂ ಮಾತನಾಡುತ್ತಿಲ್ಲ ಎನ್ನಲಾಗಿದೆ. ಮೊನ್ನೆಯಷ್ಟೇ ದರ್ಶನ್ ಅವರನನ್ನು ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್ ಹಾಗೂ ಸ್ನೇಹಿತ ವಿನೋದ್ ಪ್ರಭಾಕರ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಪತ್ನಿ ಹಾಗೂ ಪುತ್ರನ ಮುಂದೆ ಡಿ ಬಾಸ್ ಕಣ್ಣೀರು ಹಾಕಿದ್ದರು ಎನ್ನಲಾಗಿದೆ.