ರಜತ್ ಕಿಶನ್.. ಈ ಹೆಸ್ರು ಕೇಳಿದ್ರೆ ಸಾಕು ಬಹುತೇಕರ ಮುಖದಲ್ಲಿನ ಭಾವನೆ ಸಡನ್ ಕೋಪಕ್ಕೆ ಕನ್ವರ್ಟ್ ಆಗ್ತಾರೆ. ಇನ್ನು ಕೆಲವರು ನಿಜವಾದ ಆಟಗಾರ ಇವ್ನು ಕಣೋ ಅನ್ನೋದಕ್ಕೆ ಶುರು ಮಾಡ್ತಾರೆ. ಆದರೆ ರಜತ್ ಮಾತು ಒರಟಾದ್ರು ಅವರ ಮನಸ್ಸು ಹೂವಿನಂತೆ ಅನ್ನೋದು 100 ಪರ್ಸೆಂಟ್ ನಿಜ.
ಸ್ನೇಹಿತರೇ ನೇರವಾಗಿ ಮಾತನಾಡೋರು ಯಾರಿಗೂ ಇಷ್ಟ ಆಗಲ್ಲ ಅನ್ನೋ ಮಾತು ರಜತ್ ಅವರ ವಿಚಾರದಲ್ಲಿ ನೂರಕ್ಕೆ 200 ರಷ್ಟು ಸತ್ಯ. ರಜತ್ ಆರಂಭದಿಂದಲೂ ತಮ್ಮ ನೇರ ಮಾತು ಜಗಳದಿಂದಲೇ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿರುವವರು. ಆದರೆ ಬಿಗ್ ಬಾಸ್ ಮನೆಯಲ್ಲಿ ಯಾರ ಮೇಲೇ ಅವರು ಎಷ್ಟೇ ಕೋಪ ತೋರಿಸಿದ್ರೂ ಅದು ಆ ಕ್ಷಣಕ್ಕೆ ಮಾತ್ರ. ಮತ್ತೆ ಅದೇ ಸ್ಪರ್ಧಿಗೆ ನೋವಾದ್ರೆ ಅಲ್ಲಿ ಸಮಾಧಾನ ಮಾಡೋದಕ್ಕೆ ರಜತ್ ಅನ್ನೋ ವ್ಯಕ್ತಿ ಇದ್ದೇ ಇರ್ತಾರೆ.
ವೀಕ್ಷಕರಿಗೆ ಆರಂಭದಲ್ಲಿ ರಜತ್ ನೋಡಿ ಅಯ್ಯೋ ಯಾಕಾದ್ರೂ ಇವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವ್ರ ಹೆಂಡ್ತಿ ಅವರನ್ನು ಹೇಗೆ ಸಹಿಸಿಕೊಂಡಿದ್ದಾರೋ ಅನ್ಸೋದಕ್ಕೆ ಶುರುವಾಗಿತ್ತು. ಆದರೆ ಬಿಗ್ಬಾಸ್ ಮನೆಯಲ್ಲಿ ಕೆಲವೊಂದು ಸಂದರ್ಭದಲ್ಲಿ ಅವರು ಆಡಿದ ಮಾತು. ನಡೆದುಕೊಂಡ ರೀತಿ ನೋಡಿದ ಮೇಲೆ ಅವರ ಬಗ್ಗೆ ಇದ್ದ ಒಪಿನೀಯನ್ ಬದಲಾಯ್ತು. ಬಿಗ್ ಬಾಸ್ ಮನೆಯಲ್ಲಿ ಧನ್ ರಾಜ್ ಆಚಾರ್ ಹಾಗೂ ರಜತ್ ಅವರಿಗೆ ಒಂದು ಜಗಳ ಆಗುತ್ತೆ. ಆ ಜಗಳದ ಬಗ್ಗೆ ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್ ನಲ್ಲಿ ಮಾತಾಡ್ತಾರೆ. ಆಗ ರಜತ್- ಧನ್ ರಾಜ್ ಗೆ ತಪ್ಪಿನ ಬಗ್ಗೆ ಬುದ್ಧಿ ಹೇಳಿ ಇಬ್ಬರೂ ಮತ್ತೆ ಒಂದಾಗ್ತಾರೆ. ಆ ಬಳಿಕ ಲಾಸ್ಟ್ ವೀಕೆಂಡ್ ಎಪಿಸೋಡ್ ನಲ್ಲಿ ಒಬ್ಬರಿಗೊಬ್ಬರು ಗಿಫ್ಟ್ ಕೊಡುವ ವೇಳೆ ರಜತ್ ಧನ್ ರಾಜ್ ಅವರಿಗೆ ಟೀ ಶರ್ಟ್ ಕೊಟ್ಟಾಗ ಅನೇಕರ ಕಣ್ಣುಗಳು ತೇವಗೊಳ್ಳುತ್ತೆ. ನಾನು ನೀನು ಹೊರಗೆ ಬಂದ ಮೇಲೂ ನಿನಗೆ ಏನೇ ಸಹಾಯ ಬೇಕಾದರೂ ಮಾಡುತ್ತೇನೆ ಅನ್ನೋ ಮಾತನ್ನು ಹೇಳಿ ರಜತ್ ಇನ್ನೂ ಎತ್ತರಕ್ಕೆ ಹೋಗುತ್ತಾರೆ.
ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಮನೆಯವರೆಲ್ಲಾ ಬಿಗ್ ಬಾಸ್ ಮನೆಗೆ ಬಂದ ತನ್ನ ಮನೆಯವರು ಹಾಗೂ ಬೇರೆಯವರ ಮನೆಯವರು ಅನ್ನೋ ರೀತಿ ರಜತ್ ನೋಡಲೇ ಇಲ್ಲ. ಎಲ್ಲರ ಮನೆಯವರನ್ನು ಅರು ಮನೆಯಲ್ಲಿ ಇದ್ದಷ್ಟು ಹೊತ್ತು ರಜತ್ ನಗಿಸುತ್ತಲೇ ಇದ್ದರು. ಅದಕ್ಕಿಂತ ಹೆಚ್ಚಾಗಿ ರಜತ್ ಒಳ್ಳೆಯತನ ಕಂಡಿದ್ದು ಚೈತ್ರಾ ಮನೆಯವರು ಬರಲ್ಲ ಅಂತಾ ಚೈತ್ರಾಗೆ ಕರೆ ಬಂದಾಗ. ಆಗ ಚೈತ್ರಾ ಪಕ್ಕ ಕೂತಿದ್ದ ರಜತ್ ನಿಮ್ಮ ಮನೆಯವರು ಬರದಿದ್ದರೆ ಏನಂತೆ ನಾನು ಹಾಗೂ ವಿಕ್ಕಿ ನಿನ್ನ ಮನೆಯವರ ರೀತಿ ಬರ್ತೀವಿ ಅನ್ನೋ ಮಾತು ಹೇಳ್ತಾರೆ.ಆಗಲೂ ಚೈತ್ರಾ ನನ್ಗೆ ರಜತ್ ಹರ್ಟ್ ಮಾಡ್ತಾರೆ ಅಂತಾ ಮಾತಾಡ್ತಾರೆ ಆಗ ಮೋಕ್ಷಿತಾ ಇಲ್ಲ ಚೈತ್ರಾ ಅವರು ನಿಜ ಹೇಳ್ತಿದ್ದಾರೆ. ಯಾಕೆ ಹಾಗೇ ಅಂದುಕೊಳ್ತೀರಾ ಅಂತಾರೆ. ಅಲ್ಲಿ ರಜತ್ ಒಳ್ಳೆ ಮನಸ್ಸು ಗೊತ್ತಾಗುತ್ತೆ.
ಕೇವಲ ಚೈತ್ರಾ ಮನೆಯವರು ಅಲ್ಲಾ ಎಲ್ಲಾ ಸ್ಪರ್ಧಿಗಳ ಮನೆಯವರು ಬಂದಾಗ ರಜತ್ ಅದೇ ಖುಷಿ, ಪ್ರೀತಿಯಿಂದ ಮಾತಾಡಿಸ್ತಾರೆ. ಅದರಲ್ಲೂ ಚೈತ್ರಾ ಮನೆಯವರು ಬಂದಾಗ ಎಲ್ಲರಿಗಿಂತೂ ಹೆಚ್ಚು ನಗಿಸ್ತಾರೆ ರಜತ್. ಅದರಲ್ಲೂ ರಜತ್ ಚೈತ್ರಾ ತಾಯಿ ಬಳಿ ನೀವು ನಿಜಕ್ಕೂ ಚೈತ್ರಾಳನ್ನು ತಡ್ಕೊಂಡಿದ್ದೀರಿ ಅಲ್ವಾ ಅನ್ನೋ ಮಾತನ್ನು ಹೇಳಿದಾಗ ಇಡೀ ಮನೆಯವರು ಬಿದ್ದು ಬಿದ್ದು ನಗ್ತಾರೆ. ರಜತ್ ಬಗ್ಗೆ ಯಾರು ಏನೇ ಹೇಳಲಿ ಆದರೆ ರಜತ್ ಮನೆಯಲ್ಲಿ ಇದ್ರೇನೆ ಅಲ್ಲಿ ಒಂಥರಾ ಎನರ್ಜಿ, ನಗು ಅನ್ನೋದಂತೂ ಸತ್ಯ.