ಬೆಂಗಳೂರು; ರಾಜಣ್ಣ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಮೇಲೆ ಪ್ರೀತಿ ಇದೆ ಅದಕ್ಕೆ ಮಾತನಾಡ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಅವರ ವಿರುದ್ಧ ಸಹಕಾರ ಸಚಿವ ಕೆ ಎನ್ ರಾಜಣ್ಣ ನೀಡಿರುವ ಹೇಳಿಕೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಡಿ ಕೆ ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಎಲ್ಲರಿಗೂ ಇದೆ. ರಾಜಣ್ಣ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಮೇಲೆ ಪ್ರೀತಿ ಇದೆ ಅದಕ್ಕೆ ಮಾತನಾಡ್ತಾರೆ. ಕಲ್ಲಿಗೆ ಏಟು ಬಿದ್ದಾಗಲೆ ಶಿಲೆ ಆಗುವುದು ತಟ್ಟುತ್ತಿದ್ದಾರೆ ತಟ್ಟಲಿ.ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬು ಇದೆಯಾ ಇಲ್ವಾ ಅಂತಾಹೈಕಮಾಂಡ್ ತೀರ್ಮಾನ ಮಾಡುತ್ತೆ.ಹೀಗೆ ಬಹಿರಂಗವಾಗಿ ಮಾತನಾಡುವುದರಿಂದ ಡ್ಯಾಮೇಜ್ ಆಗುತ್ತೋ ಇಲ್ವೋ ಅನ್ನೋದನ್ನ ಸಿಎಂ ರನ್ನ ಕೇಳಿ, ಎಐಸಿಸಿ ಅಧ್ಯಕ್ಷರನ್ನು ಕೇಳಿ ರಾಜ್ಯ ಉಸ್ತುವಾರಿಯನ್ನು ಕೇಳಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಯಾರಿಗಾದರೂ ಒಳ್ಳೆಯದಾಗಬೇಕು ಅಂದ್ರೆ ಸಾಕಷ್ಟು ಜನ ಆಶೀರ್ವಾದ ಬೇಕು.ಆಶೀರ್ವಾದ ಮಾಡ್ತಿದಾರೆ ಪ್ರಸಾದ ಕೊಡ್ತಿದಾರೆ.ಪ್ರಸಾದ ಜಾಸ್ತಿ ಆದರೂ ಹೊಟ್ಟೆ ನೋವು ಬರಲ್ಲ ನಾವು ಹಳ್ಳಿಯಿಂದ ಬಂದವರು.ಪವರ್ ಶೇರಿಂಗ್ ಬಗ್ಗೆ ನನಗೆ ಏನು ಮಾಹಿತಿ ಇಲ್ಲ ನಾನು ಸಾಮಾನ್ಯ ಕಾರ್ಯಕರ್ತ.ಅಧಿಕಾರ ಹಂಚಿಕೆ ಬಗ್ಗೆ ಈಗ ಚರ್ಚೆ ಯಾಕೆ? .ಕುರ್ಚಿ ಖಾಲಿ ಇಲ್ಲ.ಚರ್ಚೆ ಹುಟ್ಟು ಹಾಕಿದವರು ಯಾರು..?ಕೆಎಂ ಎಫ್ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೆ ಹುದ್ದೆಯ ಆಕಾಂಕ್ಷಿ ನಾನಲ್ಲ ಜನ ನನ್ನನ್ನ ಸೋಲಿಸಿದ್ದಾರೆ ರೆಸ್ಟ್ ಮಾಡ್ತಿದಿನಿ ಎಂದರು.
ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಹಕಾರ ಸಚಿವ ಕೆ.ಎನ್ ರಾಜಣ್ಣ
ನವದೆಹಲಿ; ಸಹಕಾರ ಸಚಿವ ಕೆ.ಎನ್ ರಾಜಣ್ಣ ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತಕೇಂದ್ರ ಸಚಿವರಾದ ಸೋಮಣ್ಣ, ಅಮಿತ್ ಅವರ ಭೇಟಿಗೆ ಬಂದಿದ್ದೆ. ಸೋಮಣ್ಣ ಅವರನ್ನು ಭೇಟಿ ಮಾಡಿದೆ. ಅಮಿತ್ ಶಾ ರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಹಿಂದೆ ಅಮಿತ್ ಶಾ ಅವರಿಗೆ ಪತ್ರ ಕಳುಹಿಸಿದ್ದೆ. ನಬಾರ್ಡ್ ನಿಂದ ಬರುವ ಸಾಲ ನೆರವು ಕಡಿಮೆಯಾಗಿದೆ. ಈ ವರ್ಷಕ್ಕಿಂತ ಸಾಲ ನೆರವು ಕಡಿಮೆಯಾಗಿದೆ. 58% ಪರ್ಸೆಂಟ್ ಕಡಿಮೆ ಹಣವನ್ನು ಕೊಟ್ಟಿದ್ದಾರೆ. ರಾಜ್ಯದ ರೈತರಿಗೆ ಮಾರಕವಾದ ನಿರ್ಧಾರ ಮಾಡಿದ್ದಾರೆ. ಪತ್ರ ಬರೆದರೂ ಯಾವುದೇ ಸಕಾರಾತ್ಮಕ ಉತ್ತರ ಬಂದಿಲ್ಲ. ಮತ್ತೊಮ್ಮೆ ಭೇಟಿ ಮಾಡುವ ಪ್ರಯತ್ನ ಮಾಡಿದ್ದೆ ಆದ್ರೆ ಸಿಗಲಿಲ್ಲ ಎಂದಿದ್ದಾರೆ.—
ಇನ್ನು ಇದೇ ವೇಳೆ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದೆ. ಸರಕಾರ,ಪಕ್ಷದ ಘಟನಾವಳಿಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ಏನ್ ಘಟನೆ ತಿಳಿಸಿದ್ದೀರಿ ಅಂದ್ರೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ವೇಣುಗೋಪಾಲ್ ಹಾಗೂ ಸುರ್ಜೆವಾಲರನ್ನು ಭೇಟಿಯಾಗಿದ್ದೇನೆ. ಮತ್ತೆ ಕಾಂಗ್ರೆಸ್ ಸರಕಾರವನ್ನು ತರಬೇಕಿದೆ. ಹಾಗಾಗಿ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ನಾನು ಗಮನಕ್ಕೆ ತಂದ ಅಂಶಗಳಿಗೆ ಸರಕರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಧಾನಪರಿಷತ್ ಖಾಲಿ ಸ್ಥಾನ ಭರ್ತಿಗೆ ಚರ್ಚೆ ನಡೆಯುತ್ತಿದೆ. ಪರಿಷತ್ ನಿರಾಶ್ರಿತರ ಕೂಟ ಆಗಬಾರದು. ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಇಲ್ಲದ ಸಮಯದಾಯಗಳಿಗೆ ನೀಡಬೇಕು. ತಳಸಮುದಾಯಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬೇರೆ ಸಮಯದಾಯವರನ್ನು ಮಾಡಬೇಕು. ಟಿಕೆಟ್ ಪಡೆದ ಸಮುದಾಯಕ್ಕೆ ಬ್ಲಾಕ್ ಕಾಂಗ್ರೆಸ್ ಗೆ ನೇಮಿಸಬೇಕು. ಮುಂಚೂಣಿ ಘಟಕಗಳಿಗೆ ಅಲ್ಲಿಯೂ ಕೂಡ ವಿವಿಧ ಸಮುದಾಯಗಳಿಗೆ ಅವಕಾಶ ನೀಡಬೇಕು.ನನ್ನ ಕ್ಷೇತ್ರದಲ್ಕಿ ಈ ಪ್ರಯೋಗ ಮಾಡಿದ್ದೇನೆ. ಹಾಗಾಗಿ ಜನರಲ್ ಕ್ಷೇತ್ರದಲ್ಲಿ ಗೆದ್ದು ಬರುತ್ತಿದ್ದೇನೆ.ಈ ಪ್ರಯೋಗದ ಮೂಲಕ ಜನರ ವಿಶ್ವಾಸವನ್ನು ಗಳಿಸಿದ್ದೇವೆ. ಎಲ್ಲ ಸಮುದಾಯದ ಜನರು ನನಗೆ ಮತ ನೀಡಿದ್ದಾರೆ.ಇದನ್ನು ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿದ್ದೇನೆ ಎಂದಿದ್ದಾರೆ.
ಇನ್ನು ಹಾಸನ ಉಸ್ತವಾರಿಯಿಂದ ಬಿಡುಗಡೆ ಮಾಡಿ ಎಂದು ಪತ್ರ ಕೊಟ್ಟಿದ್ದೇನೆ. ನನ್ನ ಜಿಲ್ಲೆಯಲ್ಲಿ ಸಂಘಟನೆ ಮಾಡಬೇಕಿದೆ. ಹೀಗಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಲಸ ಮಾಡಬೇಕಿದೆ. ನಾನು ಯಾವ ಜಿಲ್ಲೆಯ ಉಸ್ತುವಾರಿ ಕೊಡಿ ಎಂದು ಕೇಳಲ್ಲ.ಹಾಸನದಲ್ಲಿ ಲೋಕಸಭಾ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ಇತ್ತು.ನನ್ನ ಬಿಡುಗಡೆ ಮಾಡುವಂತೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.
ನಾನೇನು ಬರಿ ಎಸ್ಟಿ ಮತಗಳಿಂದ ಗೆದ್ದಿಲ್ಲ. ಎಲ್ಲ ಸಮುದಾಯದ ಆಶೀರ್ವಾದ ಬೇಕು.ಕಾಂಗ್ರೆಸ್ ಗೆ ಯಾವ ಸಮಾವೇಶ ಮಾಡಿದ್ರೆ ಒಳ್ಳೆಯದು ಆ ಸಮಾವೇಶ ಮಾಡಬೇಕು. ಮುಂದೆ ಮತ್ತೆ ಪಕ್ಷ ಅಧಿಕಾರಕ್ಕೆ ಬರಲು ಜಾಗೃತಿ ಮೂಡಿಸಬೇಕಿದೆ. ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಅನರ್ಹರಿಗೆ ಗ್ಯಾರಂಟಿಗಳು ತಲುಪಬಾರದು. ಸಮಾವೇಶದ ಅಗತ್ಯವನ್ನು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೆವೆ.ಕೇಂದ್ರದ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ.ಮುಂದಿನ ದಿನಗಳಲ್ಲಿ ಸಮಾವೇಶಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಪಕ್ಷದ ವೇದಿಕೆಯಲ್ಲಿಯೇ ಸಮಾವೇಶ ಮಾಡಲಿದ್ದೇವೆ.ಚಿತ್ರದುರ್ಗ,ದಾವಣಗರೆ, ಅಥವಾ ಹುಬ್ಬಳ್ಳಿಯಲ್ಲಿ ಮಾಡಲಿದ್ದೇವೆ. ಪಕ್ಷ ಇದ್ದರೆ ಶಕ್ತಿಯುತವಾಗಿ ಇರಬೇಕು. ಪಕ್ಷ ಗಟ್ಟಿಯಾದ್ರೆ ಸಿದ್ದರಾಮಯ್ಯ ನವರು ಇರ್ತಾರೆ .ದಲಿತ ಸಿಎಂ ಕೂಗು ಇದ್ದರೆ ಹೈಕಮಾಂಡ್ ತೀರ್ಮಾನ ಮಾಡಲಿದೆ.ಎಲ್ಲರಿಗೂ ಕೇಳುವ ಹಕ್ಕಿದೆ, ಮೊಟಕುಗೊಳಿಸುವ ಹಕ್ಕು ಯಾರಿಗೂ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದೆ ಶಿಸ್ತು ಎಂದಿದ್ದಾರೆ.