ಬೆಂಗಳೂರು; ನಾಲ್ಕನೇ ತಾರೀಕು ರಾಹುಲ್ ಗಾಂಧಿ ಬರ್ತಿದ್ದಾರೆ, ಅವರು ಆಯೋಗಕ್ಕೆ ಮನವಿ ಕೊಡ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಚುನಾವಣಾ ಅಕ್ರಮ ಆರೋಪದ ವಿರುದ್ಧ ರಾಹುಲ್ ಗಾಂಧಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಈಗಾಗಲೇ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದಾರೆ. ಕರ್ನಾಟಕದಲ್ಲೂ ಅಕ್ರಮ ಆಗಿದೆ ಅಂತ ಅವರು ಆರೋಪ ಮಾಡಿದ್ರು. ನಾಲ್ಕನೇ ತಾರೀಕು ಅವರು ಬರ್ತಿದ್ದಾರೆ, ಆಯೋಗಕ್ಕೆ ಮನವಿ ಕೊಡ್ತಾರೆ. ಪ್ರತಿಭಟನೆ ರೂಪುರೇಷೆ ಇನ್ನೂ ಅಂತಿಮ ಆಗಿಲ್ಲ. ಸಿಎಂ ಡಿಕೆಶಿ ಇಬ್ಬರೂ ಪ್ರತಿಭಟನೆ ರೂಪುರೇಷೆ ಅಂತಿಮ ಮಾಡ್ತಾರೆ. ರಾಹುಲ್ ಗಾಂಧಿಯವರು ಫ್ರೀಡಂ ಪಾರ್ಕ್ ನಲ್ಲಿ ಭಾಷಣ ಮಾಡಿ ಅಲ್ಲಿಂದ ಪಾದಯಾತ್ರೆ ಮೂಲಕ ಆಯೋಗಕ್ಕೆ ಹೋಗಿ ಮನವಿ ಕೊಡ್ತಾರೆ ಎಂದಿದ್ದಾರೆ. ನಗರದಲ್ಲಿ ಪ್ರತಿಭಟನೆಗಳ ಬಗ್ಗೆ ಹೈಕೋರ್ಟ್ ನಿರ್ದೇಶನಗಳನ್ನು ಗಮನದಲ್ಲಿಟ್ಕೊಂಡು ಪ್ರತಿಭಟನೆ ಮಾಡ್ತೇವೆ. ಪ್ರತಿಭಟನೆ, ಮೆರವಣಿಗೆ ಗೆ ಅಗತ್ಯ ಭದ್ರತೆ ಕೊಡ್ತೇವೆ ಎಂದು ಹೇಳಿದ್ದಾರೆ.
ಇನ್ನು ಸೂರು ಡ್ರಗ್ ಫ್ಯಾಕ್ಟರಿ ಪ್ರಕರಣದ ಬಗ್ಗೆ ಮಾತನಾಡಿದ ಅವರು ಬಾಂಬೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ಬಿಜೆಪಿಯವ್ರು ಇಂದು ಮೈಸೂರಲ್ಲಿ ಪ್ರತಿಭಟನೆ ಮಾಡ್ತಿದ್ರೆ ಮಾಡಲಿ. ಅವರ ಪ್ರತಿಭಟನೆಯಿಂದ ಜಾಗೃತಿ ಮೂಡಿದಷ್ಟೂ ಡ್ರಗ್ಸ್ ಬಗ್ಗೆ ಒಳ್ಳೇದೆ ಎಂದ ಅವರು ಸಿಎಂ ಸಭೆ ವಿಚಾರದ ಬಗ್ಗೆ ಮಾತನಾಡಿ ಸಿಎಂ ಕರೆದಾಗ ಶಾಸಕರು ಅನಿಸಿಕೆ ಹೇಳಿಕೊಳ್ಳಲು ವೇದಿಕೆ ಸಿಗುತ್ತೆ. ಸಿಎಂ ಬಳಿ ಸಮಸ್ಯೆ ತಿಳಿಸೋದ್ರಿಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ನಮ್ಮ ಜಿಲ್ಲೆಯಲ್ಲಿ ಡೈರಿ ಒಕ್ಕೂಟದ ಅಧ್ಯಕ್ಷರ ನೇಮಕ ವಿಚಾರಕ್ಕೆ ಮನಸುಗಳು ಮುರಿದು ಹೋಗಿದ್ವು. ನಿನ್ನೆ ಅದರ ಬಗ್ಗೆ ಸಿಎಂ ಸಭೆಯಲ್ಲಿ ಚರ್ಚೆ ಆಯ್ತು. ಡೈರಿ ಒಕ್ಕೂಟ ಆರಂಭವಾದಾಗ್ನಿಂದ ದಲಿತರು ಅಧ್ಯಕ್ಷರಾಗಿ ನೇಮಕ ಆಗಿರಲಿಲ್ಲ. ಇದು ಕೆಲವು ನಮ್ಮ ಶಾಸಕರಿಗೆ ಬೇಸರ ಆಗಿತ್ತು. ನಿನ್ನೆ ಸಭೆಯಲ್ಲಿ ಅದರ ನಗ್ಗೆ ಮನವರಿಕೆ ಮಾಡಿಕೊಟ್ವಿ, ಗೊಂದಲ ಬಗೆಹರಿದಿದೆ. ಇನ್ನು ಲಿಂಕ್ ಕೆನಾಲ್ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಯ್ತು. ಕೆಲವರು ಲಿಂಕ್ ಕೆನಾಲ್ ಕಾಮಗಾರಿ ತಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಡಿಕೆಶಿ ಪ್ರತ್ಯೇಕ ಸಭೆಯಲ್ಲಿ ತಪ್ಪೇನಿಲ್ಲ. ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಕೇಂದ್ರ ಸೇವೆಗೆ ಆಯ್ಕೆ ವಿಚಾರದ ಬಗ್ಗೆ ಮಾತನಾಡಿ ಆ ರೀತಿ ಇದ್ರೆ ಚರ್ಚೆ ಮಾಡಿ ಮುಂದುವರೆಯುತ್ತೇವೆ. ಅವರು ಕೇಂದ್ರ ಸೇವೆಗೆ ಹೋದರೆ ಬೇರೆ ಅಧಿಕಾರಿಯನ್ನು ಎಸ್ಐಟಿ ಗೆ ನೇಮಕ ಬಗ್ಗೆ ಚರ್ಚೆ ಮಾಡ್ತೇವೆ. ಕಾನೂನು ಪ್ರಕಾರ ಏನಿದೆಯೋ ಅದರಂತೆ ನಡೆದುಕೊಳ್ತೇವೆ. ಅಲ್ಲಿಗೆ ಹೋದರೂ ಎಸ್ಐಟಿಯಲ್ಲಿ ಇರಲು ಅವಕಾಶ ಇದೆಯಾ ಅಂತಲೂ ನೋಡ್ತೇವೆ ಎಂದು ಹೇಳಿದ್ದಾರೆ.
ಫೇಸ್‌ಬುಕ್ ಪೇಜ್ ‘ಕ್ರಿಮಿಕೀಟ’ ವಿರುದ್ಧ ಕಾಂಗ್ರೆಸ್ ದೂರು ವಿಚಾರದ ಬಗ್ಗೆ ಮಾತನಾಡಿ ಯಾರೇ ಆದರೂ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಆದ್ರೆ ತೇಜೋವಧೆ ಮಾಡಲು ಹೋಗಬಾರದು. ದೂರು ಬಗ್ಗೆ ಕ್ರಮ ವಹಿಸಲಾಗುತ್ತದೆ ಎಂದಿದ್ದಾರೆ. ರಾಜ್ಯದ ಒಂದು ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ಬಗ್ಗೆ ರಾಹುಲ್ ಆರೋಪ ವಿಚಾರದ ಬಗ್ಗೆ ಮಾತನಾಡಿ ರಾಹುಲ್ ಗಾಂಧಿ ಅವರು ರಾಜ್ಯದಲ್ಲೂ ಅಕ್ರಮ ಆರೋಪ ಮಾಡಿದ್ದಾರೆ.ಯಾವ ಕ್ಷೇತ್ರ ಅಂತ ಆ ಸಂದರ್ಭದಲ್ಲೇ ದೂರುಗಳು ಕೊಟ್ಟಿದಾರಲ್ಲ. ಒಂದೊಂದೇ ಕ್ಷೇತ್ರಕ್ಕೆ ಉಪಚುನಾವಣೆ ನಡೆಯೋದಲ್ವಾ? ಉಪಚುನಾವಣೆ ನಡೆದಾಗ ಅಕ್ರಮ ಆಗಿರಬಹುದು ಎಂದು ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣ, ಶವ ಪತ್ತೆ ಕಾರ್ಯದ ಬಗ್ಗೆ ಪ್ರತಿಕ್ರಿಯಿಸಿ ತನಿಖೆ ನಡೀತಿದೆ, ತನಿಖೆ ನಡುವೆ ನಾವು ಯಾರೂ ಮಾತಾಡಬಾರದು ಅಂತ ನಿರ್ಧರಿಸಿದ್ದೇವೆ.ತನಿಖೆ ಬಳಿಕ ಎಲ್ಲ ಮಾಹಿತಿ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.