ಮನೆ Latest News ರಾಹುಲ್ ಗಾಂಧಿ ದೆಹಲಿ ಬ್ಲಾಸ್ಟ್ ಬಗ್ಗೆ ಈ ತನಕ ಘಟನೆ ಕುರಿತು ಹೇಳಿಕೆಯಾಗಲಿ, ಖಂಡನೆಯಾಗಲಿ ವ್ಯಕ್ತಪಡಿಸಿಲ್ಲ:...

ರಾಹುಲ್ ಗಾಂಧಿ ದೆಹಲಿ ಬ್ಲಾಸ್ಟ್ ಬಗ್ಗೆ ಈ ತನಕ ಘಟನೆ ಕುರಿತು ಹೇಳಿಕೆಯಾಗಲಿ, ಖಂಡನೆಯಾಗಲಿ ವ್ಯಕ್ತಪಡಿಸಿಲ್ಲ: ಶಿವಮೊಗ್ಗ ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ

0

ಶಿವಮೊಗ್ಗ; ರಾಹುಲ್ ಗಾಂಧಿ ದೆಹಲಿ ಬ್ಲಾಸ್ಟ್ ಬಗ್ಗೆ ಈ ತನಕ ಘಟನೆ ಕುರಿತು ಹೇಳಿಕೆಯಾಗಲಿ ನೀಡಿಲ್ಲ. ಇನ್ನು ಖಂಡನೆಯಾಗಲಿ ವ್ಯಕ್ತಪಡಿಸಿಲ್ಲ ಎಂದು ಶಿವಮೊಗ್ಗ ದಲ್ಲಿ ಬಿಜೆಪಿ  ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಕಾರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಇದು ಭಯೋತ್ಪಾದಕ ದಾಳಿ ಎಂದೇ ಹೇಳಬೇಕು.ಗೃಹ ಸಚಿವರು ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಸಂಸತ್ ಭವನ, ರಾಷ್ಟ್ರಪತಿ ಭವನ, ಸೇನಾ ಕಚೇರಿ ಸೇರಿದಂತೆ ಅನೇಕ ಸ್ಥಳಗಳು ಟಾರ್ಗೆಟ್ ಆಗಿತ್ತು. ಇಂತಹ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಒಟ್ಟಾಗಿ‌ ಒಗ್ಗಟ್ಟು ಪ್ರದರ್ಶಿಸಬೇಕಿತ್ತು. ದೇಶದ ಪರವಾಗಿ ನಿಲ್ಲಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರು ಮನ ಬಂದಂತೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಈ ತನಕ ಘಟನೆ ಕುರಿತು ಹೇಳಿಕೆಯಾಗಲಿ, ಖಂಡನೆಯ ಅಗಲಿ ನೀಡಿಲ್ಲ. ಸಂಕಷ್ಟದ ಸಂದರ್ಭದಲ್ಲಿ ದೇಶದ ಪರವಾಗಿ ಉಗ್ರ ಕೃತ್ಯ ಖಂಡಿಸಿಲ್ಲ. ಈ ನಡುವೆ ಕಾಂಗ್ರೆಸ್ಸಿಗರು ಗೃಹ ಸಚಿವರಿಗೆ ಬಳೆ ಕಳಿಸುವ ಕೆಲಸ ಮಾಡಿದ್ದಾರೆ. ಇದೇ ರೀತಿ ಮಾಡಿದರೆ ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ನಾಯಕರಿಗೆ ಎಷ್ಟು ಸಲ ಬಳೆ ಕಳಿಸಬೇಕಾಗುತ್ತಿತ್ತು. ಅದಕ್ಕಾಗಿ ಬಳೆಯ ಫ್ಯಾಕ್ಟರಿ ಯನ್ನೇ ತೆರೆಯಬೇಕಾಗುತ್ತಿತ್ತು ಎಂದಿದ್ದಾರೆ.

ಕಬ್ಬು ಬೆಳೆಗಾರರ ಮುಂದುವರಿದ ಹೋರಾಟದ ಬಗ್ಗೆ ಮಾತನಾಡಿದ ಅವರು ಈ ತನಕ ಸರ್ಕಾರ ಗಮನ ಹರಿಸಿಲ್ಲ. ಸಿಎಂ ಆದಿಯಾಗಿ ಸಚಿವರು ಬೆಂಗಳೂರು ಬಿಟ್ಟು ಹೊರಗೆ ಹೋಗುತ್ತಿಲ್ಲ. ತಕ್ಷಣವೇ ಈ ಬಗ್ಗೆ ಗಮನ ಹರಿಸಬೇಕು. ಅದೇ ರೀತಿ ಮೆಕ್ಕೆಜೋಳ ಖರೀದಿ ಬಗ್ಗೆಯೂ ಗಮನ‌‌ ಹರಿಸಬೇಕು. ಇದರ ಜೊತೆಗೆ ಬರ ಪರಿಹಾರದ ವಿಷಯದಲ್ಲೂ ನಿರ್ಲಕ್ಷ್ಯ ವಹಿಸಿದೆ. ರೈತರ‌ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಯಾವ ಪುಣ್ಯಾತ ಈ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೋ‌ ಗೊತ್ತಿಲ್ಲ. ಅಸಂಘಟಿತ ಕಾರ್ಮಿಕರ ಕಲ್ಯಾಣದ ನೆಪದಲ್ಲಿ ಪೆಟ್ರೋಲ್ ಮೇಲೆ ಸೆಸ್ ಹಾಕುವ ಬಗ್ಗೆ ಚಿಂತನೆ ನಡೆದಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಜನ ಸಾಮಾನ್ಯರು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಕಾರ್ಮಿಕರ ಕಲ್ಯಾಣದ ನೆಪದಲ್ಲಿ ಸಚಿವರು ತಮ್ಮ ಕಲ್ಯಾಣದ ಹುನ್ನಾರ ನಡೆಸಿದ್ದಾರೆ. ತಕ್ಷಣ ಇಂತಹ ಚಿಂತನೆಯನ್ನು ಸರ್ಕಾರ ಕೈ ಬಿಡಬೇಕು. ಅಧಿಕಾರ-ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. ನೆರೆ, ಬರ, ಬೆಂಬಲ ಬೆಲೆ ಸೇರಿದಂತೆ ಪ್ರತಿ ಬಾರಿ ಕೇಂದ್ರದ ಕಡೆಗೆ ಆರೋಪ ಮಾಡುವುದು ಅಭ್ಯಾಸ ಆಗಿಹೋಗಿದೆ. ಹೀಗಾದರೆ ಅವರಿಗೆ ಜನರು ಅಧಿಕಾರ ನೀಡಿದ್ದು ಏಕೆ. ಬಿಹಾರ ಚುನಾವಣಾ ಎಕ್ಸಿಟ್ ಪೋಲ್ ವರದಿ ನಿಜವಾಗಲಿದೆ. ಬಿಹಾರದಲ್ಲಿ ಎನ್ ಡಿಎ ಮೈತ್ರಿ ಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.