ಮನೆ ಪ್ರಸ್ತುತ ವಿದ್ಯಮಾನ 16 ತಿಂಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಹೊಡೆಯುತ್ತಿದ್ದಾರೆ: ಬೆಂಗಳೂರಿನಲ್ಲಿ ವಿಧಾನಸಭೆ...

16 ತಿಂಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಹೊಡೆಯುತ್ತಿದ್ದಾರೆ: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್ ಹೇಳಿಕೆ

0

ಬೆಂಗಳೂರು ; 16 ತಿಂಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ನಮಗೆ ನಾಚಿಕೆ ಆಗುತ್ತಿದೆ. ಹದಿನಾರು ತಿಂಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಹೊಡೆಯುತ್ತಿದ್ದಾರೆ.ಇದರ ಮಧ್ಯೆ ಸಿದ್ದರಾಮಯ್ಯ ನಲವತ್ತು ವರ್ಷದ ಜೀವನ ತೆರೆದ ಪುಸ್ತಕ ಅಂದವರು ಇವತ್ತು ವಿಚಾರಣೆಗೆ ಹೋಗಿದ್ದಾರೆ.ಸ್ವತ: ಸಿಎಂ ಆಗಿ ಸಿದ್ದರಾಮಯ್ಯ ಅವರ ಕೈಕೆಳಗಿನ ಪೊಲೀಸ್ ಅಧಿಕಾರಿ ಕೆಳಗೆ ಕೂತು ವಿಚಾರಣೆ ಎದುರಿಸುತ್ತಿದ್ದಾರೆ, ನಾಚಿಕೆ ಆಗಲ್ವಾ? ಬೆಳಗ್ಗೆ ವಿಚಾರಣೆ ಅಂತೆ ನಂತರ ಮಧ್ಯಾಹ್ನ ಪ್ರಚಾರ ಅಂತೆ.ಇವರೇ ಮೊದಲೇ ಟೈಮ್ ಫಿಕ್ಸ್ ಮಾಡಿಕೊಂಡು ಹೋಗಿದ್ದಾರೆ.ಇದೇನು ಮ್ಯಾಚ್ ಫಿಕ್ಸಿಂಗ್ ಕೇಸಾ?  ಎಂದು ಪ್ರಶ್ನೆ ಮಾಡಿದ್ದಾರೆ.

ತನಿಖಾಧಿಕಾರಿಗಳು ಎಷ್ಟು ಹೊತ್ತು ವಿಚಾರಣೆ ನಡೆಸುತ್ತಾರೆ ಅಂತ ಇವರಿಗೆ ಗೊತ್ತಾ? ಕೆಲವರು ಒಂದೆರಡು ಗಂಟೆ, ಕೆಲವರು ಅರ್ಧ ದಿನ, ಒಂದು ದಿನ ವಿಚಾರಣೆ ನಡೆಸುತ್ತಾರೆ. ಇವರೇ ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಸಮಯ ನಿಗದಿ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.

ನೀವು ಪ್ರಾಮಾಣಿಕರಾಗಿದ್ರೆ ಪ್ರಕರಣವನ್ನು ಸಿಬಿಐಗೆ ವಹಿಸಿ; ಸಿಎಂ ಸಿದ್ದರಾಮಯ್ಯಗೆ ಬಿ ಎಸ್ ಯಡಿಯೂರಪ್ಪ ಸವಾಲು

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ  ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತ ತನಿಖೆ ವಿಚಾರಣೆ ಎದುರಿಸುತ್ತಿದ್ದಾರೆ.ಲೋಕಾಯುಕ್ತ ತನಿಖೆಯಿಂದ ಏನೂ ಆಗಲ್ಲ. ರಾಜಕೀಯ ದೊಂಬರಾಟ ಮಾಡಿ ನಾನು ಸಾಚಾ ಅಂತಾ ತೋರಿಸಿಕೊಳ್ಳಲು ಹೊರಟಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು.ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದಿದ್ದಾರೆ.

ಲೋಕಾಯುಕ್ತದಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಿದೆ.ಅವರೇ ಇದನ್ನು ರಾಜಕೀಯ ದೊಂಬರಾಟ ಮಾಡಿದಂತೆ ಮಾಡುತ್ತಿದ್ದಾರೆ . ನಾನು ಸಾಚಾ ಅಂತ ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಾಮಾಣಿಕರಾಗಿದ್ದರೆ ಸಿಬಿಐಗೆ ಕೊಟ್ಟು ತನಿಖೆ ಮಾಡಿಸಲಿ. ಎಲ್ಲರೂ ಈ ಒತ್ತಾಯ ಮಾಡುತ್ತಿದ್ದಾರೆ.ಇದನ್ನು ಸಿಬಿಐಗೆ ಕೊಡಬೇಕು ಅಂತ ನಾನು ಒತ್ತಾಯ ಮಾಡುತ್ತಿದ್ದೇನೆ. ನೀವು ಭ್ರಷ್ಟಾಚಾರದಲ್ಲಿ ಮುಳುಗಿದ್ದೀರಿ ಎಂಬುದು ಜಗತ್ತಿಗೆ ಗೊತ್ತಿದೆ. ಸಿಬಿಐಗೆ ವಹಿಸಿದರೆ ಸತ್ಯ ಹೊರ ಬರುತ್ತದೆ.ನನ್ನದು ತೆರದ ಪುಸ್ತಕ ಅಂತ ಹೇಳುತ್ತಿರುವ ನೀವು ಪ್ರಾಮಾಣಿಕರಿದ್ದರೆ ಸಿಬಿಐಗೆ ವಹಿಸಿ ಎಂದಿದ್ದಾರೆ.