ಬೆಂಗಳೂರು; ವಕ್ಫ್ ಆಸ್ತಿ ನೋಂದಣಿ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಬಿಜೆಪಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಕಾಂಗ್ರೆಸ್ ಸರ್ಕಾರ ಬಂದರೆ ಅಲ್ಪಸಂಖ್ಯಾತರ ವಿಶೇಷವಾಗಿ ಮುಸ್ಲಿಮರ ಓಲೈಕೆ ಮಾಡುತ್ತಾರೆ ಎಂದಿದ್ದಾರೆ. ಟಿಪ್ಪು ಜಯಂತಿ ಮಾಡಲು ಆದೇಶ ಹೊರಡಿಸಿದ್ದರು, ಅವರೇನು ಕೇಳಿದ್ರಾ?.ಕಾಂಗ್ರೆಸ್ ಬಂದರೆ ಇರುವ ಬರುವ ಆಸ್ತಿ ಎಲ್ಲಾ ವಕ್ಫ್ ಬೋರ್ಡಿಗೆ ಬರೆಯುತ್ತಾರೆ. ಅವನ್ಯಾರೋ ಪಾರ್ಲಿಮೆಂಟ್ ನಮ್ಮದೇ ಅಂತ ಹೇಳಿದ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಧಾನಸೌಧ ಕೂಡ ಅವರದೇ, ಲೋಕಸಭೆ ಕೂಡಾ ಅವರದೇ. ಎಲ್ಲಾ ಆಸ್ತಿ ಮುಸ್ಲಿಮರದ್ದಂತೆ, ಏನು ಅರಬ್‌ನವರು ಕೊಟ್ರಾ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಎಂತಹ ಹೀನಾಯ ಪರಿಸ್ಥಿತಿಗೆ ಬಂದಿದೆ ಅಂದ್ರೆ ಮಾತು ಎತ್ತಿದರೆ ಎಲ್ಲವನ್ನೂ ಎಸ್ ಐಟಿ, ಎಸ್ ಐಟಿ ಅಂತಾರೆ. ಈಗ ತಹಶೀಲ್ದಾರರ ತಪ್ಪು ಅಂತ ಹೇಳುತ್ತಿದ್ದಾರೆ, ಬಿಜೆಪಿ ಕಾಲದಲ್ಲಿ ಅಂತ ಹೇಳುತ್ತಿದ್ದಾರೆ. ಕಾಲ ಯಾವುದು ಅಂತ ಅಲ್ಲ, ತಪ್ಪು ಏನಾಗಿದೆ ಅನ್ನೋದು ಮುಖ್ಯ. ಯಾರ ಕಾಲದಲ್ಲೇ ಆಗಲಿ ತಪ್ಪು ಸರಿಪಡಿಸಬೇಕು. ಕೆಲವರು ದಂಧೆಕೋರರಿದ್ದಾರೆ.ಕಾಂಗ್ರೆಸ್ ಬಂದರೆ ಎಲ್ಲಾ ಅಲ್ಪ ಸಂಖ್ಯಾತರಿಗೆ ಬರೆದುಕೊಡ್ತಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಪ್ರವೃತ್ತಿ ಬಿಡಬೇಕು. ಮುಂದೆ ಆಗುವ ಅನಾಹುತಕ್ಕೆ ಕಾಂಗ್ರೆಸ್ ನೇರ ಕಾರಣ ಆಗಲಿದೆ. ರೈತರು ದಂಗೆ ಎದ್ರೆ ಕಾಂಗ್ರೆಸ್ ಸರ್ವನಾಶ ಆಗಲಿದೆ. ರೈತರೇ ಇವರಿಗೆ ಪಾಠ ಕಲಿಸಲಿದ್ದಾರೆ. ರಾಜ್ಯ ಸರ್ಕಾರವೇ ಈ ತಪ್ಪನ್ನು ಸರಿಪಡಿಸಬೇಕು. ತಹಶೀಲ್ದಾರ್ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆ; ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆ
ಬೆಂಗಳೂರು; ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆ ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆಯಾಗಿದೆ.ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶದ ಹಿನ್ನೆಲೆಯಲ್ಲಿ ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆ ಮಾಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಸದ ರಮೇಶ್ ಜಿಗಜಿಣಗಿ ಮತ್ತು ಶಾಸಕ ಯತ್ನಾಳ್ ಸೇರ್ಪಡೆಗೊಳಿಸಿ ತಂಡ ಪುನರ್ ರಚಿಸಿದೆ. ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ತಂಡ ನಾಳೆ ವಿಜಯಪುರ ಜಿಲ್ಲೆಗೆ ತೆರಳಲಿದೆ.ಇಂದು ತಂಡಕ್ಕೆ ಸಂಸದ ಜಿಗಜಿಣಗಿ, ಶಾಸಕ ಯತ್ನಾಳ್ ಮತ್ತು ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ. ಜಿರಲಿ ಸೇರ್ಪಡೆಯಾಗಿದ್ದಾರೆ.
ಇಂದು ಮಧ್ಯಾಹ್ನ ಬಿಜೆಪಿ ತಂಡವನ್ನು ಬಹಿಷ್ಕರಿಸುವುದಾಗಿ ಯತ್ನಾಳ್ ಹೇಳಿಕೆ ನೀಡಿದ್ದರು.ಯತ್ನಾಳ್ ಆಕ್ರೋಶದ ಬೆನ್ನಲ್ಲೇ ರಾಜ್ಯಾಧ್ಯಕ್ಷರಿಂದ ತಂಡ ಪುನರ್ ರಚನೆಯಾಗಿದೆ.
ನಿನ್ನೆ ಸಂಸದ ಕಾರಜೋಳ ನೇತೃತ್ವದಲ್ಲಿ ಶಾಸಕರಾದ ಹರೀಶ್ ಪೂಂಜ, ಮಹೇಶ್ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ್ ಶಹಾಪುರ ಮತ್ತು ರೈತ ಮೋರ್ಛಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನೊಳಗೊಂಡ ತಂಡ ರಚಿಸಿದ್ದ ಬಿಜೆಪಿ ಇಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶದ ಹಿನ್ನೆಲೆಯಲ್ಲಿ ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆ ಮಾಡಿದೆ.