ಬೆಂಗಳೂರು; ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಂದರೆ ಮುಸ್ಲಿಂ ಭಯೋತ್ಪಾದಕರಿಗೆ ಹಬ್ಬ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ
ಈ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಂದರೆ ಮುಸ್ಲಿಂ ಭಯೋತ್ಪಾದಕರಿಗೆ ಹಬ್ಬ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ,2014ರ ಅವಧಿಯಲ್ಲೂ PFI ಸಂಘಟನೆ ಸೇರಿದಂತೆ ಎಲ್ಲ ಕೇಸ್ ವಾಪಾಸ್ ಪಡೆದುಕೊಂಡಿದೆ. ಇವರ ಆಡಳಿತಕ್ಕೆ ಜನ ಬೇಸರಗೊಂಡ ಕಾಂಗ್ರೆಸ್ ಸರ್ಕಾರವನ್ನ ಕಿತ್ತು ಹಾಕಿದ್ರು. ಪೊಲೀಸರನ್ನ ತಳಿಸುವುದು, ಗಲಾಟೆ ಮಾಡುವುದು ಇದು ಜಾಸ್ತಿ ಆಯ್ತು.ಈಗ ಕೇಸ್ ವಾಪಾಸ್ ತೆಗೆದುಕೊಂಡಿದ್ದಾರೆ.ಇಂತಹ ಸಮುದಾಯಗಳ ಮೇಲೆ ಕೇಸ್ ಹಾಕಬಾರದು ಅನ್ನೋ ನಿರ್ಧಾರಕ್ಕೆ ಕಾಂಗ್ರೆಸ್ ಬಂದಂತಿದೆ.ಕಾನೂನು ಸುವ್ಯವಸ್ಥಿತ ಯಾವುದೇ ಸರ್ಕಾರದ ಸ್ವತ್ತಲ್ಲ.ಕಾನೂನು ಸುವ್ಯವಸ್ಥಿತ ಜನರಿಗೆ ರಕ್ಷಣೆ ಕೊಡೋಕೆ ಇರೋದು ಎಂದಿದ್ದಾರೆ.
ಮುಂದುವೆರದು ಮಾತನಾಡಿದ ಅವರು ಮತಾಂತರಕ್ಕೆ ಕಾಂಗ್ರೆಸ್ ಪ್ರೇರಣೆ ನೀಡುವ ಕೆಲಸಕ್ಕೆ ಖಂಡಿಸುತ್ತೇವೆ.ಪಾಕಿಸ್ತಾನ, ಬಾಂಗ್ಲಾದೇಶದಿಂದ ಬಂದು ಗಲಭೆ, ಮತಾಂತರ ಘಟನೆಗಳು ನಡೆಯುತ್ತಿದೆ.ಪೊಲೀಸರ ಇದರ ಬಗ್ಗೆ ವರದಿ ನೀಡಿದ್ದಾರೆ, ಅರೆಸ್ಟ್ ಮಾಡಿರುವ ಪ್ರಕರಣದ ಮಾಹಿತಿ ನೀಡಿದ್ದಾರೆ.ತೋರಿಸುವುದು ಹಸುವಿನ ಮುಖ, ಮನಸ್ಸಿನಲ್ಲಿ ಇರೋದು ವ್ಯಾಘ್ರನ ಮುಖ. ಬಾಂಬ್ ಹಾಕುವವರನ್ನೆಲ್ಲ ಸ್ನೇಹಿತರು ಅಂತ ಹೇಳುತ್ತೀರಿ. ಇದರಿಂದಲೇ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಶಿವಮೊಗ್ಗ, ಕೋಲಾರ, ಹುಬ್ಬಳ್ಳಿ, ಮೈಸೂರು, ಕೊಡಗಿನ ಘಟನೆಗಳು ಕಾಂಗ್ರೆಸ್ ನೀತಿ ತೋರಿಸುತ್ತೆ ಎಂದಿದ್ದಾರೆ.ಇನ್ನು ಹುಬ್ಬಳ್ಳಿ ಚಲೋ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಜೋಷಿ, ಶಾಸಕರ ಜೊತೆ ಮಾತನಾಡುತ್ತೇನೆ.ಏನು ಹೋರಾಟ ಮಾಡ್ಬೇಕು ಅಂತ ಚರ್ಚೆ ಮಾಡಿ ತೀರ್ಮಾನ ಎಂದಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸ್ ವಾಪಸ್ಸು ಪಡೆದ ವಿಚಾರ; ಇದು ಸರ್ಕಾರ ಮಾಡಿರುವ ಅಕ್ಷಮ್ಯ ಅಪರಾಧ ಎಂದ ಛಲವಾದಿ ನಾರಾಯಣಸ್ವಾಮಿ ಹೇಳಿಕೆ
ಬೆಂಗಳೂರು; ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸ್ ವಾಪಸ್ಸು ಪಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದು ಸರ್ಕಾರ ಮಾಡಿರುವ ಅಕ್ಷಮ್ಯ ಅಪರಾಧ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಗಲಭೆ ಮಾಡಿದವರು ಹಾಗೂ ಕ್ರಿಮಿನಲ್ ಗಳ ಮೇಲೆ ಸರ್ಕಾರ ಕೇಸ್ ದಾಖಲು ಮಾಡಿತ್ತು. ಇವಾಗ ಒಂದು ಸಮುದಾಯ ವನ್ನು ಓಲೈಕೆ ಮಾಡಲು, ಎಲ್ಲಾ ಕೇಸ್ ವಾಪಸ್ಸು ಪಡೆದಿದ್ದಾರೆ.ಇದು ಸರ್ಕಾರ ಮಾಡಿರುವ ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.
ಆರ್ಗನೈಸಡ್ ಕ್ರೈಮ್ ಮಾಡಿರೋ ಕೇಸ್ ವಾಪಸ್ಸು ಪಡೆದಿರೋದು ಕೂಡ ಸರ್ಕಾರದ ಆರ್ಗನೈಸ್ ಕ್ರೈಮ್. ಹೀಗಾಗಿ ಇದನ್ನು ನಾವು ಸುಮ್ಮನೆ ಬಿಡುವುದಿಲ್ಲ. ಇದರ ಬಗ್ಗೆ ಜನರಿಗೆ ತಿಳಿಸಲು ಹೋರಾಟ ಮಾಡುತ್ತೇವೆ. ಇದರ ಬಗ್ಗೆ ನಾವು ಕೋರ್ಟ್ ನಲ್ಲಿ ಅಬ್ಜೆಕ್ಷನ್ ಅರ್ಜಿ ಹಾಕುತ್ತೇವೆ.ಉಡುಪಿ, ಮಂಗಳೂರು, ಶಿವಮೊಗ್ಗದಲ್ಲಿನ ಹಿಂದು ಕಾರ್ಯಕರ್ತರ ಮೇಲೆ ಯಾಕೇ ಕೇಸ್ ವಾಪಸ್ಸು ತಗೊಂಡಿಲ್ಲ..? ಅವ್ರು ಕ್ರಿಮಿನಲ್ ಗಳು, ಇವ್ರು ಕ್ರಿಮಿನಲ್ ಗಳು ಅಲ್ವಾ..? ಜನರನ್ನು ಕೆರಳಿಸುವ ಕೆಲಸ ಮಾಡಿ, ಮುಡಾ, ವಾಲ್ಮೀಕಿ ಹಗರಣ ಡೈವರ್ಟ್ ಮಾಡ್ತಿದ್ದೀರಿ. ನಾನು ಇವತ್ತು ಕೇಂದ್ರದ ಕಾನೂನು ಸಚಿವರಿಗೂ ಪತ್ರ ಬರೆಯುತ್ತಿದ್ದೇನೆ.ಈ ಸರ್ಕಾರದ ವಿರುದ್ಧ ಕ್ರಮ ಜರುಗಿಸಬೇಕು ಅಂತಾ.ಕೇಂದ್ರ ಸರ್ಕಾರ ತಕ್ಷಣ ಗಂಭೀರವಾಗಿ ಪರಿಗಣಿಸಿ, ತಕ್ಷಣ ಕ್ರಮ ತಗೊಬೇಕು. ಪ್ರಧಾನ ಮಂತ್ರಿ ಗಳು, ಕೇಂದ್ರ ಗೃಹ ಸಚಿವರು ಹಾಗೂ ರಾಷ್ಟ್ರಪತಿ ಗಳಿಗೂ ಗಮನ ಸೆಳೆಯಲು ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದ್ದಾರೆ.