ಮಂಡ್ಯ; ಇಂದು ಕಲ್ಲು ಹೊಡೆದಿದ್ದಾರೆ, ಮುಂದೆ ಅದೇ ಜಾಗದಿಂದ ಬಾಂಬ್ ಹಾಕುತ್ತಾರೆ ಎಂದು ಮದ್ದೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು ಇಡೀ ಮದ್ದೂರಿನಲ್ಲಿ ಇರುವವರು ಹಿಂದೂಗಳು. ಇವರೆಲ್ಲಾ ಅಲ್ಲಿಗೆ ಹೋದರೆ ಬಿಡುತ್ತಾರಾ?. ಆ ಮಸೀದಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದಾರೆ. ಬೇರೆ ಬೇರೆ ರಾಜ್ಯದಿಂದ ಬಂದು ಅಲ್ಲಿ ಸೇರಿಕೊಂಡಿದ್ದಾರೆ. ಇಂದು ಕಲ್ಲು ಹೊಡೆದಿದ್ದಾರೆ, ಮುಂದೆ ಅದೇ ಜಾಗದಿಂದ ಬಾಂಬ್ ಹಾಕುತ್ತಾರೆ. ಇದೇ ಸಿದ್ದರಾಮಯ್ಯ, ಇದೇ ಸರ್ಕಾರ ಇದ್ದರೆ ಇಲ್ಲಿನ ಶಾಸಕರು ಕೂಡಾ ಬ್ರದರ್ಸ್ ಎನ್ನುತ್ತಾರೆ. ಮಿನಿ ಪಾಕಿಸ್ತಾನದ ತರಹ ನಿರ್ಮಾಣ ಆಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಖೊಮೇನಿ ಸರ್ಕಾರ ಇದ್ದಂತೆ. ಅವರು ಮಾತ್ರ ಢಮಾ ಢುಮಾ ಅಂತಾ ಎಲ್ಲಾ ಮಾಡಿಕೊಂಡು ಹೋಗಬಹುದು. ಹಿಂದೂಗಳು ಮದುವೆ, ಮುಂಜಿ ಮಾಡುವಂತಿಲ್ಲ. ಇದೇನಾ ನಿಮ್ಮ ಜಾತ್ಯಾತೀತತೆ. ನಾವು ಪ್ರಚೋದನೆ ಕೊಡಲು ಬರುತ್ತಿದ್ದೇವೆ ಅಂದರೆ ಬರದಂತೆ ಮಾಡಬಹುದಿತ್ತಲ್ವಾ?. ನೀವೇನು ಮಾಡುತ್ತಿದ್ರಿ ಮಣ್ಣು ತಿನ್ನುತ್ತಿದ್ರಾ?. ನಿಮ್ಮ ಕುಮ್ಮಕ್ಕಿನಿಂದಲೇ ಇಷ್ಟೆಲ್ಲಾ ಅನಾಹುತ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ನಾವು ಬಂದಿಲ್ಲ ಅಂದಿದ್ದರೆ ನಾಳೆ ಮನೆ ಮನೆಗೆ ನುಗ್ಗಿ ಹೊಡೆಯುತ್ತಾರೆ. ಹಿಂದೂಗಳು ಒಟ್ಟಾಗಿದ್ದರೆ ಮಾತ್ರ ಇಂತಹ ಪಾಕಿಸ್ತಾನದ ಏಜೆಂಟ್ ಗಳ ವಿರುದ್ಧ ಒಟ್ಟಾಗಿರಬಹುದು. ನಾವು ಬಂದಿರುವುದರಿಂದ ಇಂದು ಎಲ್ಲರೂ ಆರಾಮಾಗಿ ಓಡಾಡುತ್ತಿದ್ದಾರೆ. ನಾವು ಬಂದಿರುವುದಕ್ಕೆ ಇವತ್ತು ಇಷ್ಟೊಂದು ಹವಾ ಕ್ರಿಯೇಟ್ ಆಗಿದೆ. ರಾಜ್ಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ವಿಪಕ್ಷವಾಗಿ ನಾವು ಮಾಡುತ್ತಿದ್ದೇವೆ. ಶಾಂತಿಸಭೆಗೆ ಬಾಂಬ್ ಹಾಕುವವರು, ಗಲಾಟೆ ಮಾಡುವವರನ್ನು ಮಾತ್ರ ಕರೆದಿದ್ದಾರೆ. ಮುಸ್ಲಿಂರ ಮತದಿಂದಲೇ ನಾನು ಗೆದ್ದಿದ್ದು ಅಂತಾ ಸಿದ್ದರಾಮಯ್ಯ ಹೇಳಿ ಬಿಟ್ಟಿದ್ದಾರೆ. ಕಲ್ಲು ಹೊಡೆದವರು ಇಲ್ಲಿಯವರು ಅಲ್ಲ ಅಂತಾದರೆ ಪಾಕಿಸ್ತಾನದಿಂದ, ಬಾಂಗ್ಲಾದಿಂದ ಬಂದಿದ್ದಾರಾ? . ಅವರನ್ನು ಹೇಗೆ ಒಳಗೆ ಬಿಟ್ರಿ? ಸರ್ಕಾರದ ತಪ್ಪಲ್ವಾ?. ಹಿಂದೂಗಳನ್ನು ಒಡೆಯಬೇಕು, ಮೆರವಣಿಗೆ ತಡೆಯಬೇಕು ಅಂತಾ ಪ್ರೀ ಪ್ಲಾನ್ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಯಾವಾಗ ಚಾಮುಂಡಿ ಬೆಟ್ಟ ಹಿಂದುಗಳದ್ದು ಅಲ್ಲ ಅಂತಾ ಹೇಳಿದರೋ ಅವತ್ತಿನಿಂದ ಹತಾಶರಾಗಿದ್ದಾರೆ. ಅವರು ಹಿಂದೂ ಅಂತಾ ಹೇಳಿಕೊಳ್ಳುತ್ತಾರೆ ಹೊರತು ಅವರ ಹೃದಯದಲ್ಲಿ ಹಿಂದುತನ ಇಲ್ಲ . ನಾನು ನಿನ್ನೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೆ. ಆರೋಗ್ಯ ತಪಾಸಣೆ ಮುಗಿಸಿ ಬರುತ್ತೇನೆ ಎಂದು ಹೇಳಿದ್ದಾರೆ. ಎರಡು ಮೂರು ದಿನಗಳಲ್ಲಿ ಮದ್ದೂರಿಗೆ ಬಂದು ಒಂದು ದಿನ ಪೂರ್ತಿ ಇರುತ್ತಾರೆ.ಕುಮಾರಸ್ವಾಮಿ ಮಂಡ್ಯ, ಮದ್ದೂರಿನ ಜನರ ಜೊತೆ ಸದಾ ಇದ್ದಾರೆ. ಗೃಹ ಸಚಿವರು ಏನು ಕೇಳಿದರೂ ನನಗೆ ಗೊತ್ತಿಲ್ಲ ಅಂತಾರೆ. ಕಾನೂನು ಸುವ್ಯವಸ್ಥೆ ಬಗ್ಗೆ ಕೇಳಿದರೆ ನೋಡೋಣ, ನಾಳೆ ಬಾ, ನಾಡಿದ್ದು ಬಾ ಇಷ್ಟೇ. ಮದ್ದೂರು ಶಾಸಕರು ಏನೂ ಇನ್ನು ಬರಲ್ಲ. ಬಂದರೆ ಮುಸಲ್ಮಾನರ ಪರ ನಿಲ್ಲಬೇಕಲ್ವಾ?. ಅದಕ್ಕೆ ಅವರು ಕಾಯ್ದು ನಂತರ ಬರುತ್ತಾರೆ. ಬಂದರೆ ಅವರು ಮೊದಲು ಇಲ್ಲಿಗೆ ಬರಲ್ಲ. ಮಸೀದಿಗೆ ಬಂದು ಅಲ್ಲೊಂದು ಟೋಪಿ ಹಾಕಿಕೊಂಡು ನಮಾಜ್ ಮಾಡಿಕೊಂಡು ಹೊರಟು ಹೋಗುತ್ತಾರೆ ಅಷ್ಟೇ ಎಂದು ಹೇಳಿದ್ದಾರೆ.











