ಮನೆ Latest News ಬಳ್ಳಾರಿ ಬಿಮ್ಸ್ ನಲ್ಲಿ ಬಾಣಂತಿಯರ ಸಾವು ಪ್ರಕರಣ; : ವಿಧಾನಸೌಧದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್....

ಬಳ್ಳಾರಿ ಬಿಮ್ಸ್ ನಲ್ಲಿ ಬಾಣಂತಿಯರ ಸಾವು ಪ್ರಕರಣ; : ವಿಧಾನಸೌಧದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿ

0

ಬೆಂಗಳೂರು: ಬಳ್ಳಾರಿ ಬಿಮ್ಸ್ ನಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿದ್ರು.

ಈ ವೇಳೆ ಮಾತನಾಡಿದ ಅವರು ಕರ್ನಾಟಕದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿದೆ. ಕಳೆದ ಎಂಟು ತಿಂಗಳಿನಲ್ಲಿ ರಾಜ್ಯದಲ್ಲಿ 28 ಬಾಣಂತಿಯರು, 101 ನವಜಾತ ಶಿಶುಗಳು ಸಾವನ್ನಪ್ಪಿದ್ದಾರೆ. ಕೋವಿಡ್ ಸಮಯದಲ್ಲಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಎಲ್ಲರೂ ಟವಲ್ ತೆಗೆದುಕೊಂಡು ಅತ್ತಿದ್ದೇ ಅತ್ತಿದ್ದು. ಈಗ ನಿಮ್ಮ ಕಣ್ಣಿನಿಂದ ನೀರು ಬಂದಿದ್ಯಾ?. ಬಾಣಂತಿಯರ ಸಾವಿನ ದಿನವೇ ಹಾಸನದಲ್ಲಿ ಸಮಾವೇಶ ಮಾಡಿದರು. ಮೊದಲು ಅದು ಸಿದ್ದರಾಮಯ್ಯ ಸಮಾವೇಶ ಆಗಿತ್ತು, ಡಿ.ಕೆ. ಶಿವಕುಮಾರ್ ತಿರುಗಿ ಬಿದ್ದ ಮೇಲೆ ಕಾಂಗ್ರೆಸ್ ಸಮಾವೇಶ ಆಯಿತು. ಪಶ್ಚಿಮ ಬಂಗಾಳ ಮೂಲದ ಕಂಪನಿ ಪೂರೈಸಿರುವ ಐವಿ ದ್ರಾವಣದಿಂದ ಸಾವು ಆಗಿದೆ ಅಂತಾ ಹೇಳಿದ್ದಾರೆ. ಈ ಕಂಪನಿಯ ದ್ರಾವಣ ಬಾಂಗ್ಲಾದೇಶದಲ್ಲಿ ತಯಾರಾಗಿ ಬರುತ್ತದೆ ಅಂತಾ ಹೇಳುತ್ತಾರೆ ಎಂದ್ರು.

ಮಕ್ಕಳನ್ನು, ಬಾಣಂತಿಯರಿಗೆ ಬದುಕಲು ಬಿಡದೇ ಸಮಾವೇಶ ಮಾಡಿದರೆ ಶಾಪ ಸುತ್ತಿಕೊಂಡು ನರಳಿ ನರಳಿ ಈ ಸರ್ಕಾರ ಸತ್ತು ಹೋಗುತ್ತದೆ.ಒಂದು ದಿನವೂ ಜಿಲ್ಲಾ ಉಸ್ತುವಾರಿ, ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆ ಸಚಿವರು ಹೋಗಿಲ್ಲ.ಸಿಎಂ ಕಂಪನಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕಿದ್ದೇವೆ ಎಂದು ಹೇಳಿದ್ದು ಬಿಟ್ಟರೆ ಪ್ರಗತಿ ಏನಿದೆ? ಎಂದು ಪ್ರಶ್ನಿಸಿದ್ರು.

ರಾಜ್ಯ ಸರ್ಕಾರ ಕಂಪನಿ ಜೊತೆ ಕೈ ಜೋಡಿಸಿದೆ ಅಂತಾ ಇದರಲ್ಲಿ ಡೌಟ್ ಇದೆ. ನನ್ನ ಹೊರತುಪಡಿಸಿ ಬೇರೆ ಯಾರೂ ಬಿಮ್ಸ್ ಗೆ ಭೇಟಿ ನೀಡಿಲ್ಲ.ತನಿಖೆ ಮಾಡಬೇಕು ಅಂತಾ ನಾನು ಲೋಕಾಯುಕ್ತಕ್ಕೆ ಪತ್ರ ಬರೆಯುತ್ತೇನೆ. ಕೇಂದ್ರದ ಆರೋಗ್ಯ ಇಲಾಖೆ ತಪ್ಪು ಮಾಡಿದರೂ ಅದು ತಪ್ಪೇ. ರಾಜ್ಯದಲ್ಲಿ ಡ್ರಗ್ ಕಂಟ್ರೋಲ್ ಮಾಡುವವರು ಯಾರು?. ಇಡೀ ರಾಜ್ಯದಲ್ಲಿ ಆಗಿರುವ ಸಾವುಗಳ ಬಗ್ಗೆ ಲೋಕಾಯುಕ್ತದಿಂದ ತನಿಖೆ ಆಗಬೇಕು. ರಾಜ್ಯ ಬಾಣಂತಿಯರ ಸಾವಿನಲ್ಲೂ ನಂಬರ್ ವನ್ ಆಗುವಂತಾಗಿದೆ ಎಂದರು.

ಇನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ಯಾ? .ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು ನೀವು ಎಂದು ವಾಗ್ದಾಳಿ ನಡೆಸಿದ್ರು. ನಿಮ್ಮ ಆಡಳಿತದ ಅವಧಿಯಲ್ಲಿ ಜನರ ಮಾರಣ ಹೋಮ ಆಗುತ್ತಿದೆ. ಔಷಧಿ ಕೊಳ್ಳುವಲ್ಲಿ, ಕಾಂಟ್ರಾಕ್ಟ್ ವಿಚಾರದಲ್ಲಿ ಅಕ್ರಮ ನಡೆಯುತ್ತಿದೆ. ಮೊದಲು ನೀವು ನೇಮಕ ಮಾಡಿರುವ ಆರೋಗ್ಯ ಸಚಿವರನ್ನು ಉಚ್ಛಾಟನೆ ಮಾಡಿ. ಆತ ಆ ಇಲಾಖೆ ನಡೆಸಲು ಅಯೋಗ್ಯ . ಜನರ ಪ್ರಾಣ ತೆಗೆಯುವ ಸಚಿವರು ನಮಗೆ ಬೇಡ. ಘಟನೆ ನಡೆದು ಇಷ್ಟು ದಿನವಾದರೂ ಬಳ್ಳಾರಿಗೆ ಹೋಗದವರು ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿಗಳು. ಇವರು ಕಲೆಕ್ಷನ್ ನಲ್ಲೇ ಬ್ಯುಸಿ ಆಗಿದ್ದಾರೆ. ಇಂತಹವರು ನಮಗೆ ಬೇಡ. ಈ ವಿಚಾರವನ್ನು ಸಿಎಂ ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ಸಿಎಂ ಬಳ್ಳಾರಿಗೆ ತೆರಳಬೇಕು. ಮೃತರ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಬೇಕು.ಆ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಎಂ.ಎಲ್.ಸಿ ರವಿಕುಮಾರ್ ಮಾತನಾಡಿ  111 ಶಿಶು 6 ಬಾಣಂತಿಯರು ತೀರಿಕೊಂಡಿದ್ದಾರೆ. ವಿಲ್.ಎಲ್ ದ್ರಾವಣ ಲೋ ಕ್ವಾಲಿಟಿದು ಅನ್ನೊದು ಗೊತ್ತಾಗಿದೆ. ನಿನ್ನೆ ಕೂಡ ಬಾಣಂತಿಯಿಬ್ಬರು ತೀರಿಕೊಂಡಿದ್ದಾರೆ. ಈ ಸರ್ಕಾರಕ್ಕೆ ಗಾಂಭೀರ್ಯತೆ ಇಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇನ್ನು ವಿಸಿಟ್ ಮಾಡಿಲ್ಲ. ಜನರಿಗೆ ಕಳಪೆ ಮೆಡಿಸಿನ್ ಬಗ್ಗೆ ಅಗ್ರಿಮೆಂಟ್ ಮಾಡ್ಕೊಂಡು ಕೂತಿದ್ದಾರ ಗೊತ್ತಿಲ್ಲ. ದಿನೇಶ್ ಗುಂಡೂರಾವ್ ಈ ಕೂಡಲೇ ರಿಸೈನ್ ಮಾಡಬೇಕು. ಕಳಪೆ ಔಷಧಿ ಹೇಗೆ ಆಸ್ಪತ್ರೆಗೆ ಬಂತು. ಡ್ರಗ್ ಕಂಟ್ರೋಲ್ ಬೋರ್ಡ್ ಏನ್ ಮಾಡ್ತಿದೆ. ವೈದ್ಯರದ್ದು ತಪ್ಪಿಲ್ಲ ಸರ್ಕಾರ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿಲ್ಲ. ಮೃತಪಟ್ಟ ಬಾಣಂತಿಯರಿಗೆ ಎರಡು ಲಕ್ಷ ಕೊಡ್ತಿದ್ದಾರೆ. ಅವರಿಗೂ ಐದು ಲಕ್ಷ ನೀಡಬೇಕು ಎಂದು ಆಗ್ರಹಿಸಿದ್ದಾರೆ.