ಬೆಂಗಳೂರು; ಬಜೆಟ್ ನಲ್ಲಿ ಸಿದ್ದರಾಮಯ್ಯ ಹೇಳಿರೋದೆಲ್ಲಾ ಬರೀ ಸುಳ್ಳು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ವಿಧಾನ ಸೌಧ ವಿಪಕ್ಷ ನಾಯಕರ ಕೊಠಡಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬಜೆಟ್ ಅಧಿವೇಶನ ಭಾಷಣದಲ್ಲಿ ಸರ್ಕಾರದ ತಪ್ಪು ಹೇಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಬಜೆಟ್ ಮೋಸದ ಬಜೆಟ್ ಅಂತಾ. ಇದರಲ್ಲಿ ಹೇಳಿರೋದು ಸುಳ್ಳು ಮುಂದೆ ಮಾರಿ ಹಬ್ಬ ಇದೆ ಅಂತಾ. ತೆರಿಗೆಗಳನ್ನ ಬಜೆಟ್ ನಲ್ಲಿ ಮೊದಲೇ ಹಾಕಲಾಗಿರುತ್ತೆ. ಆದರೆ ಇದು ಇನಗ ಸೈಡ್ ಬಜೆಟ್. ಯಾವ ತೆರಿಗೆ ಬಗ್ಗೆ ಉಲ್ಲೇಖ ಮಾಡಿರಲಿಲ್ಲ. ಮೋಸ ಮಾಡೋದರಲ್ಲಿ ಸಿದ್ದರಾಮಯ್ಯ ನಂಬರ್ ಒನ್.ಧೈರ್ಯ ಇದ್ರೆ ಬಜೆಟ್ ನಲ್ಲಿ ಘೋಷಣೆ ಮಾಡಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಗ್ಯಾರಂಟಿ ಸಮಿತಿ ಒಂದು ವೇಸ್ಟ್ ಬಾಡಿ. ವೇಸ್ಟ್ ಬಾಡಿ ಅವರಿಗೆ ಏನು ಕೆಲಸ ಇಲ್ಲ. ಎಲ್ಲಾ ಆನ್ ಲೈನ್ ಇದೆ.ಅದರೂ ಅವರು 150 ಕೋಟಿ ಖರ್ಚು ಮಾಡ್ತಾರೆ. ಒಬ್ಬೊಬ್ಬರಿಗೆ 25 ಲಕ್ಷ ಚೇಂಬರ್ ಗೆ ಖರ್ಚು ಮಾಡ್ತಾರೆ. ಈ ಸರ್ಕಾರದ ತಿಥಿ ಆಗಿದೆಯೋ ಗೊತ್ತಿಲ್ಲ. ದರ ಏರಿಕೆ ಬಜೆಟ್ ನಲ್ಲೇ ಹೇಳಬಹುದಿತ್ತು. ಸಿದ್ದರಾಮಯ್ಯ ಬಂದ ಮೇಲೆ ಮೂರು ಬಾರಿ ಏರಿಕೆ ಮಾಡಿದ್ದಾರೆ. ಒಟ್ಟು ಒಂಬತ್ತು ರೂಪಾಯಿ ಏರಿಕೆ ಮಾಡಿದ್ದಾರೆ. ಇದು ಮನೆ ಹಾಳ್ ಕಾಂಗ್ರೆಸ್ ಎಂದಿದ್ದಾರೆ.
ಮೊದಲ ಬಾರಿಗೆ ರೈತರಿಗೆ ಕಷ್ಟ ಅಂತಾ ಹೇಳಿದ್ರು.ಆಗ ಹಣ ರೈತರಿಗೆ ಹಣ ಕೊಟ್ಟಿಲ್ಲ. ಈ ಬಾರಿಯೂ ಕೊಡತ್ತೋ ಇಲ್ವೋ ಗೊತ್ತಿಲ್ಲ. ಸರ್ಕಾರ ದಿವಾಳಿ ಅಂದರೆ ಇಲ್ಲ ಅಂತಾರೆ. ಆದರೆ ತೆರಿಗೆ ಹಾಕ್ತಾ ಇದ್ದಾರೆ. ನಾವು ಇದ್ದಾಗ ಬಸ್ ದರ ಏರಿಕೆ ಮಾಡಿಲ್ಲ. ನೀರಿನ ದರ ಏರಿಕೆ ಮಾಡಿಲ್ಲ.ಈಗ ದರ ಏರಿಕೆಯ ಫೆಸ್ಟಿವಲ್. ಯುಗಾದಿ ಹಬ್ಬದ ಶಾಕ್ ಇದು. .ಯುಗಾದಿಯ ಶಾಕ್ ಟ್ರೀಟ್ ಮೆಂಟ್ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದ್ರು.
ಮಾರಿ ಹಬ್ಬದ ಸೆಕೆಂಡ್ ಫೇಸ್ ಗೆ ಡಿಸಿಎಂ ರೆಡಿಯಾಗಿದ್ದಾರೆ. ಯಾರು ಏನೇ ಹೇಳಿದ್ರು ನಾನ್ ನೀರಿನ ದರ ಜಾಸ್ತಿ ಮಾಡೋವ್ನೇ ಅಂತಾ ಹೇಳಿದ್ದಾರೆ. ಐ ಲವ್ ಯು ನಂದಿನಿ ಅಂತಾ ಆ್ಯಡ್ ಕೊಟ್ಟಿದ್ರು. ಈಗ ಐ ಹೇಟ್ ಯು ಅಂತಾ ಕೊಡ್ತಾರಾ ಈಗ. ಹಿಂದೆ ಈಶ್ವರಪ್ಪಗೆ ಪ್ರಿಂಟಿಂಗ್ ಮಿಷನ್ ಇಟ್ಕೊಂಡಿದಾರೆ ಅಂತಾ ಹೇಳಿದ್ರು. ಈಗೇನು ಜನರ ಬಳಿ ಪ್ರಿಂಟಿಂಗ್ ಮಿಷನ್ ಇದೆಯಾ. ಜನ ಪ್ರಿಂಟ್ ಮಾಡಿ ಹಣ ಕೊಡಬೇಕಾ. ನಾಚಿಕೆ ಆಗಬೇಕು ಈ ಸರ್ಕಾರಕ್ಕೆ. ಜನರೇ ದೇವರು, ಜನತಾ ಜನಾರ್ದನ ಅಂದಿದ್ರು. ಕಾಕಾ ಪಾಟೀಲ್ ಗೆ ಫ್ರಿ. ಮಹದೇವಪ್ಪಂಗೂ ಫ್ರಿ. ನಿನ್ ಹೆಂಡ್ತಿಗೂ ಫ್ರೀ. ನನ್ ಹೆಂಡ್ತಿಗೂ ಫ್ರೀ ಅಂದಿದ್ರು. ಇವತ್ತು ನನ್ ಹೆಂಡತಿ ಗೂ ಟ್ಯಾಕ್ಸ್. ನಿನ್ ಹೆಂಡತಿಗೂ ಟ್ಯಾಕ್ಸ್ ಎಂದು ವ್ಯಂಗ್ಯವಾಡಿದ್ರು.
ಮೊನ್ನೆ ತಮಿಳುನಾಡಿಗೆ ಹೋಗಿ ಡಿಸಿಎಂ ಅಪ್ಪಿಕೊಳ್ಳುವಾಗ ಮೇಕೆದಾಟು ಬಗ್ಗೆ ಅಲ್ಲಿ ಒಂದು ಮಾತು ಹೇಳಬಹುದಿತ್ತು. ಮುಂದೆ ಇನ್ನಷ್ಟು ಮಾರಿ ಹಬ್ಬ ಕಾದಿದೆ.ಯುಗಾದಿಗೆ ಡಬಲ್ ಧಮಾಕ ಮಾಡಿದ್ದಾರೆ. ಗೌರಿ ಗಣೇಶಂಗೆ ಥ್ರಿಬಲ್ ಧಮಾಕ ಕೊಡ್ತಾರೆ. ಪೆಟ್ರೋಲ್ ಡಿಸೆಲ್ ಸ್ಟಾಂಪ್ ಡ್ಯೂಟಿ , ಜನನ ಮರಣ ಪತ್ರ ,ಕಸದ ಗ್ರೀನ್ ಸೆಸ್ ಹಾಕಲು ರೆಡಿ ಆಗಿದಾರೆ. ನಿಮ್ಮ ಮನೆಯಲ್ಲಿ ಟಾಯ್ಲೆಂಟ್ ಇಂದ ಅಡುಗೆಯಿಂದ ಎಷ್ಟು ಕಸ ಹೊರ ಬರತ್ತೆ ಎಂಬುದನ್ನ ಅಳೆದು ಟ್ಯಾಕ್ಸ್ ಹಾಕ್ತಾರೆ. ಆಸ್ತಿ ತೆರಿಗೆ ಏರಿಕೆ ಮಾಡಲು ರೆಡಿಯಾಗಿದ್ದಾರೆ. ಗಾಳಿ ಒಂದು ಬಿಟ್ಟು ಉಳಿದಿದ್ದಕ್ಕೆ ತೆರಿಗೆ ಹಾಕಿದ್ದಾರೆ. ಸರ್ಕಾರದ. ಬಡವರ ಆಸ್ಪತ್ರೆಯಲ್ಲಿ ಬಡ ರೋಗಿಗಳ ಒಳರೋಗಿಗಳ ದಾಖಲಾತಿಗೆ ಹಣ ಹೆಚ್ಚಳ ಮಾಡಿದ್ದಾರೆ. ವಾರ್ಡ್ ಶುಲ್ಕ ಜಾಸ್ತಿ ಮಾಡಿದ್ದಾರೆ.ತ್ಯಾಜ್ಯ ಶುಲ್ಕ ಜಾಸ್ತಿ ಮಾಡಿದ್ದಾರೆ. ಈ ರೀತಿ ಆಸ್ಪತ್ರೆನೂ ಬಿಟ್ಟಿಲ್ಲ. ಬ್ರ್ಯಾಂಡ್ ಬೆಂಗಳೂರು ಅಂತಿದ್ರು. ಈಗ ದುಬಾರಿ ಬೆಂಗಳೂರು . ಬ್ರ್ಯಾಂಡ್ ಬೆಂಗಳೂರು ಹೊಯ್ತು ದುಬಾರಿ ಬೆಂಗಳೂರು ಬಂತು. ಈ ರೀತಿ ಜಾಹಿರಾತು ಕೊಡ್ತಾರೆ ಸರ್ಕಾರದವರು ಎಂದಿದ್ದಾರೆ.