ಮನೆ Blog ಮೈಕ್ರೋ ಫೈನಾನ್ಸ್ ಆತ್ಮಹತ್ಯೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ; ವಿಪಕ್ಷ ನಾಯಕ ಆರ್.ಅಶೋಕ್‌ ಆರೋಪ

ಮೈಕ್ರೋ ಫೈನಾನ್ಸ್ ಆತ್ಮಹತ್ಯೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ; ವಿಪಕ್ಷ ನಾಯಕ ಆರ್.ಅಶೋಕ್‌ ಆರೋಪ

0

ಬೆಂಗಳೂರು:  ಮೈಕ್ರೋ ಫೈನಾನ್ಸ್ ಆತ್ಮಹತ್ಯೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವಿಪಕ್ಷ ನಾಯಕ ಆರ್.ಅಶೋಕ್‌ ಆರೋಪ ಮಾಡಿದ್ದಾರೆ.

ಇಂದು ವಿದಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಮೈಕ್ರೋ ಫೈನಾನ್ಸ್ ಆತ್ಮಹತ್ಯೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನಾವು 60 ಕೋಟಿ ಕೊಟ್ಟಿದ್ವಿ.ನೀವು 20 ಕೋಟಿ ಕಡಿಮೆ ಮಾಡಿದ್ರಿ.ಭೋವಿ ನಿಗಮ, ಸಂಗೊಳ್ಳಿರಾಯಣ್ಣ ನಿಗಮ, ನಿಜಗುಣ ಅಂಬಿಗರ ಚೌಡಯ್ಯ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ವೀರಶೈವ ಅಭಿವೃದ್ಧಿ ನಿಗಮ, ನೇಕಾರ ಯೋಜನೆಗಳಿಗೆ ನಾವು ಕೊಟ್ಟ ಅನುದಾಕ್ಕಿಂದ ಕಾಂಗ್ರೆಸ್ ಕಡಿಮೆ ಕೊಟ್ಟಿದೆ. ಈ‌ ಸಮುದಾಯಗಳಿಗೆ ಲೋನ್ ಕೊಡ್ತಾ ಇದ್ರು.ಈಗ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ 2 ವರ್ಷದಿಂದ ನಿಗಮಗಳಿಗೆ ಹಣ ಬಿಡುಗಡೆ ಮಾಡ್ತಿಲ್ಲ.ನಿಗಮ ಮಂಡಳಿಗಳಿಗೆ 1,699 ಕೋಟಿ ರೂ. ಕೊಡಬೇಕಿತ್ತು, 643 ಕೋಟಿ ರೂ. ಕೊಟ್ಟಿದ್ದಾರೆ.1055 ಕೋಟಿ ರೂ. ಕಡಿಮೆ ಅನುದಾನ ಕೊಟ್ಟಿದ್ದಾರೆ.ಇಷ್ಟು ದಿನ ಇಲ್ಲದ ಆತ್ಮಹತ್ಯೆ ಈಗ ಹೇಗೆ ಬಂತು? ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರ ಪಾಪರ್ ಆಗಿದೆ, ದಿವಾಳಿ ಆಗಿದೆ. 1055 ಕೋಟಿ ನಿಗಮಗಳ ಮೂಲಕ‌ ಜನರಿಗೆ ಹೋಗ್ಬೇಕು.ಕೃಷಿ ಇಲಾಖೆ ರಾಜ್ಯ ರೈತರ ಜೀವನಾಡಿ. 2022-23ರಲ್ಲಿ 7,288 ಕೋಟಿ‌ರೂ. ಕೊಟ್ಟಿದ್ವಿ. 2253 ಕೋಟಿ ರೂ. ಗೆ ಅದನ್ನ ಕಡಿಮೆ ಮಾಡಿದ್ರು.ಟೇಬಲ್‌ನ‌ ಗುದ್ದಿ ಗುದ್ದಿ ರೈತರ ಸರ್ಕಾರ ಅಂತ ಸಿದ್ದರಾಮಯ್ಯ ಹೇಳ್ತಾರೆ. ತೋಟಗಾರಿಕೆ ಇಲಾಖೆಗೆ 1,374 ನಾವು ಬಿಡುಗಡೆ ಮಾಡಿದ್ವಿ .ಇವರು 1,202 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.ಕಂದಾಯ ಇಲಾಖೆಗೆ 1534 ಕೋಟಿ ಕೊಡಬೇಕು.ಕಾಂಗ್ರೆಸ್ ಸರ್ಕಾರ 940 ಕೋಟಿ‌ ರೂ. ಇವರು ಕೊಟ್ಟಿದೆ.ನಿಗಮ ಮಂಡಳಿ, ಎಲ್ಲ ಇಲಾಖೆಗಳಿಗೂ ನಾವು ಬಿಡುಗಡೆ ಮಾಡಿದ ಹಣಕ್ಕಿಂದ ಕಡಿಮೆ ಹಣ ಬಿಡುಗಡೆ ಮಾಡಿದ್ದಾರೆ.ಯಾವ ಇಲಾಖೆಗೂ ಹೆಚ್ಚು ಹಣ ಬಿಡುಗಡೆ ಮಾಡಿಲ್ಲ, ಕಡಿತ ಮಾಡಿದ್ದಾರೆ.ಇಲಾಖೆ, ನಿಗಮಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಹೋಗಬೇಕಾದ ಹಣ ಹೋಗಿಲ್ಲ.2022-23ರಲ್ಲಿ ನಾವು 1 ಲಕ್ಷದ 4 ಸಾವಿರದ 45 ಕೋಟಿ ರೂ. ಕೊಟ್ಟಿದ್ವಿ.ಇದನ್ನ 90 ಸಾವಿರ ಕೋಟಿಗೆ ಕಾಂಗ್ರೆಸ್ ಇಳಿಸಿದೆ ಎಂದರು.

ಕೋಲಾರದಲ್ಲಿ‌ ಸಾಲ ಮನ್ನಾ ಅಂತ ಸಿದ್ದರಾಮಯ್ಯ ಹೇಳಿದ್ರು. ಬಾಯಿ ಮುಚ್ಚಿಕೊಂಡು ಬರಬೇಕಿತ್ತು.ಈಗ ಯಾರೂ ಸಾಲ ಕಟ್ಟುತ್ತಿಲ್ಲ, ಬ್ಯಾಂಕ್ ಗಳು ಮುಚ್ಚಿ ಹೋಗಿವೆ.ಮಹಿಳಾ ಸಂಘಗಳು ಸಾಲ ಮನ್ನಾಕ್ಕೆ ಕಾಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಾಂಗಲ್ಯ ಕಿತ್ತು ಹಾಕ್ತಾರೆ ಅಂತ ಮೋದಿ ಹೇಳಿದ್ರು. ಮೋದಿ ಮಾತು ಸತ್ಯವಾಗಿದೆ. ನನ್ನ ಗಂಡನೇ ಸತ್ತು ಹೋಗಿದ್ದಾನೆ, ತಾಳಿ ಯಾಕೆ ಅಂತ ಮಹಿಳೆ ಗೃಹ ಸಚಿವರಿಗೆ ತಾಳಿಯನ್ನೇ ಪೋಸ್ಟ್ ಮಾಡಿದ್ದಾರೆ. 2000 ಸಾವಿರ ತಗೊಂಡು ಟೂರ್ ಹೋದೆ, ಫ್ರಿಡ್ಜ್, ಟಿವಿ, ಹೋಳಿಗೆ ಊಟ ಹಾಕಿಸಿದೆ. ಹಾಗಾದ್ರೆ ಮೈಕ್ರೋ ಫೈನಾನ್ಸ್ ಯಾಕೆ ಮಾಡಿದ್ರು ಜನ. 2 ಸಾವಿರ ಕೊಟ್ಟು ವೈನ್ ಸ್ಟೋರ್ ಗಳಿಗೆ ಹೋಗಿವೆ ಅಂತ ಸ್ವಾಮೀಜಿ ಹೇಳಿದ್ದಾರೆ. ಮೈಕ್ರೋ ಫೈನಾನ್ಸ್ ನಲ್ಲಿ ಈ ಹಿಂದೆಯೂ ಸಾಲ ಕೊಡ್ತಾ ಇದ್ರು. ಈಗಲೇ ಯಾಕೆ ಜನ ಸಾಯುತ್ತಿದ್ದಾರೆ.ಮೈಕ್ರೋ ಫೈನಾನ್ಸ್ ಮಾಫಿಯಾದಲ್ಲಿ ಸರ್ಕಾರ ಸಿಕ್ಕಿಹಾಕಿ ಕೊಂಡಿದೆ. ವಾಟರ್ ಟ್ಯಾಂಕ್ ಮಾಫಿಯಾದಲ್ಲಿ ಇದ್ದೀವಿ ಅಂತ ಇವರೇ ಹೇಳಿದ್ರು. ಮಾಫಿಯಾಗಳಲ್ಲೇ ಸರ್ಕಾರ ಸಿಲುಕಿ ಹಾಕಿಕೊಂಡಿದೆ ಎಂದಿದ್ದಾರೆ.

 

ಗ್ಯಾರೆಂಟಿಯ ಪ್ರತಿಫಲ ರಾಜ್ಯದ ಸ್ಥಿತಿ ತೋರಿಸುತ್ತಿದೆ. ಬಜೆಟ್ ನಲ್ಲಿ ಹಣ ಇಲ್ಲ. ಕೇಂದ್ರ ಟೀಕೆ ಮಾಡೋಕೆ ಇದೆ.ಬಜೆಟ್ ಪುಸ್ತಕದಲ್ಲಿ ಕೇಂದ್ರ, ಮೋದಿ ಬಯ್ಯೋದು ಇರುತ್ತೆ. ಬೇರೆ ಏನೂ ಇರೊದೇ ಇಲ್ಲ. ರಾಜ್ಯದ ಸ್ಥಿತಿಗೆ ಸರ್ಕಾರವೇ ಕಾರಣ.ಅಭಿವೃದ್ಧಿ ಒಂದೇ ಒಂದು ಕಲ್ಲು ಹಾಕಿಲ್ಲ. ಬಿಜೆಪಿ ಮೇಲೆ ಈಗ ತೋರಿಸುತ್ತಿದ್ದೀರಿ. ಬಿಜೆಪಿಗೂ ಕಾಂಗ್ರೆಸ್ ಗೂ ಹೋಲಿಕೆ ಮಾಡ್ತಿದ್ದಾರೆ.ನಮಲ್ಲಿ 40% ಅಂತಾರೆ ಇವರು 60% ಇದಕ್ಕೆ ಹೋಲಿಕೆ ಮಾಡಿಕೊಳ್ತಿದ್ದಾರೆ ಎಂದರು.