ಬೆಂಗಳೂರು: ವಿಧಾನಸೌಧದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಎಡೆಬಿಂಗಿತನದಿಂದ ತುಮಕೂರು-ರಾಮನಗರದ ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ.ಎಕ್ಸ್ ಪ್ರೆಸ್ ಕೆನಾಲ್ ಮೂಲಕ ನಮ್ಮ ನೀರು ಕದಿಯುತ್ತಿದ್ದೀರಿ ಎಂದು ತುಮಕೂರಿನ ರೈತರ ಅಪಾದನೆ.ಎರಡೂ ಜಿಲ್ಲೆಗಳ ರೈತರ ಸಭೆ ಕರೆದು ಮನವೊಲಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು.ನೀರಿಗೆ ಹೊಡೆದಾಟ ಕಾಂಗ್ರೆಸ್ ಮಾಡುತ್ತಿರುವ ಹೀನ ಕಾರ್ಯ.ನಾನು ಹೀಗೆ ಮಾತಾಡುತ್ತೇನೆ ಅಂತಾ ಧಮಕಿ ಹಾಕುವುದು ರಾಜ್ಯ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದರು.
ದಾದಾಗಿರಿ, ಶಾಸಕರು, ಸ್ವಾಮೀಜಿಗಳ ಮೇಲೆ ಕೇಸ್ ಹಾಕುವುದು ಮಾಡುತ್ತಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ ಮೊದಲು ಕ್ಷೇತ್ರ, ನಂತರ ಕಾಂಗ್ರೆಸ್ ಪಕ್ಷ ಎಂದು ಹೇಳಿದ್ದಾರೆ. ಕಾಂಗ್ರೆಸ್ ಗೆ ಅವರ ಶಾಸಕರನ್ನೇ ಕಂಟ್ರೋಲ್ ಮಾಡಲಾಗದಿದ್ದರೆ, ಜಿಲ್ಲೆ ರಾಜ್ಯ ಹೇಗೆ ಕಂಟ್ರೋಲ್ ಮಾಡುತ್ತಾರೆ.ಗಲಾಟೆ ಆಗಲು ರಾಜ್ಯ ಸರ್ಕಾರವೇ ಕಾರಣ. ರೈತರ ಮೂಲಕ ಕೇಸ್ ಹಾಕಿರುವುದು ಅಕ್ಷಮ್ಯ ಅಪರಾಧ. ನಿಮ್ಮ ಟರ್ಮ್ ಇನ್ನು ಎರಡು ವರ್ಷ ಮಾತ್ರ. ಡಿ.ಕೆ. ಶಿವಕುಮಾರ್ ಕುರ್ಚಿ ಕಿತ್ತುಕೊಂಡರೆ ಅದೂ ಗ್ಯಾರಂಟಿ ಇಲ್ಲ. ಅಕ್ಟೋಬರ್ ನಲ್ಲಿ ಅದು ಗೊತ್ತಾಗುತ್ತದೆ.ಸರ್ಕಾರ ತುಮಕೂರು-ರಾಮನಗರ ಜಿಲ್ಲೆಗಳ ಸರ್ವ ಪಕ್ಷ ಸಭೆ ಕರೆಯಬೇಕು. ರೈತರು, ಜನಪ್ರತಿನಿಧಿಗಳ ಕೇಸ್ ವಾಪಸ್ ಪಡೆಯಬೇಕು. ಮಂಗಳೂರಿಗೆ ಸಂಬಂಧಿಸಿದಂತೆ ಹಿಂದೂಗಳನ್ನು ಮಟ್ಟ ಹಾಕಲು ಟಾಸ್ಕ್ ಪೋರ್ಸ್ ಮಾಡಿದ್ದಾರೆ ಎಂದಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಎಫ್ ಐಆರ್, ಅರುಣ್ ಕುಮಾರ್ ಪುತ್ತಿಲಗೆ ಗಡೀಪಾರು ನೋಟೀಸ್ ಕೊಟ್ಟಿದ್ದಾರೆ. ಕಾಂಗ್ರೆಸ್ ಕೋಮುವಾದಿ ಮುಸ್ಲಿಮರಿಗೆ ಓಲೈಕೆ ಮಾಡಿದರೆ ಗಲಾಟೆ ಇನ್ನೂ ಜಾಸ್ತಿ ಆಗುತ್ತದೆ.ಈ ರೀತಿ ಮಾಡಿದರೆ ಬಹಳ ದಿನ ನೀವು ಇರಲ್ಲ .ಈಗ ಏಕಾಏಕಿ ಹಿಂದೂ ಕಾರ್ಯಕರ್ತರ ಬಂಧನ ಖಂಡನೀಯ. ಈ ರೀತಿ ಮಾಡಿದರೆ ಬಿಜೆಪಿ ಕೂಡಾ ಹಿಂದೂ ಕಾರ್ಯಕರ್ತರ ಪರವಾಗಿ ಬೀದಿಗೆ ಇಳಿಯಬೇಕಾಗುತ್ತದೆ. ಅವರು ಮಾಡಿರುವುದು ಆ್ಯಂಟಿ ಹಿಂದೂ ಪೊಲೀಸ್ ಪೋರ್ಸ್. ಹಿಂದೂಗಳ ಕೊಲೆಯಾದಾಗ ಯಾಕೆ ಈ ರೀತಿ ಪೋರ್ಸ್ ಮಾಡಿಲ್ಲ?.ಯಾರೋ ನಾಲ್ಕು ಜನ ಮುಸ್ಲಿಂ ಮುಖಂಡರು ಕಾಂಗ್ರೆಸ್ ಗೆ ರಾಜೀನಾಮೆ ಕೊಡುತ್ತಾರೆ ಅಂತಾ ಅದಕ್ಕೊಂದು ಟಾಸ್ಕ್ ಫೋರ್ಸ್. ಇನ್ನು ನಾಲ್ಕು ಜನ ಕಾಂಗ್ರೆಸ್ ಮುಖಂಡರು ರಾಜೀನಾಮೆ ಕೊಡುತ್ತಾರೆ ಅಂದರೆ ಬಜೆಟ್ ಅನ್ನೇ ಬರೆದುಕೊಟ್ಟುಬಿಡುತ್ತಾರೆ ಎಂದರು.
ಈ ಸರ್ಕಾರ ಹಿಂದೂ ಟಾರ್ಗೆಟ್ ಸರ್ಕಾರ. ಈಗ ಅವರಿಗೆ ಬೇಕಾದ ಅಧಿಕಾರಿಗಳನ್ನು ಹಾಕಿಕೊಂಡಿದ್ದಾರೆ. ಮುಂದೆ ಮಣ್ಣು ಮುಕ್ಕಿ ನೀವು 20 ಸೀಟುಗಳನ್ನು ಕೂಡಾ ಪಡೆಯಲ್ಲ.ಸಿದ್ದರಾಮಯ್ಯ ರಾಮ ಅಂತಾ ಹೆಸರಿಟ್ಟುಕೊಂಡ ತಕ್ಷಣ ಅವನೇನು ಹಿಂದೂ ಆಗಲ್ಲ. ಸಿದ್ದರಾಮಯ್ಯ ಪೂರ್ತಿ ಮನೆ ಹಾಳು ಬುದ್ದಿಯೇ ಮಾಡುತ್ತಿರುವುದು.ಮುಡಾ ಕೇಸ್ ಬಿದ್ದ ಕೂಡಲೇ ಕುಂಕುಮ ಇಟ್ಟುಕೊಂಡಿದ್ದು. ಈಗ ಕೇಸ್ ರಿಲೀಫ್ ಆದ ಕೂಡಲೇ ಕುಂಕುಮ ಇಲ್ಲ, ಭಂಡಾರವೂ ಇಲ್ಲ. ಯಾವ ಮುಖ ಇಟ್ಟುಕೊಂಡು ಇವರು ಬಿಬಿಎಂಪಿ ಚುನಾವಣೆಗೆ ಹೋಗುತ್ತಾರೆ? ಏನಾದರೂ ಅಭಿವೃದ್ಧಿ ಮಾಡಿದರೆ ತಾನೇ ಇವರಿಗೆ ಚುನಾವಣೆಗೆ ಹೋಗಲು ಮುಖ ಇರುವುದು?. ತಿಂದು ತೇಗಲು ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ ಎಂದು ತಿಳಿಸಿದ್ರು.
ಗ್ಯಾರಂಟಿ ಹಣ ನೀಡದೇ ಅನುಷ್ಠಾನ ಸಮಿತಿಗೆ ಕೊಡುತ್ತೀರಾ?.ಜನರಿಗೆ ಮೋಸ ಮಾಡುತ್ತಿದಿರಾ? ನಾಮ ಹಾಕುತ್ತಿದ್ದೀರಾ?. ಅಕ್ರಮ ದಂಧೆ ಇದು.ಒಂದು ರಸ್ತೆ ಗುಂಡಿ ಬೀಳದೇ ಇರೋದು ತೋರಿಸಿ ನೋಡೋಣ. ಇನ್ಯಾವ ಗ್ರೇಟರ್ ಬೆಂಗಳೂರು ನಿಮ್ಮದು? ಕ್ಷಮೆ ಕೇಳದ ದುರಂಹಕಾರಿ ಕಮಲ್ ಹಾಸನ್ ಸಿನಿಮಾ ಬಿಡುಗಡೆ ಮಾಡಲು ಸರ್ಕಾರ ಅವಕಾಶ ಕೊಡಬಾರದು. ಕನ್ನಡ ಸಂಘನೆಗಳು ಕೂಡಾ ಅವಕಾಶ ಕೊಡಬಾರದು. ಕೆಲವು ಕಲಾವಿದರು ಕಮಲ್ ಹಾಸನ್ ಗೆ ಬೆಂಬಲವಾಗಿ ಮಾತನಾಡಬಾರದು. ಯಾರೇ ಆದರೂ ಅಡ್ಡ ಗೋಡೆಯ ಮೇಲೆ ದೀಪ ಇಡಬಾರದು. ಸ್ವಾಭಿಮಾನಿ ಕನ್ನಡಿಗ ಆಗಿ ಭಾಷೆಯ ವಿಚಾರದಲ್ಲಿ ಸ್ಪಷ್ಟತೆ ಇರಬೇಕು.ಇದೇ ವಿಚಾರ ತಮಿಳುನಾಡು ಅಥವಾ ಕೇರಳದಲ್ಲಿ ಆಗಿರುತ್ತಿದ್ದರೆ ಅಲ್ಲಿನ ವಿಚಾರ ಹೇಗೆ ಇರುತ್ತಿತ್ತು ಎಂದಿದ್ದಾರೆ.