ಬೆಂಗಳೂರು: ಗೂಂಡಾಗಳಿಗೆ ಕೆಲಸ ಇರಲಿಲ್ಲ, ಈ ಸರ್ಕಾರ ಬಂದ್ಮೇಲೆ ಗೂಂಡಾಗಳಿಗೆ ಕೆಲಸ ಸಿಕ್ಕಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರ ವಿರುದ್ಧ ಆಕ್ರೋಸ ಹೊರ ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಮೀಟರ್ ಬಡ್ಡಿ ಮಾಫಿಯಾದಿಂದ ಇದುವರೆಗೆ 14 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೂಂಡಾಗಳಿಗೆ ಕೆಲಸ ಇರಲಿಲ್ಲ, ಈ ಸರ್ಕಾರ ಬಂದ್ಮೇಲೆ ಗೂಂಡಾಗಳಿಗೆ ಕೆಲಸ ಸಿಕ್ಕಿದೆ. ದೌರ್ಜನ್ಯ ಮಾಡಿ ವಸೂಲಿ ಮಾಡುವ ಕೆಲಸಕ್ಕೆ ರೌಡಿಗಳ ಇಳಿದಿದ್ದಾರೆ ಎಂದಿದ್ದಾರೆ.ಮದುವೆಗೋಸ್ಕರ, ಸಣ್ಣ ಉದ್ಯೋಗ, ವ್ಯವಹಾರಕ್ಕೆ ಸಾಲ ಮಾಡಿದ್ದಾರೆ. ನುಡಿದಂತೆ ನಡೆ, ಸಾಲ ಮಾಡಿದ್ರೆ ಮನೆ ಕಡೆಗೆ ನಡೆ. ಅಧಿಕಾರಿಗಳ ಆತ್ಮಹತ್ಯೆ ಆಯ್ತು, ನಂತರ ಗುತ್ತಿಗೆದಾರರ ಆತ್ಮಹತ್ಯೆ. ಬಾಣಂತಿಯರ ಸರಣಿ ಸಾವು ಸೀರಿಯಲ್ ರೀತಿ ಆಗೋಯ್ತು. ರೈತರ ಆತ್ಮಹತ್ಯೆ ಆಯ್ತು, ಈಗ ಮೈಕ್ರೋ ಫೈನಾನ್ಸ್ ಆತ್ಮಹತ್ಯೆ ಶುರುವಾಗಿದೆ. ಇದು ಆತ್ಮಹತ್ಯೆಗಳ ರಾಜ್ಯವಾಗಿದೆ. ಮೈಕ್ರೋ ಫೈನಾನ್ಸ್ ಅಟ್ಟಹಾಸ ಮೆರೆಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಎಲ್ಲ ಸರ್ಕಾರಗಳು ಬಡ ಜನರಿಗೆ ಸಹಾಯ ಮಾಡುವ ಯೋಜನೆಗಳನ್ನ ಎಲ್ಲ ಸರ್ಕಾರಗಳು ಮಾಡ್ತಿತ್ತು. ನಿನ್ನೆ ಮೈಸೂರಿಗೆ ಹೋದಾಗ ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಿಶ್ವ ಕರ್ಮ ಅಭಿವೃದ್ಧಿ ನಿಗಮ, ಹಿಂದುಳಿದ ನಿಗಮನಿಂದ ಸಾಲ ಕೊಡ್ತಾ ಇದ್ರು ಈಗ ನಿಂತು ಹೋಗಿದೆ ಅಂತ ಜನರು ಹೇಳಿದ್ರು. ಹೀಗಾಗಿ ಮೈಕ್ರೋ ಫೈನಾನ್ಸ್ ಮೊರೆ ಹೋಗ್ತಿದ್ದೇವೆ.ಮೈಕ್ರೋ ಫೈನಾನ್ಸ್ ಅಂದ್ರೆ ಗ್ರಾಮ ಶಕ್ತಿ, RBI ಫೆಡರಲ್ ಇವೆ. ಕಳೆದ ಎರಡು ವರ್ಷಗಳಿಂದ ಈ ಸರ್ಕಾರ ಲೋನ್ ಭಾಗ್ಯ ಕೊಟ್ಟಿಲ್ಲ. ತಮಿಳುನಾಡು, ಆಂದ್ರ, ಕೇರಳದಲ್ಲಿ ಮೈಕ್ರೋ ಫೈನಾನ್ಸ್ ಗುಂಪು ಬಂದಿದೆ. ಬ್ಯಾಂಕ್ ನಲ್ಲಿ ಸಾಲ ಸಿಗದವರನ್ನೇ ಈ ಫೈನಾನ್ಸ್ ಕಂಪನಿಗಳು ಗುರುತಿಸುತ್ತೆ. ಐವತ್ತು ಸಾವಿರ ಕೊಟ್ರೆ ಎರಡು ವರ್ಷ ಅದನ್ನ ತೀರಿಸಬೇಕು. ಒಂದೊಂದು ಫೈನಾನ್ಸ್ ಕಂಪನಿ ಒಂದೊಂದು ನಿಯಮ ಮಾಡಿಕೊಂಡಿದೆ. ಪ್ರತಿ ತಿಂಗಳು ಅಸಲಿನಜೊತೆಗೆ ಬಡ್ಡಿಯನ್ನೂ ಕಟ್ಟಿರುತ್ತಾರೆ. ಹೀಗಿದ್ದರೂ 67 ಸಾವಿರ ಎರಡು ವರ್ಷ ಪೂರೈಸುವುದರೊಳಗೆ ಆಗುತ್ತೆ. 10 ಜನರಿಗೆ ಹಣ ಕೊಡ್ತಾರೆ, 9 ಜನ ಹಣ ಕೊಡದಿದ್ದರೆ ಎಲ್ಲವೂ ಸೇರಿ ಒಬ್ಬರೇ ಕಟ್ಟಬೇಕು. ನಿರಂತರವಾಗಿ ಹಣ ಪಾವತಿ ಮಾಡದಿದ್ದರೆ ಏಜೆಂಟ್ ಮೂಲಕ ಜನರೊಂದಿಗೆ ತೆರಳಿ ಗಲಾಟೆ ಮಾಡ್ತಾರೆ.3 ತಿಂಗಳಾದ್ಮೇಲೆ ರೌಡಿಗಳನ್ನ ಮನೆಗಳ ಬಳಿ ಕಳುಹಿಸ್ತಾರೆ ಎಂದು ಬೇಸರ ಹೊರ ಹಾಕಿದ್ದಾರೆ.
ರಾಜ್ಯದ 30-40 ಹಳ್ಳಿಗಳು ಖಾಲಿ ಮಾಡಿಕೊಂಡಿದ್ದಾರೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 5 ಲಕ್ಷ ರೂಪಾಯಿ ಟ್ರಾಕ್ಟರ್ ಲೋನ್ ತೆಗೆದುಕೊಂಡಿದ್ದಾರೆ. 2 ಲಕ್ಷ ರೂ. ಕಟ್ಟಿದ್ದಾನೆ, ತಮಿಳುನಾಡಿನ ಕೋರ್ಟ್ ವ್ಯಕ್ತಿಗೆ ನೋಟಿಸ್ ಕೊಟ್ಟಿದೆ. ಹಸುಗೂಸಿನ ತಾಯಿಯನ್ನ ಬೀದಿಗೆ ಎಸೆದಿದ್ದಾರೆ. ಚಾಮರಾಜನಗರ, ಎಳಂದೂರು ಕಡೆಯೂ ದೌರ್ಜನ್ಯ ಆಗಿದೆ. ವಿಶೇಷ ಕಾನೂನು ತರುವುದಾಗಿ ಸಿಎಂ ಹೇಳ್ತಾರೆ. ವಾಲಿಯ ಸುಗ್ರೀವಾಜ್ಞೆ ತರ್ತಾರೆ. 13-14 ಜನ ಸತ್ಮೇಲೆ ಕಾನೂನು ಮಾಡ್ತಾರಂತೆ.ಅಕ್ರಮ, ಬಡವರ ಮೇಲೆ ಒತ್ತಡ, ಹಲ್ಲೆ ನಡೆಯುತ್ತಿದೆ. ನೋಟಿಸ್ ಕೊಟ್ಟು ನಂತರ ಮನೆ ಖಾಲಿ ಮಾಡಿಸಬೇಕು. ಗಡುವು ನೀಡಿ ನಂತರ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ವಸೂಲಿಗೆ ಪೊಲೀಸರು ಸಹ ಏಜೆಂಟ್, ಶಾಮೀಲಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಿದೆ. ಕಂಟ್ರೋಲ್ ರೂಂ ಏನಕ್ಕೆ? ರಿಪ್ಲೈ ಏನೂ ಇಲ್ಲ. ಇವತ್ತೂ ಒಂದು ಆತ್ಮಹತ್ಯೆ ಆಗಿದೆ, ಸುಗ್ರೀವಾಜ್ಞೆ ಯಾವಾಗ ಮಾಡ್ತಾರೆ?. ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ವಿಚಾರದ ಬಗ್ಗೆ ಮಾತನಾಡಿ ಕೇಂದ್ರ ಸರ್ಕಾರದ ವೈಫಲ್ಯ ಅಂತಾರೆ. ಆ ರೀತಿ ಹೇಳಿದ ಮಂತ್ರಿಗೆ ಹುಡುಕಿ ಅವಾರ್ಡ್ ಕೊಡ್ಬೇಕು. ಬಜೆಟ್ ಗೆ ಹಣ ಇಲ್ಲ. ಸಿದ್ದರಾಮಯ್ಯ ಬಜೆಟ್ ಗೆ ಕೇಂದ್ರ ಅನುದಾನ ಕೊಡ್ಬೇಕಾ?. ಸಾಲ ಮಾಡಿದ್ರೆ ಜನ ಛೀಮಾರಿ ಹಾಕ್ತಾರೆ.ಬೆಂಗಳೂರಿಗೆ 60 ಸಾವಿರ ಕೋಟಿ ಕೊಡ್ಬೇಕು ಅಂತ ಡಿಸಿಎಂ ಪತ್ರ ಬರೆದಿದ್ದಾರೆ.ವಿಜಯನಗರದಲ್ಲಿ ಮನ ಮೋಹನ್ ಸಿಂಗ್ ಸೇರಿನಲ್ಲಿ ಅಳೆದು ಚಿನ್ನಾ ಕೊಡ್ತಿದ್ರಾ?.ನೀರಾವರಿಗೆ ಹಣ ಇಲ್ಲ.ಬಾಣಂತಿಯರ ಸಾವಿಗೆ ಕೇಂದ್ರ ಕಾರಣ ಅಂತ ಆರೋಗ್ಯ ಸಚಿವರು ಹೇಳ್ತಾರೆ.ನಿಮ್ಮಮ್ಮ ಜನ ಆಯ್ಕೆ ಮಾಡಿದ್ದು ಏನಕ್ಕೆ?.ಮನಮೋಹನ್ ಸಿಂಗ್ ಕರ್ನಾಟಕ ಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ?.ಮೋದಿ ಕೊಟ್ಟ ಅನುದಾನ, ಹಣದ ವರದಿ ನಾವೂ ಬಿಡುಗಡೆ ಮಾಡ್ತೀವಿ.ಕಾಂಗ್ರೆಸ್ ನವರೇ ನೀವು ಲೆಕ್ಕಾ ಕೊಡಿ.ಪಾರದರ್ಶಕವಾಗಿ ಕೇಂದ್ರ ಎಲ್ಲಾ ರಾಜ್ಯಗಳಿಗೂ ಹಣ ಬಿಡುಗಡೆ ಮಾಡುತ್ತೆ. ಅದರದೇ ಆದ ಮಾನದಂಡಗಳ ಆಧಾರ ಮೇಲೆ ಬಿಡುಗಡೆ ಮಾಡ್ತಿದೆ ಎಂದಿದ್ದಾರೆ.