ಬೆಂಗಳೂರು; ಆರ್.ಅಶೋಕ್ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ಆರ್.ಅಶೋಕ್ ಔಟ್ ಗೋಯಿಂಗ್ ವಿಪಕ್ಷ ನಾಯಕ. ಸುನೀಲ್ ಕುಮಾರ್ ಇನ್ ಕಮ್ಮಿಂಗ್ ವಿಪಕ್ಷ ನಾಯಕ. ಪದ್ಮನಾಭನಗರ ಜ್ಯೋತಿಷ್ಯಾಲಯ ಸುಳ್ಳು ಹೇಳುತ್ತೆ. ಹೀಗಾಗಿ ಬೇರೆ ಜ್ಯೋತಿಷ್ಯಾಲಯಕ್ಕೆ ಹೋಗಿದ್ದೆ. ಅಲ್ಲಿ ಹೇಳಿದ್ರು ಆರ್.ಅಶೋಕ್ ಚೇರ್ ಅಕ್ಟೋಬರ್ ನಲ್ಲಿ ಅಲ್ಲಾಡುತ್ತೆ. ಬಿಜೆಪಿಯಲ್ಲಿ ಅಕ್ಟೋಬರ್ ಕ್ರಾಂತಿ ಆಗುತ್ತೆ. ಆರ್.ಅಶೋಕ್ ಚೇರ್ ಗೆ ಕಂಟಕ ಇದೆ. ಸುನೀಲಣ್ಣ ಕಾಯ್ತಾ ಇದ್ದಾರೆ, ಯಾವಾಗ ಚೇರ್ ಬಿಟ್ಟು ಕೊಡ್ತಾರೆ ಅಂತ. ಬಿಜೆಪಿ ಮನೆ ಬಾಗಿಲು ಹೊಡೆದು ಹೋಗಿದೆ. ಬಿಜೆಪಿಯ ಮನೆ ಒಡೆದು ನೂರು ಬಾಗಿಲಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ವಿಚಾರಿಸಲು ಬಂದಿದ್ದ ಅವರು ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ಅವರು ಆರೋಗ್ಯವಾಗಿದ್ದಾರೆ, ನಾನು ಮಾತನಾಡಿಸಿದೆ. ಆಕ್ಟಿವ್ ಆಗಿದ್ದಾರೆ, ತುಂಬಾ ಚೆನ್ನಾಗಿದ್ದಾರೆ ಎಂದರು . ಆರ್.ಅಶೋಕ್ ಔಟ್ ಗೋಯಿಂಗ್ ವಿಪಕ್ಷ ನಾಯಕ. ಸುನೀಲ್ ಕುಮಾರ್ ಇನ್ ಕಮ್ಮಿಂಗ್ ವಿಪಕ್ಷ ನಾಯಕ. ಪದ್ಮನಾಭನಗರ ಜ್ಯೋತಿಷ್ಯಾಲಯ ಸುಳ್ಳು ಹೇಳುತ್ತೆ. ಹೀಗಾಗಿ ಬೇರೆ ಜ್ಯೋತಿಷ್ಯಾಲಯಕ್ಕೆ ಹೋಗಿದ್ದೆ. ಅಲ್ಲಿ ಹೇಳಿದ್ರು ಆರ್.ಅಶೋಕ್ ಚೇರ್ ಅಕ್ಟೋಬರ್ ನಲ್ಲಿ ಅಲ್ಲಾಡುತ್ತೆ. ಬಿಜೆಪಿಯಲ್ಲಿ ಅಕ್ಟೋಬರ್ ಕ್ರಾಂತಿ ಆಗುತ್ತೆ. ಆರ್.ಅಶೋಕ್ ಚೇರ್ ಗೆ ಕಂಟಕ ಇದೆ. ಸುನೀಲಣ್ಣ ಕಾಯ್ತಾ ಇದ್ದಾರೆ, ಯಾವಾಗ ಚೇರ್ ಬಿಟ್ಟು ಕೊಡ್ತಾರೆ ಅಂತ. ಬಿಜೆಪಿ ಮನೆ ಬಾಗಿಲು ಹೊಡೆದು ಹೋಗಿದೆ. ಬಿಜೆಪಿಯ ಮನೆ ಒಡೆದು ನೂರು ಬಾಗಿಲಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಆರ್.ಅಶೋಕ್ ಬಗ್ಗೆ ಫೇಮಸ್ ಜ್ಯೋತಿಷ್ಯಾಲಯದಲ್ಲಿ ಜಾತಕ ಕೇಳಿದ್ದೇನೆ. ಅವರ ಫ್ಯೂಚರ್ ಜ್ಯೋತಿಷ್ಯ ಕೇಳಿದ್ದೇನೆ. ಯತ್ನಾಳ್ ಬಗ್ಗೆಯೂ ಜ್ಯೋತಿಷ್ಯ ಕೇಳಿದೆ. ಸಿ.ಟಿ. ರವಿ, ಆರ್.ಅಶೋಕ್ ಮತ್ತು ವಿಜಯೇಂದ್ರನ ಸೈಡ್ ಲೈನ್ ಮಾಡಿದ್ರೆ ಮಾತ್ರ ನೀವು ಪಕ್ಷಕ್ಕೆ ಬರ್ತೀನಿ ಅಂತ ಯತ್ನಾಳ್ ಕಂಡೀಷನ್ ಹಾಕಿದ್ದಾರಂತೆ.ಇದು ಜಾತಕ ಸರ್, ಅವರು ಹೇಳಿಲ್ಲ. ಪ್ರಹ್ಲಾದ್ ಜೋಷಿ ಬಗ್ಗೆಯೂ ಕೇಳಿದ್ದೇನೆ. ಇವರಿಗೆಲ್ಲ ಚೆಕ್ ಮೆಟ್ ಇಟ್ಟು ಬಿಜೆಪಿಯವರು ಸಿಎಂ ಅಭ್ಯರ್ಥಿ ಆಗಬೇಕಂತ ಜೋಷಿ ಅಂಡರ್ ಕರೆಂಟ್ ನಲ್ಲಿ ಕೆಲಸ ಮಾಡ್ತಿದ್ದಾರೆ ಇದು ಜಾತಕ ಸರ್ .ಇವರೆಲ್ಲ ಕಿತ್ತಾಡುತ್ತಿದ್ರೆ ಬಿ.ಎಲ್ ಸಂತೋಷ್ ಸೈಲೆಂಟಾಗಿ ದೆಹಲಿಯಲ್ಲಿ ಆಟ ಆಡ್ತಿದ್ದಾರೆ. ಇಷ್ಟೆಲ್ಲ ಜಾತಕ ತಿಳಿದುಕೊಳ್ಳುವ ಬದಲು ಅಶೋಕಣ್ಣ ನಮ್ಮ ಪಕ್ಷದ ಬಗ್ಗೆ ಮಾತಾಡ್ತಾರೆ.ನಮ್ಮ ಹೈಕಮಾಂಡ್ ಇದೆ, ಸಿಎಂ, ಡಿಸಿಎಂ ಇದೆ ಎಂದಿದ್ದಾರೆ.
ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಬಗ್ಗೆ ಪ್ರಹ್ಲಾದ್ ಜೋಷಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸಮುದಾಯಗಳ ಸ್ಟೇಟಸ್ ತಿಳಿದುಕೊಳ್ಳೋದು ತಪ್ಪಾ?.ದೈವ ಬಲದಿಂದ ಜೋಶಿ ಅವರು ಮೇಲ್ವರ್ಗದಲ್ಲಿ ಹುಟ್ಟಿದ್ದಾರೆ. ಅವರ ಹುಟ್ಟಿದಾಗಿನಿಂದಲೂ ಆಗರ್ಭ ಶ್ರೀಮಂತರು. ಅವರ ಮನೆಯರು ಚೆನ್ನಾಗಿ ಓದಿಸಿದ್ದಾರೆ, ಬೆಳೆಸಿದ್ದಾರೆ. ನಮ್ಮಂತಹ ಒಬಿಸಿ ನಾಯಕರು ಹಾಗೆ ಬೆಳೆದಿಲ್ಲವಲ್ಲ.ನಾವೆಲ್ಲ ಇಂಗ್ಲೀಷ್ ಮೀಡಿಯಂಮ್ ನಲ್ಲಿ ಓದಿಲ್ಲ.ನಿಮ್ಮನ್ನ ಮೆಚ್ಯುರ್ಡ್ ಆಗಿ ಯೋಚನೆ ಮಾಡುವ ರಾಜಕಾರಣಿ ಅಂದುಕೊಂಡಿದ್ದೆ.ಸಮೀಕ್ಷೆ ಆದ್ರೆ ತಮಗೆ ಏನು ಸಮಸ್ಯೆ?. ತೇಜಸ್ವಿ ಸೂರ್ಯ ಸಮೀಕ್ಷೆಯಲ್ಲಿ ಭಾಗಿಯಾಗಬೇಡಿ ಅಂತಾರೆ.ಯಾಕೆ ನಿಮ್ಮನಂಬರ್ ಕಡಿಮೆ ಬರುತ್ತೆ ಅನ್ನೊ ಭಯನಾ?. ನಿಜವಾದ ಅಂಕಿ ಅಂಶ ಗೊತ್ತಾಗುತ್ತೆ ಅನ್ನೋ ಭಯಾನಾ? ಎಂದು ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಆಗುವ ಜ್ಯೋತಿಷ್ಯ ಕೇಳಿದ್ರಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಸಿಎಂ, ಡಿಸಿಎಂ ಎರಡು ಕಣ್ಣು ಇದ್ದಂಗೆ.ಪಕ್ಷದ ಸಾಮಾನ್ಯ ಸಾಮಾನ್ಯ ಕಾರ್ಯಕರ್ತ. ನನ್ನ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ. ನಾನು ಹೋದಾಗ ಬಿಜೆಪಿ ಭವಿಷ್ಯ ಮಾತ್ರ ಕೇಳಿ ಬಂದೆ. ಮೂರನೇ ಕಣ್ಣು ಪಕ್ಷದ ಹೈಕಮಾಂಡ್ ಎಂದಿದ್ದಾರೆ. ಫ್ಲೆಕ್ಸ್ ವಿಚಾರವಾಗಿ ಸಂಸದ ಡಾ.ಕೆ ಸುಧಾಕರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಮೊದಲು ಅನುದಾನ ಇಲ್ಲ ಅಂದ್ರು. ಈಗ ಅನುದಾನ ತಂದ್ರೆ ಹೀಗೆ. ನಮ್ಮ ಹುಡುಗರು ಫೋಟೋಗಳನ್ನ ಚೆನ್ನಾಗಿ ಹಾಕಿದ್ದಾರೆ.
ಸ್ಟ್ಯಾಚ್ಯು ನಿಲ್ಲಿಸಿದ್ದೇನೋ ಅಂತ ಕಾಮೆಂಟ್ ಮಾಡಿದ್ದಾರೆ. ಅದು ಪ್ರತಿಮೆ ಅಲ್ಲ. ಸತ್ತು ಹೋಗುವಾಗ ಹಾಕಿಸಿಕೊಳ್ಳುವ ಬೋರ್ಡ್ ಬದುಕಿರುವಾಗಲೇ ಅಂತ ಅವರಿಗೆ ಆಶ್ಚರ್ಯ. ನೀವೆಲ್ಲ ಸತ್ತ ಮೇಲೆ ಸಾಧಿಸುವುದಕ್ಕಿಂತ ನಾವು ಬದುಕಿದ್ದಾಗಲೇ ಸಾಧಿಸಿದ್ದೇವೆ ಅಂತ ಅಷ್ಟೆ. ಇದು ಸುಧಾಕರ್ ಗೆ ಮಾಹಿತಿ ಇರಬೇಕು. ಅಶೋಕಣ್ಣ ಅಪಾಯಿನ್ಮಂಟ್ ಕೊಟ್ರೆ ಪ್ರಸಾದ ಕೊಡ್ತೀನಿ. ಇಬ್ಬರಿಗೂ ಪ್ರಸಾದ ಕೊಟ್ಟು ಅಶೋಕಣ್ಣನಿಗೆ ಸೆಂಡ್ ಆಫ್ ಕೊಡೋಣ ಅಂತಿದ್ದೇನೆ ಎಂದಿದ್ದಾರೆ.











