ಮನೆ Latest News ಸ್ಪೀಕರ್ ಖಾದರ್ ಮತೀಯವಾಗಿ ನಡೆದುಕೊಂಡಿದ್ದಾರೆ: ವಿಪಕ್ಷ ನಾಯಕ ಆರ್.ಅಶೋಕ್ ಆರೋಪ

ಸ್ಪೀಕರ್ ಖಾದರ್ ಮತೀಯವಾಗಿ ನಡೆದುಕೊಂಡಿದ್ದಾರೆ: ವಿಪಕ್ಷ ನಾಯಕ ಆರ್.ಅಶೋಕ್ ಆರೋಪ

0

ಬೆಂಗಳೂರು: ಸ್ಪೀಕರ್ ಖಾದರ್ ಮತೀಯವಾಗಿ ನಡೆದುಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಸ್ಪೀಕರ್ ವಿರುದ್ಧ ಬಿಜೆಪಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆಯುತ್ತಿಲ್ಲ.18 ಶಾಸಕರು ನಮ್ಮ‌ ಯೋಧರು.ಅಮಾಯಕ ಮಂತ್ರಿ ರಕ್ಷಣೆ ಕೊಡಿ ಅಂದರೆ ಸಿಎಂ ಸುಮ್ಮನಾದರು. ಅವರಿಗೆ ರಕ್ಷಣೆ ಕೊಟ್ಟಿರೋದು ನಮ್ಮ ಶಾಸಕರು. ಸ್ಪೀಕರ್ ಹುದ್ದೆ ಧರ್ಮಾಧಾರಿತ, ಪಕ್ಷ ಆಧಾರಿತ ಅಲ್ಲ, ಮತೀಯಧಾರಿತ ಅಲ್ಲ. ಮತೀಯವಾಗಿ ಸ್ಪೀಕರ್ ನಡೆದುಕೊಂಡಿದ್ದಾರೆ ಎಂದ್ರು.

18 ಜನ ಶಾಸಕರು ಸ್ಪೀಕರ್ ಪೀಠದ ಬಳಿ ನಿಂತರು ಅಂತ ಸಸ್ಪೆಂಡ್ ಮಾಡಿದ್ರು.ಜನಪ್ರತಿನಿಧಿಗಳಾಗಿ ಆಯ್ಕೆ ಆಗಿದ್ದೇವೆ, ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೇ ಕರೆದು ಸ್ಪೀಕರ್ ಚೇರ್ ಬಳಿ ನಿಲ್ಲಿಸಿಕೊಂಡ್ರು . ಧರ್ಮ ಗುರು, ಬಂಧುಗಳನ್ನೆಲ್ಲ ಕರೆದುಕೊಂಡು ಸ್ಪೀಕರ್ ಚೇರ್ ಮೇಲೆ ಕೂರಿಸಿಕೊಂಡು ಫೋಟೋ ತೆಗೆಸಿಕೊಳ್ಳುತ್ತಾರೆ. ಚುನಾಯಿತ ಸದಸ್ಯರು ಬಂದ್ರೆ ತಪ್ಪಾ?. ಯೋಗೇಶ್ ಭಟ್, ಧರ್ಮೇಗೌಡರ ವಿರುದ್ಧ ಈ ಹಿಂದೆ ಸದನದಲ್ಲಿ ಏನೆಲ್ಲ ಮಾಡಿದ್ರು?. ಮೈಕ್, ಪಾಟ್ ಗಳನ್ನೆಲ್ಲ ಹೊಡೆದು ಹಾಕಿದ್ರು. ಕಾಂಗ್ರೆಸ್ ಗೆ ಮಾನ ಮರ್ಯಾದೆ ಇದ್ಯಾ?. ಸಿಎಂ ದೆಹಲಿಗೆ ಹೋಗಿದ್ದಾರೆ, ಸಚಿವ ಸಂಪುಟ ಪುನರ್ ರಚನೆ ಆಗುತ್ತೆ. ಸ್ಪೀಕರ್ ಮಂತ್ರಿಯಾಗುವ ಮೊದಲು‌ ಶಾಸಕರ ಅಧಿಕಾರ ಮೊಟಕು ಮಾಡಬಾರದು ಎಂದರು.

4% ಮೀಸಲಾತಿ ವಿರುದ್ದ ನಮ್ಮ ಹೋರಾಟ. ಸಂವಿಧಾನದ ವಿರುದ್ಧದ ಮುಸ್ಲಿಂ ಮೀಸಲಾತಿ ವಿರುದ್ಧ ಹೋರಾಟ. 18 ಜನ ಶಾಸಕರು ನಮ್ಮ‌ ಯೋಧರು. ನಾವು ಜೈಲು ವಾಸ ಅನುಭವಿಸಿ ಬಂದಿದ್ದೇವೆ. ನಾವು ಯಾವುದಕ್ಕೂ ಬಗ್ಗಲ್ಲ, ಜಗ್ಗಲ್ಲ. ರಾಜ್ಯಪಾಲರನ್ನೂ ಭೇಟಿ ಮಾಡಿ, ಮನವಿ ಮಾಡಿದ್ದೇವೆ. ಕೂಡಲೇ ಅಮಾನತು ಆದೇಶ ವಾಪಾಸ್ ಪಡೆಯಬೇಕು. ಬೆಲೆ‌ ಏರಿಕೆ ವಿರುದ್ಧ ಹೋರಾಟ ಮಾಡುತ್ತೇವೆ. ಕರ್ನಾಟಕದ ವಿಧಾನಸಭೆಯಲ್ಲೂ ಎಮರ್ಜೆನ್ಸಿ ಬಂದಿದೆ. ನಮ್ಮ ಹೋರಾಟಕ್ಕೆ ಸ್ಪಂದನೆ ಮಾಡಿ ಎಂದರು.

ಹನಿಟ್ರ್ಯಾಪ್ ಹಗರಣಕ್ಕೆ ಸದನದಲ್ಲೇ ಪ್ರಸ್ತಾಪ ಆಯ್ತು. ತನಿಖೆಯ ಬಗ್ಗೆ ಹೇಳಿದಿದ್ರೆ ಈ ಪ್ರಕರಣ ಇಷ್ಟು ದೊಡ್ಡದಾಗಿ ನಡೆಯುತ್ತಲೇ ಇರಲಿಲ್ಲ. ಕಾಂಗ್ರೆಸ್ ಪರವಾಗಿ ಸ್ಪೀಕರ್ ನಿಂತಿದ್ದಾರೆ. ಮಂತ್ರಿಯಾಗಲು ನಿಮಗೆ ಹಲವಾರು ದಾರಿಗಳಿವೆ. ಸಭಾಧ್ಯಕ್ಷರ ಪೀಠಕ್ಕೆ ಗೌರವ ಕೊಡಿ. ನಮ್ಮ‌ ಶಾಸಕರು ಸ್ಪೀಕರ್ ಕುರ್ಚಿ ಬಳಿ ಹೋದ್ರೆ ತಪ್ಪು. ನೀವು ನಿಮಗೆ ಬೇಕಾದವರನ್ನ ಕರೆದು ಫೋಟೋ ತೆಗೆಸಿಕೊಳ್ತೀರಿ. ಇದು ಡಬಲ್ ಸ್ಟ್ಯಾಂಡ್ ನೀತಿ ಅಂತ ಆಕ್ರೋಶ ಹೊರ ಹಾಕಿದ್ರು.

ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸೋದು ಕೇಂದ್ರ ಸರ್ಕಾರ: ವಿಧಾನಸೌಧದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ ಹೇಳಿಕೆ

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸೋದು ಕೇಂದ್ರ ಸರ್ಕಾರ ಎಂದು  ವಿಧಾನಸೌಧದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.

ಬೆಲೆ ಏರಿಕೆಗೆ ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು  ಬೆಲೆ ಏರಿಕೆ ಬಿಜೆಪಿ ಪ್ರತಿಭಟನೆ ಮಾಡೋದು ಹೊಸದೇನಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ದರ ಹೆಚ್ಚಾಗಿದೆ. ಹಾಲು, ಪೆಟ್ರೋಲ್, ಡೀಸೆಲ್ ಎಲ್ಲವೂ ಹೆಚ್ಚು ಮಾಡಿದ್ದಾರೆ. ಸರ್ಕಾರ ಬೆಲೆ ಏರಿಕೆ ಸ್ವಲ್ಪ ಮಾಡಿದೆ ನಿಜ. ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸೋದು ಕೇಂದ್ರ ಸರ್ಕಾರ. ಕೆಲವೊಮ್ಮೆ ದರ ಹೆಚ್ಚಳ ಅನಿವಾರ್ಯ. ಅರ್ಥಶಾಸ್ತ್ರ ಅರ್ಥ ಆದವರು ಬೆಲೆ ಏರಿಕೆ ವಿರೋಧಿಸಲ್ಲ. ಬಿಜೆಪಿ ಬೀದಿಗೆ ಹೋಗಲಿ, ಮನೆಗೆ ಹೋಗಲಿ.ಕಾಂಗ್ರೆಸ್ ನ್ಯಾಯಯುತವಾಗಿ ಬೆಲೆ ಏರಿಸುತ್ತೆ ಆದ್ರೆ ಕಾಂಗ್ರೆಸ್ ಬಡವರ, ಯುವಕರ, ಎಲ್ಲರ ಪರವಾಗಿದೆ ಎಂದರು,

ಸಚಿವ ಸ್ಥಾನದ ಆಕಾಂಕ್ಷಿನಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಕರ್ನಾಟಕ ವಿಧಾನಸಭೆಯಲ್ಲಿ ಅತ್ಯಂತ ಹಿರಿಯ ಸದಸ್ಯ . 1983ರಿಂದ ಶಾಸಕ. ಹಲವಾರು ಬಾರಿ ಸಚಿವ ಇದ್ದೆ, ಅನೇಕ ಅಧಿಕಾರ ಅನುಭವಿಸಿದ್ದೇನೆ. ಕ್ಯಾಬಿನೆಟ್ ರೀಷಫಲ್ ಇನ್ನೊಂದು ಮತ್ತೊಂದು ನಮಗೆ ಗೊತ್ತಿಲ್ಲ. ಸಿಎಂ ಹೋಗಿರೋದು ದೆಹಲಿಯಲ್ಲಿ ಕರ್ನಾಟಕ ಭವನ ಉದ್ಘಾಟನೆಗೆ. ನನಗೆ ಸಚಿವ ಸ್ಥಾನ ಕೊಡೋಬಗ್ಗೆ ಗೊತ್ತಿಲ್ಲ. ನಾನು ನಿರೀಕ್ಷೆ ಮಾಡಿಲ್ಲ. ಎಲ್ಲಾ ಭಗವಂತನ ಕೃಪೆ ಎಂದು ದೇಶಪಾಂಡೆ ಹೇಳಿದ್ದಾರೆ.

ಹರೀಶ್ ಪೂಂಜಾ ಮಾತನ್ನ ತೀವ್ರವಾಗಿ ಖಂಡಿಸ್ತೇನೆ. ಸ್ಪೀಕರ್ ಸ್ಥಾನದಲ್ಲಿ ಯಾರೇ ಇರಲಿ ಜಾತಿ, ಧರ್ಮದ ಪ್ರಕಾರ ನಡೆಯಲ್ಲ. ಸ್ಪೀಕರ್ ಪಕ್ಷಾತೀತವಾಗಿ ನಡೆದುಕೊಳ್ತಾರೆ. ಯು.ಟಿ ಖಾದರ್ ಆದರ್ಶ ವ್ಯಕ್ತಿ. ಹರೀಶ್ ಪೂಂಜಾ ಅವರ ಹೇಳಿಕೆ ಖಂಡಿಸ್ತೇನೆ. ಅವರು ಸ್ಟೇಜ್ ಯಾಕೆ ಹತ್ತಬೇಕು?. ಎಲ್ಲರೂ ಯಾಕೆ ಸ್ಪೀಕರ್ ಸುತ್ತುವರಿಯಬೇಕು?. ಅಶೋಕ್ ವಿಪಕ್ಷ ನಾಯಕರಿದ್ದಾರೆ. ಅವರು ನನಗೆ ಒಳ್ಳೆಯ ಸ್ನೇಹಿತ. ಸ್ಪೀಕರ್ ಕರೆದ್ರು ಅಂತ ಅಶೋಕ್ ಯಾಕೆ ಹೇಳಬೇಕು. ಸ್ಪೀಕರ್ ಯಾಕೆ ಮೇಲೆ ಬನ್ನಿ ಅಂತ ಕರೀತಾರೆ ಎಂದು ಪ್ರಶ್ನಿಸಿದ್ದಾರೆ.

ಹನಿಟ್ರಾಪ್ ವಿಚಾರದ ಬಗ್ಗೆ ಮಾತನಾಡಿದ ಅವರು  ನಾನು ಸದನದಲ್ಲಿದ್ದೆ. ಆ ಚರ್ಚೆ ಸದನದಲ್ಲಿ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ತಪ್ಪು. ಅವರು ಏನು ಹೇಳಿದ್ರು ಅದರ ಬಗ್ಗೆ ಮಾತಾಡಲ್ಲ. ಇಂತಹ ವಿಚಾರ ಸದನದಲ್ಲಿ ಚರ್ಚೆ ಮಾಡೋದು ಸರಿಯಲ್ಲ. ವೈಯಕ್ತಿಕ ವಿಚಾರ ಸದನದಲ್ಲಿ ಚರ್ಚೆ ಮಾಡಬಾರದು. ತನಿಖೆ ಆಗಬೇಕು ಅಂದಾಗ ಸಿಎಂ ಗಮನ ಕೊಡಬೇಕು ಎಂದ್ರು. ವಕ್ಫ್ ತಿದ್ದುಪಡಿ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆ ವಿಚಾರದ ಬಗ್ಗೆ ಮಾತನಾಡಿದ ಅವರು ಇದಕ್ಕೆ ನಮ್ಮ ವಿರೋಧ ಇದೆ. ಇದರಿಂದ ಸಮಸ್ಯೆಗಳಿವೆ. ಸಮಸ್ಯೆಗಳಿದ್ದ ಕಾರಣಕ್ಕೆ ನಾವು ವಿರೋಧ ಮಾಡ್ತಿರೋದು.ಹಲವು ಸಮಸ್ಯೆಗಳಿವೆ ಎಂದಿದ್ದಾರೆ.