ಬೆಂಗಳೂರು ; ವೀರ ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು ಎಂಬ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ಕೊಟ್ಟಿದ್ದಾರೆ.ಕಾಂಗ್ರೆಸ್ ನವರಿಗೆ ಹಿಂದುಗಳನ್ನು ಟೀಕೆ ಮಾಡುವುದೇ ಧರ್ಮ ಆಗಿದೆ.ಸಾವರ್ಕರ್ ಸತ್ತು ಸ್ವರ್ಗದಲ್ಲಿದ್ದಾರೆ. ಇನ್ನಾದರೂ ಅವರನ್ನು ಬಿಡಿ ಎಂದಿದ್ದಾರೆ.
ಕೊನೆಗೆ ಹೆಣ್ಣು ಮಕ್ಕಳು ಬಳೆಯೂ ಹಾಕಬಾರದು ಎಂಬ ಮನಸ್ಥಿತಿಗೆ ಕಾಂಗ್ರೆಸ್ ಬಂದು ಬಿಡುತ್ತದೆ.ಇನ್ನಾದರೂ ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ.ಟೀಕೆ ಮಾಡುವುದು ಹಿಂದುಗಳನ್ನು ಮಾತ್ರ, ಮುಸ್ಲಿಮರ ಬಗ್ಗೆ ಒಂದಾದರೂ ಮಾತಾಡಿದ್ದೀರಾ. ಹಿಂದು ಧರ್ಮದಲ್ಲಿ ಮಾತ್ರ ಕೆಟ್ಟದು ಇದ್ಯಾ, ಬೇರೆ ಧರ್ಮದಲ್ಲಿ ಎಲ್ಲಾ ಒಳ್ಳೆಯದು ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ
ಇನ್ನು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಮಾತನಾಡಿ ದಿನೇಶ್ ಗುಂಡೂರಾವ್ ಗೋ ಹತ್ಯೆಯನ್ನು ಬೆಂಬಲಿಸಿ ಮಾತಾಡಿದ್ದಾರೋ, ಗೋ ಮಾಂಸ ತಿನ್ನುವುದನ್ನು ಸಮರ್ಥಿಸಿ ಮಾತಾಡುತ್ತಿದ್ದಾರೋ. ಅವರು ಯಾವುದನ್ನು ಪ್ರಮೋಟ್ ಮಾಡಲು ಹೊರಟಿದ್ದಾರೆ? ಎಂದು ಕಿಡಿಕಾರಿದ್ದಾರೆ.
ದಿನೇಶ್ ಗುಂಡೂರಾವ್ ಹೊಸ ದಂಧೆ ಏನಾದರೂ ಶುರು ಮಾಡಿದ್ದಾರಾ? ದಂಧೆ ಶುರು ಮಾಡಿದ್ದು ಅದಕ್ಕೆ ಸ್ವಲ್ಪ ಸಪೋರ್ಟ್ ಸಿಗಲಿ ಅಂತಾ ಏನಾದರೂ ಮಾತಾಡುತ್ತಿದ್ದಾರಾ?ಮೂಲಭೂತವಾದ ಮತ್ತು ರಾಷ್ಟ್ರವಾದದ ನಡುವೆ ಅಗಾಧ ಅಂತರ ಇದೆ. ಮೂಲಭೂತವಾದ ಪಾಕಿಸ್ತಾನದ ನಿರ್ಮಾಣಕ್ಕೆ ಕಾರಣವಾಯಿತು. ದಿನೇಶ್ ಗುಂಡೂರಾವ್ ಮತ್ತು ಪಕ್ಷ ಯಾವುದನ್ನು ಸಮರ್ಥನೆ ಮಾಡುತ್ತಿದ್ದಾರೆ?ಮೂಲಭೂತವಾದ ಸಮರ್ಥನೆ ಮಾಡುತ್ತಾ ಮಾಡುತ್ತಾ ಮತ್ತಷ್ಟು ಪಾಕಿಸ್ತಾನ ನಿರ್ಮಾಣ ಮಾಡಬೇಕು ಅಂತಾ ನಿಮ್ಮ ಉದ್ದೇಶನಾ? ದಿನೇಶ್ ಗುಂಡೂರಾವ್ ಮತ್ತು ಪಕ್ಷ ಗಾಂಧಿ ವಿಚಾರಧಾರೆಯ ಪರ ಇದ್ಯಾ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
ಜಿನ್ನಾ ವಿಚಾರಧಾರೆ ಪರ ಇದ್ದರೆ ಭಾರತ ವಿಭಜನೆ, ಗೋ ಮಾಂಸ ಭಕ್ಷಣೆಯನ್ನು ಸಮರ್ಥನೆ ಮಾಡುತ್ತಾರೆ.ದಿನೇಶ್ ಗುಂಡೂರಾವ್ ಜಿನ್ನಾ ವಿಚಾರಧಾರೆಯ ಪರವೋ ಗಾಂಧಿ ವಿಚಾರಧಾರೆ ಪರವೋ ಅಂತಾ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ. ಸಾವರ್ಕರ್ ವಿಚಾರಧಾರೆ ಮಾತ್ರ ರಾಷ್ಟ್ರ ಉಳಿಸುವುದು.ರಾಷ್ಟ್ರ ರಕ್ಷಣೆ ಅಹಿಂಸೆಯಿಂದ ಸಾಧ್ಯವಾಗುವುದಾಗಿದ್ದರೆ ಭಾರತ ದೊಡ್ಡ ಸೈನ್ಯ ಕಟ್ಟುವ ಅಗತ್ಯವೇ ಇರಲಿಲ್ಲ.ನಮ್ಮ ಸೈನ್ಯ ಸಮರ್ಥ ಇಲ್ಲದಿದ್ದರೆ 1948 ರಲ್ಲೇ ಪಾಕಿಸ್ತಾನ ಭಾರತದ ಕಥೆ ಮುಗಿಸಿಬಿಡುತ್ತಿತ್ತು.ಭಾರತ ಬಲವಾಗಬೇಕು ಅಂತಾ ಕನಸು ಕಂಡವರು ಸಾವರ್ಕರ್.ಸಾವರ್ಕರ್ ವಿಚಾರಧಾರೆ ಭಾರತವನ್ನು ಬಲಗೊಳಿಸುವುದಾಗಿತ್ತು.ಜಿನ್ನಾನಿಗೆ ಅವನು ಕೇಳಿದ್ದನ್ನು ಕೊಡುವುದು ಸಾವರ್ಕರ್ ವಿಚಾರಧಾರೆ ಆಗಿರಲಿಲ್ಲ.ಗಾಂಧಿ ಬದುಕಿದ್ದಾಗಲೇ ಭಾರತ ವಿಭಜನೆ ಆಗಿದ್ದು ದುರ್ದೈವ.ಗಾಂಧಿ ವಿಚಾರಧಾರೆ ಭಾರತದ ವಿಭಜನೆ ತಡೆಯಲು ಆಗಲಿಲ್ಲ ಎನ್ನುವುದು ವಾಸ್ತವಿಕ ಸತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.