ಮನೆ Latest News ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ಅವಮಾನ ಆರೋಪ; ಇಂದು ಶಾಸಕರ ಭವನದಿಂದ ಬಿಜೆಪಿ ಪಾದಯಾತ್ರೆ ಮೂಲಕ ಪ್ರತಿಭಟನೆ

ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ಅವಮಾನ ಆರೋಪ; ಇಂದು ಶಾಸಕರ ಭವನದಿಂದ ಬಿಜೆಪಿ ಪಾದಯಾತ್ರೆ ಮೂಲಕ ಪ್ರತಿಭಟನೆ

0

 

ಬೆಂಗಳೂರು ; ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ಅವಮಾನವಾಗ್ತಿದೆ ಎಂದು ಆರೋಪಿಸಿ ಇಂದು ಶಾಸಕರ ಭವನದಿಂದ ಬಿಜೆಪಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಈ ಸರ್ಕಾರ ದಿನ ನಿತ್ಯ ರಾಜ್ಯಪಾಲರಿಗೆ ಅವಮಾನ ಮಾಡ್ತಾ ಇದ್ದಾರೆ.ಅವರು ತಂದ ಬಿಲ್ ಮೂಲಕ ರಾಜ್ಯಪಾಲರಿಗೆ ಅವಮಾನ ಮಾಡ್ತಿದೆ. ರಾಜ್ಯಪಾಲರ ಬಾಯಲ್ಲಿ ಕರ್ನಾಟಕದ ಸಾಧನೆ ಬಗ್ಗೆ ವರ್ಣನೆ ಮಾಡಿಸ್ತಾರೆ. ಒಂದು ಕಡೆ ರಾಜ್ಯಪಾಲರ ವಿರುದ್ಧ ಅವಮಾನ. ಇದನ್ನು ಖಂಡಿಸಿ ನಾವು ನಾಳೆ(ಇಂದು) ಶಾಸಕರ ಭವನದಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.

ಬಳಿಕ ರಾಜ್ಯಪಾಲರ ಭಾಷಣ ಕೇಳಲು ಹೋಗುತ್ತೇವೆ. ‌ಏನು ಅಭಿವೃದ್ಧಿ ಮಾಡದೆ ಸಿದ್ದರಾಮಯ್ಯ 7ಕ್ಕೆ ಬಜೆಟ್ ಮಂಡನೆ ಮಾಡುತ್ತಾ ಇದ್ದಾರೆ. ಇದನ್ನು ಖಂಡಿಸಿ 7ನೇ ತಾರೀಖು ಶಾಸಕರ ಭವನದಿಂದ ಪಾದಯಾತ್ರೆ ಮಾಡಲಿದ್ದೇವೆ. ವಿಧಾನಸೌಧಕ್ಕೆ  ಎಲ್ಲಾ ಶಾಸಕರು ಭಾಗಿ ಆಗುತ್ತಾರೆ. ದಲಿತರ ಹಣ ತಿಂದಿದ್ದಾರೆ. ಇದನ್ನು ಉಗ್ರಪ್ಪ ಸಹ ಖಂಡಿಸಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ನೀವು ಗ್ಯಾರಂಟಿ ಯೋಜನೆಗೆ ಯಾಕೆ ದಲಿತರ ಹಣ ಬಳಸುತ್ತೀರಿ. 40% ಹಣ ಬಳಸಿಕೊಂಡು ನಾವು ಗ್ಯಾರಂಟಿ ಕೊಡ್ತೇವೆ ಎಂದಿದ್ರು‌. ಆದರೆ ಈಗ 40% ಎಲ್ಲಿಗೆ ಹೋಯ್ತು. ನಮ್ಮ ಮೇಲೆ ೪೦% ಆರೋಪ ಮಾಡಿದ್ರು.ಅದೇ 40% ಹಣ ಉಳಿಸಿ ಗ್ಯಾರಂಟಿ ಕೊಡ್ತೇನೆ ಎಂದಿದ್ರು.  ಆ 40% ಎಲ್ಲಿಗೆ ಹೋಯ್ತು? ಎಂದು ಅಶೋಕ್ ಪ್ರಶ್ನಿಸಿದ್ದಾರೆ.