ಮನೆ Latest News ಹೆಚ್ಡಿಕೆ ವರ್ಣದ ಕುರಿತು ಜಮೀರ್ ಅಹಮದ್ ಆಕ್ಷೇಪಾರ್ಹ ಹೇಳಿಕೆ ವಿಚಾರ; ಸಚಿವ ಜಮೀರ್ ಅಹಮದ್ ವಿರುದ್ಧ...

ಹೆಚ್ಡಿಕೆ ವರ್ಣದ ಕುರಿತು ಜಮೀರ್ ಅಹಮದ್ ಆಕ್ಷೇಪಾರ್ಹ ಹೇಳಿಕೆ ವಿಚಾರ; ಸಚಿವ ಜಮೀರ್ ಅಹಮದ್ ವಿರುದ್ಧ ಜೆಡಿಎಸ್ ಪ್ರತಿಭಟನೆ

0

ಬೆಂಗಳೂರು; ಹೆಚ್ಡಿಕೆ ವರ್ಣದ ಕುರಿತು ಜಮೀರ್ ಅಹಮದ್ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಸಚಿವ ಜಮೀರ್ ಅಹಮದ್ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಿದ್ರು.ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.ಜೆಡಿಎಸ್ ಬೆಂಗಳೂರು ಮಹಾನಗರ ಘಟಕದಿಂದ ಪ್ರತಿಭಟನೆ ನಡೆಯಿತು. ಜಮೀರ್ ಅಹಮದ್ ವಿರುದ್ಧ ಘೋಷಣೆ ಕೂಗಿ ರಾಜೀನಾಮೆಗೆ ಒತ್ತಾಯಸಿದ್ರು.

ಬೆಂಗಳೂರು ಜೆಡಿಎಸ್ ಘಟಕದ ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಶಾಸಕ‌ ಸ್ಥಾನದಿಂದ ಜಮೀರ್ ಅಹಮದ್ ವಜಾ‌ ಮಾಡುವಂತೆ ಆಗ್ರಹಿಸಿದ್ರು. ಅಲ್ಲದೇ ಜಮೀರ್ ಗೆ ಎರಡು ನಾಲಿಗೆ ಅಂತ ಆಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು, ಸಚಿವ ಜಮೀರ್ ಅಹಮದ್ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ಕೋಪ ಹೊರ ಹಾಕಿದ್ರು.

ಇನ್ನು ಪ್ರತಿಭಟನಾ ನಿರತರು ಜಮೀರ್ ಅಹಮದ್ ಪ್ರತಿಕೃತಿ ದಹಿಸಲು ಮುಂದಾದ್ರು. ಆದರೆ ಪೊಲೀಸರು ಅವರಿಗೆ ಅವಕಾಶ ನೀಡಲಿಲ್ಲ. ಬಳಿಕ ಪೊಲೀಸರು ಪ್ರತಿಕೃತಿಯನ್ನು ಪೊಲೀಸರು ವಶಕ್ಕೆ ಪಡೆದ್ರು. ಅಲ್ಲದೇ  ಜೆಡಿಎಸ್ ಕಾರ್ಯಕರ್ತರನ್ನ ಕೂಡ ವಶಕ್ಕೆ ಪಡೆದ್ರು. ಇದೇ ವೇಳೆ ಮಾತನಾಡಿದ ಮಾಜಿ‌ ಎಂಎಲ್ ಸಿ ರಮೇಶ್ ಗೌಡ  ಚುನಾವಣಾ ಸಂದರ್ಭದಲ್ಲಿ ಸರ್ಕಾರದ ಒಬ್ಬ ಮಂತ್ರಿ ಜನಾಂಗೀಯ ನಿಂದನೆ ಮಾಡಿದ್ದಾರೆ. ಜಮೀರ್ ಅವರೇ‌ ಹಿಂದೆ ಕುಮಾರಸ್ವಾಮಿ ಜೊತೆ ಹೋದಾಗ ಮಾರ್ಷಲ್ ಗಳು ತಡೆದಿದ್ರು. ಆಗ ಚಾಲೇಂಜ್ ಮಾಡಿ ಅವರನ್ನ ಎಂಎಲ್ ಎ ಮಾಡಿ ಕರೆದುಕೊಂಡು ಬಂದರು. ಇಂತಹ ಜಮೀರ್ ದೇವೇಗೌಡರ ‌ಕುಟುಂಬ ಖರೀದಿ ಮಾಡ್ತೇನೆ ಅಂತೀರಾ? ಸೋಶಿಯಲ್ ಮೀಡಿಯಾಗಳಲ್ಲಿ‌ ಒಮ್ಮೆ ನೋಡಿ ನಿಮ್ಮನ್ನ ಹೇಗೆ ಉಗೀತಿದ್ದಾರೆ ಅಂತಾ. ಈ ರಾಜ್ಯ ಸರ್ಕಾರಕ್ಕೆ ಕನಿಷ್ಠ ಮರ್ಯಾದೆ ಇದ್ರೆ ಜಮೀರ್ ರಾಜೀನಾಮೆ ಪಡೆಯಲಿ. ಇಂತಹ ಕಿಡಿಗೇಡಿಯನ್ನ ಸಂಪುಟದಲ್ಲಿ ಇಟ್ಕೊಂಡು ಶಾಂತಿ ಕದಡುತ್ತಿದ್ದಾರೆ. ಜಮೀರ್‌ಅವರ ರಾಜೀನಾಮೆ ಪಡೆಯದೇ ಹೋದರೆ ಜಮೀರ್‌ಹೋದಲ್ಲಿ ಬಂದಲ್ಲಿ ಪ್ರತಿಭಟನೆ ಮಾಡ್ತೇವೆ, ಕಪ್ಪು ಬಾವುಟ ಪ್ರದರ್ಶನ ಮಾಡ್ತೇವೆ. ಉಪಚುನಾವಣೆ ಸಂದರ್ಭದಲ್ಲಿ ಬಳಸಿರುವ ಪದ‌ ಜನಾಂಗೀಯ‌ ನಿಂದನೆ. ಜಮೀರ್ ಕ್ಷಮೆ ಕೋರಿದ್ರೆ ಪಶ್ಚಾತ್ತಾಪ ಪಟ್ಟಂತಾಗಲ್ಲ. ಶಾಸಕ ಸ್ಥಾನದಿಂದ ವಜಾ ಆಗಬೇಕು. ಇದು ನಮ್ಮ ಕೊನೆಯ ಎಚ್ಚರಿಕೆ ಜಮೀರ್ ಗೆ. ಜಮೀರ್ ವಿರುದ್ಧ ರಾಜಭವನಕ್ಕೆ, ಚುನಾವಣಾ ಆಯೋಗಕ್ಕೆ ದೂರು ಕೊಡ್ತೇವೆ ಎಂದರು.