ಮನೆ Latest News ಬಿಜೆಪಿಗರಿಗೆ ತಾಳ್ಮೆ ಇರಲಿ, ನ್ಯಾ. ನಾಗಮೋಹನ್ ದಾಸ್ ಸಮಿತಿಯ ವರದಿ ಬಂದಾಗ ಉಪ್ಪು ತಿಂದ ಬಿಜೆಪಿಗರು...

ಬಿಜೆಪಿಗರಿಗೆ ತಾಳ್ಮೆ ಇರಲಿ, ನ್ಯಾ. ನಾಗಮೋಹನ್ ದಾಸ್ ಸಮಿತಿಯ ವರದಿ ಬಂದಾಗ ಉಪ್ಪು ತಿಂದ ಬಿಜೆಪಿಗರು ಉಪ್ಪಿನ ನೀರನ್ನೇ ಕುಡಿಯುವ ಸ್ಥಿತಿ ಎದುರಾಗಲಿದೆ!; ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್

0

ಬೆಂಗಳೂರು; ಬಿಜೆಪಿಗರಿಗೆ ತಾಳ್ಮೆ ಇರಲಿ, ನ್ಯಾ. ನಾಗಮೋಹನ್ ದಾಸ್ ಸಮಿತಿಯ ವರದಿ ಬಂದಾಗ ಉಪ್ಪು ತಿಂದ ಬಿಜೆಪಿಗರು ಉಪ್ಪಿನ ನೀರನ್ನೇ ಕುಡಿಯುವ ಸ್ಥಿತಿ ಎದುರಾಗಲಿದೆ ಎಂದು  ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿದ್ದಾರೆ.

ಗುತ್ತಿಗೆದಾರರಾದ ದಿವಂಗತ ಅಂಬಿಕಾಪತಿಯವರು ಮಾಡಿದ್ದ ಆರೋಪದ ಕುರಿತಾಗಿ ಲೋಕಾಯುಕ್ತ ವರದಿಯನ್ನು ಹಿಡಿದು “40% ಕಮಿಷನ್ ಆರೋಪ ಸುಳ್ಳು, ನಿರಾಧಾರ ಆರೋಪ, ನೋಡಿ ನಮಗೆ ಕ್ಲೀನ್ ಚಿಟ್ ಸಿಕ್ಕೇಬಿಟ್ಟಿತು” ಎಂದು ಬಿಜೆಪಿಯವರು ಬಹಳ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ! ಆದರೆ, ಇದು ಬಿಜೆಪಿಯವರ ತೋರುಗಾಣಿಕೆಯ ಸಂತೋಷವಷ್ಟೇ.

ಅಂಬಿಕಾಪತಿಯವರು ND TV ಗೆ ನೀಡಿದ್ದ ಹೇಳಿಕೆಯನ್ನು ಆಧರಿಸಿ ತನಿಖೆಗೆ ಆದೇಶಿಸಿದ್ದ ಅಂದಿನ ಬಿಜೆಪಿ ಸರ್ಕಾರ ಅದೇ ಸಂದರ್ಶನದಲ್ಲಿ ಇತರ ಗಂಭೀರ ಆರೋಪ ಮಾಡಿದ್ದರ ಬಗ್ಗೆ ತನಿಖೆಗೆ ಮುಂದಾಗಿರಲಿಲ್ಲ, ಅದೇ ಸಂದರ್ಶನದಲ್ಲಿ ಗುತ್ತಿಗೆದಾರರು PWD, ಆರೋಗ್ಯ, ವಸತಿ, ಉನ್ನತ ಶಿಕ್ಷಣ, ಸಣ್ಣ ನೀರಾವರಿ ಹೀಗೆ ಹಲವು ಇಲಾಖೆಗಳಲ್ಲಿನ ಕಮಿಷನ್ ಅಕ್ರಮದ ಕುರಿತು ಮಾತಾಡಿದ್ದರು, ಇವುಗಳ ಬಗ್ಗೆ ಬಿಜೆಪಿ ಸರ್ಕಾರ ಮೌನವಹಿಸಿದ್ದು ಏಕೆ? ಪಾವಗಡ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆಯೂ ಕಮಿಷನ್ ಆರೋಪ ಮಾಡಿದ್ದರು.ಇದರ ಬಗ್ಗೆ ತನಿಖೆಗೆ ವಹಿಸದಿದ್ದಿದ್ದು ಏಕೆ? ಕೇವಲ ಗುತ್ತಿಗೆದಾರರಷ್ಟೇ ಅಲ್ಲ, ಖಾಸಗಿ ಶಿಕ್ಷಣ ಸಂಸ್ಥೆಗಳ ಎರಡು ಸಂಘಟನೆಗಳು ಲಂಚದ ಆರೋಪ ಮಾಡಿದ್ದವು. ಇದರ ಬಗ್ಗೆಯೂ ಬಿಜೆಪಿ ಮೌನವಾಗಿತ್ತು, ಏಕೆ? .

ಕೋಲಾರ ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರಾದ ಮುನಿರತ್ನರವರ ವಿರುದ್ಧವೂ ನೇರವಾಗಿ ಲಂಚದ ಆರೋಪ ಮಾಡಿದ್ದರು, ಇದರ ತನಿಖೆಗೂ ಮನಸು ಮಾಡಿರಲಿಲ್ಲ ಏಕೆ? ಹಲವು ಗುತ್ತಿಗೆದಾರರು ಬಿಜೆಪಿ ಸರ್ಕಾರದ ಅವಧಿಯಲ್ಲಿ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದರೂ ಕಮಕ್ ಕಿಮಕ್ ಎನ್ನದ ಹಿಂದಿನ ಬಿಜೆಪಿ ಸರ್ಕಾರ ಅಂಬಿಕಾಪತಿಯವರ ಹಲವು ಆರೋಪಗಳಲ್ಲಿ ಬಿಬಿಎಂಪಿ ಪೂರ್ವ ವಲಯಕ್ಕೆ ಸಂಬಂಧಿಸಿದ ಆಟದ ಮೈದಾನ ಕಾಮಗಾರಿಯ ಒಂದು ಆರೋಪವನ್ನು ಮಾತ್ರ ಮಾತ್ರ ಹಿಡಿದು ತನಿಖೆಗೆ ಮುಂದಾಗಿದ್ದರು ಎಂದರೆ ಆ ಆರೋಪದ ಬಗ್ಗೆ ಬಚಾವಾಗುವ ಸಾಧ್ಯತೆಯನ್ನು ಹುಡುಕಿಕೊಂಡಿದ್ದರೇ? ಇಷ್ಟಕ್ಕೂ ಈಗ ಸಿಕ್ಕಿರುವುದು 40% ಕಮಿಷನ್ ಆರೋಪಕ್ಕೆ ಸಿಕ್ಕಿರುವ ಕ್ಲೀನ್ ಚಿಟ್ ಅಲ್ಲ, ತನಿಖೆ ಗಂಭೀರವಾಗಿ ಶುರುವಾಗುವ ಮೊದಲೇ ಅಂಬಿಕಾಪತಿಯವರು ದಿವಂಗತರಾದ ಕಾರಣ ಸಾಕ್ಷ್ಯಗಳನ್ನು ಹುಡುಕಲು ಸಾಧ್ಯವಾಗದ ಕಾರಣ ಅಂಬಿಕಾಪತಿಯಯವರ ಆಪಾದನೆಯನ್ನು ಸಾಬೀತು ಮಾಡಲು ತನಿಖಾಧಿಕಾರಿಗೆ ಸಾಧ್ಯವಾಗಿಲ್ಲ ಅಷ್ಟೇ. ಅಂಬಿಕಾಪತಿಯವರು ಮರಣ ಹೊಂದಿರುವ ಕಾರಣ, ಸದರಿಯವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ಅಂಬಿಕಾಪತಿಯವರು ಮಾಡಿರುವ ಆಪಾಧನೆಯು ಮೇಲ್ನೋಟಕ್ಕೆ ಸಾಬೀತಾಗಿರುವುದಿಲ್ಲವೆಂದು ವಿಚಾರಣಾಧಿಕಾರಿಗಳು ವರದಿಯಲ್ಲಿ ಹೇಳಿದ್ದಾರೆ. 40% ಕಮಿಷನ್ ಅಕ್ರಮದ ಸಮಗ್ರ ತನಿಖೆಯನ್ನು ನ್ಯಾ. ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ನಡೆಸುತ್ತಿದೆ, ಬಿಜೆಪಿಯವರ ಭ್ರಷ್ಟಾಚಾರದ ನೈಜ ಬಂಡವಾಳ ಅದರಲ್ಲಿ ಹೊರಬರಲಿದೆ. ಬಿಜೆಪಿಗರಿಗೆ ತಾಳ್ಮೆ ಇರಲಿ, ನ್ಯಾ. ನಾಗಮೋಹನ್ ದಾಸ್ ಸಮಿತಿಯ ವರದಿ ಬಂದಾಗ ಉಪ್ಪು ತಿಂದ ಬಿಜೆಪಿಗರು ಉಪ್ಪಿನ ನೀರನ್ನೇ ಕುಡಿಯುವ ಸ್ಥಿತಿ ಎದುರಾಗಲಿದೆ!