ಮನೆ Latest News ಸಿದ್ದಾರ್ಥ ವಿಹಾರ ಟ್ರಸ್ಟ್ ವಿವಾದ, ಖರ್ಗೆ ಕುಟುಂಬದಿಂದ ಸೈಟ್ ವಾಪಸ್ ಗೆ ಚಿಂತನೆ ವಿಚಾರ: ಸಚಿವ...

ಸಿದ್ದಾರ್ಥ ವಿಹಾರ ಟ್ರಸ್ಟ್ ವಿವಾದ, ಖರ್ಗೆ ಕುಟುಂಬದಿಂದ ಸೈಟ್ ವಾಪಸ್ ಗೆ ಚಿಂತನೆ ವಿಚಾರ: ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ ಮೂಲಕ ಸ್ಪಷ್ಟನೆ

0

ಬೆಂಗಳೂರು; ಸಿದ್ದಾರ್ಥ ವಿಹಾರ ಟ್ರಸ್ಟ್ ವಿವಾದ, ಖರ್ಗೆ ಕುಟುಂಬದಿಂದ ಸೈಟ್ ವಾಪಸ್ ಗೆ ಚಿಂತನೆ ವಿಚಾರಕ್ಕೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ ಮೂಲಕ ಸ್ಪಷ್ಟನೆ  ನೀಡಿದ್ದಾರೆ.

ಇಲ್ಲಿ ತರಾತುರಿಯಲ್ಲಿ ಹಾಗೂ ಕಾನೂನು ಬಾಹಿರ ವಾಗಿ ಸೈಟ್ ಹಂಚಿಕೆಯಾಗಿದೆ ಎಂಬ ಆರೋಪ ಇತ್ತು. ಆದ್ರೆ ಇಲ್ಲಿ ಹಾಗೆ ಆಗಿಲ್ಲ. ಟ್ರಸ್ಟ್ ಅಧ್ಯಕ್ಷ ರಾಹುಲ್‌ ಖರ್ಗೆ ಅವರಿಗೆ ಹೆಚ್ಚು ಅರಿವು ಇರಲಿಲ್ಲ ಅನ್ಸುತ್ತೆ.ಅವರಿಗೆ ಕೇಂದ್ರದಿಂದ ಸಾಕಷ್ಟು ಅವಾರ್ಡ್ ಸಿಕ್ಕಿದೆ. ಯುಪಿಎಸ್ ಇ ನಲ್ಲೂ ರ್ಯಾಂಕ್ ಬಂದಿದ್ರು. ಆದ್ರೆ ಈ ವಿಚಾರದಲ್ಲಿ ಅವರಿಗೆ ಹೆಚ್ಚು ಮಾಹಿತಿ ಇರಲಿಲ್ಲ ಅನ್ಸುತ್ತೆ.ನಮ್ಮ ಕುಟುಂಬದಲ್ಲಿ ಮೂವರು ಅಷ್ಟೇ ರಾಜಕೀಯದಲ್ಲಿ ಇದ್ದೇವೆ.ಯುರೋಸ್ಪೇಸ್ ನಲ್ಲಿ ಜಾಗ ಬೇಕು ಅಂತ ಅರ್ಜಿ ಹಾಕ್ತಾರೆ.ಅದರ ಅನ್ವಯ ಅವರಿಗೆ ಸೈಟ್ ಅಲಾಟ್ ಆಗಿದೆ.ಸಂಪೂರ್ಣ ದಾಖಲೆ ಆಧಾರದ‌ ಮೇಲೆ ಸೈಟ್ ಸಿಕ್ಕಿದೆ ಎಂದಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ಅವರು ನಮ್ಮ ಅಣ್ಣ ಅವರು ಮೃದು ಸ್ವಭಾವದವರು.ಅವರಿಂದ ಕುಟುಂಬದ ಸದಸ್ಯರರಿಗೆ ಹಿಂಸೆ ಆಗ್ತಿದೆ ಎಂದು ನೊಂದಿದ್ದಾರೆ.ಸೆಪ್ಟೆಂಬರ್ ೨೦ನೇ ರಂದು ಅವರು ಕೆಐಎಡಿಬಿ ಗೆ ಪತ್ರ ಬರೆದಿದ್ದಾರೆ.ಸೈಟ್ ಕೊಟ್ಟಿರೋದನ್ನ ನಿವೇಶನ ಕಾನೂನಾತ್ಮಕ ವಾಗಿ ಮರಳಿ‌ ನೀಡುತ್ತಿದ್ದೇವೆ ಎಂದು ಪತ್ರ ಬರೆದಿದ್ದಾರೆ. ಎರಡೂ ಮೂರು ಕಾರಣ ಕೊಟ್ಟು ಸೈಟ್ ಮರಳಿ ನೀಡಿದ್ದಾರೆ.ಖಾಸಗಿ ಟ್ರಸ್ಟ್ ಅಲ್ಲ ಪಬ್ಲಿಕ್ ಟ್ರಸ್ಟ್ ಎಂದು ನಮೂದಿಸಿದ್ದಾರೆ.ಟ್ರಸ್ಟ್ ಗೆ ಬಂದು ಹಣ ಯಾವುದೇ ಕಾರಣಕ್ಕೆ ದುರುಪಯೋಗ ಮಾಡಿಕೊಳ್ಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಎ ಸೈಟ್ ನಲ್ಲಿ ಯಾವುದೇ ರೀತಿ ರಿಯಾಯಿತಿ ಕೋಡೋದಕ್ಕೆ ಬರೋದಿಲ್ಲ.ಇದು ತರಬೇತಿಗೆ ಅಂತ ಸಿಎ ಸೈಟ್ ಇತ್ತು,‌ಆದ್ರೆ ಯಾವುದೇ ಲಾಭದ ಉದ್ದೇಶ ಇರಲಿಲ್ಲ. ಆದ್ರೆ ಬಿಜೆಪಿ ಯವರು ಹಲವು ರೀತಿಯ ‌ಆರೋಪ ಮಾಡಿದರು. ವೈಯಕ್ತಿಕ ವಾಗಿ ರಾಜಕೀಯ ಆರೋಪದಿಂದ‌ ಬೇಸರವಾಗಿದೆ.ಹೀಗಾಗಿ ಸಿಎ ಸೈಟ್ ಬೇಡ ಎಂದು ರಾಹುಲ್ ಖರ್ಗೆ ಪತ್ರ ಬರೆದಿದ್ದಾರೆ. ಸೆ. ೨೦ ನೇ ರಂದು ರಾಹುಲ್ ಖರ್ಗೆ ಪತ್ರ ಬರೆದಿದ್ದಾರೆ.ಸಿಓಕೆಎಐಡಿಬಿಗೆ ಪತ್ರ ಬರೆದಿದ್ದಾರೆ ಎಂದಿದ್ದಾರೆ.

ಪತ್ರ ಸಿಎ ಸೈಟ್ ಪಡೆಯೋದಕ್ಕೆ ಅರ್ಹ ಇದ್ದೇವೆ, ಯಾವುದೇ ಅವ್ಯವಹಾರ ಅಥವಾ ಲಾಭದ ಉದ್ದೇಶದಿಂದ ನಾವು ಸಿಎ ಸೈಟ್ ಪಡೆದಿದ್ದೇವೆ ಎಂದು ಪತ್ರ ದಲ್ಲಿ ಉಲ್ಲೇಖಿಸಿದ್ದಾರೆ. ಕೆಐಎಡಿಬಿ ಗೆ ಧನ್ಯವಾದ‌ ಸಲ್ಲಿಸಿ ಸಿಎ ಸೈಟ್ ಮರಳಿ ನೀಡಿದ್ದಾರೆ. ಬಿಜೆಪಿಯವರು ದೊಡ್ಡ ಸಾಧನೆ ಎಂದು ಹೇಳುತ್ತಾ ಹೊರಟಿದರು.ಆದ್ರೆ ರಾಜಕೀಯ ಅರೋಪ ದಿಂದ ನೊಂದು ಸಿಎ ಸೈಟ್ ವಾಪಸ್ ನೀಡಿದ್ದಾರೆ.ರಾಹುಲ್ ಖರ್ಗೆ ಅವರಿಗೆ ಇಂತಹ ವಾತಾವರಣದಲ್ಲಿ ಕೆಲಸ ಮಾಡೋದಕ್ಕೆ ಆಗಲ್ಲ ಎಂದು ಮರಳಿ ನೀಡಿದ್ದಾರೆ. ಇದರಲ್ಲಿ ಅಕ್ರಮ ಇದ್ದಿದ್ರೆ ಮೋದಿ ಅಮಿತ್ ಶಾ ಬಿಡುತ್ತಿದ್ರಾ?.ವಿಜಯೇಂದ್ರ ಅವರು ಕಲಬುರಗಿ ಯವರೆಗೆ ಪಾದಯಾತ್ರೆ ಮಾಡುತ್ತಿದ್ದರು. ಇಲ್ಲಿ ಸಮಸ್ಯೆ ಅಂದ್ರೆ ನಾವು ಸಿಎ ಸೈಟ್ ಪಡೀಬಾರದು ಅನ್ನೋದು.ಖರ್ಗೆ ಕುಟುಂಬದವರು ಸೈಟ್ ತೆಗೆದುಕೊಳ್ಳಬಾರದು ಅನ್ನೋದು ಅಷ್ಟೇ.ಛಲವಾದಿ ನಾರಾಯಣಸ್ವಾಮಿ ಬಿರಿಯಾನಿ ಶಾಪ್ ಮಾಡೋದಕ್ಕೆ ಸಿಎ ಸೈಟ್ ಪಡೆದಿದ್ದರು ಅಲ್ವಾ ಎಂದು ಪ್ರಶ್ನಿಸಿದ್ದಾರೆ.