ಮನೆ Latest News ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ

ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ

0

ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಕಲಬುರಗಿಯಲ್ಲಿ ವಿಪಕ್ಷದವರು ಪ್ರತಿಭಟನೆ ಮಾಡ್ತಿದ್ದಾರೆ. ನನ್ನನ್ನ ಕ್ಯಾಬಿನೆಟ್ ನಿಂದ ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಹಠಾವ್ ಬಿಜೆಪಿ ಬಚಾವ್ ಅಂತಿದ್ದಾರೆ. ನಾನು ಅವರನ್ನ ಪ್ರಶ್ನೆ ಮಾಡುವಂತೆವಿಲ್ವಂತೆ. ಮೋದಿಯವರನ್ನ ಪ್ರಶ್ನಿಸುವಂತೆ ಇಲ್ಲ.ಅದು ಅವರ ಅಭಿಪ್ರಾಯ.ರಿಪಬ್ಲಿಕ್ ಆಫ್ ಕಲಬುರಗಿ ಅಂತ ಹೋಗಿದ್ದಾರೆ.ಇವತ್ತು ಅಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ.ಜನರ ಮುಂದೆ ನಾರಾಯಣಸ್ವಾಮಿ ಅಳ್ತಿದ್ದಾರೆ.ನನಗೆ ಅನ್ಯಾಯವಾಗಿದೆ.  ನನ್ನ‌ ಮೇಲೆ ದೌರ್ಜನ್ಯ ಆಗಿದೆ ಅಂತಾರೆ.ಅದೇಗೆ ಅವರು ವಿಕ್ಟಿಮ್ ಆಗ್ತಾರೆ.ಅಲ್ಲಿ ಏನೇನಾಗಿದೆ ಎಲ್ಲ ಸಾಕ್ಷಿ ನಾನು ಇಡ್ತೇನೆ. ಅವರೇ ನನ್ನನ್ನ ನಾಯಿ ಅಂತ ಕರೆದ್ರು.ಅವರೇ ನನ್ನ ಬೈಯ್ದವರು. ಅವರೇ ಪ್ರತಿಭಟನೆಯನ್ನ ಮಾಡ್ತಿದ್ದಾರೆ. ಅಶೋಕ್, ವಿಜಯೇಂದ್ರ, ಸಿ ಟಿ ರವಿ ಎಲ್ಲ ಬರ್ತಿದ್ದಾರೆ. ಕಲಬುರಗಿಗೆ ಇವತ್ತು ಎಲ್ಲ ಬರ್ತಿದ್ದಾರೆ ಎಂದರು.

ಅಧಿಕಾರದಲ್ಲಿ ಇದ್ದಾಗ ಒಂದು ದಿನ ಭೇಟಿ ಕೊಟ್ಟಿಲ್ಲ. ತೆಗೆಯಿರಿ ಲೀಸ್ಟ್ ಅನ್ನ . ಅವರು ಕಲಬುರಗಿಗೆ ನಾಲ್ಕು ಬಾರಿ ಬಂದಿದ್ದಾರೆ. ಬಂದವರು ಟೀಕೆ ಮಾಡಲಿ. ರೈತರ ಸಮಸ್ಯೆ ಬಗ್ಗೆ ಮಾತನಾಡಲಿ. ಕಲ್ಯಾಣ ಕರ್ನಾಟಕದ ಜನರ ಬಗ್ಗೆ ಮಾತನಾಡಲಿ. ಅದ್ಯಾವುದೂ ಅವರು ಮಾಡ್ತಿಲ್ಲ.ಬರೀ ನನ್ನನ್ಮ‌ಅವರು ಟಾರ್ಗೆಟ್ ಮಾಡ್ತಿದ್ದಾರೆ ಎಂದರು.

ಮೊದಲ ಬಾರಿ ಕಲಬುರಗಿ ಗೆ ಬಿಜೆಪಿ ಎಲ್ಲಾ ನಾಯಕರು ಬಂದಿದ್ರು. ಅದು ಅಕ್ಕಿ ಕಳ್ಳನ ಪರವಾಗಿ ಬಂದಿದ್ರು. ಮಕ್ಕಳ ಹಾಲಿನ ಪೌಡರ್ ಕಳ್ಳನ ಪರ ಬಂದಿದ್ರು. ಅವನ ಮೇಲೆ ದೌರ್ಜನ್ಯ ಮಾಡಿದ್ದಾರೆ ಅಂತ ಬಂದ್ರು. ಅವರೇ ಕಾರನ್ನ ಎಲ್ಲೋ ಬಿಟ್ಟು ಆಕ್ಸಿಡೆಂಟ್ ಆಗಿದೆ ಅಂತ ಬಂದಿದ್ರು.ಲೋಕಲ್ ಲೀಡರ್ ಶಿಪ್   ನಂಬಿ ‌ಬಂದ್ರು.ಅಕ್ಕಿ‌ ಕಳ್ಳನಿಗೆ ಟಿಕೆಟ್ ಬೇರೆ ಕೊಡ್ತಾರೆ.ಅವನ ಪರ ಪ್ರಚಾರ ಮಾಡೋಕೆ ಬಂದ್ರು.ಹಿಂದೆ ಹುಡುಗನ ಕೇಸ್ ನಲ್ಲೂ ಬಂದಿದ್ರು. ಕಿಡ್ನ್ಯಾಪ್ ಮಾಡಿಸಿದ್ದಾರೆ ಅಂತ ಬಂದಿದ್ರು.ಆ ಹುಡುಗ ಹುಡುಗಿ ಬರುತ್ತಲೇ ವಾಪಸ್ ಆದ್ರು ಎಂದು ಬಿಜೆಪಿ ರಾಜ್ಯ ನಾಯಕರ ವಿರುದ್ಧ ಪ್ರಿಯಾಂಕ್ ವಾಗ್ದಾಳಿ ನಡೆಸಿದ್ದಾರೆ.

ಸಿದ್ದು ಪಾಂಚಾಳ್ ವಿಚಾರದಲ್ಲೂ ಬಂದ್ರು.ಆಗ ವಿಜಯೇಂದ್ರಗೆ ಗೊತ್ತಾಯ್ತು ಅಂತ ಅನ್ನಿಸುತ್ತೆ.ಅದಕ್ಕೆ ವಿಜಯೇಂದ್ರ ಕಲಬುರಗಿಗೆ ಬರಲಿಲ್ಲ.ಉಳಿದವರು ಎಲ್ಲರೂ ಅಲ್ಲಿಗೆ ಓಡಿ ಬಂದ್ರು.ಪಾಂಚಾಳ್ ಕೇಸ್ ಏನಾಯ್ತು. ನಾಲ್ಕು ಬೃಹತ್ ಪ್ರತಿಭಟನೆ ಮಾಡಿದ್ರು ಅಲ್ಲಿ.ಆದರೆ ಏನಾಯ್ತು ಅಲ್ಲಿ.ನಿಮ್ಮ ಸ್ಥಳೀಯ ನಾಯಕರನ್ನ ನಂಬಿ ಬರಬೇಡಿ. ಎಫ್ ಐಆರ್ ನೋಡಿ ಟಿಕೆಟ್ ಕೊಡ್ತಾರೆ.ಚಿತ್ತಾಪುರದಲ್ಲಿ ಅಕ್ಕಿ ‌ಕಳ್ಳನಿಗೆ ಟಿಕೆಟ್ ಕೊಡ್ತಾರೆ.ಬೀದರ ಐಪಿಎಲ್ ಬೆಟ್ಟಿಂಗ್ ಕಳ್ಳನಿಗೆ ಟಿಕೆಟ್ ಕೊಡ್ತಾರೆ. ಮುನಿರತ್ನನಿಗೆ ಏನು ನೋಡಿ ಟಿಕೆಟ್ ಕೊಟ್ರಿ ಎಂದು ಪ್ರಶ್ನಿಸಿದ್ದಾರೆ.

ಸಿಟಿ ರವಿ ಕಲಬುರಗಿಗೆ ಪದೇ ಪದೇ ಬರ್ತಾರೆ.ರಜಾಕ್,ನಿಜಾಮ್ ಅಂತ ಹೇಳ್ತಾರೆ.ಪದೇ ಪದೇ ಯಾಕೆ ನಿಜಾಮ್, ರಝಾಕ್ ಬರ್ತಾರೆ.ನಿಮ್ಮ ಆರ್ ಎಸ್ ಎಸ್ ನಾಯಕರು ಪಾಕ್ ಗೆ ಕಳಿಸಿ. ಅಲ್ಲಿ ಸೆಟಲ್ ಆಗಿ ಅಖಂಡ ಭಾರತದ ಕನಸು ನನಸು ಮಾಡಿ. ಕರ್ನಾಟಕದಲ್ಲಿ ಕುಳಿತು ಮಾತನಾಡಬೇಡಿ.ಪಾಕಿಸ್ತಾನಕ್ಕೆ ಹೋಗಿ ಸೆಟಲ್ ಆಗಿ.ಮೇಲ್ಮನೆಯಲ್ಲಿ‌ ಹೆಬ್ಬಾಳ್ಕರ್‌ ಪ್ರಕರಣ ಆಯ್ತು.ಇವರು ವಾಯ್ಸ್ ಸ್ಯಾಂಪಲ್ ಯಾಕೆ ಕೊಡಲಿಲ್ಲ. ಯಾಕೆ ವಾಯ್ಸ್ ಸ್ಯಾಂಪಲ್‌ನೀವು ಕೊಡಲಿಲ್ಲ.ಸುಪ್ರೀಂಗೆ ಹೋಗಿ ಸ್ಟೇ ತರಬೇಕಾ? ಎಂದು ಸಿ.ಟಿ.ರವಿಗೆ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.