ಬೆಂಗಳೂರು; ಅಪರೇಷನ್ ಸಿಂದೂರ ಬಗ್ಗೆ ಮತನಾಡಿದ ನಾಯಕರನ್ನ ಪಾಕಿಸ್ತಾನಕ್ಕೆ ಕಳಿಸಬೇಕೆಂದು ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.
ಬಹಳ ಸ್ಪಷ್ಟವಾಗಿ ಮೊದಲ ದಿನದಿಂದಲೂ ಸರ್ಕಾರದ ಯಾವುದೇ ನಿರ್ಧಾರ ಇದ್ರು ಸರ್ಕಾರದ ಜೊತೆ ಇದ್ದೇವೆ ಎಂದಿದ್ದೇವೆ. ಕದನ ವಿರಾಮ ನಿಮ್ಮಿಂದ ಆಯ್ತಾ ಬಹಳ ಸಂತೋಷ. ಅದನ್ನ ಡೊನಾಲ್ಡ್ ಟ್ರಂಪ್ ಯಾಕೆ ಘೋಷಣೆ ಮಾಡ್ತಾರೆ. ನಿಮ್ಮ ಹೇಳಿಕೆಗೆ, ಅಮೇರಿಕಾದ ಅದ್ಯಕ್ಷರ ಹೇಳಿಕೆಗೆ ವ್ಯತ್ಯಾಸ ಯಾಕಿದೆ. ನಿನ್ನೆ ಏಳನೆ ಬಾರಿ ನನ್ನಿಂದ ಆಗ್ತಿದೆ ಎಂದಿದ್ದಾರೆ ಟ್ರಂಪ್ . ಟ್ರಂಪ್ ಅವರ ಪ್ರೆಸ್ ಸೆಕ್ರೆಟರಿ ಟ್ರಂಪ್ ಅವರಿಗೆ ಕದನ ವಿರಾಮ ಕ್ರೆಡಿಟ್ ಸಿಗ್ತಿಲ್ಲಾ ಅಫಿಶಿಯಲ್ ಆಗಿ ಹಾಕ್ತಾರೆ. ನಾವು ಕೇಳಿದ್ದು ನಮ್ಮ ವಿದೇಶಾಂಗ ನೀತಿಯ ತೀರ್ಮಾನ ತೆಗೆದುಕೊಳ್ತಿರೋದು ಯಾರು. ನರೇಂದ್ರ ಮೋದಿಯವರ ಅಥವಾ ಡೊನಾಲ್ಡ್ ಟ್ರಂಪ್ ಅವರಾ..?.ಅಪರೇಷನ್ ಸಿಂಧೂರ್ ಬಗ್ಗೆ ಮಾತಾಡಿದ್ದೀವಾ.ಸೈನ ಪಡೆಗೆ ಇವರು ಕೊಟ್ಟಿರುವ ದಾಖಲೆ ಬಗ್ಗೆ ಮಾತಾಡಿದ್ದೀವಾ.ಸೈನಿಕರಿಗೆ ಅಗೌರವ ಮಾಡ್ತಿರೋದು ಬಿಜೆಪಿ. ಸೋಫಿಯಾ ಕುರೇಶಿ ಬಗ್ಗೆ ಮದ್ಯಮ ಪ್ರದೇಶದ ಸಚಿವರು ಮಾತಾಡ್ತಾರೆ.ಯಾಕೆ ಅವರನ್ನ ಸಚಿವ ಸಂಪುಟದಿಂದ ವಜಾ ಮಾಡ್ತಿಲ್ಲ. ಇವರಿಂದ ನಾವು ಕಲಿಯಬೇಕಾ. ಅದರ ಬಗ್ಗೆ ಬಿಜೆಪಿ ಮಾತಾಡ್ತಾರಾ ನಾಚಿಕೆ ಆಗಬೇಕು ಎಂದಿದ್ದಾರೆ.
ವಿದೇಶಾಂಗ ನೀತಿ ಬಗ್ಗೆ ಅಮೇರಿಕಾದ ಅದ್ಯಕ್ಷರು ಮಾತಾಡ್ತಾರೆ. ೧೦೦ ದೇಶ ಸುತ್ತಿ ೨೦೦ ಜನರನ್ನ ಅಪ್ಪಿಕೊಂಡ್ರಲ್ಲಾ ಏನಾಯ್ತು. ಮೇಕ್ ಇನ್ ಇಂಡಿಯಾ ಮಾಡಬಾರದು , ಆಪಲ್ ಮಾಡಬಾರದು ಅಂತ ನೇರವಾಗಿ ಹೇಳ್ತಾರೆ. ತೆರಿಗೆಯನ್ನ ಶೂನ್ಯ ಮಾಡಿದ್ದಿರಾ ಅಂತಾರೆ ಡೊನಾಲ್ಡ್ ಟ್ರಂಪ್ ಅದಕ್ಕೆ ಯಾರಾದ್ರು ಉತ್ತರ ಕೊಟ್ಟಿದ್ದಿರಾ.?. ಇದಕ್ಕೆ ಉತ್ತರ ಕೊಡಬೇಕಾದವರು ಯಾರು.?. ಇದಕ್ಕೆ ವಿಜಯೇಂದ್ರ ಅಶೋಕ್ ಉತ್ತರ ಕೊಡ್ತಾರಾ. ಇದಕ್ಕೆ ಉತ್ತರ ಕೊಡಬೇಕಾದವರು ಪ್ರಧಾನಿ ಮೋದಿ, ಎಲ್ಲಿದ್ದಾರೆ ಅವರು ಎಂದು ಪ್ರಶ್ನಿಸಿದ್ದಾರೆ.
ಸರ್ವ ಪಕ್ಷ ನಿಯೋಗದಲ್ಲಿ ಎಐಸಿಸಿ ಕೊಟ್ಟ ಹೆಸರಲಿಲ್ಲ, ಶಶಿ ತರೂರ್ ಹೆಸರು ಮಾತ್ರ ಇದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅದನ್ನು ನಾವು ಬೆಂಬಲಿಸುತ್ತೇವೆ ಅಂತ ಹೇಳಿದ್ದೇವೆ. ಎರಡು ಬಾರಿ ಸರ್ವ ಪಕ್ಷ ಸಭೆ ಕರೆದು ಯಾಕೆ ಹೋಗಿಲ್ಲಾ?. ಪಾರ್ಲಿಮೆಂಟ್ ಯಾಕೆ ಕರೆಯುತ್ತಿಲ್ಲಾ?. ನಿನ್ನೆ ಪಾಕಿಸ್ತಾನದ ಪ್ರಧಾನಿ ಭಾರತದ ಮುಖ್ಯಸ್ಥರು ಕದನ ವಿರಾಮ ಕೇಳಿದ್ರು ಅಂತಾ ಹೇಳಿದ್ದಾರೆ. ಪಾರ್ಲಿಮೆಂಟಿನಲ್ಲಿ ನಾವು ಜಯಭೇರಿ ಗಳಿಸಿದ್ದೇವೆ ಅಂತಾ ಘೋಷಣೆ ಮಾಡ್ತಾರೆ. ಇದರ ಬಗ್ಗೆ ಪಾರ್ಲಿಮೆಂಟಿನಲ್ಲಿ ಹೇಳಲಿ ಯಾಕೆ ಹೆದರಿಕೆ..?. ಈಗಲು ನಮ್ಮ ಸೈನಿಕರು ಹಾಗೂ ಕೇಂದ್ರ ಸರ್ಕಾರಕ್ಕೆ ಬೆಂಬಲ ಕೊಡ್ತೀವಿ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು. ತಿರಂಗಾ ಯಾತ್ರೆ ಮಾಡ್ತಿದ್ದಾರೆ ಮೋದಿಯವರ ಸೈನಿಕರ ವೇಷದಲ್ಲಿ ಇದ್ದಾರೆ. ಯಾರಿ ಮಾಡ್ತಿರೋದು ಇದ್ರಲ್ಲಿ ರಾಜಕೀಯ. ಪಹಲ್ಗಮಾ ಗೆ ಹೋಗಿದ್ರಾ ಮೋದಿಯವರು. ಎಲ್ಲೆಲ್ಲಿ ಅವರಿಗೆ ಕೆಟ್ಡ ಹೆಸರು ಬರುತ್ತೆ ಅಲ್ಲಿಗೆ ಹೋಗೊದಿಲ್ಲ.ಮಣಿಪುರಕ್ಕೆ ಹೋಗಿದ್ರಾ, ಇಲ್ಲಿವರೆಗೆ ಸಂತಾಪನಾದ್ರು ಹೇಳಿದ್ರಾ. ಇಮೇಜ್ ಡ್ಯಾಮೇಜ್ ಆಗೊಕಡೆ ಅವರು ಹೊಗೊಲ್ಲ. ಆದಮ್ ಪುರ್ ಗೆ ಹೋಗಿದ್ದಾರೆ ಮೊನ್ನೆ. ಎನ್ ಡಿ ಎ ಚೀಫ್ ಮಿನಿಸ್ಟರ್ ಗಳಿಗೆ ಮಾತ್ರ ಬ್ರೀಫಿಂಗ್ ಅಂತಾರೆ. ಪಂಜಾಬ್, ಜಮ್ಮಕಾಶ್ಮೀರಾ, ಹಿಮಾಚಲ ಪ್ರದೇಶ ಸಿಎಂ, ಯಾವ ಪಕ್ಷದವರು. ಇವರಿಗೆ ರಾಷ್ಟ್ರೀಯ ಭದ್ರತೆ ಇವರೆ ಮುಖ್ಯ ಅಲ್ಲಾ ರಾಜಕೀಯವೆ ಮುಖ್ಯನಾ.?. ಇದಕ್ಕೆಲ್ಲಾ ಉತ್ತರ ಕೊಡಿಪಾರ್ಲಿಮೆಂಟ್ ಕರೆರಿ, ಪ್ರೆಸ್ ಮೀಟ್ ಮಾಡಲಿ. ಇದಕ್ಕೆ ಸಾಮರ್ಥ್ಯ ಇಲ್ಲ ಎಂದು ಲೇವಡಿ ಮಾಡಿದ್ದಾರೆ.