ಬೆಂಗಳೂರು; ಮೃತ ಕಂಟ್ರಾಕ್ಟರ್ ಸಚಿನ್ ಮನೆಗೆ ಬಿಜೆಪಿ ನಿಯೋಗ ತೆರಳುತ್ತಿರೋ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.
ಮೃತ ಕಂಟ್ರಾಕ್ಟರ್ ಸಚಿನ್ ಮನೆಗೆ ಬಿಜೆಪಿ ನಿಯೋಗ ತೆರಳುತ್ತಿರೋ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಬಿಜೆಪಿ ನಿಯೋಗ ಹೋಗಬೇಕಿರೋದು ಮುನಿರತ್ನ ಮನೆಗೆ ಎಂದಿದ್ದಾರೆ. ಆಗದವರಿಗೆ HIV ಚುಚ್ಚೋಕೆ ಹೋಗಿದ್ರಲ್ಲ ಅದಕ್ಕೆ ಸತ್ಯಶೋಧನ ಸಮಿತಿ ಹೋಗಬೇಕು. ಮೈಕಲ್ ಡಿ ಕುನ್ಹ ವರದಿ ಬಂದಿದೆ.ಬಿಜೆಪಿಯವರು ಹೇಳ್ತಿದ್ದಾರಲ್ಲ ಯಡಿಯೂರಪ್ಪ ವೇದಿಕೆ ಹತ್ತಬಾರದು ಅಂತ.ಮೊದಲು ಅದರ ಬಗ್ಗೆ ಸತ್ಯಶೋಧನೆ ಮಾಡಿ ಎಂದರು.
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅದನ್ನ ತೆಗೆಯುವ ಕೆಲಸ ಮಾಡಿ. ನನ್ನ ಮೇಲೆ ಆರೋಪ ಮಾಡಿ ಏನು ಸಾಬೀತು ಮಾಡಿದ್ರು ಹೇಳಿ.ಸತ್ಯ ಶೋಧನೆ ಆಗಬೇಕಿದೆ ಎಂದಿದೆ. ಅನ್ವರ್ ಮಾಣಿಪ್ಪಾಡಿ ಆರೋಪದ ಬಗ್ಗೆ ಮಾತನಾಡಿದ ಅವರು ಮನೆಗೆ ಹೋದಾಗ ಕಳ್ಳ ಅಂತ ಗನ್ ಮ್ಯಾನ್ ಕರೆದು ಓಡಿಸಿದ್ರಲ್ಲ ಅದನ್ನ ತಿಳಿಸಿ ಎಂದಿದ್ದಾರೆ.
ಸಚಿವ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು ಅನ್ನೋ ಒತ್ತಾಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಪ್ರಿಯಾಂಕ ಖರ್ಗೆ ಅವರು ಹೇಳಿದ ಕೂಡಲೇ ನಾನ್ಯಾಕೆ ರಾಜೀನಾಮೆ ಕೊಡಬೇಕು.?. ಸಾಕ್ಷಿ, ಪುರಾವೆ ಕೊಡಬೇಕಲ್ವಾ.?.ಸಚಿನ್ ಆರೋಪ ಆಪ್ತರು ಅನ್ನೋದು ಇರಬಹುದು. ಐದು ಜನ ಹೆಸರಿದೆ ತನಿಖೆ ನಡೆಸಲಿ.ಬಿಜೆಪಿಯವರು ಹೆಣ ಬಿದ್ದಾಗ ರಾಜಕೀಯ ಮಾಡೋದನ್ನ ಮೊದಲು ಬಿಡಬೇಕು ಎಂದಿದ್ದಾರೆ.
ಈಶ್ವರಪ್ಪ ಮಾದರಿಯಲ್ಲಿ ರಾಜೀನಾಮೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನನಗೆ ನೈತಿಕತೆ ಇರೋದಕ್ಕೆ ನಿಮ್ಮ ಮುಂದೆ ಕುಳಿತಿದ್ದೇನೆ. ಪ್ರಕರಣ ತನಿಖೆ ಆಗಲಿ ಅಂತ ಹೇಳಿದ್ದೇನೆ. ಸತ್ಯಶೋಧನೆ ಅಂತ ಎಲ್ಲೆಡೆ ಓಡಾಡ್ತಿದ್ದಾರೆ. ಬಿಜೆಪಿಯವರು ಇಂಡಿಪೆಂಡೆಂಟ್ ತನಿಖೆ ಸಂಸ್ಥೆ ಮಾಡ್ತಿದ್ದಾರಾ.?. ಇಲ್ಲಿಯವರೆಗೂ ಪ್ರೂವ್ ಮಾಡಿದ್ದಾರಾ.?. ಬಿಜೆಪಿಯವರಿಗೆ ಸಲಹೆ ಕೊಡ್ತೀನಿ. ನಿಮ್ಮ ಕಲ್ಬುರ್ಗಿ ನಾಯಕರ ಬಗ್ಗೆ ಮೊದಲು ತಿಳಿದುಕೊಂಡು ಬನ್ನಿ. ಇಲ್ಲದಿದ್ರೆ ನಿಮ್ಮ ಕುರ್ಚಿಗೆ ಗೌರವ ಅಲ್ಲ. ನೀವು ರಾಜ್ಯಾಧ್ಯಕ್ಷ ಇದ್ದೀರಿ, ಇಲ್ಲದಿದ್ರೆ ನಿಮ್ಮ ಬಗ್ಗೆ ಜನ ನಿಮಗೆ ಗೌರವಿಸೋದಿಲ್ಲ. ನಾವು ಒಂದು ರೂಪಾಯಿ ಭ್ರಷ್ಟಾಚಾರ ನನ್ನ ಅವಧಿಯಲ್ಲಿ ಮಾಡಿಲ್ಲ. ಮೂರು ಬಾರಿ ನಾನು ಸಚಿವ ಆಗಿದ್ದೇನೆ. ನಾನು ನಿಮ್ಮ RSS, ನಿಮ್ಮ ಸಿದ್ದಾಂತದ ವಿರೋಧ ಇದ್ದೇವೆ. ಹಾಗಾಗಿ ನನ್ನನ್ನ ಟಾರ್ಗೆಟ್ ಮಾಡಿದ್ದೀರಿ. ನೀವು IT, ED, ಅಮಿತ್ ಶಾ ಅವರನ್ನ ಬಿಟ್ರೂ ನಾನು ಹೆದರೋದಿಲ್ಲ.ನಮ್ಮ ತಂದೆ ಕೂಡ ಅದೇ ರೀತಿಯಲ್ಲೇ ಬಂದವರು ಎಂದು ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಬಿಜೆಪಿ ನಾಯಕರ ಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರು ಸ್ಕೆಚ್ ಹಾಕಿದ್ರು ಅಂತ ವಿಜಯೇಂದ್ರ ಆರೋಪ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ವಿಜಯೇಂದ್ರ ಅವರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅವರು ಬಿಜೆಪಿ ರಾಜ್ಯಾಧ್ಯಕ್ಷರು.ಅವರು ಇಲ್ಲಸಲ್ಲದ್ದನ್ನ ಹೇಳಬಾರದು.ಹಿಂದೆ ಕಲ್ಬುರ್ಗಿ ಜಿಲ್ಲೆಗೆ ಬಂದು ನನ್ನ ರಾಜೀನಾಮೆ ಕೇಳಿದ್ರು.ಹಿಂದೆ ಮಣಿಕಂಠ ರಾಥೋಡ್ ವಿಚಾರದಲ್ಲಿ ರಾಜೀನಾಮೆ ಕೇಳಿದ್ರು. ಬಳಿಕ ಏನಾಯ್ತು, ಯಾಕೆ ಮಾತಾಡಲಿಲ್ಲ.?. ರಿಪಬ್ಲಿಕನ್ ಕಲ್ಬುರ್ಗಿ ಅಂತ ಆರೋಪ ಮಾಡಿದ್ರು. ಅಕ್ಕಿ ಕಳ್ಳತನ ಮಾಡೋದು ಸೇರಿದಂತೆ 20-30 ಕೇಸ್ ಹಾಕಿಸಿಕೊಂಡವರು ಯಾರು.?. ಜೇವರ್ಗಿಯಲ್ಲಿ ಮರಳು ಮಾಫಿಯಾ ಮಾಡಿ ಕೇಸ್ ಯಾರು ಹಾಕಿಸಿಕೊಂಡ್ರು.?.ಬೆಂಗಳೂರಿನಲ್ಲಿ ಕುಳಿತು ಕಲ್ಬುರ್ಗಿ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಅವರ ರೀತಿ ಸುಳ್ಳು ಹೇಳಿಲ್ಲ. FSL ರಿಪೋರ್ಟ್ ಬರಲಿ ಅಂತ ಹೇಳ್ತಿದ್ದೀನಲ್ಲ. ನೇರವಾಗಿ ನನ್ನ ಪ್ರಶ್ನೆಗೆ ಉತ್ತರ ಕೊಡಲಿ. ಆಪ್ತ ಅಂತ ಹೇಳ್ತಿದ್ದೀರಿ, ಆಗಿರಬಹುದು ಇಲ್ಲ ಅಂತಲ್ಲ. ನಿಮ್ಮ ಪೂಜ್ಯ ತಂದೆಯವರದ್ದು ಪ್ರೂವ್ ಆಗಿದೆ, ನೀವ್ಯಾಕೆ ರಾಜೀನಾಮೆ ಕೊಡಬಾರದು.?.ಮುನಿರತ್ನ ಅವರ ಬಗ್ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ನೀವು ಏನು ಹೇಳ್ತೀರಿ.ನಿಮ್ಮವರ ರಾಜೀನಾಮೆ ಕೇಳ್ತೀರಾ.?. .ನಿಮ್ಮ ತಂದೆಯವರದ್ದು ಮೈಕಲ್ ಡಿ ಕುನ್ಹ ಅವರ ವರದಿ ಇದೆ.ಶ್ರೀರಾಮುಲು ಅವರದ್ದು ಸಾಬೀತಾಗಿದೆ. ನಿಮ್ಮತಂದೆ ಮತ್ತು ಶ್ರೀರಾಮುಲು ರಾಜೀನಾಮೆ ಪಡೀತೀರಾ.?. ಸುಮ್ಮನೆ ಆರೋಪ ಮಾಡೋದು ಸರಿಯಲ್ಲ ಎಂದಿದ್ದಾರೆ.