ಮನೆ Latest News ಕೂಡಲೇ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು: ಬೆಂಗಳೂರಿನಲ್ಲಿ ಸಂಸದ ಗೋವಿಂದ ಕಾರಜೋಳ ಆಗ್ರಹ

ಕೂಡಲೇ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು: ಬೆಂಗಳೂರಿನಲ್ಲಿ ಸಂಸದ ಗೋವಿಂದ ಕಾರಜೋಳ ಆಗ್ರಹ

0

ಬೆಂಗಳೂರು: ಕೂಡಲೇ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು ಎಂದು ಬೆಂಗಳೂರಿನಲ್ಲಿ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ವಿಧಾನ ಪರಿಷತ್ ನಲ್ಲಿ ಅಮಿತ್ ಷಾ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅಸಂಸದೀಯ ಪದ ಬಳಕೆ ವಿಚಾರದ ಬಗ್ಗೆ ಪ್ರಸ್ತಾಪಿಸಿ ಕೂಡಲೇ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು.ರಾಜ್ಯ ಸರ್ಕಾರ ಅಂಗೀಕರಿಸಿರುವ ದ್ವೇಷ ಭಾಷಣದ ಪ್ರತಿಬಂಧಕ ವಿಧೇಯಕದ ಪ್ರಕಾರ ಮೊದಲ ಅಪರಾಧಿ ಪ್ರಿಯಾಂಕ್ ಖರ್ಗೆ ಇದರ ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ಅವರ ತಂದೆಯವರನ್ನು ನೋಡಿ ಕಲಿಯಬೇಕಿತ್ತುಸಣ್ಣ ಬಾಯಿಯಿಂದ ದೊಡ್ಡ ಮಾತು ಶೋಭೆ ತರುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೆಸರು ಇಲ್ಲದಿದ್ದರೆ ಪ್ರಿಯಾಂಕ್ ಅವರನ್ನು ಯಾವೂರ ದಾಸಯ್ಯ ಅಂತಾ ಕೇಳುವವರು ಇರುತ್ತಿರಲಿಲ್ಲ. ಅವರ ತಂದೆಯ ಹೆಸರು ಇಲ್ಲದಿದ್ದರೆ ಅವರಿಗೆ ಗೌರವ ಸಿಗುತ್ತಿರಲಿಲ್ಲ.ಅವರ ತಂದೆಯ ಹೆಜ್ಜೆಯೊಳಗೆ ಪ್ರಿಯಾಂಕ್ ಹೆಜ್ಜೆ ಹಾಕಬೇಕು. ಕೂಡಲೇ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಈ ವೇಳೆ ಮಾತನಾಡಿ ಪ್ರಿಯಾಂಕ್ ಖರ್ಗೆ ನಾಲಿಗೆ ಹರಿಬಿಡುವುದನ್ನು ಕಡಿಮೆ ಮಾಡಬೇಕು. ಪ್ರಿಯಾಂಕ್ ಹೆಸರಿನ ಪಕ್ಕದಲ್ಲಿ ಖರ್ಗೆ ಎಂಬುದು ಇಲ್ಲದಿದ್ದರೆ ಮಂಡಲ ಪಂಚಾಯತ್ ಸದಸ್ಯ ಕೂಡಾ ಆಗುತ್ತಿರಲಿಲ್ಲ. ಕಾಂಗ್ರೆಸ್ ಎಂಬುದೇ ವಂಶಪಾರಂಪರ್ಯದ ಸಂತತಿ. ಕಾಂಗ್ರೆಸ್ ನೀತಿಗಳು ದೇಶವನ್ನು ಹಾಳು ಮಾಡುತ್ತಿವೆ.  ಪ್ರಿಯಾಂಕ್ ಖರ್ಗೆ ಸದನದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಪರಾರಿಯಾಗುತ್ತಾರೆ. ಯಾಕೆಂದರೆ ಅವರ ಸಾಧನೆ ಶೂನ್ಯ. ರೆಯವರ ಉತ್ತರ ಸಂದರ್ಭದಲ್ಲಿ ಬಂದು ಕುಳಿತು ತೀಟೆ ಮಾಡುತ್ತಾರೆ. ದೇಶದ ಗೃಹ ಸಚಿವರನ್ನು ಅಸಂಸದೀಯ ಪದ ಬಳಸಿದರೆ ಸುಮ್ಮನಿರಬೇಕಾ? ಸದನದಲ್ಲೂ ಇದೇ ಮಾತಾಡುತ್ತಾರೆ ಅಂದರೆ ಏನರ್ಥ?. ನೀವೇ ತಂದ ವಿದೇಯಕದ ವಿರುದ್ಧವಾಗಿ ದ್ವೇಷ ಭಾಷಣ ಮಾಡಿದ್ದೀರಿ. ಸಿಎಂ, ಗೃಹ ಸಚಿವರು ಸುಮ್ಮನೆ ಇದ್ದರು. ಕೆಂದರೆ ಎಐಸಿಸಿ ಅಧ್ಯಕ್ಷರ ಮಗ ಅಲ್ವಾ, ಅವರಿಗೆ ಧೈರ್ಯ ಇಲ್ಲ. ಅಧ್ಯಕ್ಷರ ಮಗನನ್ನು ಮುಟ್ಟುವ ಧೈರ್ಯ ಯಾರಿಗೆ ಇದೆ ಕಾಂಗ್ರೆಸ್ ನಲ್ಲಿ?. ಇಷ್ಟು ದುರಂಹಕಾರದಿಂದ ಮೆರೆಯುತ್ತಿದ್ದರೂ ಖರ್ಗೆಯವರಿಗೆ ಮಗನಿಗೆ ಬುದ್ದಿ ಹೇಳಲು ಆಗಲ್ವಾ?  ಬೇರೆಯವರನ್ನು ಕರೆದು ಮಗನಿಗೆ ಬುದ್ದಿ ಹೇಳಿ ಅಂತಾರಂತೆ. ಯಾಕೆಂದರೆ ಮಗ ಅವರ ಮಾತನ್ನು ಕೇಳುವುದಿಲ್ಲ. ಕರ್ನಾಟಕದ ಗಡಿ ದಾಟಿ ಹೋದ ಮೇಲೆ ಮಲ್ಲಿಕಾರ್ಜುನ ಖರ್ಗೆಯವರೂ ಬದಲಾಗಿದ್ದಾರೆ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಗೆ ವಿಷ ಸರ್ಪ ಎಂದ ಮೇಲೆ ಇನ್ನು ಮಗ ಏನು ಹೇಳುತ್ತಾರೆ. ಹಳ್ಳಿ ಕಡೆ ತಾಯಿಯಂತೆ ಮಗಳು, ನೂಲಿನಂತೆ ಸೀರೆ ಎನ್ನುತ್ತಾರೆ. ಇಲ್ಲಿ ತಂದೆಯಂತೆ ಮಗ ಎನ್ನಬೇಕು. ಅಲ್ಪ ವಿದ್ಯೆ ಮಹಾಗರ್ವಿ ಎನ್ನುವ ರೀತಿಯೇ ಇದು?. ಕೂಡಲೇ ಪ್ರಿಯಾಂಕ್ ‌ಖರ್ಗೆ ಅಮಿತ್ ಷಾ ಕ್ಷಮೆ ಕೇಳಬೇಕು. ಎಷ್ಟು ಕೆಟ್ಟ ಪರಂಪರೆ ಇದು?.  ತಂದೆಯ ಹೆಸರಿನಲ್ಲಿ ಬದುಕುತ್ತಿರುವ ಪ್ರಿಯಾಂಕ್ ಖರ್ಗೆ ಜನಾನುರೋಗಿ. ನಾವು ಯಾವಾಗಲೂ ಅನ್ನ ಉಂಡ ಮಾತಾಡಬೇಕು. ಮಲ್ಲಿಕಾರ್ಜುನ ಖರ್ಗೆಯವರೇ ಮಗನನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡಿ, ಬುದ್ದಿ ಹೇಳಿ. ಮಗನನ್ನು ಯಾರಾದರೂ ಬೈದರೆ ಅದರ ಪಾಲು ನಿಮಗೂ ಬರುತ್ತದೆ. ಮಗ ತಂದೆಯ ಹೆಸರು ಹಾಳು ಮಾಡುವ ಕೆಲಸ ಮಾಡಬಾರದು. ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವು ಪ್ರಿಯಾಂಕ್ ಖರ್ಗೆಗೆ ತೃಣದಷ್ಟೂ ಇಲ್ಲ. ಅಪ್ಪನ ಹೆಸರಿನಲ್ಲಿ ಹೆಲಿಕಾಫ್ಟರ್ ನಲ್ಲಿ ಬಂದಿರುವುದಕ್ಕೆ ದರ್ಪ ಎಂದು ಹೇಳಿದ್ದಾರೆ.