ಬೆಂಗಳೂರು; ಪ್ರತಿಯೊಬ್ಬರು ಮಹಿಳಾ ನಾಯಕಿರನ್ನ ತಯಾರು ಮಾಡಿ ಎಂದು ಕಾಂಗ್ರೆಸ್ ಮಹಿಳಾ ನಾಯಕರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಕಿವಿ ಮಾತು ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನಗೆ ಏನಾದ್ರು ಭವಿಷ್ಯ ಕಾಣಬೇಕಾದ್ರೆ ಅದು ಮಹಿಳೆಯರು,ಯುವಕರಿಂದ ಸಾಧ್ಯ ಎಂದು ನಾನು ಅಧ್ಯಕ್ಷನಾದಾಗ ಹೇಳಿದ್ದೆ. ಆ ಹಿನ್ನಲೆ ನಾವು ಗ್ಯಾರಂಟಿಗಳನ್ನ ಕೊಡುವಾಗ ಮಹಿಳೆಯರು,ಯುವಕರನ್ನ ಗಮನದಲ್ಲಿಟ್ಟುಕೊಂಡು ಕೊಟ್ಟಿದ್ದೇವೆ.ಮಹಿಳೆಯರಿಗೆ ಪ್ರೋತ್ಸಾಹ ಕೊಡಲಿಕ್ಕೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ.ಮೊದಲಿಗೆ ಗ್ಯಾರಂಟಿಗಳು ಜಾರಿ ಗೆ ಬಂದ್ರೆ ಆರ್ಥಿಕವಾಗಿ ದೀವಾಳಿ ಆಗುತ್ತೆ ಅಂದ್ರು .ಅದರೆ ನಮ್ಮನ್ನ ನೋಡಿ ಬೇರೆ ಬೇರೆ ರಾಜ್ಯಗಳಲ್ಲಿ ವಿರೋಧ ಪಕ್ಷದವರು ಗ್ಯಾರಂಟಿ ತಂದಿದ್ದಾರೆ. ಮಹಿಳೆ ಸಮಾಜದ ಕಣ್ಣು. ನನ್ನ ಕಾರ್ಯಕ್ರಮಕ್ಕೆ ಆಹ್ವಾನ ಮಾಡುವಾಗಲೂ ಪತ್ನಿ ಹೆಸರು ಹೇಳ್ತಾರೆ .ಈ ಹಿನ್ನೆಲೆ ಮಹಿಳೆಯರು ಎಲ್ಲದರಲ್ಲೂ ಮುಖ್ಯ. ಪ್ರತಿಯೊಬ್ಬರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಗ್ಯಾರಂಟಿಗಳನ್ನ ತಿಳಿಸಿ . ಕಾಂಗ್ರೆಸ್ ಗೆ ಮಹಿಳಾ ಸದಸ್ಯತ್ವ ಹೆಚ್ಚಿಗೆ ಮಾಡಬೇಕು .ಎಲ್ಲರೂ ಪಕ್ಷ ಸಂಘಟನೆ ಗೆ ಮುಂದು ಬನ್ನಿ ಎಂದಿದ್ದಾರೆ
ನಾ ಬಂದ್ರೆ ಅವರು ಏನಾಂತರೆ,ಅಥವಾ ಅವರು ಮುಂದೆ ಹೋಗ್ತಾರೆ.ಅದು ಇದು ಅಂತಾ ಅನ್ಕೊಂಡು ಹಿಂದೆ ಸರಿ ಬೇಡಿ. ಹೀರೋ ಇದ್ದವರು ಜೀರೋ ಆಗ್ತಾರೆ,ಜೀರೋ ಇದ್ದವರು ಹೀರೋ ಆಗ್ತಾರೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ ಹೆಣ್ಣು ಮಕ್ಕಳು ತ್ಯಾಗ ಮಾಡುವುದಕ್ಕೂ ಸಿದ್ದರಿರಬೇಕು. ನಿಮ್ಮ ನಿಮ್ಮ ವಿಚಾರ ಏನೋ ಇದ್ರು ಸೈಡಿಗಿಟ್ಟು . ಹೆಣ್ಣುಮಕ್ಕಳ ಅಭಿವೃದ್ಧಿ ಗೆ ಯೋಚನೆ ಮಾಡಿ.ಸೌಮ್ಯ ರೆಡ್ಡಿ ಅಧ್ಯಕ್ಷರಾಗಬೇಕು ಎಂದು ಏನು ಇರಲಿಲ್ಲ. ನಾನೇ ಹೇಳಿ ಅಧ್ಯಕ್ಷೆ ಮಾಡಿದ್ದೇನೆ. ಬೇಕಲ್ಲಾ ಯಾರಾದ್ರು ಬೆಂಗಳೂರಲ್ಲಿ .ಎಲ್ಲರೂ ಎಲ್ಲರಂತೆ ಆಗೋಕೆ ಆಗುವುದಿಲ್ಲ . ಪ್ರತಿಯೊಬ್ಬರು ಮಹಿಳಾ ನಾಯಕಿರನ್ನ ತಯಾರು ಮಾಡಿ. ಅಸೆಂಬ್ಲಿಯಲ್ಲಿ ಬಿಜೆಪಿ ಅವರು ದೊಡ್ಡ ಗಲಾಟೆ ಮಾಡಿದ್ರು ಗ್ಯಾರಂಟಿ ಅನುಷ್ಠಾನ ಮಾಡಿದ್ದಕ್ಕೆ .ನಾವು ಹೇಳಿದ್ವಿ ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಅದಕ್ಕೆ ನಾವು ಮಾಡಿದ್ದೇವೆ ಅಂತಾ ನಾವು ಹೇಳಿದ್ದೇವೆ ಎಂದಿದ್ದಾರೆ.
ಮೇ 20 ರಂದು ಸರ್ಕಾರ ಬಂದು ಎರಡು ವರ್ಷ ಆಗುತ್ತದೆ. ಎರಡು ವರ್ಷದ ಸಂಭ್ರಮ ಅದ್ದೂರಿಯಾಗಬೇಕು . ಪ್ರತಿ ಊರಿನ ಮನೆ ಮುಂದೆ ರಂಗೋಲಿ ಹಾಕಬೇಕು .ರಂಗೋಲಿ ಸ್ಫರ್ಧೆ ಮಾಡಬೇಕು .ಅವರಿಗೆ ಬಹುಮಾನ ಕೊಡಬೇಕು .ಪ್ರತಿಯೊಬ್ಬರು ನೀವು ಇದನ್ನ ಮಾಡಲೇಬೇಕು.ಯಾರು ಮೆಂಬರ್ ಶಿಪ್ ಜಾಸ್ತಿ ಮಾಡ್ತಿರೋ,ಅವರಿಗೆ ನಾನು ತಾಲೂಕ ಮಟ್ಟದಲ್ಲಾದ್ರು ಡೈರೆಕ್ಟರ್ ಮಾಡುತ್ತೇನೆ .ಇದು ನನ್ನ ಮಾತು ಈ ಡಿಕೆ ಮಾತು ಕೊಟ್ರೆ ತಪ್ಪುವುದಿಲ್ಲ ಎಂದಿದ್ದಾರೆ.
ಬಿಎಂಪಿ ಚುನಾವಣೆಗೆ ರೆಡಿ ಇದ್ದೇವೆ.ಎಷ್ಟು ದಿನ ಸುಮ್ಮನೆ ಅಂತಾ ಸುಮ್ಮನೆ ಇರೋಕೆ ಆಗುತ್ತೆ.ಎಲ್ಲ ಪಕ್ಷದವರನ್ನ ಕರೆದು ಮಾತನಾಡುವೆ.ಮುಸ್ಲಿಂ ಮೀಸಲಾತಿ ೪% ಅಂತಾ ಎಲ್ಲಿದೆ? ಅಲ್ಪಸಂಖ್ಯಾತರಿಗೆ ಮೀಸಲಾತಿ ಅದು, ಅಲ್ಪಸಂಖ್ಯಾತರು ಅಂದ್ರೆ ಎಲ್ಲರೂ ಬರುತಾರೆ.ಅವರ ಹಕ್ಕನ್ನ ಅವರಿಗೆ ಕೊಡ್ತಾ ಇದೇವಿ.ಬಿಜೆಪಿಯವರು ವಿರೋಧ ಮಾಡ್ತಾ ಇರೋದಕ್ಕೆ ಡಿಕೆಶಿ ಕಿಡಿಕಾರಿದ್ದಾರೆ.ಬಿಜೆಪಿಯವರು ನಮ್ಮನ್ನ ನೆನಪಿಸಿಕೊಳ್ಳುತ್ತಾರೆ. ಕ್ಷೇತ್ರ ಪುನರವಿಂಗಡೆನೆ ಕುರಿತು ತಮಿಳುನಾಡಿನಲ್ಲಿ ಸಭೆಗೆ ಸಿಎಂ ಅವರು ನನಗೆ ಹೋಗಲು ನಿರ್ದೇಶನ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.











