ಮನೆ Latest News ಸಿ ಪಿ ಯೋಗೇಶ್ವರ್ ಪಕ್ಷ ತೊರೆದಿರೋದಕ್ಕೆ ಕಾರ್ಯಕರ್ತರಲ್ಲಿ ಬೇಸರವಿದೆ;ಬಿಜೆಪಿ ಕಚೇರಿಯಲ್ಲಿ ಪ್ರೀತಂ ಗೌಡ ಹೇಳಿಕೆ

ಸಿ ಪಿ ಯೋಗೇಶ್ವರ್ ಪಕ್ಷ ತೊರೆದಿರೋದಕ್ಕೆ ಕಾರ್ಯಕರ್ತರಲ್ಲಿ ಬೇಸರವಿದೆ;ಬಿಜೆಪಿ ಕಚೇರಿಯಲ್ಲಿ ಪ್ರೀತಂ ಗೌಡ ಹೇಳಿಕೆ

0

ಬೆಂಗಳೂರು; ಮಾಜಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಶಾಸಕ ಪ್ರೀತಂ ಗೌಡ ಸಿ ಪಿ ಯೋಗೇಶ್ವರ್ ಬಿಜೆಪಿ ಹಿರಿಯರು ಇದ್ದರು.ಅವರದ್ದೇ ಆದ ಶಕ್ತಿ ಇತ್ತು. ಅವರು ಹೋಗಿದ್ದು ನೋವು ತಂದಿದೆ. ಹಳೇ ಮೈಸೂರು ಭಾಗದಲ್ಕಿ ಪಕ್ಷದ ಕಟ್ಟಬೇಕು ಅಂತ ಹೋಗುತ್ತಿದ್ದರು. ಆದ್ರೆ ಅನಿವಾರ್ಯ ಕಾರಣದಿಂದ ಪಕ್ಷ ತೊರೆದಿದ್ದಾರೆ.ಕಾರ್ಯಕರ್ತರಲ್ಲಿ ಬೇಸರ ಇದೆ ಎಂದಿದ್ದಾರೆ.

[ಚನ್ನಪಟ್ಟಣ ದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಬೇಕು ಅಂತ‌ ಇದ್ದರು. ಆದ್ರೆ ಕುಮಾರಸ್ವಾಮಿ ಎಂ ಪಿ ಆದ್ನೇಲೆ ಶಾಸಕ ಆಗಬೇಕು ಅಂತ ಇತ್ತು. ಆದ್ರೆ ಬಿಜೆಪಿ ಯಿಂದ ಸ್ಪರ್ಧೆ ಮಾಡಲು ಅವಕಾಶ ನೀಡಲಿಲ್ಲ.ಅದಕ್ಕೆ ಅವರು ಬೇರೆ ಪಕ್ಷಕ್ಕೆ ಹೋದರು. ಎನ್ ಡಿಎ ಯಿಂದ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಅವರೇ ಗೆಲ್ಲುತ್ತಿದ್ದರು. ಗೆಲ್ಲೋ ಅಭ್ಯರ್ಥಿ ಯ ಬಗ್ಗೆ ಯಾಕೆ ಡಿಶೀಷನ್ ಮಾಡಿಲ್ಲ ಅಂತ ಗೊತ್ತಾಗ್ತಿಲ್ಲ. ಅವರು ಬಿಜೆಪಿಯಲ್ಲಿ ಇದ್ದಿದ್ರೆ ಹಳೇ ಮೈಸೂರು ಭಾಗದಲ್ಲಿ ಸಹಾಯ ಆಗ್ತಿತ್ತು.ಆದ್ರೆ ಅದು ಆಗಿಲ್ಲ ಅನ್ನೋದು ಬೇಸರ ತಂದಿದೆ ಎಂದು ನೇರವಾಗಿಯೇ ಸಿ ಪಿ ಯೋಗೇಶ್ವರ ಪರ ಬ್ಯಾಟ್ ಬೀಸಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಮಾಜಿ ಎಂಎಲ್ಸಿ ಸಿ ಪಿ ಯೋಗೇಶ್ವರ್

ಬೆಂಗಳೂರು: ನಿನ್ನೆ ಮೊನ್ನೆ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ ಪಿ ಯೋಗೇಶ್ವರ್  ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಆದರೆ ನಿನ್ನೆ ಬೆಳಗ್ಗೆ ಅದಕ್ಕಿಂತ ದೊಡ್ಡ ಶಾಕ್ ಕೊಟ್ಟಿದ್ದಾರೆ. ನಿನ್ನೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ.ಅದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೇ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಸೇರಿದ್ರು. ಇನ್ನು ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮಾತನಾಡಿ ಅವರು ನಾನು ಕೆಪಿಸಿಸಿ ಸದಸ್ಯತ್ವ ಪಡೆದಿದ್ದೇನೆ.ನಾನು ೩೨ ವರ್ಷಗಳಿಂದ ಕಾರ್ಯಕರ್ತನಾಗೆ ಕೆಲಸ ಮಾಡಿದ್ದೇನೆ. ಮಧ್ಯ ಕೆಲವು ಕಾರಣಾಂತರದಿಂದ ಪಕ್ಷ ಬಿಟ್ಟಿದ್ದೆ. ಜೆಡಿಎಸ್ ಪ್ರಾದೇಶಿಕ ಪಕ್ಷ . ಎನ್ ಡಿ ಎ ಜೊತೆ ಅವರು ಅವರ ವಿಚಾರದಲ್ಲಿ ಹೋರಾಟ ಮಾಡ್ತಾರೆ.ನಾವು ನಮ್ಮ ವಿಚಾರದಲ್ಲಿ ಹೋರಾಟ ಮಾಡ್ತೀವಿ. ಯಾರೆ ಅಭ್ಯರ್ಥಿಯಾದ್ರು ಕೆಲಸ ಮಾಡ್ತೀವಿ. ನಾನು ಬಿಜೆಪಿಯಿಂದ ಟಿಕೆಟ್ ಕೇಳಿದ್ದು. ಬೇರೆ ಬೆರೆ ಕಾರಣಗಳಿಂದ ಸಿಗಲಿಲ್ಲ.ಜನ್ಮ ಕೊಟ್ಟಂತಹ ತಾಲ್ಲೂಕು. ಸ್ಪರ್ಧೆ ಮಾಡಬೇಕಂತ ಪ್ರಯತ್ನ ಪಟ್ಟೆ. ತಾಂತ್ರಿಕ ಕಾರಣದಿಂದ ಟಿಕೆಟ್ ಸಿಗಲಿಲ್ಲ.ಒಳ್ಳೆ ಕೆಲಸ ಮಾಡಬೇಕೆಂದು ಕಾಂಗ್ರೆಸ್ ಬಂದೆ.ಯಾವುದೇ ಷರತ್ತು ಹಾಕಿಲ್ಲ.ನಾನು ಜೆಡಿಎಸ್ ೩೦ ವರ್ಷದಿಂದ ಎದುರಾಳಿಯಾಗಿದ್ದು. ಅದರ ಪಕ್ಷದಿಂದ ನಿಲ್ಲಲು ಮನಸಾಕ್ಷಿ ಒಪ್ಪಲಿಲ್ಲ.ಬಿಜೆಪಿಯಿಂದ ಅವಕಾಶ ಕೇಳಿದ್ದೆ ಕೊಡಲಿಲ್ಲ.ಯಾರನ್ನೂ ನಾನು ವೈಯಕ್ತಿಕವಾಗಿ ದೂರಲ್ಲ. ತಾಂತ್ರಿಕ ಕಾರಣದಿಂದ ಟಿಕೆಟ್ ಸಿಗಲಿಲ್ಲ ಎಂದಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ಅವರು : ಆಯ್ಕೆ ನನ್ನದು ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕು ಅಂತಿದ್ದೆ.ಕಾಂಗ್ರೆಸ್ ನಲ್ಲಿ ಅವಕಾಶ ಸಿಕ್ತು. ವಿಜಯೇಂದ್ರ ಅವರು ನನ್ನ ಪರ ಮಾತಾಡಿದ್ರು. ಜಂಪಿಂಗ್ ಸ್ಟಾರ್ ಅಂತ ನನಗೆ ನಾನೆ ಹೇಳಿಕೊಂಡಿದ್ದೇನೆ. ನನಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದರೆ ಇಲ್ಲಿಗೆ ಯಾಕೆ ಬರ್ತಿದ್ದೆ.ರಾಜಕೀಯ ಸ್ನೇಹಿತರು ಮಾಡಿದ ಟೀಕೆಗೆ ಉತ್ತರ ಕೊಡೊಲ್ಲ.ಗೆದ್ದು ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.