ಬೆಂಗಳೂರು; ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುತ್ತಿರೋದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಪಿಎಲ್ ಐ ಅರ್ಜಿ ಹೈಕೋರ್ಟ್ ನಲ್ಲಿ ವಜಾಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ ಕೆ.ಶಿವಕುಮಾರ್ ಅದು ಅವರ ಇಂಡಿವಿಜುವಲ್ ಅಭಿಪ್ರಾಯ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ. ಬ್ಯಾಲೆಟ್ ನಲ್ಲಿ ಬಂದಿರೋ ಸರ್ಕಾರ ಇದು. ಇವತ್ತು ನಾವು ಬ್ಯಾಲೆಟ್ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ನಮ್ಮ ಹಕ್ಕು ನಮ್ಮ ಮತ ಅಂತ ಹೇಳುತ್ತಿದ್ದೇವೆ. ಅಂತ ಮತ ನಿರ್ಧಾರ ಮಾಡಿರುವ ಸರ್ಕಾರ. ಸಂವಿಧಾನದ ಬದ್ದವಾಗಿರುವ ನಿರ್ಧಾರಗಳನ್ನ ನಾವು ಮಾಡಿಕೊಂಡಿದ್ದೇವೆ.ಸಂವಿಧಾನದವನ್ನ ಸರಿಯಾಗಿ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರೆಲ್ಲ ಓದಲಿ. ಏನೇನು ನಿಮ್ಮ ಹಕ್ಕಿದೆ ಅನ್ನೋದು ಅರ್ಥವಾಗುತ್ತೆ. ಸಂವಿಧಾನದಿಂದಲೇ ನ್ಯಾಯಲಯ ಕೂಡ ನಡೆಯೋದು. ನಾವು ನಡೆಯೋದು ಸಂವಿಧಾನದ ಮೇಲೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಪೀಠಿಕೆಯಲ್ಲಿ ನಾವು ವೋತ್ ತೆಗೆದುಕೊಂಡಿದ್ದೇವೆ. ಏನೋ ಪಾಪ ಅವನಿಗೆ ಪಾರ್ಟಿಯಲ್ಲಿ ಟಿಕೆಟ್ ಕೊಡಲಿಲ್ಲ. ನಾನು ರಾಜಕೀಯದಲ್ಲಿ ಬದುಕಿದ್ದೇನೆ ಅನ್ನೋ ಪ್ರಯತ್ನ ಮಾಡುತ್ತಿದ್ದಾನೆ ಒಳ್ಳೆದಾಗಲಿ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರು ಸಚಿವ ಎಂ ಬಿ ಪಾಟೀಲ್ ಬಿಜೆಪಿಯವರಿಗೆ ಬೇರೆ ಅಭಿವೃದ್ಧಿ ಕಡೆ ಹೆಚ್ಚಿನ ಹಣ ತರಬೇಕು ಎಂಬ ಬಗ್ಗ ಆಸಕ್ತಿ ಇಲ್ಲ. ಹೆಚ್ಚಿನ ಜಿಎಸ್ಟಿ ಹೇಗೆ ಸಂಗ್ರಹ ಮಾಡಬೇಕು?. ಬಿಜೆಪಿಯವರು ಅಭಿವೃದ್ಧಿ ಕೆಲಸ ಮಾಡ್ತಿಲ್ಲ. ಹಿಂದೂ ಮುಸ್ಲಿಂ ಬಿರುಕು ಮೂಡಿಸಿ ರಾಜಕಾರಣ ಮಾಡುವುದಷ್ಟೇ ಅವರ ಅಜೆಂಡಾ. ಅವರಿಗೆ ಬೇರೆ ಅಜೆಂಡಾ ಇಲ್ಲವೇ ಇಲ್ಲ. ಹೈಕೋರ್ಟ್ ತೀರ್ಪು ಸ್ವಾಭಾವಿಕ. ಪ್ರಶಸ್ತಿ ವಿಜೇತರಿಗೆ ಹೀಗೆ ಮಾಡುವುದು ತಪ್ಪು. ಚಾಮುಂಡೇಶ್ವರಿ ತಾಯಿ ಕರೆಸಿಕೊಂಡಿದ್ದಾರೆ ಎಂಬ ಮಾತನ್ನು ಅವರೇ ಹೇಳಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇಂಥ ಕ್ಷುಲ್ಲಕ ಕೆಲಸ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿ ಸರಕಾರದ ಅಧಿಕಾರ ಅಂತಾ ಕೋರ್ಟ್ ಹೇಳಿರಬಹುದು. ಅದಕ್ಕೆ ಅರ್ಜಿ ವಜಾ ಮಾಡಿರಬಹುದು. ಇದಕ್ಕಾಗಿಯೇ ನಾವು ಕಾನೂನನ್ನು ತರುತ್ತೇವೆ. ದಸರಾ ಉದ್ಘಾಟನೆಯನ್ನು ಪಂಚಾಂಗವನ್ನು ಬಿಟ್ಟು ಮುಲ್ಲಾ ರ ಪ್ರಕಾರ ಮಾಡಲಾಗುತ್ತಿದೆ. ಮುಸ್ಲಿಂಮರ ಹಬ್ಬವನ್ನು ಹಿಂದೂಗಳ ಕೈಲಿ ಮಾಡಿಸಲಿ.ನಬಲವಂತಾಗಿ ಮುಸ್ಲಿಮರ ಕೈಯಲ್ಲಿ ಯಾಕೆ ಉದ್ಘಾಟನೆ ಮಾಡಿಸಬೇಕು. ಗಣೇಶ ಮೆರವಣಿಗೆ ಮಸೀದಿ ಮುಂದೆ ಹೋಗಬಾರದು ಅಂತಾರೆ. ಹಿಂದೂಗಳ ದೇವಸ್ಥಾನಗಳ ಮುಂದೆಯೂ ಮುಸ್ಲಿಂ ಮರೆವಣಿಗೆ ಮಾಡಬಾರದು. ಯಾಕೆ ಹಿಂದೂಗಳ ದೇವಸ್ಥಾನದ ಮುಂದೆ ಹೋಗುತ್ತಾರೆ. ಸಿದ್ದರಾಮಯ್ಯನ ಎಡಬಿಡಂಗಿತ ಗೊತ್ತಾಗುತ್ತಿದೆ. ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಾರೆ ಎಂದಿದ್ದಾರೆ.
ಶಾಸಕ ಕುಣಿಗಲ್ ರಂಗನಾಥ್ ಮಾತನಾಡಿ ಭಾರತ ದೇಶ ಜಾತ್ಯಾತೀತ ತತ್ವದ ಮೇಲೆ ನಿಂತಿದೆ. ಅಂಬೇಡ್ಕರ್ ಸಂವಿಧಾನಕ್ಕೆ ಇದು ಜಯ ಸಿಕ್ಕಂತೆ. ದಸರಾ ನಾಡ ಹಬ್ಬ ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದಲ್ಲ.ರಾಜ್ಯ ಹೆಚ್ಚಿನ ರೀತಿ ಇದೇ ಮಾರ್ಗದಲ್ಲಿ ಹೋಗಬೇಕು. ಹೈ ಕೋರ್ಟ್ ತೀರ್ಪು ಸ್ವಾಗತಾರ್ಹ. ಅಂಬೇಡ್ಕರ್ ಕೊಟ್ಟ ಸಂವಿಧಾನದದಲ್ಲಿ ಯಾವುದೇ ಜಾತಿ ಧರ್ಮದ ಆಧಾರದ ಮೇಲೆ ಇಲ್ಲ. ರಾಹುಲ್ ಗಾಂಧಿ ಸಂವಿಧಾನ ಹಿಡಿದುಕೊಂಡೇ ಇರುತ್ತಾರೆ. ಅದನ್ನೇ ನಮ್ಮ ಸರ್ಕಾರ ಪಾಲನೆ ಮಾಡುತ್ತಿದೆ. ನಮ್ಮ ರಾಜ್ಯ ತೆಗೆದುಕೊಂಡ ನಿರ್ಧಾರಕ್ಕೆ ಕೋರ್ಟ್ ಆದೇಶ ಬೆಂಬಲ ಸಿಕ್ಕಿದೆ. ಬಿಜೆಪಿಯವರ ಚಿಂತನೆ ಬಡವರ ಪರ ಇರಬೇಕು, ಆದರೆ ಹಾಗಾಗಿಲ್ಲ. ಬಿಜೆಪಿಯವರು ಬಡವರ ಅಭಿವೃದ್ಧಿ ಬಗ್ಗೆ ಎಂದೂ ಮಾತಾಡಲ್ಲ. ಒಂದೇ ಒಂದು ಮಾತೂ ಬಡವರ ಪರ ಇಲ್ಲ. ಸಮಾಜವನ್ನು ಒಡಕು ಮಾಡುವುದು ಹೇಗೆ? ಸಾಮರಸ್ಯ ಹೇಗೆ ಹಾಳು ಮಾಡುವುದು? .ಇದೇ ಯೋಚನೆ ಬಿಜೆಪಿಯವರದ್ದು. ಬಿಜೆಪಿಯವರು ಮಾಡ್ತಿರೋದು ರಾಜ್ಯದ ಏಳ್ಗೆಗೆ ಅಲ್ಲ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್.ಸಿ ಮಹದೇವಪ್ಪ ಪ್ರಾರಂಭದಿಂದಲೂ ಸಿಎಂ ಅವರು, ನಾನು, ಡಿಸಿಎಂ ಸಂವಿಧಾನದಡಿ ಹೇಳ್ತಿದ್ದೇವೆ.ಸಂವಿಧಾನಾತ್ಮಕವಾಗಿ ನಮ್ಮ ನಡೆ, ನಿರ್ಧಾರ ಇರಬೇಕು. ಎಂಪಿ ಆಗಿದ್ದವರು ಸಂವಿಧಾನ, ಅದರ ಅವಕಾಶ, ಹಕ್ಕು ತಿಳಿದುಕೊಂಡಿರಬೇಕು. ಇವೆಲ್ಲವನ್ನೂ ತಿಳಿದುಕೊಂಡು ಹೀಗೆ ಮಾತಾಡಿದ್ರೆ ಹೇಗೆ?.ಈಗಾಲದರೂ ಅವರು ನ್ಯಾಯಾಲಯ ಹೇಳಿದೆ. ಸಂವಿಧಾನದ ಪ್ರಕಾರ ಏನು ಮಾಡಬೇಕೆಂದು ಅಂತ ಹೇಳಿದ್ದಾರೆ. ನ್ಯಾಯಾಲಯ ರಿಜೆಕ್ಟ್ ಮಾಡಿದೆ, ಇನ್ನಾದರೂ ಅವರು ಬುದ್ದಿ ಕಲಿಯಲಿ. ಅವರಲ್ಲಿ ತುಂಬಿರೋ ಮತೀಯ ಭಾವನೆಗಳಿಂದ ಹೊರಗೆ ಬರಬೇಕು. ಅವರು ಭಾರತೀಯ ನಾಗರಿಕನಾಗಿ ನಡೆದುಕೊಳ್ಳಲಿ ಎಂದಿದ್ದಾರೆ.











