ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಗೃಹ ಸಚಿವ ಪರಮೇಶ್ವರ್ ರನ್ನು ಭೇಟಿಯಾಗಿದ್ದಾರೆ.
ಸದಾಶಿವನಗರದ ಪರಮೇಶ್ವರ್ ನಿವಾಸಕ್ಕೆ ಮೊಹಂತಿ ಭೇಟಿ ಮಾಡಿದ್ದಾರೆ. ನಿನ್ನೆ ಆರನೇ ಸ್ಪಾಟ್ ನಲ್ಲಿ ಮೂಳೆಗಳು ಸಿಕ್ಕಿರುವ ಹಿನ್ನೆಲೆ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮೊಹಂತಿ ಮಾಹಿತಿ ನೀಡಿದ್ದಾರೆ. ಇತ್ತ ಕೇಂದ್ರ ಸೇವಾ ಪಟ್ಟಿಯಲ್ಲಿರುವ ಪ್ರಣವ್ ಮೊಹಾಂತಿ ಹೆಸರು ಕೇಳಿ ಬರುತ್ತಿದ್ದು ಎಸ್‌ಐಟಿ ಯಿಂದ ಹೊರ ಹೋಗೋ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಾಗಿ ಪರಮೇಶ್ವರ್, ಮೊಹಂತಿ ಭೇಟಿ ಮಹತ್ವ ಪಡೆದುಕೊಂಡಿದೆ.
ಮೊಹಂತಿ ಭೇಟಿ ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಕೇಂದ್ರದ ಹುದ್ದೆಗಳಿಗೆ ಪ್ರಣಬ್ ಮೊಹಾಂತಿ ನೇಮಕ ಆಗಿದ್ದಾರೆ. ಅದಕ್ಕೆ ನಿಜಕ್ಕೂ ನಮ್ಮ ಕರ್ನಾಟಕಕ್ಕೆ ದೊಡ್ಡ ಕ್ರೆಡಿಟ್. ತಕ್ಷಣವೇ ಯಾವುದೋ ಹುದ್ದೆ ಕೊಡ್ತಾರೆ ಎಂಬುದು ಇಲ್ಲ.ಅವರು ಅದನ್ನು ತಿಳಿಸಲು ನನ್ನ ಬಳಿ ಬಂದಿದ್ದರು. ಫೇಕ್ ನ್ಯೂಸ್, ಆನ್ ಲೈನ್ ಗೇಮ್ ಗಳ ಬಗ್ಗೆ ಕೆಲ ನಿಯಮ ಗಳನ್ನು ತರುತ್ತಿದ್ದೇವೆ. ಇದೆಲ್ಲವರ ಅವರ ವ್ಯಾಪ್ತಿಗೆ ಬರುತ್ತದೆ.ಇದರ ಬಗ್ಗೆ ಬ್ರೀಫಿಂಗ್ ಮಾಡಲು ಬಂದಿದ್ದರು. ಅದು ಬಿಟ್ಟು ಬೇರೆ ಏನು ಚರ್ಚೆ ಮಾಡಿಲ್ಲ. ಧರ್ಮಸ್ಥಳ ಕುರಿತು ಎಸ್ಐಟಿ ಯವರು ತನಿಖೆ ಮಾಡ್ತಿದ್ದಾರೆ. ಅವರು ವರದಿ ಕೊಡುವ ತನಕ, ಅವರ ಜೊತೆ ಆಗಲಿ, ಇಲ್ಲಿ ಆಗಲಿ ಮಾತಾಡೋಕೆ ಹೋಗಲ್ಲ. ತನಿಖೆ ನಡೆಯುವಾಗ ಸಮಂಜಸ ಅಲ್ಲ ಅಂತಾ ನಾವು ಯಾರು ಮಾತಾಡೋಕೆ ಹೋಗಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಮಾಜದ ಭಾವನೆಗಳಿಗೆ ಧಕ್ಕೆ ಆಗುವ ಫೋಸ್ಟ್ ಗಳ ಬಗ್ಗೆ ವಾಚ್ ಮಾಡ್ತಿದ್ದೇವೆ. ಅದರಲ್ಲಿ ಸಮಾಜದಲ್ಲಿ ಒಂದಷ್ಟು ಭಾವನೆ ಗಳು ಸೃಷ್ಟಿ ಆದರೆ, ಅದನ್ನು ನಿಲ್ಲಿಸೋಕೆ ಪ್ರಯತ್ನ ಮಾಡುತ್ತೇವೆ. ಹಿಂದೆ ಕಮ್ಯುನಿಲ್ ಫೋಸ್ಟಿಂಗ್ ಬಗ್ಗೆ ಎಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೀತ್ತಿತ್ತು. ಅದಕ್ಕೆ ನಾವು ಕ್ರಮ ತಗೊಂಡಿದ್ದೇವೆ ಈಗಾಗಲೇ ಅದೆಲ್ಲವೂ ನಿಂತಿದೆ. ಈಗ ಅದೇ ರೀತಿ ಇಲ್ಲ ಸಲ್ಲದ ಫೋಸ್ಟಿಂಗ್ ಹಾಕಿದ್ರೆ ಕ್ರಮವನ್ನು ತಗೊಳ್ತೇವೆ. ಪ್ರಣಬ್ ಮೊಹಾಂತಿ ಹೊರಗಡೆ ಹೋಗುವ ಪ್ರಶ್ನೆ ಎಲ್ಲಿ ಬಂದಿದೆ..?. ಇದ್ದಾರೆ ಅವ್ರು, ಅವರೇನು ಕರೆದಿದ್ದಾಗ ನಾವು ಕಳುಹಿಸ್ತಿದ್ದೇವೆ ಎಂಬುದೇನು ಆಗಿಲ್ಲ.ಕೇಂದ್ರ ಸರ್ಕಾರ ನಮಗೆ ಹೇಳಬೇಕು. ಇಂತಹ ಜಾಗಕ್ಕೆ ಅವರನ್ನು ನೇಮಕ ಮಾಡ್ತಿದ್ದೇವೆ. ಅವರನ್ನು ಕಳುಹಿಸಿಕೊಡಿ ಎಂದ.ನಾವು ಕಳುಹಿಸ್ತೀವೋ ಬಿಡ್ತೀವೋ ಅದು ನಮಗೆ ಬಿಟ್ಟ ವಿಚಾರ. ಆದರೆ ಅವರು ಇನ್ನೂ ಬರೆದೇ ಇಲ್ಲವಲ್ಲ. ಅದಕ್ಕೇನೇ ಬೊಬ್ಬೆ ಹೊಡೆದ್ರೆ ಹೇಗೆ..?. ಅವರು ಸೆಲೆಕ್ಟ್ ಆಗಿದ್ದಾರೆ ಅಷ್ಟೇ ಎಂದಿದ್ದಾರೆ.
ಇನ್ನು ಫೇಕ್‌ನ್ಯೂಸ್, ಆನ್ ಲೈನ್ ಗೇಮ್ ಗಳಿಗೆ ಕಡಿವಾಣ ಹಾಕುವ ಕುರಿತು ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಯಿತು. ವಿಧಾನಸೌಧದ ಗೃಹಸಚಿವರ ಕಚೇರಿಯಲ್ಲಿ ಸಭೆ ನಡೆಯಿತು. ಪೊಲೀಸ್ ಮಹಾನಿರ್ದೇಶಕರಾದ ಸಲೀಂ, ಹಿರಿಯ ಅಧಿಕಾರಿಗಳಾದ ಸೌಮೆಂದು ಮುಖರ್ಜಿ, ಪ್ರಣಬ್ ಮೊಹಾಂತಿ, ಮುರುಗನ್ , ಶರದ್ ಚಂದ್ರ , ಸರಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭಾಗಿಯಾಗಿದ್ದರು.
ಆಲಮಟ್ಟಿ ಡ್ಯಾಮ್ ಎತ್ತರಕ್ಕೆ ಮಹಾರಾಷ್ಟ್ರ ಸರ್ಕಾರ ಖ್ಯಾತೆ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದರ ಬಗ್ಗೆ ನಾನು ಉತ್ತರ ಕೊಡಲು ಸಮರ್ಥನಲ್ಲ. ನೀರಾವರಿ ಸಚಿವರು ಸಮರ್ಥರಿದ್ದಾರೆ ಅವರು ಉತ್ತರ ಕೊಡ್ತಾರೆ ಆದರೆ ನಮಗೆ ರಾಜ್ಯದ ಹಿತಾಸಕ್ತಿ ಕಾಪಾಡೋದು ಬಹಳ ಮುಖ್ಯ. ಆಲಮಟ್ಟಿ ಡ್ಯಾಮ್ ಎತ್ತರದಿಂದ ನೀರು ಶೇಖರಣೆ ಮೂಲಕ ನಮಗೆ ಅನುಕೂಲ. ನಮ್ಮ ನೀರನ್ನು ಹಿಡಿದಿಟ್ಟುಕೊಳ್ಳಲು ಎತ್ತರದ ಅಗತ್ಯತೆ ಇದೆ. ಹೀಗಾಗಿ ಜನರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.
ರಾಹುಲ್ ಗಾಂಧಿಯ ಪ್ರತಿಭಟನೆಗೆ ಭದ್ರತೆ ವಿಚಾರದ ಬಗ್ಗೆ ಮಾತನಾಡಿ ಭದ್ರತೆಯ ಬಗ್ಗೆ ಏನು ತೊಂದರೆ ಇಲ್ಲ.ಅದೆಲ್ಲವೂ ಪ್ರೋಟೋಕಾಲ್ ಪ್ರಕಾರವೇ ಇರುತ್ತದೆ. ಫ್ರೀಡಂ ಪಾರ್ಕ್ ನ ಜಾಗದಲ್ಲಿ ಹತ್ತು ಇಪ್ಪತ್ತು ಸಾವಿರಕ್ಕೆ ಸಾಕಾಗೋದೇ ಹೆಚ್ಚು ಎಂದು ಹೇಳಿದರು.