ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಮೈಕ್ರೋ ಫೈನಾನ್ಸ್ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಯಾರು ಮಾಡ್ತಿದ್ದಾರೆ.ಅವರು ರಿಕವರಿ ವೇಳೆ ಕೆಲ ಗಲಾಟೆ ಗಳಾಗಿವೆ.ಕೆಲವು ಘಟನೆಗಳು ಆಗಿವೆ. ಬಹಳಷ್ಟು ಸೂಸೈಡ್ ಪ್ರಕರಣ ಆಗಿವೆ.ಹಾಗಾಗಿ ಇದನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ.ಮುಖ್ಯಮಂತ್ರಿಗಳು ಈಗ ಸಭೆ ಕರೆದಿದ್ದಾರೆ.ಸಭೆಯಲ್ಲಿ ಎಲ್ಲದರ ಬಗ್ಗೆ ಚರ್ಚೆ ಮಾಡ್ತೇವೆ.ಸಭೆಯ ಚರ್ಚೆ ನಂತರ ಏನು ಅಂತ ಹೇಳ್ತೇವೆ.ಕಾನೂನು ಸಡಿಲಿಕೆ ಅಂತ ಏನೂ ಇಲ್ಲ.ಕೆಲವು ಕೇಂದ್ರ,ಕೆಲವು ರಾಜ್ಯದ ಕಾನೂನಿವೆ.ಎಲ್ಲವನ್ನ ಕಂಬೈನ್ಡ್ ಮಾಡಿ ನಿಯಂತ್ರಣ ಮಾಡಬೇಕು.ಪೊಲೀಸ್ ಇಲಾಖೆ,ಕಂದಾಯ ಇಲಾಖೆ.ಕಾನೂನು ಇಲಾಖೆ ಎಲ್ಲವೂ ಕಂಬೈನ್ಡ್ ಆಗಬೇಕು.ಅದಕ್ಕೆ ಇವತ್ತು ಎಲ್ಲರೂ ಸೇರ್ತಿದ್ದೇವೆ.ಒಂದು ಸ್ಪಷ್ಟವಾದ ನಿರ್ಣಯ ಡಿಸೈಡ್ ಮಾಡ್ತೇವೆ ಎಂದರು
ಕೇಂದ್ರ ಬಜೆಟ್ ಮಂಡನೆ ವಿಚಾರದ ಬಗ್ಗೆ ಮಾತನಾಡಿ ಪ್ರಸ್ತುತ ನಡೆಯುವ ಯೋಜನೆಗೆ ಹಣ ಬರಬೇಕು.ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ ನಿಲ್ಲಿಸಿದ್ದಾರೆ.ಅದನ್ನ ಮತ್ತೆ ಕೊಟ್ಟರೆ ಉತ್ತಮ.ಆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇನ್ನೂ ಅನೇಕ ಪ್ರಾಜೆಕ್ಟ್ ಸಂಪೂರ್ಣ ಆಗಿಲ್ಲ. ಅವುಗಳಿಗೆ ಬರಬೇಕಾದ ಹಣ ಕೊಡಬೇಕು.ಅದನ್ನ ಈ ಬಜೆಟ್ ನಲ್ಲಾದ್ರೂ ಕೊಡಬೇಕು. ನಾವು ಅತಿ ಹೆಚ್ಚು ಜಿಎಸ್ ಟಿ ಕಟ್ಟುವವರು.ಅದರ ಅಲೋಕೇಟ್ ನಮಗೆ ಬರಬೇಕು.ಬಾಕಿ ಕೊಡುವ ಬಗ್ಗೆ ಉತ್ತಮ ಸಿಸ್ಟಂ ಮಾಡಿದರೆ ಉತ್ತಮ.ಯಾವ ರೀತಿ ಮಾಡ್ತಾರೆ ನೊಡೋಣ ಎಂದಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಪರಮೇಶ್ವರ್ ಅಭಿಪ್ರಾಯಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಬೆಂಗಳೂರು; ಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ ಭಾಗಿಯಾಗಿದ್ದರು.
ಮೈಕ್ರೋ ಫೈನಾನ್ಸ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ.ನಿಮ್ಮ ಸಿಬ್ಬಂದಿ ನಿಯಮ ಬಾಹಿರವಾಗಿ ಸಾಲ ವಸೂಲಿಗೆ ಇಳಿಯುತ್ತಿರುವುದನ್ನು ನಿಯಂತ್ರಿಸಲು ಏನು ಮಾಡಿದ್ದೀರಿ?.ಸಿಬ್ಬಂದಿ ವಿರುದ್ಧ ನಿಮ್ಮ ಸಂಸ್ಥೆಗಳಿಂದ ಏನು ಕ್ರಮ ಕೈಗೊಂಡಿದ್ದೀರಿ. ನೋಂದಣಿಯಾಗಿ ಪರವಾನಗಿ ಪಡೆದಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರನ್ನು ಖಾರವಾಗಿ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಾಲಗಾರರ ಮನೆ ಜಪ್ತಿ ಮಾಡುವ ಮೊದಲು ನೀವು ನ್ಯಾಯಾಲಯದಿಂದ ಅನುಮತಿ ಪಡೆದಿದ್ದೀರಾ?.ಕಾನೂನು ಕೈಗೆತ್ತಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಅನುಮತಿ ಕೊಟ್ಟವರು ಯಾರು? .ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತಿದ್ದೀರಾ ?.ರಿಸರ್ವ್ ಬ್ಯಾಂಕಿನ ಷರತ್ತು ಮತ್ತು ನಿಬಂಧನೆಗಳನ್ನು ಸಾಲಗಾರರಿಗೆ ಅವರ ಆಡು ಭಾಷೆಯಲ್ಲಿ ಅರ್ಥ ಮಾಡಿಸಿದ್ದೀರಾ? .RBI ನಿಯಮ ಮೀರಿ ಸಾಲ ಕೊಡುತ್ತಿದ್ದೀರಾ ? .ಮರುಪಾವತಿಯ ಕೆಪಾಸಿಟಿ ಗಮನಿಸದೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುತ್ತಿರುವುದು ಏಕೆ? .ಸಾಲಗಾರರಿಗೆ ಸಾಲ ಕೊಡುವ ಮೊದಲು ಆಧಾರ್ KYC ಮಾಡಿಸುತ್ತಿಲ್ಲ ಏಕೆ? .KYC ಮಾಡಿಸಿದ್ದರೆ ಒಬ್ಬರೇ ಸಾಲಗಾರರಿಗೆ ಪದೇಪದೆ ಸಾಲ ಕೊಡುವುದು ತಪ್ಪುತ್ತಿತ್ತು ಎಂದಿದ್ದಾರೆ.
ಸಭೆ ಬಳಿಕ ಮಾತನಾಡಿದ ಸಿಎಂ ಮೈಕ್ರೋ ಫೈನಾನ್ಸ್ ಪದಾಧಿಕಾರಿಗಳು, ಆರ್ ಬಿಐ ಸಂಸ್ಥೆ, ಕಂದಾಯ, ಪೊಲೀಸ್ ಇಲಾಖೆ, ಕಾನೂನು ಇಲಾಖೆ, ಹಣಕಾಸು ಇಲಾಖೆಯೊಂದಿಗೆ ಸಭೆ ನಡೆಸಿದೆ.ಇಲಾಖೆಗಳ ಸಚಿವರುಗಳು, ಹಿರಿಯ ಅಧಿಕಾರಿಗಳು, ಪದಾಧಿಕಾರಿಗಳು ಭಾಗಿಯಾಗಿದ್ದರು. ಮೈಕ್ರೋ ಫೈನಾನ್ಸ್ ಅಸೋಸಿಯೇಷನ್ ಅಧ್ಯಕ್ಷರು ಅಭಿಪ್ರಾಯ ಕೇಳಿದ್ದೀವಿ.ಆರ್ ಬಿಐ ಅಧಿಕಾರಿಗಳ ಅಭಿಪ್ರಾಯ ಕೇಳಿದ್ದೇನೆ.ಯಾರೂ ಕೂಡ ಸಾಲ ಕೊಡಬೇಡಿ, ವಸೂಲಿ ಮಾಡ್ಬೇಡಿ ಅಂತ ಹೇಳೊಲ್ಲ. ವಸೂಲಿ ಮಾಡುವಾಗ ಕಿರುಕುಳ ಕೊಡಬಾರದು, ಹಿಂಸೆ ಮಾಡಬಾರದು.ವಸೂಲಿಗೆ ಕ್ರಮ ಮಾಡುವಾಗ ಆರ್ ಬಿಐ ಬ್ಯಾಂಕ್ ನಿಯಮ ಪಾಲನೆ ಮಾಡ್ಬೇಕು ಎಂದಿದ್ದಾರೆ.
ಕಾನೂನು ಏನು ಹೇಳುತ್ತೋ ಅದಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡಬಾರದು. ಸಂಜೆ 5 ಗಂಟೆಯ ನಂತರ ವಸೂಲಿಗೆ ಹೋಗಬಾರದು.ಔಟ್ ಸೋರ್ಸಿಂಗ್ ಮೂಲಕ ವಸೂಲಿ ಮಾಡಬಾರದು.ಗೂಂಡಾ, ರೌಡಿಗಳ ಬಳಕೆ ಮಾಡಬಾರದು ಅಂತ ಸೂಚನೆ ಕೊಟ್ಟಿದ್ದೇನೆ.ನಿಯಮ ಉಲ್ಲಂಘಟನೆ ಮಾಡಿದವರಿಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ.ನೂನು ಉಲ್ಲಂಘನೆ ಮಾಡಿದ್ರೆ ನಾವು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ತೀವಿ.ಎಚ್ಚರಿಕೆ ನೀಡಿದ್ದೇವೆ, ನಬಾರ್ಡ್, ಮೈಕ್ರೋ ಫೈನಾನ್ಸ್ ಸಂಸ್ಥೆ, ಮನಿ ಲ್ಯಾಂಡಿಂಗ್ ಸಂಸ್ಥೆಗಳಿಗೆ ಸೂಚನೆ ನೀಡಿದ್ದೇವೆ. ಮನಿ ಲ್ಯಾಂಡಿಂಗ್ ಗೆ ಕೂಡಲೇ ತಿದ್ದುಪಡಿ ಮಾಡ್ಬೇಕು.ಹೊಸ ಕಾನೂನನ್ನ ಮಾಡ್ತೀವಿ.ಲೈಸೆನ್ಸ್ ಇಲ್ಲದೇ ಯಾರೂ ಮನಿ ಲ್ಯಾಂಡಿಂಗ್ ಮಾಡಕೂಡದು.ಪ್ರತಿ ಜಿಲ್ಲೆಗಳ ಡಿಸಿ ಕಚೇರಿಯಲ್ಲಿ ಸಹಾಯ ವಾಣಿ ತೆರೆಯುವ ಕೆಲಸ ಮಾಡಿದ್ದೇವೆ.ಡಿಸಿ ಕಚೇರಿಗಳಲ್ಲಿ ದೂರುಗಳನ್ನ ಕೊಡಬಹುದು.ದೂರಗಳ ಆಧಾರದ ಮೇಲೆ ಅಥವಾ ಸುನೊಟೊ ಕೇಸ್ ದಾಖಲಿಸಕ ಪೊಲೀಸ್ ಕ್ರಮ ಕೈಗೊಳ್ಳುತ್ತಾರೆ ಎಂದರು.
ಬೆದರಿಸಿ, ಗೂಂಡಾಗಳಿಂದ ವಸೂಲಿ ಮಾಡುವುದು.ಅವಮಾನ, ಅಗೌರವ ಮಾಡುವ ಕಡೆ ಪೊಲೀಸರು ದೂರು ದಾಖಲಿಸಿ ಕಾನೂನಿನ ರೀತ್ಯ ಕ್ರಮಕ್ಕೆ ಸೂಚಿಸಿದ್ದೇವೆ.ಹೊಸ ಕಾನೂನನ್ನ ಕೂಡಲೇ ಮಾಡ್ತೀವಿ. ಆಂಧ್ರ ಪ್ರದೇಶದಲ್ಲೂ ಕಾನೂನು ಮಾಡಿದ್ದಾರೆ.ಬೇರೆ ರಾಜ್ಯಗಳ ಕಾನೂನು ನೋಡಿ ಸುಗ್ರೀವಾಜ್ಞೆ ತರುತ್ತೇವೆ.ಅನೇಕ ರೀತಿಯಲ್ಲಿ ಊರು ಬಿಟ್ಟು ಹೋಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ತಡೆ ಮಾಡುವುದಕ್ಕೆ ಕೇಂದ್ರ ಸರ್ಕಾರವೂ ಕಾನೂನು ಮಾಡ್ಬೇಕು.ಯಾಕಂದ್ರೆ ಆರ್ ಬಿಐನಡಿ ಮೈಕ್ರೋ ಫೈನಾನ್ಸ್ ಬರುತ್ತೆ.17.07% ಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡಬಾರದು ಅಂತಿದೆ.ಆದ್ರೀಗ 28% ವರೆಗೂ ನಡೆಯುತ್ತಿದೆ.ಮೈಕ್ರೋ ಫೈನಾನ್ಸ್ ಗಳಿಗೆ ಆರ್ ಬಿಐನವರೇ 17.07% ನಿಯಮ ಮಾಡಿದೆ.ಒಂದು ಕುಟುಂಬಕ್ಕೆ ಮೂರು ಬಾರಿಗಿಂತ ಹೆಚ್ಚು ಸಾಲ ಕೊಡಬಾರದು ಅಂತಿದೆ.ಆದರೆ ಮೂರು ಬಾರಿಗಿಂತ ಹೆಚ್ಚು ಸಾಲು ಕೊಡಲಾಗಿದೆ.ಈಗಾಗಲೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಎಚ್ಚರಿಕೆ ಕೊಟ್ಟಿದ್ದೇನೆ.ನಿಯಮ ಮೀರಿದ್ರೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತೆ.ಪೊಲೀಸರ ಮುಂದೆ ದೂರು ಕೊಟ್ರೆ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶ ಇದೆ.ನೊಂದ ಸಾಲಗಾರರಿಗೆ ಹೊಸ ಕಾನೂನು ಮಾಡ್ತಾ ಇದ್ದೇವೆ.ಒಟ್ಟು 59,36,776 ಹಣ ಕೊಡಲಾಗಿದೆ.1 ಕೋಟಿ 9 ಲಕ್ಷ ಮಂದಿಗೆ ಸಾಲ ಎಂದರುಯ
ನೋಂದಣಿ ಆಗದೇ ಇರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳದ್ದೇ ಸಮಸ್ಯೆ.ಕಾನೂನು ಮಾಡಿ ಕಾನೂನುಬಾಹಿರ ಇರುವ, ಕಾನೂನುಬಾಹಿರವಾಗಿ ವಸೂಲಿ ಮಾಡುವುದನ್ನ ತಪ್ಪಿಸಲು ಮುಂದಾಗಿದ್ದೇವೆ.ಆತ್ಮಹತ್ಯೆ ಮಾಡಿಕೊಳ್ಳುವುದು, 5 ಗಂಟೆ ನಂತರ ಮನೆಗೆ ಹೋಗುವುದು, ಸೀಜ್ ಮಾಡುವುದು ಇದಕ್ಕೆಲ್ಲ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದೇವೆ.ಈವರೆಗೆ 7 ಕೇಸ್ ದಾಖಲಾಗಿದೆ.ವಸೂಲಿ ಮಾಡುವಾಗ ಕಿರುಕುಳ ಕೊಡಬಾರದು.20% ವರೆಗೂ ವಸೂಲಿ ಮಾಡ್ತಾ ಇರುತ್ತಾರೆ.ಅಸಲಿಗಿಂತ ಜಾಸ್ತಿ ಬಡ್ಡಿ ವಸೂಲಿ ಮಾಡಬಾರದು.ಕಿರುಕುಳ ಕೊಟ್ಟವರು, ಆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಕೂಡಲೇ ಸುಗ್ರೀವಾಜ್ಞೆ ತರುತ್ತೇವೆ.ನಾನ್ ಬ್ಯಾಂಕಿಂಗ್ ನ ನಿಲ್ಲಿಸೋಕೆ ಆಗೊಲ್ಲ.ಆದರೆ ಕಾನೂನು ಮಾಡಬಹುದು ಎಂದಿದ್ದಾರೆ.