ಬೆಂಗಳೂರು: ಪ್ರಜ್ವಲ್ ರೇವಣ್ಣ ವಿಚಾರ ಮೈತ್ರಿ ಮೇಲೆ ಏನು ಪರಿಣಾಮ ಬೀರಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾನೂನು ಪ್ರಕಾರ ಎಲ್ಲವೂ ಆಗಿದೆ. ಇದರಲ್ಲಿ ಮಾತಾಡುವಂತದ್ದು ಏನಿಲ್ಲ ಎಂದು ಅವರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು ಸಂವಿಧಾನ ಬದ್ದ ಸಂಸ್ಥೆಗಳ ಮೇಲೆ ಸಂಶಯ ಬರುವ ಹಾಗೆ ಕಾಂಗ್ರೆಸ್ ನಡುಕೊಳ್ಳುತ್ತೆ.ಇವಿಎಂ ಮೇಲೆ ಆಯ್ತು, ಈಗ ಚುನಾವಣಾ ಆಯೋಗದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದೆ. ಇವಿಎಂ ಪ್ರಾತ್ಯಕ್ಷಿಗೆ ಬಗ್ಗೆ ಕರೆದಾಗ ಬಂದಿಲ್ಲ.ರಾಜ್ಯ ಸರ್ಕಾರದ ಅಧಿಕಾರಿಗಳೇ ರಾಜ್ಯದಲ್ಲಿ ಚುನಾವಣೆ ಮುಖ್ಯಸ್ಥರು. ರಾಜಕೀಯ ಪಕ್ಷಗಳಿಗೂ ಬೂತ್ ಗಳಲ್ಲಿ ವ್ಯಕ್ತಿ ನೇಮಕಕ್ಕೆ ಅವಕಾಶ ಇದೆ. ಇದರಲ್ಲಿ ಚುನಾವಣಾ ಆಯೋಗ ಇನ್ವಾಲ್ವ್ ಆಗಿದೆ ಅನ್ನೋದು ಸರಿಯಲ್ಲ . ಮತದಾರರ ಹೆಸರು ಡಿಲಿಟ್ , ಸೇರ್ಪಡೆ ಬಗ್ಗೆ ಅಂದೇ ಕೇಳಬೇಕಿತ್ತು. ಡಾ. ಮಂಜುನಾಥ್ ಜಸ್ಟ್ ಚುನಾವಣೆ ವೇಳೆ ರಾಜಕೀಯಕ್ಕೆ ಬಂದವರು . ಚುನಾವಣೆ ಆಯೋಗದ ಮೇಲೆ ಆರೋಪ ಸರಿಯಲ್ಲ .ಅಧಿಕಾರಿಗಳ ಹಸ್ತಕ್ಷೇಪ ಇದ್ರೆ ಸಾಕ್ಷಿ ಕೊಡಿ. ಚುನಾವಣಾ ಆಯೋಗದ ವಿಶ್ವಾಸರ್ಹತೆಗೆ ಧಕ್ಕೆ ತರುವ ಕೆಲಸ ಮಾಡಬಾರದು. ರಾಜಕೀಯ ಉದ್ದೇಶಕ್ಕಾಗಿ ಸಾಂವಿಧಾನಿಕ ಸಂಸ್ಥೆ ಮೇಲೆ ಆರೋಪ ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ದಾಖಲೆ ಇದ್ರೆ ಕ್ಷಣವೂ ಕಾಯದೆ ಬಿಡುಗಡೆ ಮಾಡಿ. ಆಟಂ ಬಾಂಬ್ ಇದ್ರೆ ಬಿಡಿ, ನಿಮಲ್ಲೆ ಇದ್ರೆ ಅಲ್ಲೇ ಸ್ಪೋಟ ಆಗಬಹುದು. ಚುನಾವಣಾ ಆಯೋಗ ಕರೆದಿದೆ, ಏನಾಗಿದೆ ಹೇಳಿ ಎಂದು ಕೇಳಿದೆ. ಲಿಖಿತ ದೂರನ್ನ ಕಾಂಗ್ರೆಸ್ ಕೊಟ್ಟಿಲ್ಲ.ಇವಿಎಂ ಮೇಲಿನ ಆರೋಪಕ್ಕೆ ಕೋರ್ಟ್ ಉತ್ತರ ಕೊಟ್ಟಿದೆ. ಮೋದಿ ಮೂರನೆ ಬಾರಿ ಪಿಎಂ, ಆ ಆಘಾತ ಕಾಂಗ್ರೆಸ್ ಗೆ. ಇಲೆಕ್ಷನ್ ಕಮಿಷನ್ನೇ ಫ್ರಾಡ್ ಎಂದು ಹೇಳುವ ಯತ್ನ . ಸಂವಿಧಾನಕ್ಕೆ ಧಕ್ಕೆ ಯಾಗುವ ಸಾಧ್ಯತೆ, ಅದಕ್ಕೆ ಬಿಜೆಪಿ ವಿರೋಧವಿದೆ ಎಂದಿದ್ದಾರೆ.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿ ಬಿಜೆಪಿ ಒಳಮೀಸಲಾತಿ ಜಾರಿ ಮಾಡಿತ್ತು.ಮಾಡುವ ಅಧಿಕಾರ ಇಲ್ಲ ಎಂದು ಕಾಂಗ್ರೆಸ್ ಆರೋಪ ಮಾಡ್ತು. ಸಂವಿಧಾನ ತಿದ್ದುಪಡಿ ಆಗಬೇಕು ಎಂದ್ರು. ಕೋರ್ಟ್ ಆದೇಶವಿದೆ, ಒಳಮೀಸಲಾತಿ ಕೊಡಬಹುದು ಎಂದಿದೆ. ಈಗ ಒಳಮೀಸಲಾತಿ ಜಾರಿಯಾಗಲೆಬೇಕು. ನ್ಯಾ. ನಾಗಮೋಹನ್ ದಾಸ್ ವರದಿ ಏನ್ ಹೇಳತ್ತೆ ನೋಡಬೇಕು. ಇವರು ಜಾರಿ ಮಾಡ್ತಾರೆ ಎಂದು ಆ ಸಮುದಾಯಕ್ಕೆ ವಿಶ್ವಾಸ ಇಲ್ಲ ಎಂದು ತಿಳಿಸಿದ್ದಾರೆ.
ಹಾವೇರಿಯಲ್ಲಿ ಜೂಜಾಟ ಹೆಚ್ಚಿರುವ ವಿಚಾರದ ಬಗ್ಗೆ ಮಾತನಾಡಿ ಡಿಜಿಪಿಗೆ ಪತ್ರ ಬರೆದಿದ್ದೀನಿ.ನಿರೀಕ್ಷಿತ ಮಟ್ಟಕ್ಕೆ ಪೊಲಿಸ್ ಕ್ರಮ ಆಗಿಲ್ಲ. ರಾಜಕಿಯ ಒತ್ತಡಕ್ಕೆ ಮಣಿದಿದ್ದಾರೆ . ಹೋರಾಟ ಮಾಡ್ತಿವಿ ಎಂದ ಅವರು ಮೈಸೂರಲ್ಲಿ ಡ್ರಗ್ ಫ್ಯಾಕ್ಟರಿ ಇರೋದು ಪೊಲಿಸರಿಗೆ ಗೊತ್ತೇ ಇಲ್ಲ, ಇದು ದುರ್ದೈವ. ಕರ್ನಾಟಕ ಪೊಲಿಸರು ಏನ್ ಮಾಡ್ತಿದ್ರು. ಗುಜರಾತ್ ಪೊಲಿಸರು ಬಂದು ಶಂಕಿತ ಉಗ್ರ ಮಹಿಳೆ ಬಂಧಿಸಿದ್ರು. ಕ್ರೈಂ ರೇಟ್ ಹೆಚ್ಚಾಗಿದೆ. ಸರ್ಕಾರಕ್ಕೂ, ಹಿರಿಯ ಅಧಿಕಾರಿಗಳಿಗು ಹಿಡಿತ ತಪ್ಪಿಹೋಗಿದೆ. ಎಲ್ಲ ಕೈ ಚೆಲ್ಲಿ ಕುಳಿತಿದ್ದಾರೆ ಎಂದಿದ್ದಾರೆ.