ಬೆಂಗಳೂರು; ಸಿಎಂಗೆ ಗೊತ್ತಿಲ್ಲದೇ ಸಿಎಂ ಪತ್ನಿಗೆ ಸೈಟ್ ಸಿಕ್ಕಿದೆ ಅಂತಾ ಹೇಳಲೂ ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಪತ್ನಿ ಸೈಟ್ ವಾಪಸ್ ಕೊಟ್ಟ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನಿನ್ನೆ ಸಿದ್ದರಾಮಯ್ಯ ಹೇಳಿಕೆಯನ್ನು ಗಮನಿಸಿದ್ದೇನೆ.ನಾನು ಡಿನೋಟಿಫೈ ಮಾಡಿದ್ನಾ? ನಾನೇನು ಸಹಿ ಮಾಡಿದ್ನಾ? ನಂದು ಮತ್ತು ಯಡಿಯೂರಪ್ಪ ಪ್ರಕರಣ ಬೇರೆ ಬೇರೆ ಎಂದಿದ್ದಾರೆ.ನಿಮ್ಮ ಬಗ್ಗೆ ಕೋರ್ಟ್ ಏನು ಹೇಳಿದೆ ಅನ್ನೋದನ್ನು ಮೊದಲು ನೋಡಿ.ನೀವು 2004 ರಿಂದ ಈಚೆಗೆ ಸತತವಾಗಿ ಒಂದು ಸ್ಥಾನದಲ್ಲಿ ಇರಲಿಲ್ಲ ಅಂದರೆ ಸೈಟ್ ಇನ್ನು ಯಾರಿಗೂ ಸಾಮಾನ್ಯ ಮನುಷ್ಯನಿಗೆ ಮುಟ್ಟಲೂ ಸಾಧ್ಯವಿರಲಿಲ್ಲ.ಸಿಎಂಗೆ ಗೊತ್ತಿಲ್ಲದೇ ಸಿಎಂ ಪತ್ನಿಗೆ ಸೈಟ್ ಸಿಕ್ಕಿದೆ ಅಂತಾ ಹೇಳಲೂ ಸಾಧ್ಯವಿಲ್ಲ ಎಂದಿದ್ದಾರೆ.
ಕೋರ್ಟ್ ಬಹಳ ಸ್ಪಷ್ಟವಾಗಿ ನೀವು ಏನೇನು ಕರಾಮತ್ತು ಮಾಡಿದ್ದೀರಿ ಅಂತಾ ದಾಖಲಿಸಿದೆ.ಸಂವಿಧಾನಕ್ಕೆ ಎಂದೂ ಗೌರವ ಕೊಡದವರು ಸಂವಿಧಾನ ಪ್ರತಿ ಇಟ್ಟುಕೊಂಡು ಓಡಾಡಿದ್ರಿ.ಸಂವಿಧಾನದ ಪ್ರಕಾರವಾಗಿ ಕೋರ್ಟ್ ಸ್ಪಷ್ಟವಾಗಿ ಸಿಎಂ ಪಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ, ತನಿಖೆಯಾಗಬೇಕು ಅಂತಾ ಹೇಳಿದೆ.ರಾಜೀನಾಮೆ ಕೊಡಲ್ಲ ಅಂದರೆ ನೀವು ಭಂಡತನ ಪ್ರದರ್ಶಿಸುತ್ತಿದ್ದೀರಿ.ಕಾಂಗ್ರೆಸ್ ಹೈಕಮಾಂಡ್ ಲೋ ಕಮಾಂಡ್ ಆಗಿದೆ.ಯಾಕೆಂದರೆ ಅವರೂ ಬೇಲ್ ಮೇಲೆಯೇ ಇದ್ದಾರೆ.ಅವರೇ ಅರ್ಥಿಕ ಅಪರಾಧದಲ್ಲಿ ಬೇಲ್ ಮೇಲೆ ಇರುವುದರಿಂದ ಅವರಿಗೆ ಸಿದ್ದರಾಮಯ್ಯನವರಿಗೆ ರಾಜೀನಾಮೆ ಕೊಡಿ ಅಂತಾ ಹೇಳಲು ಆಗುತ್ತಿಲ್ಲ. ಯಾಕೆಂದರೆ ರಾಹುಲ್ ಗಾಂಧಿಯವರೇ ನೀವು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಡಿ ಅಂತಾ ಸಿದ್ದರಾಮಯ್ಯ ಕೇಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ನೈತಿಕತೆ ಕಳೆದುಕೊಂಡಿರುವುದರಿಂದ ಬಾಲವೇ ಅಲ್ಲಾಡಿಸುವ ಸ್ಥಿತಿ ಆಗಿದೆ.ಸಿದ್ದರಾಮಯ್ಯನವರಿಗೆ ಏನಾದರೂ ಮರ್ಯಾದೆ ಇದ್ರೆ ಕೋರ್ಟ್ ಆದೇಶ ಗಮನಿಸಿ ರಾಜೀನಾಮೆ ಕೊಡಿ.ಪಕ್ಷದಲ್ಲಿ ನಿಮ್ಮ ನಾಯಕತ್ವಕ್ಕೆ ಅಷ್ಟು ಬೆಲೆ ಇದ್ದರೆ ನೀವು ಪರಿಶುದ್ಧರಾಗಿ ಬಂದ ಮೇಲೆ ಮತ್ತೆ ಸಿಎಂ ಮಾಡಲಿ.ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಕೆಡವಲು ನಾವು ಹೊರಟಿಲ್ಲ, ನಮ್ಮ ಉದ್ದೇಶವೂ ಅದಲ್ಲ.ತಪ್ಪು ಮಾಡಿದವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ.ಎಲ್ಲಾ ಹಿಂದುಳಿದ ವರ್ಗದವರಿಗೂ ಹೀಗೆಯೇ ತೊಂದರೆ ಆಗಿದೆ.ದೇವರಾಜ ಅರಸುಗೆ ತೊಂದರೆ ಕೊಟ್ಟವರು ಬಿಜೆಪಿಯವರಲ್ಲ, ಅಂದು ಮೋದಿ ರಾಜಕಾರಣದಲ್ಲೇ ಇರಲಿಲ್ಲ.ಅರಸುಗೆ ತೊಂದರೆ ಕೊಟ್ಟವರು ಕಾಂಗ್ರೆಸ್ ನವರು.ಸಿದ್ದರಾಮಯ್ಯ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದೀರಿ, ರಾಜೀನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ.