ಮನೆ Latest News ನನಗೆ ಯಾರೂ ಸಹೋದರಿಯರು ಇಲ್ಲ; ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ

ನನಗೆ ಯಾರೂ ಸಹೋದರಿಯರು ಇಲ್ಲ; ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ

0

 

ನವದೆಹಲಿ; ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹೋದರ ನ ವಿರುದ್ಧ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ‌ ಸುದ್ದಿಗೋಷ್ಟಿ ನಡೆಸಿದ್ರು.

ಈ ವೇಳೆ ಮಾತನಾಡಿದ ಅವರು ನಿನ್ನೆ ನನ್ನ ಸಹೋದರನ ಮೇಲೆ ಎಫ್ ಐ ಆರ್ ಆಗಿದೆ.ಇಂದು ಕಾಂಗ್ರೆಸ್ ನವರು ಪ್ರತಿಭಟನೆ ಮಾಡಿದ್ದಾರೆ.ನನ್ಮ ರಾಜೀನಾಮೆಗೆ ಕಾಂಗ್ರೆಸ್ ನವರು ಒತ್ತಾಯಿಸುತ್ತಿದ್ದಾರೆ.ನನಗೆ ಸಹೋದರಿ ಇದ್ದಾರೆ ಎನ್ನುತ್ತಿದ್ದಾರೆ.ನನಗೆ ಯಾರೂ ಸಹೋದರಿಯರು ಇಲ್ಲ.ನಮ್ಮ‌ ತಾಯಿಗೆ ನಾಲ್ಕು ಮಕ್ಕಳು ಮಾತ್ರ.ಒಬ್ಬ ಸಹೋದರ ತೀರಿ ಹೋಗಿದ್ದಾರೆ. ಗೋಪಾಲ್ ಜೋಷಿ ನನ್ನ ಸಹೋದರ.ನಾನು, ಗೋಪಾಲ್ ಜೋಷಿ ಬೇರೆಯಾಗಿ 35 ವರ್ಷ ಆಗಿದೆ.ದುರ್ದೈವದಿಂದ‌ ಅವರ ಮೇಲೆ ಹಿಂದೆಯೂ ಆರೋಪ ಬಂದಿತ್ತು.ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಇಂತಹದ್ದೆ ವಿಚಾರ ಬಂದಿತ್ತು.ನನ್ನ ಸಹೋದರನೊಂದಿಗೆ ನನ್ನ ಹೆಸರು ಥಳುಕು ಹಾಕಲಾಗುತ್ತೆ.ನನ್ನ ಸಹೋದರನ ಜೊತೆ ನನ್ನ ಹೆಸರು ಥಳುಕು ಹಾಕದಂತೆ ಕೋರ್ಟ್ ನಿಂದ‌ ತಡೆ ತರಲಾಗಿದೆ ಎಂದರು.

ಮುಂದುವರೆದು ಮಾತನಾಡಿದ ಅವರು ನನ್ನ ಹಾಗೂ ಗೋಪಾಲ್ ಜೋಷಿ ಮಧ್ಯೆ ಯಾವುದೇ ವ್ಯವಹಾರ ಇಲ್ಲ. ವ್ಯವಹಾರ ಅಥವಾ ಅವ್ಯವಾಹಾರ ಇಲ್ಲ.ಸಾಮಾಜಿಕ ಅಥವಾ ಆರ್ಥಿಕವಾಗಿ ಯಾವುದೆ ಸಂಬಂಧ ಇಲ್ಲ.ಕೋರ್ಟ್ ಗೂ ಇದನ್ನೆ‌ ಹೇಳಿದ್ದೇನೆ.2012ರಲ್ಲೆ ಇದನ್ನು ಜಾಹೀರಾತು ಅನ್ನು ನೀಡಿದ್ದೇನೆ.ನನ್ನ ಹೆಸರು ಥಳುಕು ಹಾಕದಂತೆ ಜಾಹೀರಾತು ನೀಡಲಾಗಲಿದೆ. ವಿಜಯಲಕ್ಷ್ಮಿ ಯಾರು ಅಂತಾ ನನಗೆ ಗೊತ್ತಿಲ್ಲ.ನಾನು 35 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ.ಯಾರಾದ್ರೂ ಫೋಟೊ ತೆಗೆಸಿಕೊಂಡಿದ್ರೆ ನನಗೆ ಗೊತ್ತಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದ್ರು.

ನನ್ನ ಸಹೋದರ ಜೊತೆ ಕುಟುಂಬ ವ್ಯವಸ್ಥಾಪನ ಪತ್ರ ಮಾಡಿಸಿಕೊಳ್ಳಲಾಗಿದೆ.ನನ್ನ ಹಾಗೂ ಸಹೋದರನ ಜೊತೆ ಯಾವುದೆ ಮಾತುಕತೆ ನಡೆಸುತ್ತಿಲ್ಲ.ದುಡ್ಡು ಕಳೆದುಕೊಂಡಿರುವುದಕ್ಕೆ ವಿಷಾದವಿದೆ.ನನ್ನ ಬಂಧಿಸಬೇಕು ಎನ್ನುವುದು ಹಾಸ್ಯಾಸ್ಪದ.ಯಾರು ಹಣ ಪಡೆದಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ.ಕಲ್ಲಿದ್ದಲು ಸಚಿವನಾಗಿ ಕೆಲಸ ಮಾಡಿದ್ದೇನೆ.ಬೇರೆ ಸಚಿವರು ಕಲ್ಲಿದ್ದಲು ಮಸಿ ಹತ್ತಿಸಿಕೊಂಡು ಹೋಗಿದ್ದಾರೆ.ನಾನು ಆ ತರಹದ ಯಾವುದೆ ಕೆಲಸ ಮಾಡಿಲ್ಲ ಎಂದರು.

ಇದೇ ವೇಳೆ ಮುಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ದಾಳಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಇಡಿ ದಾಳಿಯಿಂದ ಭಯ ಪಡುವ ಅಗತ್ಯವಿಲ್ಲ.ಗಾಬರಿಯಾಕೆ ಆಗಬೇಕು..?.ಕಾನೂನು ತನ್ನ ಕ್ರಮ ಮಾಡುತ್ತಿದ್ದೆ ಎಂದರು. ಇನ್ನು ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿ ಅವ್ರು ನಮ್ಮ ಪಕ್ಷದ ನಾಯಕರ‌ ಜೊತೆ ಮಾತಾಡ್ತಾರೆ.ರಾಷ್ಟ್ರೀಯ ಅಧ್ಯಕ್ಷರು ಯಾರ ಜೊತೆ ಮಾಡಬೇಕು ಮಾತಾಡ್ತಿದ್ದಾರೆ.ಚನ್ನಪಟ್ಟಣದ ಕ್ಷೇತ್ರದ ಬಗ್ಗೆ ನಾನು ಹೆಚ್ಚು ಬಯಸುವುದಿಲ್ಲ. ಜೆಡಿಎಸ್ ಕ್ಷೇತ್ರ ಅದು, ನಮ್ಮ ರಾಷ್ಟ್ರೀಯ ಅಧ್ಯಕ್ಷರ ಜೊತೆ ತೀರ್ಮಾನ ಮಾಡ್ತಾರೆ. ಯೋಗೆಶ್ವರ್ ನಾನು ಅಭ್ಯರ್ಥಿ ಅಂತ ಹೇಳಬಹುದು ಆದರೆ ಪಕ್ಷ ತೆಗೆದುಕೊಳ್ಳು ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದರು.