ಮನೆ Latest News ಪ್ರಹ್ಲಾದ್ ಜೋಷಿ ಅಮಿತ್ ಶಾ ಸಂತತಿಯವರು : ಕೆಪಿಸಿಸಿ ಕಚೇರಿಯಲ್ಲಿ ಬಿಕೆ ಹರಿಪ್ರಸಾದ್ ಹೇಳಿಕೆ

ಪ್ರಹ್ಲಾದ್ ಜೋಷಿ ಅಮಿತ್ ಶಾ ಸಂತತಿಯವರು : ಕೆಪಿಸಿಸಿ ಕಚೇರಿಯಲ್ಲಿ ಬಿಕೆ ಹರಿಪ್ರಸಾದ್ ಹೇಳಿಕೆ

0

ಬೆಂಗಳೂರು; ಪ್ರಹ್ಲಾದ್ ಜೋಷಿ ಅಮಿತ್ ಶಾ ಸಂತತಿಯವರು ಎಂದು ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಆರ್ ಎಸ್ ಎಸ್ ನೂರು ವರ್ಷದ ಆಚರಣೆಗೆ ಮುಂದಾಗಿದೆ. ಇದಕ್ಕೆ ಆರ್ ಎಸ್ ಎಸ್ ಹುನ್ನಾರ ಇದ್ದಂತೆ ಅಮಿತ್ ಶಾ ಮಾತಾಡಿದ್ದಾರೆ. ಅಮಿತ್ ಶಾ ಗಡಿಪಾರಾಗಿದ್ದವರು. ಇವರನ್ನು ಉಪಯೋಗಿಸಿಕೊಂಡು ಆರ್ ಎಸ್ ಎಸ್ ಹೇಳಿಸಿದೆ. ಮೋದಿಯವರು ಕೂಡ ಅಮಿತ್ ಶಾ ಮಾತನ್ನು ಸಮರ್ಥನೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಅಮಿತ್ ಶಾ ವಿರುದ್ದ ಹೋರಾಟ ಹಮ್ಮಿಕೊಳ್ತೀವಿ ಎಂದ  ಅವರು ಪ್ರಹ್ಲಾದ್ ಜೋಷಿ ಅಮಿತ್ ಶಾ ಸಂತತಿಯವರು. ಅಮಿತ್ ಶಾ ನಕಲಿ ಎನ್ ಕೌಂಟರ್ ಗೆ ಹೆಸರುವಾಸಿ. ಅವರು ಮಾಡಿದ ಪಾಠವನ್ನು ಇಲ್ಲಿ ಬಂದು ಹೇಳೋದಕ್ಕೆ ಪ್ರಹ್ಲಾದ ಜೋಷಿ ಹೇಳಿದ್ದಾರೆ. ಬಿಜೆಪಿಯವರು ಸಂಘ ಪರಿವಾರದವರು ವ್ಯಸನಿಗಳು, ವಿಕೃತರು. ರಾಹುಲ್ ಗಾಂಧಿಯಿಂದ ಹಿಡಿದು ಗಾಂಧಿತನಕ ಇವರು ಅಪಪ್ರಚಾರ ಮಾಡಿಕೊಂಡು ಬರ್ತಾರೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

ಬಿಜೆಪಿಯನ್ನು ಬೇರೆ ಅರ್ಥದ ಪಾರ್ಟಿ ಮಾಡೋದಕ್ಕೆ ಇವರು ಹೊರಟಿದ್ದಾರೆ. ರಾಹುಲ್ ಗಾಂಧಿ ಇವರು ಹೇಳಿದ ತರ ಅಡಿಕ್ಟ್ ಆಗಿದ್ದರೆ ೧೦ ಸಾವಿರ ಕಿಲೋ ಮೀಟರ್ ನಡೆಯೋದಕ್ಕೆ ಆಗುತ್ತಿರಲಿಲ್ಲ. ಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿ ತನಕ ಅಪಪ್ರಚಾರ ಮಾಡಿದ್ದಾರೆ. ಈಗ ಅಂಬೇಡ್ಕರ್ ಬಗ್ಗೆಯೂ ಅಪಪ್ರಚಾರ ಮಾಡ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಲೆಕ್ಕಾಚಾರ ಹಾಕಿಕೊಂಡೇ ಹೇಳಿದ ಮಾತು ಇದು. ಇವರಿಗೆ ದಲಿತರು ಕೇಳವರ್ಗದವರು ಶೂದ್ರರು ಯಾರೂ ಬೇಕಾಗಿಲ್ಲ. ಅವರಿಗೆ ಕೆಳವರ್ಗದ ಉದ್ದಾರ ಮಾಡುವುದು ಬೇಕಾಗಿಯೂ ಇಲ್ಲ. ಸುಮ್ಮನೆ ಅಮಿತ್ ಶಾ ಈ ಮಾತು ಹೇಳಿದ್ದಾರೆ ಅಂದುಕೊಳ್ಳಬೇಡಿ ಎಂದಿದ್ದಾರೆ.