ಮನೆ Latest News ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ವಿ ಸೋಮಣ್ಣ ವಾಗ್ದಾಳಿ

ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ವಿ ಸೋಮಣ್ಣ ವಾಗ್ದಾಳಿ

0

ಬಳ್ಳಾರಿ: ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ವಿ ಸೋಮಣ್ಣ ಅವರು ಬಳ್ಳಾರಿಯಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿದ್ರು.ಈ ವೇಳೆ ಮಾತನಾಡಿದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಪಕ್ಷ ರಾಜ್ಯವನ್ನ ಆರ್ಥಿಕ ದಿವಾಳಿಯತ್ತ ತೆಗೆದುಕೊಂಡು ಹೋಗ್ತಿದೆ. ಎಲ್ಲದಕ್ಕೂ ಎಸ್ ಐಟಿ ಮಾಡಿ. ವಾಲ್ಮೀಕಿ ಹಗರಣದಲ್ಲಿ ಇ.ತುಕಾರಂ ಫಲಾನುಭವಿ. ಕಾಂಗ್ರೆಸ್ ಶಾಸಕರಾಗಿದ್ದ ರೋಷನ್ ಬೇಗ್, ಹ್ಯಾರೀಸ್ ಹೆಸರು ಕೂಡ ಇದೆ. ಅವರು ವಕ್ಫ್ ಆಸ್ತಿಯನ್ನ ದುರುಪಯೋಗ ಮಾಡಿದ್ದಾರೆ ಎಂದ್ರು.

ಇನ್ನು ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ ಇಡೀ‌ ಸರ್ಕಾರ ಇಂದು ಇಲ್ಲಿ ಪ್ರಚಾರ ಮಾಡ್ತಿದೆ.ತೊಳಲಾಟ ಬಂದಿದೆ, ಉಪಚುನಾವಣೆ ಬರದಿದ್ದರೆ ಸರ್ಕಾರ ತೆಗೆಯುತ್ತಾರೆ ಅಂತ ಅವರೇ ಅಂದುಕೊಂಡಿದ್ದಾರೆ.ನೀವೇ ತಪ್ಪು ಮಾಡಿ ಯಾಕೆ 14 ಸೈಟ್ ವಾಪಾಸ್ ತೆಗೆದುಕೊಂಡ್ರಿ. ಒಂದು ತಪ್ಪು ಮಾಡಿ ಸರ್ಕಾರವನ್ನ ಸಿಎಂ ಕತ್ತಲ ಕೋಣೆಯಲ್ಲಿ‌ ಇಟ್ಟಿದ್ದಾರೆ.ಗುಡಿ ಗೋಪುರ, ಮಠ ಮಂದಿರ, ದೇವಸ್ಥಾನಗಳ ಮೇಲೆ ಕಣ್ಣು ಬಿದ್ದಿದೆ. ಜನ ತುಂಬಾ ಬುದ್ದಿವಂತರಿದ್ದಾರೆ.ಮೂರು‌ ಉಪಚುನಾವಣೆಯಲ್ಲಿ ಬಿಜೆಪಿ‌ ಗೆಲ್ಲುತ್ತೆ ಎಂದರು.

ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮುಡಾ ಪ್ರಕರಣದಲ್ಲಿ ತರಾತುರಿಯಲ್ಲಿ‌ ಎಸ್ ಐಟಿ ಮಾಡಿದ್ದೀರಿ.ಸಿಬಿಐ ಅರೆಸ್ಟ್ ಮಾಡಬಾರದು ಅಂತ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ. ನಿರುದ್ಯೋಗಿ ಭತ್ಯೆ ಯಾರಿಗೆ ಕೊಟ್ಟಿದ್ದೀರಿ?. ಆದರೆ ಚೆನ್ನಾಗಿ ಲಾಂಚ್ ಮಾಡಿದ್ದೀರಿ ಎಂದರು. ಬಿಜೆಪಿ‌ ಸರ್ಕಾರ 40% ಭ್ರಷ್ಟಾಚಾರದ ತನಿಖೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ವಾಲ್ಮೀಕಿಯ ಭ್ರಷ್ಟಾಚಾರ ವೈಟ್ ಅಂಡ್ ಬ್ಲಾಕ್ ನಲ್ಲಿ ಹೊರ ಬಂದಿದೆ. ಗಲಭೆ, ಅವಘಡ ಆದರೆ ನಡೆದರೆ ಯಾವುದೇ ತನಿಖೆ ಮಾಡೊಲ್ಲ. ಆಯೋಗ ಯಾಕೆ ಮಾಡಿದ್ರಿ?. ಕಾಂಗ್ರೆಸ್ ಪಕ್ಷದ ನಾಯಕರಾರ ಸೋನಿಯಾ ಗಾಂಧಿ, ರಾಹುಲ್ ಭ್ರಷ್ಟಾಚಾರದ ಬೇಲ್ ನಲ್ಲಿ ಇದ್ದಾರೆ ಎಂದ್ರು.

ಬಳ್ಳಾರಿಯಲ್ಲಿ ಜಂಟಿ ಸುದ್ದಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ವಿ.ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ ಜಂಟಿ ಸುದ್ದಿಗೋಷ್ಠಿ

ಬಳ್ಳಾರಿಯಲ್ಲಿ ಜಂಟಿ ಸುದ್ದಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ವಿ.ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಬಳ್ಳಾರಿಯ ಖಾಸಗಿ ಹೋಟೆಲ್  ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಯಿತು.

ಇನ್ನು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಡೀ ದೇಶಾದ್ಯಂತ ಮಹಾರಾಷ್ಟ್ರ, ಜಾರ್ಖಾಂಡ್ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ರಾಜ್ಯದ ಮೂರು ಕಡೆ ಉಪಚುನಾವಣೆ ನಡೆಯುತ್ತಿದೆ. ಶಿಗ್ಗಾಂವಿನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದೇನೆ. ಪ್ರಚಂಡ ವಿಶ್ವಾಸದಿಂದ NDA ರಾಜ್ಯದಲ್ಲಿ ಅಭೂತಪೂರ್ವ ಜಯವನ್ನ ಗಳಿಸಲಿದೆ. ಮಹಾರಾಷ್ಟ್ರ, ಝಾರ್ಖಾಂಡ್ ದಲ್ಲಿ ಹರಿಯಾದ ವಿಜಯ ಮೀರಿಸಿದ ಜಯ ಪ್ರಾಪ್ತಿಯಾಗಲಿದೆ ಎಂದರು.

ಛತ್ತಿಸ್ ಘಡ್, ಝಾರ್ಖಂಡ್ ನಲ್ಲಿ ಅಭೂತಪೂರ್ವ ಗೆಲವು ಸಾಧಿಸುತ್ತೇವೆ. ಮತದಾರರು ಬಿಜೆಪಿಗೆ ಮತ ಹಾಕ್ಬೇಕು ಅಂತ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರರು, ಮುಸ್ಲಿಮರನನ್ನೇ ಗುರಿಯಾಗಿಸಿದೆ ಧ್ಯೇಯವಾಗಿಸಿದೆ.2013-18ರಲ್ಲಿ‌ PFI, SDPI, semi ಪೂರ್ವದ ಅವತಾರಗಳು. 175 ಕೇಸ್ ಗಳನ್ನ ವಾಪಾಸ್ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಹಿಂದೂ ಸಂಘಟನೆ, ಮಂದಿರ, ಹಿಂದೂಗಳ ಮೇಲೆ‌ ಅಟ್ಯಾಕ್ ಮಾಡ್ತಾರೆ. ಸಾಫ್ಟ್ ಕಾರ್ನರ್ ಆಗಿ ಅವರನ್ನ ನೋಡಿಕೊಳ್ತಾರೆ. ಹುಬ್ಬಳ್ಳಿ ಘಟನೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಇನ್ನು ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಮುಡಾದಲ್ಲಿ‌ ಸಿಲುಕಿ ಹಾಕಿಸಿದ್ರು ಅಂತಾರೆ. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನವರು ನಿಸ್ಸೀಮರು. ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ಕೊಟ್ರು. ಆಗ ಕೋರ್ಟ್ ಗೆ ಹೋಗಿದ್ರು. ಸಿದ್ದರಾಮಯ್ಯ ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ. ವಕ್ಫ್ ಅದಾಲತ್ ಸಿಎಂ ಸೂಚನೆ ಮೇರೆಗೆ ಮಾಡಿದೆ ಅಂತ ಜಮೀರ್ ಎಂದ್ರು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಪ್ರಾಸಿಕ್ಯೂಷನ್ ಕೊಡ್ತು. ಕೋರ್ಟ್ ಏನು ಹೇಳಿದೆ ?.ನಿಮ್ಮ ಪ್ರಭಾವ ಇಲ್ಲದೆ ಏನೂ ಮಾಡೋಕೆ ಸಾಧ್ಯವಿಲ್ಲ‌ ಅಂತ ಹೈಕೋರ್ಟ್ ಹೇಳಿದೆ. ಇಂದಿನವರೆಗೆ ಸಿಂಗಲ್ ಬೇಂಚಿನಲ್ಲಿ‌ ತಡೆಯಾಜ್ಞೆ ಇಲ್ಲ.ನಿನ್ನೆ ಖಾಲಿ ಹಾಳೆಯನ್ನ ಸಿಎಂ ಹಂಚಿದ್ದಾರೆ. ಇಡಿ, ಸಿಬಿಐ ಅಂತಾರೆ, ಅಲ್ಲಿ ಬಂದಿದೆ?. ಮೊದಲು ನಿಮ್ಮ‌ ದೂರು ಬಂದಿದೆ.ಮನಿ‌ ಲಾಂಡ್ರಿಂಗ್ ನಲ್ಲಿ‌ ಇಡಿ‌ ತಪಾಸಣೆ ಮಾಡ್ತಿದ್ದಾರೆ. ನಿಮ್ಮ‌ ಕಾಲದಲ್ಲಿ ಇಡಿ ಆಗಿದ್ದು ನಮ್ಮ‌ ಕಾಲದಲ್ಲಿ ಅಲ್ಲ ಎಂದಿದ್ದಾರೆ.