ಹುಬ್ಬಳ್ಳಿ: ಸಿ ಟಿ ರವಿ ಅವರನ್ನು ಫೇಕ್ ಎನ್ ಕೌಂಟರ್ ಮಾಡೋ ಉದ್ದೇಶ ಇತ್ತಾ.? ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಾರ್ಟಿಗೆ ಹತಾಶೆಯಾಗಿದೆ. ಕರ್ನಾಟಕ ಮತ್ತು ತೆಲಂಗಾಣ ಗೆದ್ದ ನಂತ್ರ ಜಗತ್ತು ಗೆದ್ದ ಹಾಗೇ ವರ್ತನೆ ಆರಂಭವಾಗಿತ್ತು. ಹತಾಶರಾಗಿ ಫೇಕ್ ನರೇಟಿವ್ ಪ್ರಸ್ತುತ ಪಡಿಸ್ತಿದ್ದಾರೆ. ಕಾಂಗ್ರೆಸ್ ನವರು ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಘೋರ ಅಪಮಾನ ಮಾಡಿದ್ದಾರೆ. ಸಂಸತ್ ನಲ್ಲಿ ರಾಹುಲ್ ಗಾಂಧಿ ಮೊಣಕೈನಿಂದ ಗುದ್ದಿದ್ದಾರೆ. ಉಪಚುನಾವಣೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದ್ದಾರೆ. ಅಂಬೇಡ್ಕರ್ ಅವರ ರಾಜೀನಾಮೆಯಿಂದ ಯಾವುದೇ ಲಾಸ್ ಆಗಲ್ಲ ಅನ್ನೋ ನೆಹರು ಪತ್ರವನ್ನು ನಾವು ಬಿಡುಗಡೆ ಮಾಡಿದ್ದೇವೆ ಎಂದರು.
ಅಂಬೇಡ್ಕರ್ ರಾಜೀನಾಮೆ ಕೊಟ್ಟಾಗ, ಏನೂ ಪರಿಣಾಮ ಬೀರಲ್ಲ ಎಂದು ನೆಹರು ಪತ್ರ ಬರೀತಾರೆ. ನೆಹರೂ ಭಾರತ ರತ್ನ,ಇಂದಿರಾ ಗಾಂಧಿ ಗೆ ಭಾರತ ರತ್ನ. ಅವರು ಸ್ವಂತ ಕ್ಕೆ ಭಾರತ ರತ್ನ ತಗೊಂಡಿದ್ದಾರೆ. ಇಂದಿರಾಗಾಂಧಿ ಸ್ವಂತ ಕ್ಕೆ ಭಾರತ ರತ್ನ ಕೊಟ್ಟುಕೊಂಡಿದ್ದಾರೆ. ಆದ್ರೆ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಭಾರತ ರತ್ನ ಕೊಡಲಿಲ್ಲ. ಅವರಿಗೆ ಭಾರತ ರತ್ನ ಕೊಡಲು ಕಾಂಗ್ರೆಸ್ ಏತರ ಸರ್ಕಾರ ಬರಬೇಕಾಯ್ತು ಎಂದ ಜೋಶಿ. ರಾಜೀವ್ ಗಾಂಧಿ ಮೀಸಲಾತಿ ವಿಚಾರವಾಗಿ 2.40 ನಿಮಿಷ ಮಾತಾಡಿದ್ದಾರೆ. ಅಂಬೇಡ್ಕರ್ ಗೆ ಸತತ ಅಪಮಾನ ಮಾಡಿದ್ದಾರೆ. ಇದೇ ವಿಷಯಕ್ಕೆ ಗಲಾಟೆ ಮಾಡಿ ಸಿಟಿ ರವಿ, ಬಿಜೆಪಿ ಹತ್ತಿಕ್ಕೋ ಪ್ರಯತ್ನ ಮಾಡುತ್ತಿದ್ದಾರೆ. ಕಾನೂನು ಹೋರಾಟ ಮಾಡ್ತೀವಿ ಎಂದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಅಧಿಕಾರಿಗಳ ವರ್ತನೆ ನಾವು ಖಂಡಿಸುತ್ತೇವೆ. ಸರ್ಕಾರ ಒಂದೇ ಇರಲ್ಲ. ಇದು ಕಾನೂನು ಬಾಹೀರವಾದ ಪ್ರಕ್ರಿಯೆ. ಬೆಳಗಾವಿ ಕಮೀಷನರ್ ಎಚ್ಚರಿಕೆಯಿಂದ ಇರಬೇಕು. ಸರ್ಕಾರ ಬದಲಾಗತ್ತೆ ಎಂದು ಪ್ರಹ್ಲಾದ್ ಜೋಶಿ ಎಚ್ಚರಿಸಿದ್ದಾರೆ. ಖಾನಾಪೂರ, ಕಬ್ಬಿಣ ಗದ್ದೆ ಕಡೆ ಕರಕೊಂಡು ಹೋಗ್ತೀರಿ. ಕಮೀಷನರ್ ಅತ್ಯಂತ ಬಾಲಿಶ ಹೇಳಿಕೆ ಕೊಡತ್ತಿದ್ದಾರೆ. ವಿಧಾನಸೌಧಕ್ಕೆ ನುಗ್ಗಿದವರ ಬಂಧನ ಆಗಿಲ್ಲ.ರಾಜಕೀಯವಾಗಿ ಹೋರಾಟ ಮಾಡಿ,ಕಾನೂನು ಹೋರಾಟ ಮಾಡಿ ಎಂದು ಸಿಟಿ ರವಿ ಅವರಿಗೆ ಸಲಹೆ ಕೊಟ್ಟಿದ್ದಾನೆ ಎಂದು ತಿಳಿಸಿದರು.
ಬೆಳಗಾವಿ ಕಮೀಷನರ್ ಗೆ ಕಾನೂನಿನ ಪಾಠ ಆಗಬೇಕು. ಇದಕ್ಕೆ ನಾನು ಯಾವುದೇ ಸಹಾಯ ಮಾಡಲು ಸಿದ್ದ ಎಂದು ಸಿಟಿ ರವಿಗೆ ಹೇಳಿದ್ದೇನೆ. ವಿಧಾನ ಸೌಧದಲ್ಲಿ ಆದ ಘಟನೆ ತರಾತುರಿಯಲ್ಲಿ FIR ಮಾಡಿದ್ದಾರೆ. ಕಂಪ್ಲೇಟ್ ಕೊಟ್ಟವರು ಆಪ್ತ ಸಹಾಯಕ. ಅವರ ಒಳಗಡೆ ಇದ್ರಾ,ಕಮೀಷನರ್ ಗೆ ಕಾಮನ್ ಸೆನ್ಸ್ ಬೇಡ್ವಾ. ಬೆಳಗಾವಿ ಕಮೀಷನರ್ IPS ಆಗಲು ಅನ್ ಫಿಟ್ ಎಂದು ಜೋಶಿ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕರು ದೂರು ಕೊಟ್ಟರು ಅದು ಇದುವರೆಗೂ ದೂರು ದಾಖಲಾಗಿಲ್ಲ. ಕಮೀಷನರ್ ಛಲವಾದಿ ನಾರಾಯಣ ಸ್ವಾಮಿ ಹರಿಜನರು ಅಂತಾ ಮಾತಾಡಿಸಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಅದೊಂದು ಸಾಂವಿಧಾನಿಕ ಹುದ್ದೆ. ಗೌರವಾನ್ವಿತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು.ಅವರು ಹರಿಜನರು ಅಂತಾ ಅವರನ್ನು ಮಾತಾಡಿಸಿಲ್ವಾ ಎಂದು ಜೋಶಿ ಗರಂ ಆಗಿದ್ದಾರೆ. ನಾನು ಇದನ್ನು ತೀವೃವಾಗಿ ಖಂಡಿಸುತ್ತೇನೆ ಎಂದಿದ್ದಾರೆ. ಸಿ ಟಿ ರವಿ ಅವರನ್ನು ಫೇಕ್ ಎನ್ ಕೌಂಟರ್ ಮಾಡೋ ಉದ್ದೇಶ ಇತ್ತಾ.? ನಾನು ನಿನ್ನೆನೂ ಇದನ್ನ ಮಾತಾಡಿದ್ದೇನೆ. ಇವತ್ತು ಹೇಳ್ತಿದ್ದೀನಿ. ಯಾವುದೂ ಉದ್ದೇಶ ಇರದೆ ಹೋದ್ರೆ ಕಬ್ಬಿಣ ಗದ್ದೆಗೆ ಯಾಕೆ ಕರೆದುಕೊಂಡು ಹೋದ್ರು. ಕೆಲ ಮೀಡ್ಯಾದವರು ಇರದೆ ಹೋದ್ರೆ ಏನ ಆಗ್ತಿತ್ತೋ ಏನೋ ಎಂದ ಜೋಶಿ ಆತಂಕ ವ್ಯಕ್ತಪಡಿಸಿದ್ದಾರೆ.ಸಿಟಿ ರವಿ ಕೊಲ್ಲೋ ಸಂಚಿತ್ತು ಎಂದಿದ್ದಾರೆ. ಅದರ ಆಧಾರದ ಮೇಲೆ ನಾನು ಮಾತಾಡಿದ್ದೇನೆ. ಅಂಬೇಡ್ಕರ್ ಅವರನ್ನು ಸೋಲಿಸಿದಾಗ ನಿಮಗೆ ಯಾವ ನಾಯಿ ಕಡಿದಿತ್ತು ಎಂದು, ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜೋಶಿ ಗರಂ ಆಗಿದ್ದಾರೆ.
ಅಮಿತ್ ಶಾ ವಿಚಾರವಾಗಿ ಬಾಯಿಗೆ ಬಂದಂತೆ ಮಾತಾಡ್ತಾರೆ. ನಿಮ್ಮ ನಾಯಕರಿಗೆ ಯಾವ ನಾಯಿ ಕಡಿದಿತ್ತು ಎಂದು ಜೋಶಿ ಪ್ರಶ್ನೆ ಮಾಡಿದ್ದಾರೆ.ಸಿಟಿ ರವಿ ಪ್ರಕರಣ ಹೋಮ್ ಮಿನಿಸ್ಟರ್ ಗಮನಕ್ಕೆ ಇಲ್ಲ ಅನ್ನೋದಾದರೆ., ಆ ಹುದ್ದೆಯಲ್ಲಿ ಇರಬೇಕೋ ಬೇಡ್ವೋ ಅನ್ನೋದನ್ನು ಅವರು ವಿಚಾರ ಮಾಡಬೇಕು.ಏನೇ ಆದರೂ ಹೋಮ್ ಮಿನಿಸ್ಟರ್ ಗಮನಕ್ಕೆ ಬರುತ್ತೆ. ಗೊತ್ತಿಲ್ಲ ಅಂದ್ರೆ ಏನ್ ಅರ್ಥ, ಪರಮೇಶ್ವರ್ ಒಬ್ಬ ಜಂಟಲಮ್ಯಾನ್. ಅವರು ವಿಚಾರ ಮಾಡಬೇಕು ಎಂದು ಜೋಶಿ ಹೇಳಿದ್ದಾರೆ. ಸಿಟಿ ರವಿ ವಿಚಾರದಲ್ಲಿ ಅತ್ಯಂತ ಭಯಂಕರ ದ್ವೇಷ ಸಾಧಿಸಿದ್ದಾರೆ. ಅದಕ್ಕೆ ಬೆಳಗಾವಿ ಪೊಲೀಸರು ಸಾಥ್ ಕೊಟ್ಟಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಆರೋಪಿಸಿದ್ದಾರೆ.