ಮನೆ ಪ್ರಸ್ತುತ ವಿದ್ಯಮಾನ ನವೆಂಬರ್ ಕ್ರಾಂತಿ ಅಂದ್ರೆ ಅಶೋಕ್ ಅಣ್ಣನ ಚೇರ್ ಗೆ ಸುನೀಲ್ ಅಣ್ಣ ಬರ್ತಾರೆ: ಶಾಸಕ ಪ್ರದೀಪ್...

ನವೆಂಬರ್ ಕ್ರಾಂತಿ ಅಂದ್ರೆ ಅಶೋಕ್ ಅಣ್ಣನ ಚೇರ್ ಗೆ ಸುನೀಲ್ ಅಣ್ಣ ಬರ್ತಾರೆ: ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ

0

ಬೆಂಗಳೂರು; ನವೆಂಬರ್ ಕ್ರಾಂತಿ ಅಂದ್ರೆ ಅಶೋಕ್ ಅಣ್ಣನ ಚೇರ್ ಗೆ ಸುನೀಲ್ ಅಣ್ಣ ಬರ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ

ಬೆಂಗಳೂರಿನಲ್ಲಿ ಮಾತನಾಡಿದ ಅವರು ನವೆಂಬರ್ ಕ್ರಾಂತಿ ಅಂದ್ರೆ ಅಶೋಕ್ ಅಣ್ಣನ ಚೇರ್ ಗೆ ಸುನೀಲ್ ಅಣ್ಣ ಬರ್ತಾರೆ. ಅವರ ಖುರ್ಚಿ ಹೋಗುತ್ತದೆ, ಇದೇ ಕ್ರಾಂತಿ ಅನ್ಸುತ್ತೆ ಎಂದಿದ್ದಾರೆ. ನಿಮ್ಮ ಪಕ್ಷ ದಲ್ಲಿ ಬದಲಾವಣೆ ಆಗುತ್ತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಪ್ರಾಯಶಃ ಬದಲಾವಣೆ ಇರಬಹುದೇನೋ? ಎಂದ ಅವರು ಸಂಪುಟಕ್ಕೆ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ದೈವ ಬಲ, ವಿಷ್ಣು ವಿನ ಅವತಾರ ಅಂತ ಬಿಜೆಪಿ ಅವರು ನೋಡ್ತಾರೆ. ಮಂತ್ರಿ ಆಸೆ ಯಾರಿಗೆ‌ ಇರಲ್ಲ ಹೇಳಿ, ಅವಕಾಶ ಕೊಟ್ಟರೂ ಕೊಡಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

ನವೆಂಬರ್ ಕ್ರಾಂತಿ ಅಂದ್ರೆ ಅಶೋಕಣ್ಣನ ಚೇರ್ ಗೆ ಸುನೀಲ್ ಅಣ್ಣ ಬರುತ್ತಿದ್ದಾರೆ.. ಖಂಡಿತವಾಗಿ ನವೆಂಬರ್ ಕ್ರಾಂತಿ ಆಗುತ್ತೆ. ಸುನೀಲ್ ಅವರು ಅಶೋಕಣ್ಣನ ಚೇರ್ ಕಿತ್ತುಕೊಂಡು ಹೊರಟು ಹೋಗುತ್ತಾರೆ. ಅಶೋಕಣ್ಣ ಪದ್ಮನಾಭನಗರದಲ್ಲಿ ಜೋತಿಷ್ಯಾಲಯ ಚಾಪೆ ಮೇಲೆ ಕುಳಿತುಕೊಂಡಿರುತ್ತಾರೆ. ಇದೇ ನವೆಂಬರ್ ಕ್ರಾಂತಿ. ಅಶೋಕಣ್ಣ ಪದೇ ಪದೇ ಅಕ್ಟೋಬರ್ , ನವೆಂಬರ್ ಕ್ರಾಂತಿ ಅನ್ನೋದನ್ನ ನೋಡಿದ್ರೆ. ಅಕ್ಟೋಬರ್‌ ಕ್ರಾಂತಿಯಲ್ಲಿ ಅಶೋಕಣ್ಣನ ಷಡ್ಯಂತ್ರ ಇದೆ ಅನಿಸುತ್ತೆ ಎಂದಿದ್ದಾರೆ.

ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ಚರ್ಚೆ ವಿಚಾರದ ಬಗ್ಗೆ ಮಾತನಾಡಿ ನವೆಂಬರ್ 15 ರಿಂದ 30 ರವರೆಗೆ ಬದಲಾವಣೆ ಇರಬಹುದು ಅಂತ ನಮ್ಮ ಪಕ್ಷದವರು ಮಾತನಾಡುತ್ತಿದ್ದಾರೆ. ಬಹುಶಃ ಇರಬಹುದೇನೋ. ಆದ್ರೆ ಸಿಎಂ ಯಾರಾಗಬೇಕು, ಡಿಸಿಎಂ ಯಾರಾಗಬೇಕು ಅಂತ ಮಾತನಾಡುವಷ್ಟು ದೊಡ್ಡವನಲ್ಲ. ನಾನು ಒಬ್ಬ ಎಂಎಲ್ಎ. ಎಲ್ಲ ಸಮುದಾಯದವರು ಸಿಎಂ ಆಗಬೇಕು ಅಂತ ನನಗೆ ಆಸೆ ಇರುತ್ತೆ ಎಂದ ಅವರು ಪ್ರದೀಪ್ ಈಶ್ವರ್ ಸಚಿವನಾಗುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಬಿಜೆಪಿ ಅವರು ನನ್ನನ್ನು ವಿಷ್ಣುವಿನ ಅವತಾರದಲ್ಲಿ ನೋಡುತ್ತಿದ್ದಾರೆ. ಅವರು ಹಂದಿ ಅನ್ನೋ ಪದ ಬಳಸಿದ್ದಾರೆ. ವಿಷ್ಣು ಹಂದಿ ರೂಪ ತಾಳಿ ಸಂಹಾರ ಮಾಡಿದ್ರು. ಅವರು ವಿಷ್ಣುವಿನ ಅವತಾರದಲ್ಲಿ ನನ್ನನ್ನು ನೋಡಿದಾಗ ರಾಜಭವನಕ್ಕೆ ಹೋಗೋದ್ರಲ್ಲಿ ತಪ್ಪಿಲ್ಲ. ಆಸೆ ಯಾರಿಗಿರಲ್ಲ. ಸಿಎಂ ಮತ್ತು ಡಿಸಿಎಂ ಸಾಹೇಬ್ರ  ಪ್ರೀತಿಯ ಪುತ್ರ. ನಾನು ಪ್ರಮಾಣವಚನ ಸ್ವೀಕರಿಸದೇ ಇದ್ದರೂ ನಮ್ಮ ಸ್ನೇಹಿತರು ಪ್ರಮಾಣ ವಚನ ಸ್ವೀಕರಿಸುವುದನ್ನ ನೋಡಲು ರಾಜಭವನಕ್ಕೆ ಬರಲು ಹೋಗುತ್ತೇನೆ ಎಂದು ಹೇಳಿದ್ದಾರೆ.

ಪ್ರತಾಪ್‌ ಸಿಂಹ ವಿಚಾರವಾಗಿ ಪ್ರದೀಪ್ ಈಶ್ವರ್ ಸೈಲೆಂಟ್ ಆಗಿರುವ ವಿಚಾರದ ಬಗ್ಗೆ ಮಾತನಾಡಿ Agree to disagree ಇದನ್ನು ಚಾರ್ಟ್ ಜಿಪಿಟಿ ಯಲ್ಲಿ ನೋಡಲು ಹೇಳಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.