ಬೆಂಗಳೂರು; ಸ್ಯಾಂಡಲ್ ವುಡ್ ಗೆ ನಿರಂತರವಾಗಿ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಿದ್ದು , ಸದ್ಯ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹೀಗಾಗಿ ಈ ಎಲ್ಲಾ ಸಂಕಷ್ಟದಿಂದ ದೂರ ಮಾಡಲು ಕಲಾವಿದ ಸಂಘದವರು ದೇವರ ಮೊರೆ ಹೋಗಿದ್ದಾರೆ. ಅದರಂತೆ ಕಲಾವಿದರ ಸಂಘ ಕಟ್ಟಡದಲ್ಲಿ ಹೋಮ ಹವನ ಹಮ್ಮಿಕೊಳ್ಳಲಾಗಿತ್ತು.
ನಟ , ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ನೇತೃತ್ವದಲ್ಲಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಕೋವಿಡ್ ಬಳಿಕ ಪೂಜೆ ಮಾಡ್ಬೇಕು ಅಂತಾ ಪ್ಲ್ಯಾನ್ ಮಾಡಲಾಗಿತ್ತು. ಅದರೆ ಅದಕ್ಕೆ ಸಮಯ ಈಗ ಕೂಡಿ ಬಂದಿದ್ದರಿಂದ ಇಂದು ಪೂಜೆ ನಡೆಯಿತು..ಇಂದು ಒಳ್ಳೆಯ ದಿನ ಆಗಿರೋದ್ರಿಂದ ಇಂದೇ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಪೂಜಾ ಕಾರ್ಯದಲ್ಲಿ ಇಂಡಸ್ಟ್ರಿಯ ಬಹುತೇಕ ಕಲಾವಿದರು ಭಾಗಿಯಾಗಿದ್ದರು.
ಇಂಡಸ್ಟ್ರಿಯ ಒಗ್ಗಟ್ಟು, ಥಿಯೇಟರ್ ಸಮಸ್ಯೆ, ನಿರ್ಮಾಪಕರ ಸಮಸ್ಯೆ ಹೀಗೆ ಚಿತ್ರರಂಗದ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಲು ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಗಣಪತಿ ಹೋಮ, ಸರ್ಪಶಾಂತಿ, ಮೃತ್ಯುಂಜಯ ಹೋಮ ಹಮ್ಮಿಕೊಳ್ಳಲಾಗಿತ್ತು. ಇನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯ ಎಲ್ಲಾ ಸಂಘಗಳಿಗೂ ಆಹ್ವಾನ ನೀಡಲಾಗಿತ್ತು. ಇಂದು ಬೆಳಗ್ಗಿನಿಂದಲೇ ಪೂಜೆ ಆರಂಭಗೊಂಡಿತ್ತುಯ
ಗಣ ಹೋಮ, ಆಶ್ಲೇಷ ಬಲಿ, ಮೃತ್ಯುಂಜಯ ಹೋಮ, ಸರ್ಪಶಾಂತಿ ಹಮ್ಮಿಕೊಳ್ಳಲಾಗಿತ್ತು. ಐದು ಜನ ಮುತ್ತೈದೆಯರು ದೀಪ ಹಚ್ಚಿದ ಬಳಿಕ ಪೂಜೆ ಆರಂಭವಾಯಿತು. ಮೊದಲಿಗೆ ಗಣ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷಾ ಬಲಿ ಪೂಜೆ, ಕೊನೆಗೆ ಸರ್ಪ ಶಾಂತಿ ನಡೆಯಿತು. ಜ್ಯೋತಿಷಿ- ಅಧ್ಯಾತ್ಮ ಚಿಂತಕರೂ ಆದ ಪ್ರಕಾಶ್ ಅಮ್ಮಣ್ಣಾಯ ನೇತೃತ್ವದಲ್ಲಿ ಪೂಜೆಗಳು ನಡೆಯಿತು.
ಇನ್ನು ಈ ಪೂಜಾ ಕಾರ್ಯದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್, ನಟಿ ವನಿತಾ ವಾಸು, ನಟಿ ಪದ್ಮಜಾ ರಾವ್, ಸುಮಲತಾ ಅಂಬರೀಶ್ , ರಾಗಿಣಿ, ನಟ ಜಗ್ಗೇಶ್, ಅಭಿಷೇಕ್ ಅಂಬರೀಶ್, ನೆನೆಪಿರಲಿ ಪ್ರೇಮ್, ನಟಿ ಪ್ರಮೀಳಾ ಜೋಷಾಯ್, ರೇಖಾ ದಾಸ್ , ಜ್ಯೋತಿ ಬಂಟ್ವಾಳ್ ಭಾಗಿಯಾಗಿದ್ದರು.
ನಟಿ ಜ್ಯೋತಿ ಬಂಟ್ವಾಳ ಮೇಲೆ ದೇವರ ಅವಾಹನೆ
ಇನ್ನು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಾಗದರ್ಶನ ನಡೆಯುತ್ತಿದ್ದ ವೇಳೆ ಹಿರಿಯ ನಟಿ ಜ್ಯೋತಿ ಬಂಟ್ವಾಳ ಮೈ ಮೇಲೆ ದೇವರು ಬಂದಂತೆ ವರ್ತಿಸಿದ್ರು.ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ನನಗೆ ದೈವ ದೇವರ ಕಾರ್ಯಕ್ರಮದ ವೇಳೆ ಈ ರೀತಿ ಆಗುತ್ತದೆ. ಮುಖ್ಯವಾಗಿ ದೇವಿಯ ಪೂಜೆಯ ವೇಳೆ ಈ ರೀತಿ ಆಗುತ್ತೆ ಅಂತಾ ತಿಳಿಸಿದ್ರು.ದೇವರ ಮೇಲಿನ ಅತಿಯಾದ ಭಕ್ತಿಯಿಂದ ಈ ರೀತಿ ಆಗಿರಬಹುದು ಎಂದರು. ಇನ್ನು ನಾಗಾರಾಧನೆ ವೇಳೆ ಕೂಡ ನನಗೆ ಈ ರೀತಿ ಆಗುತ್ತೆ. ಇವತ್ತು ದೇವರು ಇಲ್ಲಿ ಬಂದು ಪೂಜೆ ಸ್ವೀಕರಿಸಿದ್ದಾರೆ ಅಂತಾ ಗೊತ್ತಾಗಲು ನನ್ನ ವೇಳೆ ಈ ರೀತಿ ದೇವರು ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.ಅಲ್ಲದೇ ಎಲ್ಲಾ ಪೂಜೆಗಳಿಂದ ಚಿತ್ರರಂಗದ ಸಂಕಷ್ಟ ದೂರವಾಗುತ್ತೆ ಅನ್ನೋ ನಂಬಿಕೆ ನನಗೆ ಇದೆ ಅಂತಾ ಅವರು ಇದೇ ವೇಳೆ ತಿಳಿಸಿದ್ರು.
ಇನ್ನು ಪೂಜೆ ಹಿನ್ನೆಲೆ ಕಲಾವಿದರ ಸಂಘಕ್ಕೆ ಆಗಮಿಸಿದ ಹಿರಿಯ ನಟ ಜಗ್ಗೇಶ್ ಮಾತನಾಡಿ ಇಲ್ಲಿ ಬಂದ ಮೇಲೆ ಇದು ದರ್ಶನ್ ಗಾಗಿ ನಡೆದ ಪೂಜೆ ಅಂತಾ ನನಗೆ ಮಾಹಿತಿ ಬಂತು. ದರ್ಶನ್ ಗಾಗಿ ನಡೆಯುತ್ತಿದ್ದ ಪೂಜೆ ಆದ್ರೆ ನಾನು ಬರುತ್ತಿರಲಿಲ್ಲ. ಯಾಕಂದ್ರೆ ಅದು ಬೇರೆ ಆಯಾಮ ಪಡೆಯುತ್ತೆ.ಇದು ಕಲಾವಿದರ ಒಳಿತಿಗಾಗಿ ನಡೆಯುತ್ತಿರುವ ಪೂಜೆ ಹಾಗಾಗಿ ಬಂದೆ ಎಂದಿದ್ದಾರೆ.











