ಬೆಂಗಳೂರು; ಕೋರಮಂಗಲದಲ್ಲಿ ನಡೆದಿದ್ದ 2ನೇ ಆವೃತ್ತಿಯ ನಮ್ಮ ಬೆಂಗಳೂರು ಇಂಟರ್ ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ ಒಪನ್ ಚೆಸ್ ಟೂರ್ನಮೆಂಟ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜಕೀಯದವರು ದಿನನಿತ್ಯ ಚದುರಂಗದ ದಾಳ ಉರುಳಿಸುತ್ತಿರುತ್ತೇವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ರಾಜಕೀಯ ಚದುರಂಗ ಆಟವಿದ್ದಂತೆ.. ನಾವು ರಾಜಕಾರಣಿಗಳು. ನಮ್ಮ ದಿನನಿತ್ಯ ಜೀವನದಲ್ಲಿ ನಮ್ಮ ಚದುರಂಗದ ದಾಳ ಉರುಳಿಸುತ್ತಿರುತ್ತೇವೆ. ರಾಜಕೀಯ ಚೆಸ್ ಆಟವಿದ್ದಂತೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ನಾವು ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕು. ರಾಜಕೀಯದಲ್ಲಿ ಪ್ರತಿನಿತ್ಯ ನಮ್ಮ ದಾಳ ಉರುಳಿಸುತ್ತಿರಬೇಕು.ನಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ಆಕ್ರಮಣ ಮಾಡುತ್ತಿರಬೇಕು. ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತು ಕಲಿಯುತ್ತಾರೆ ಎಂದು ಡಿಕೆಶಿ ಹೇಳಿದ್ದಾರೆ,
ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಡಾ. ಅಂಬೇಡ್ಕರ್ ಭೇಟಿ ನೀಡಿ ನೂರು ವರ್ಷಗಳು ಸಂದ ಹಿನ್ನೆಲೆ; ಬಿಜೆಪಿಯಿಂದ ಭೀಮ ಹೆಜ್ಜೆ-ಶತಮಾನದ ಸಂಭ್ರಮ ಕಾರ್ಯಕ್ರಮ ಆಯೋಜನೆ
ಬೆಂಗಳೂರು; ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಡಾ. ಅಂಬೇಡ್ಕರ್ ಭೇಟಿ ನೀಡಿ ನೂರು ವರ್ಷಗಳು ಸಂದ ಹಿನ್ನೆಲೆ ಬಿಜೆಪಿಯಿಂದ ಭೀಮ ಹೆಜ್ಜೆ-ಶತಮಾನದ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಂಗಳೂರಿನಿಂದ ನಿಪ್ಪಾಣಿಗೆ ರಥಯಾತ್ರೆ ಮತ್ತು ಬೈಕ್ ರ್ಯಾಲಿ ಆಯೋಜನೆ ಮಾಡಲಾಗಿದ್ದು ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ರಥಯಾತ್ರೆಗೆ ಚಾಲನೆ ನೀಡಲಾಯಿತು.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ. ಮೋಹನ್, ಶಾಸಕರಾದ ಸಿ.ಕೆ. ರಾಮಮೂರ್ತಿ, ಧೀರಜ್ ಮುನಿರಾಜು, ಸಿಮೆಂಟ್ ಮಂಜುನಾಥ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಮಾಜಿ ಸಂಸದ ಎಸ್. ಮುನಿಸ್ವಾಮಿ ಉಪಸ್ಥಿತರಿದ್ದರು.
ಏಪ್ರಿಲ್ 15 ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿಯ ದುರಂಹಕಾರ, ಅಂಬೇಡ್ಕರ್ ಬಗ್ಗೆ ತಿರಸ್ಕಾರ ಭಾವನೆ ಇದೆ ಅಂತಾ ಗೊತ್ತಾಗುತ್ತದೆ. ಇತ್ತೀಚೆಗೆ ಒರಿಜಿನಲ್ ಗಾಂಧಿ ಬೆಳಗಾವಿಗೆ ಬಂದಿದ್ದಕ್ಕೆ ನಕಲಿ ಗಾಂಧಿಗಳು ತಮ್ಮ ಕಾರ್ಯಕ್ರಮ ಮಾಡಿಕೊಂಡರು.ಅಂಬೇಡ್ಕರ್ ಅದೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಬಂದು ನೂರು ವರ್ಷ ಆಗಿದೆ. ಸರ್ವ ಪಕ್ಷ ಸಮಿತಿ ರಚನೆ ಮಾಡಿ ಎರಡು ದಿನಗಳ ಕಾರ್ಯಕ್ರಮ ಮಾಡಲು ಇವರಿಗೆ ಏನಾಗಿತ್ತು?. ಅಂಬೇಡ್ಕರ್ ಅವರನ್ನು ಮರೆಯಬೇಕು ಅಂತಾ ನೂರು ವರ್ಷದ ಕಾರ್ಯಕ್ರಮ ಮಾಡಲಿಲ್ಲ ದೇಶದ ಬಗ್ಗೆ, ಸಮಾಜದ ಬಗ್ಗೆ ನಿಷ್ಠೆ ಕಮ್ಮಿ ಇರುವವರು ಕಮ್ಯುನಿಸ್ಟರು. ಅಂಬೇಡ್ಕರ್ ಯಾವ ಕ್ಷೇತ್ರಗಳಿಂದ ಅಸೆಂಬ್ಲಿಗೆ ಬಂದಿದ್ದರೋ ಆ ಕ್ಷೇತ್ರಗಳು ಹಿಂದೂ ಬಾಹುಳ್ಯವಾಗಿದ್ದವು. ಅಂಬೇಡ್ಕರ್ ಆಯ್ಕೆ ಅನೂರ್ಜಿತವಾಗಬೇಕು ಎಂದು ಅಂದು ಆ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟರು.ಅಂಬೇಡ್ಕರ್ ಶಾಸನಸಭೆಯಲ್ಲಿ ಇರಬಾರದು ಅಂತಾ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲಾಯಿತು ಎಂದ್ರು.
ಬಹಳ ಜವಾಬ್ದಾರಿಯಿಂದ ನಾನು ಈ ಆರೋಪ ಮಾಡುತ್ತಿದ್ದೇನೆ. ದಲಿತರಿಗೆ ಮೀಸಲಾತಿ ಕೊಡದಂತೆ ದೇಶದ ಎಲ್ಲಾ ಸಿಎಂಗಳಿಗೆ ಪತ್ರ ಬರೆದ ಕಾಂಗ್ರೆಸ್ ನಾಯಕ ನೆಹರು. ಅದೇ ರಕ್ತ ಕಾಂಗ್ರೆಸ್ ನವರಲ್ಲಿಯೂ ಬಂದಿದೆ.ಎಸ್ ಸಿ, ಎಸ್ಟಿ ಗಳಿಗೆ ಸ್ಥಾನ ಮೀಸಲಿಡಬೇಕು ಅಂತಾದಾಗ ಕಾಂಗ್ರೆಸ್ ವಿರೋಧ ಮಾಡಿತ್ತು. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ವಿಧಾನಸಭೆಯಲ್ಲಿ ಹೇಳಿದರೂ ಸರ್ಕಾರ ಕಾರ್ಯಕ್ರಮ ಮಾಡಿಲ್ಲ .ಇನ್ನು ಕಾಂಗ್ರೆಸ್ ದಲಿತರಿಗೆ ನ್ಯಾಯ ಕೊಡಲು ಸಾಧ್ಯವೇ. ಕಾಂಗ್ರೆಸ್ ನವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ರು.