ಬೆಂಗಳೂರು; ರಾಜ್ಯ ಗೃಹ ಇಲಾಖೆಯಲ್ಲಿ ವಿಶಿಷ್ಟ ಹಾಗೂ ಅಗ್ರಗಣ್ಯ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ರಾಜ್ಯಪಾಲರು ‘ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ’ ಮಾಡಿದರು.ರಾಜಭವನದ ಗಾಜಿನ ಮನೆಯಲ್ಲಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ , ಗೃಹ ಸಚಿವ ಜಿ. ಪರಮೇಶ್ವರ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತಿರಿದ್ದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರು ಇಂದು 2022-23ನೇ ಸಾಲಿನ ರಾಷ್ಟ್ರಪತಿಗಳ ಪದಕ ಪ್ರದಾನ ಮಾಡಿದ್ದಾರೆ.ಈ ಪದಕಗಳು ರಾಷ್ಟ್ರತಿಯ ವಿಶಿಷ್ಟ ಸೇವಾ ಮತ್ತು ಶ್ಲಾಘನೀಯ ಸೇವಾ ಪದಕ ಮತ್ತು ತನಿಖೆ, ಅಸಾಧಾರಣಾ, ತರಬೇತಿಯಲ್ಲಿ ಶ್ರೇಷ್ಠ ಪದಕಗಳನ್ನ ಪಡೆದ ಎಲ್ಲರಿಗೂ ಸರ್ಕಾರ, ನನ್ನ ಪರವಾಗಿ ಅಭಿನಂದನೆಗಳು. ಸೇವಾ ಪದಕದ ಹಿಂದೆ ನಿಮ್ಮ ಪರಿಶ್ರಮ, ಪ್ರಾಮಾಣಿಕತೆ, ಸೇವಾ ಮನೋಭಾವ, ಸಾಮಾಜಿಕ ಕಳಕಳಿ ಇರುತ್ತೆ.ಇದೆಲ್ಲ ಇದ್ದಾಗ ಅಷ್ಟೆ ಪದಕ ಬರುತ್ತೆ. ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥಿತ ಕಾಪಾಡುವುದು, ಜನರ ಆಸ್ತಿ ಪಾಸ್ತಿ ರಕ್ಷಣೆ, ಜೀವ, ಮಾನಹಾನಿ ಕಾಪಾಡುವುದು ಪೊಲೀಸರ ಜವಾಬ್ದಾರಿ. ರಾಜ್ಯ, ದೇಶ ಸುಖ, ಶಾಂತಿ ನೆಮ್ಮದಿಯಿಂದ ಇರಬೇಕಾದ್ರೆ ಪೊಲೀಸರ ಶ್ರಮ, ಪಾತ್ರ ಇರುತ್ತೆ. ಸಮಾಜದಲ್ಲಿ ಅನೇಕ ರೀತಿಯ ಅಪರಾಧ ನಡೆಯುತ್ತೆ. ಅಪರಾಧ ನಿಲ್ಲಿಸಬೇಕು, ಕಡಿಮೆ ಮಾಡ್ಬೇಕು ಅನ್ನೋದು ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ. ಅನೇಕ ರೀತಿಯ ಅಪರಾಧಗಳು ನಡೆಯುತ್ತೆ. ಅಪರಾಧಗಳನ್ನ ತಡೆಗಟ್ಟಲು ಅವಶ್ಯಕ. ಅಪರಾಧಗಳು ನಡೆಯದ ರೀತಿ ನೋಡಿಕೊಳ್ಳಬೇಕು ಎಂದರು.
ಮುಂಜಾಗ್ರತಾ ಕ್ರಮ ತೆಗೆದುಕೊಂಡ್ರೆ ಅಪರಾಧ ತಡೆಗಟ್ಟಬಹುದು. ಪೊಲೀಸರು ಜವಾಬ್ದಾರಿ ಕೆಲಸ ಮಾಡಿದ್ರೆ ಆ ರೀತಿಯ ಅಪರಾಧ ತಡೆಗಟ್ಟಬಹುದು. ಪೊಲೀಸರು ಆ ರೀತಿಯ ಕೆಲಸ ಮಾಡುವಂತಾಗಲಿ. ಸೇವಾ ಮನೋಭಾವ, ಸಾಮಾಜಿಕ ಕಳಕಳಿ ಇರಬೇಕು. ಸಾಮಾಜಿಕ ಬದ್ದತೆ ಇರಬೇಕು. ಶ್ರೀಮಂತ, ಬಡವ, ಮೇಲ್ಜಾತಿ,ಕೆಳ ಜಾತಿಗಳು ಇರುತ್ತಾರೆ. ದುರ್ಬಲರ ಜನರ ಹಕ್ಕು ರಕ್ಷಿಸುವ ಜವಾಬ್ದಾರಿ ನಮಗಿರುತ್ತೆ.ಅವನಿಗೆ ರಕ್ಷಣೆ ಇಲ್ಲ ಅನ್ನೋ ಭಾವನೆ ಬರಬಾರದು. ಬಲಾಡ್ಯರ ಕೈನಲ್ಲಿ ಅಧಿಕಾರ ಇರಬಾರದು ಅಂತ ಅಂಬೇಡ್ಕರ್ ಹೇಳಿದ್ದಾರೆ. ಜನರ ರಕ್ಷಣೆ ಪೊಲೀಸರು, ಸರ್ಕಾರದ ಕರ್ತವ್ಯ. ಅಸಮಾನತೆ ಹೋಗಬೇಕಾದ್ರೆ ಸಾಮಾನ್ಯ ಜನ ದುರ್ಬಲ ವರ್ಗದ ಜನರ ದೌರ್ಜನ್ಯವನ್ನ ಪೊಲೀಸರು ನಿಲ್ಲಿಸಬೇಕು. ನಮ್ಮ ಸಮಾಜದಲ್ಲಿ ಅನೇಕರಿಗೆ ನ್ಯಾಯ ಸಿಗದೆ ತೊಳಲಾಡುತ್ತಿದ್ದಾರೆ. ಅಂತವರ ರಕ್ಷಣೆಗೆ ಪೊಲೀಸರು ಧಾವಿಸಬೇಕು ಎಂದು ತಿಳಿಸಿದರು.
ಪೊಲೀಸರ ಸಂಖ್ಯೆಗಿಂತ ಎಷ್ಟು ಅಪರಾಧ ಕಡಿಮೆ ಆಗ್ತಿದೆ ಅನ್ನೋದು ಮುಖ್ಯ. ನೆಮ್ಮದಿ, ಶಾಂತಿಯಿಂದ ಇದೆ ಅನ್ನೋದು ಲಕ್ಷಣ ಅಲ್ಲ. ಪೊಲೀಸರು, ಅಧಿಕಾರಿಗಳು ಕಡಿಮೆ ಇದ್ರೆ ಆಗ ಶಾಂತಿ, ನೆಮ್ಮದಿ ಇರುತ್ತೆ ಅಂತ ಭಾವಿಸಬಹುದು. ರಾತ್ರಿ 12 ಗಂಟೆಗೆ ನಿರ್ಭಯವಾಗಿ ಹೆಣ್ಣು ಮಕ್ಕಳ ಓಡಾಡುವಾಗಲೇ ಸಮ ಸಮಾಜ ಸಾಧ್ಯ ಅಂತ ಗಾಂಧೀಜಿ ಹೇಳಿದ್ದಾರೆ. ದುರ್ಬಲ ಜನರಿಗಾಗಿಯೇ ಪೊಲೀಸ್ ಠಾಣೆಗಳ ಸ್ಥಾಪನೆ. ಮೊನ್ನೆಯ ನಡೆಸಿದ ಪೊಲೀಸ್ ಸಭೆಯಲ್ಲಿ ತೃಪ್ತಿಕರವಾಗಿಲ್ಲ. ನಮ್ಮ ಉದ್ದೇಶ ಸಫಲವಾಗ್ಬೇಕು. ಪ್ರತಿ ಜಿಲ್ಲೆಯಲ್ಲಿ ಯಾಕೆ ಮಾಡಿದ್ದೀವಿ?. ದುರ್ಬಲ ವರ್ಗದ ಜನರಿಗೆ ರಕ್ಷಣೆ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗ್ಬೇಕು. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇದೆ. ನಮ್ಮಲ್ಲಿ ಜಾತಿ ವ್ಯವಸ್ಥೆ ಇದೆ. ಹೀಗಾಗಿ ಅನೇಕ ಜನ ದೌರ್ಜನ್ಯ, ಅಪಮಾನ, ಅನುಭವಿಸುತ್ತಿದ್ದಾರೆ. ಪ್ರಶಸ್ತಿ ಪಡೆದದ್ದು ಹೆಮ್ಮೆ, ಸಂತೋಷದ ವಿಚಾರ. ನ್ಯೂನತೆಗಳ ಅರಿತು ಪರಿಹಾರ ಮಾಡಿಕೊಳ್ಳಬೇಕು ಎಂದರು.
ನಾನು, ಗೃಹ ಸಚಿವರು, ರಾಜ್ಯಪಾಲರು ಏನು ಹೇಳ್ತಾರೆ ಅಂತಲ್ಲ. ನಮ್ಮ ಆತ್ಮತೃಪ್ತಿಗೆ ನಾವು ಕೆಲಸ ಮಾಡ್ಬೇಕು. ಆಗ ಜೀವನ ಸಾರ್ಥಕ ಆಗುತ್ತೆ. ಆ ರೀತಿ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡ್ಬೇಕು. ಬೇರೆಯವರಿಗೆ ನೀವು ಮಾರ್ಗದರ್ಶನ ಆಗ್ಬೇಕು. ಪ್ರಶಸ್ತಿ ಪಡೆದವರು ಸಮಾಜಕ್ಕೆ ಮಾದರಿಯಾಗ್ಬೇಕು. ಇದಕ್ಕಿಂತ ಮತ್ತೊಂದು ತೃಪ್ತಿ ಇಲ್ಲ. ಬೇರೆಯವರು ಪ್ರಶಸ್ತಿ ತೆಗೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.











