ಬಾಗಲಕೋಟೆ; ಬಾಗಲಕೋಟೆ, ದಾವಣಗೆರೆ ನಗರಗಳಲ್ಲಿ ಜನ ದೊಡ್ಡ ಬದಲಾವಣೆ ಬಯಸಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.ಬಾಗಲಕೋಟೆ ಉಪಚುನಾವಣೆ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಣದೀಪ ಸುರ್ಜೆವಾಲಾ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು.
ತಾವೆಲ್ಲ ರಾಜ್ಯ ದೇಶದ ಜನರಿಗೆ ಚುನಾವಣಾ ವಿಚಾರ ತಿಳಿಸುತ್ತಿದ್ದೀರಿ. ಬೈ ಎಲೆಕ್ಷನ್ ವರದಿ ನಮಗೆ ಬಂದಿದೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಗ್ಯಾರಂಟಿ ತಲಿಪಿದೆಯಾ ಎಂದು ಕೇಳ್ತಿದಾರೆ. ಅದಕ್ಕೆ ಬಿಜೆಪಿಯವರು ಟೀಕೆ ಮಾಡ್ತಿದ್ದಾರೆ.ಬಾಗಲಕೋಟೆ, ದಾವಣಗೆರೆ ನಗರಗಳಲ್ಲಿ ಜನ ದೊಡ್ಡ ಬದಲಾವಣೆ ಬಯಸಿದ್ದಾರೆ. ಬೆಲೆ ಏರಿಕೆ ಕಷ್ಟ ಕಾಲದಲ್ಲಿ ಗ್ಯಾರಂಟಿ ಆಸರೆಯಾಗ್ತಿವೆ. ಕೇಂದ್ರ ಸರಕಾರ 15, 551 ಕೋಟಿ ಹಣ ಕೊಡಬೇಕಿತ್ತು ಕೊಡಲಿಲ್ಲ ಎಂದು ವರದಿಯಾಗಿದೆ ಎಂದರು.
ಇವತ್ತಿಂದ ಎಲ್ಲ ಬೆಲೆ ಹೆಚ್ಚಿಗೆ ಆಗ್ತಿದೆ. ಇದು ಜನರಿಗೆ ಹೊರೆಯಾಗ್ತಿದೆ. ಅಚ್ಚೆ ದಿನ್ ಕೂಡ ಹೋಯ್ತು ಸೌದೆ ಭಾಗ್ಯ ಕೊಟ್ಟಿದ್ದಾರೆ. ಅತಿ ಹೆಚ್ಚು ಮತಗಳಿಂದ ನಮ್ಮ ಅಭ್ಯರ್ಥಿಗಳು ಎರಡು ಕಡೆಯೂ ಗೆಲ್ತಾರೆ. ಎಲ್ಲರೂ ಒಗ್ಗಟಿಂದ ಕೆಲಸ ಮಾಡ್ತಿದ್ದಾರೆ. ಬಹಳ ಜನ ದುಡಿಯೋದಕ್ಕೆ ವಲಸೆ ಹೋಗಿದ್ದಾರೆ. ಅವರನ್ನು ಕರೆತರುವ ಕೆಲಸ ಮಾಡಬೇಕು. ಬಾಗಲಕೋಟೆ ನಗರದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಡಬಲ್ ಓಟ್ ಇದೆ. ಇಲ್ಲೂ ಓಟ್ ಇದೆ ಅವರ ಊರಲ್ಲೂ ಓಟ್ ಇದೆ.
ಈ ಬಗ್ಗೆ ಡಿಸಿ ಅವರಿಗೆ ದೂರು ಕೊಡಲು ಹೇಳಿದ್ದೇವೆ. ವಿದ್ಯಾರ್ಥಿಗಳು ಡಬಲ್ ಒಟ್ ಇದ್ದರೆ ಅದನ್ನು ಸರಿ ಮಾಡಿಕೊಳ್ಳಿ.ನಿಮ್ಮ ಊರಲ್ಲಿ ನಿಮ್ಮ ಓಟ್ ಉಳಿಸಿಕೊಳ್ಳಿ. ಇಂತಹ ಡಬಲ್ ಓಟ್ ತಡೆಯೋದಕ್ಕೆ ಪ್ರತ್ಯೇಕ ತಂಡವನ್ನು ರಚನೆ ಮಾಡಿದ್ದೇನೆ ಎಂದು ತಿಳಿಸಿದರು.











