ಮನೆ Latest News ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಎ1 ಆರೋಪಿ ಪವಿತ್ರಾಗೌಡ ಜೈಲುಪಾಲು; ದರ್ಶನ್ ಗೆ ಮತ್ತೆ ಪೊಲೀಸ್ ಕಸ್ಟಡಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಎ1 ಆರೋಪಿ ಪವಿತ್ರಾಗೌಡ ಜೈಲುಪಾಲು; ದರ್ಶನ್ ಗೆ ಮತ್ತೆ ಪೊಲೀಸ್ ಕಸ್ಟಡಿ

0

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  13 ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆ ಇಂದು ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು ಆರೋಪಿಗಳನ್ನು ಮತ್ತೆ ಇಂದು ಕೋರ್ಟ್ ಮುಂದೆ ಹಾಜರುಪಡಿಸಿದರು. ಈ ವೇಳೆ ಸರ್ಕಾರದ ಪರವಾದ ವಕೀಲರಾದ ಪ್ರಸನ್ನಕುಮಾರ್ ಅವರು ದರ್ಶನ್ ಸೇರಿದಂತೆ ಒಟ್ಟು 6 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರು. ಅದರಂತೆ ನ್ಯಾಯಾಧೀಶರು ವಾದವನ್ನು ಆಲಿಸಿ ದರ್ಶನ್ ಹಾಗೂ ಇತರೆ 5 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ. ಎರಡು ದಿನಗಳ ಕಾಲ ಅಂದ್ರೆ ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

ಇನ್ನು ಪ್ರಮುಖ ಆರೋಪಿ ಎ1 ಆರೋಪಿ ಪವಿತ್ರ ಗೌಡ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಹಾಗಾಗಿ ನಟಿ ಪವಿತ್ರ ಗೌಡ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.

ಯಾರಿಗೆಲ್ಲಾ ಪೊಲೀಸ್ ಕಸ್ಟಡಿ?

ಎ2 ದರ್ಶನ್, ವಿನಯ್,ಪ್ರದೋಶ್, ಲಕ್ಷ್ಮಣ್,ನಾಗರಾಜ್ ,ಧನಂಜಯ್

ಯಾರೆಲ್ಲಾ ಜೈಲುಪಾಲು?

ಎ1 ಪವಿತ್ರಾಗೌಡ, ಎ2 ಪವನ್, ಎ5  ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ8 ರವಿಶಂಕರ್ , ಲಕ್ಷ್ಮಣ್, ದೀಪಕ್, ಕೇಶವ್

ಕೋರ್ಟ್ ನಲ್ಲಿ ಏನೇನಾಯ್ತು?

13 ಆರೋಪಿಗಳ ಕಸ್ಟಡಿ ಅಂತ್ಯವಾದ ಹಿನ್ನೆಲೆ ಇಂದು ಅವರನ್ನು ಪೊಲೀಸರು ಬೆಂಗಳೂರಿನ  ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ರು. ಈ ವೇಳೆ ನ್ಯಾಯಾಧೀಶ ವಿಶ್ವನಾಥ್‌ ಸಿ ಗೌಡರ್ ಕಸ್ಟಡಿಯಲ್ಲಿ ನಿಮಗೇನಾದ್ರೂ ತೊಂದರೆ ಆಯ್ತಾ ಎಂದು ಎ1 ಆರೋಪಿ ಪವಿತ್ರಾಗೌಡಳನ್ನ ಪ್ರಶ್ನಿಸಿದ್ದಾರೆ. ಆಗ ಆಕೆ ಇಲ್ಲ ಎಂದಿದ್ದಾಳೆ. ಬಳಿಕ ಎ1 ಆರೋಪಿ ಪವಿತ್ರಾಗೌಡ ಹಾಗೂ ದರ್ಶನ್ ಗೆ ಮೆಡಿಕಲ್ ಟೆಸ್ಟ್ ಆಯ್ತಾ ಎಂದಿದ್ದಾರೆ. ನಿನ್ನೆ ಆಯ್ತು ಎಂದಿದ್ದಾಳೆ ಎ1 ಆರೋಪಿ ಪವಿತ್ರಾಗೌಡ.ಮೆಡಿಕಲ್ ಟೆಸ್ಟ್ ಆಗಿಲ್ಲ ಎಂದ ಎ2 ಆರೋಪಿ ದರ್ಶನ್ ಹೇಳಿದ್ದಾರೆ.

ಬಳಿಕ ವಾದ ಆರಂಭಿಸಿದ ಸರ್ಕಾರಿ ವಕೀಲರಾದ ಪ್ರಸನ್ನಕುಮಾರ್ ಅವರು ನಟ ದರ್ಶನ್, , ಲಕ್ಷ್ಮಣ್ , ವಿನಯ್ ಪ್ರದೋಶ್ , ನಾಗರಾಜ್ ಧನರಾಜ್ ಅವರನ್ನು ಇನ್ನಷ್ಟು ವಿಚಾರಣೆ ನಡೆಸಬೇಕಾಗಿರುವುದರಿಂದ ಅವರನ್ನು ನಮ್ಮ ವಶಕ್ಕೆ ನೀಡಬೇಕು ಅಂತಾ ವಾದ ಮಂಡಿಸಿದರು.ಅಲ್ಲದೇ ಎ1 ಪವಿತ್ರಾಗೌಡ, ಎ3 ಪವನ್, ಎ4 ರಾಘವೇಂದ್ರ ಎ 5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ 8 ರವಿಶಂಕರ್ ಲಕ್ಷ್ಮಣ್, ದೀಪಕ್, ಕೇಶವ್ ಗೆಅವರ ವಿಚಾರಣೆ ಅಂತ್ಯವಾಗಿದೆ ಎಂದಿದ್ದಾರೆ .ಬಳಿಕ ವಾದ ಆಲಿಸಿದ ಜಡ್ಜ್ . ಅವರು ನಟ ದರ್ಶನ್, , ಲಕ್ಷ್ಮಣ್ , ವಿನಯ್ ಪ್ರದೋಶ್ , ನಾಗರಾಜ್ ಧನರಾಜ್ ಈ 6 ಮಂದಿಯ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿದ್ದಾರೆ.ಅಲ್ಲದೇ ಎ1 ಪವಿತ್ರಗೌಡ ಎ3 ಪವನ್, ಎ4 ರಾಘವೇಂದ್ರ ಎ 5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ 8 ರವಿಶಂಕರ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.

ಅದರಂತ ಕಳೆದ 10 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ 13 ಆರೋಪಿಗಳಲ್ಲಿ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.ದರ್ಶನ್ ಸೇರಿದಂತೆ ಉಳಿದ 6 ಆರೋಪಿಗಳನ್ನು ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ಅಲ್ಲದೇ ಬೇರೆ ಬೇರೆ ಪ್ರಕರಣಗಳಲ್ಲಿ ದರ್ಶನ್ ಹೆಸರು ಕೇಳಿ ಬಂದಿರೋದರಿಂದ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.