ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ನಿನ್ನೆ ಆರೋಪಿಗಳನ್ನು ರೇಣುಕಾಸ್ವಾಮಿ ಮೃತದೇಹ ಬಿಸಾಕಿದ ಜಾಗ ಹಾಗೂ ಪಟ್ಟಣಗೆರೆಯ ಕಾರ್ ಶೆಡ್ ಬಳಿ ಕರೆದುಕೊಂಡು ಸ್ಥಳ ಮಹಜರು ನಡೆಸಿದ್ರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ಪಾಟ್ ಮಹಜರ್ ನಡೆಸಲಾಗಿದೆ. ಈ ವೇಳೆ ದರ್ಶನ್ ಎದುರು ಪವಿತ್ರಾಗೌಡ ಕಣ್ಣೀರು ಹಾಕಿದ್ದಾರೆ.ಸ್ಥಳ ಮಹಜರಿಗೆ ಕರೆದುಕೊಂಡು ಹೋದಾಗ ದರ್ಶನ್ ಅವರನ್ನು ನೋಡಿ ಪವಿತ್ರ ಕಣ್ಣೀರು ಹಾಕಿದ್ದಾರೆ.
ನಿನ್ನೆ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಪಂಚನಾಮೆ ಮಾಡಿಸಲಾಯಿತು. ಈ ವೇಳೆ ಈ ವೇಳೆ ದರ್ಶನ್-ಪವಿತ್ರಾಗೌಡ ಎದುರು ಬದುರು ನಿಂತಿದ್ದರು. ಆಗ ದರ್ಶನ್ ಪರಿಸ್ಥಿತಿ ನೋಡಿ ಪವಿತ್ರಾಗೌಡ ಕಣ್ಣೀರಿಟ್ಟಿದ್ದಾರೆ. ಇನ್ನು ಪವಿತ್ರಾಗೌಡ ನೋಡಿ ನಟ ದರ್ಶನ್ ಕೂಡ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಇಬ್ಬರನ್ನ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಮೊನ್ನೆ ಕೋರ್ಟ್ ನಲ್ಲಿಯೂ ಇಬ್ಬರು ಕಣ್ಣೀರು ಹಾಕಿದ್ರು.
ಇನ್ನು ದರ್ಶನ್ ಗೆ ಹೇಳಿ ತಪ್ಪು ಮಾಡ್ಬಿಟ್ಟಿ ಅಂತಾ ಪವಿತ್ರಾ ಗೌಡ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರಂತೆ.ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದನ್ನ ದರ್ಶನ್ ಗೆ ಹೇಳಬಾರದಿತ್ತು. ಹೀಗೆಲ್ಲಾ ಆಗುತ್ತೆ ಅಂತಾ ಕನಸು-ಮನಸಿನಲ್ಲಿಯೂ ಅನ್ಕೊಂಡಿರಲಿಲ್ಲ.ಸ್ವಲ್ಪನಾದ್ರೂ ಕ್ಲೂ ಇದ್ದಿದ್ರೆ ಈ ವಿಚಾರ ದರ್ಶನ್ ಗೆ ಹೇಳ್ತಾ ಇರಲಿಲ್ಲ.ಅಂತಾ ಪವಿತ್ರ ಪಶ್ಚಾತಾಪ ಪಟ್ಟುಕೊಂಡಿದ್ದಾರಂತೆ.
ದರ್ಶನ್ ಒಬ್ಬರನ್ನೇ ಕರೆ ತಂದು ಸ್ಥಳ ಮಹಜರು
ನಿನ್ನೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಾಯ್ತು. ಕೊಲೆಯಾದ ಜಾಗ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಕಾರ್ ಶೆಡ್ ಬಳಿಗೆ ಕರೆದುಕೊಂಡು ಹೋಗಲಾಯ್ತು. ಪ್ರಕಪರಣದ ಎ2 ಆರೋಪಿ ಆಗಿರುವ ದರ್ಶನ್ ಅವರನ್ನು ಕಾರ್ ಶೆಡ್ ಬಳಿ ಕರೆ ತಂದು ಮಾಹಿತಿ ಕಲೆ ಹಾಕಲಾಯ್ತು. ಅನ್ನಪೂರ್ಣೇಶ್ವರಿ ನಗರದ ಪೊಲೀಸರು ದರ್ಶನ್ ರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.ದರ್ಶನ್ ಅವರನ್ನು ಒಬ್ಬರನ್ನೇ ಕರೆ ತಂದು ಸ್ಥಳ ಮಹಜರು ನಡೆಸಿದ್ರೆ ಉಳಿದ ಆರೋಪಿಗಳನ್ನು ಒಟ್ಟಿಗೆ ಕರೆತಂದು ದರ್ಶನ್ ಗೂ ಮುನ್ನ ಸ್ಥಳ ಮಹಜರು ನಡೆಸಲಾಯ್ತು.
ಇನ್ನು ಆರೋಪಿಗಳು ವಿಚಾರಣೆ ವೇಳೆ ಮಾತನಾಡಿಕೊಂಡು ಪ್ಲ್ಯಾನ್ ಮಾಡಿಕೊಂಡು ಉತ್ತರ ನೀಡುವ ಸಾಧ್ಯತೆಯಿರೋ ಕಾರಣ ಪೊಲೀಸರು ಕೂಡ ಭರ್ಜರಿಯಾಗಿಯೇ ಪ್ಲ್ಯಾನ್ ಮಾಡಿದ್ದಾರೆ. 13 ಆರೋಪಿಗಳನ್ನು ಮೂರು ತಂಡಗಳಾಗಿ ಮಾಡಿಕೊಂಡು ವಿಚಾರಣೆ ಮಾಡೋದಕ್ಕೆ ನಿರ್ಧರಿಸಿದ್ದಾರೆ.ಅದರಂತೆ ಮೂರು ತಂಡಗಳಾಗಿ ಮಾಡಿಕೊಂಡು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.