ಮನೆ Latest News ರಾಜರಾಜೇಶ್ವರಿ ನಗರದಿಂದ ಪರಪ್ಪನ ಅಗ್ರಹಾರಕ್ಕೆ ; ಜೈಲಿನಲ್ಲಿ ಪವಿತ್ರ ಗೌಡ ಈಗ ಕೈದಿ ನಂಬರ್ 6024

ರಾಜರಾಜೇಶ್ವರಿ ನಗರದಿಂದ ಪರಪ್ಪನ ಅಗ್ರಹಾರಕ್ಕೆ ; ಜೈಲಿನಲ್ಲಿ ಪವಿತ್ರ ಗೌಡ ಈಗ ಕೈದಿ ನಂಬರ್ 6024

0

ಬೆಂಗಳೂರು; ದರ್ಶನ್ ಅಭಿಮಾನಿ ರೇಣುಕಾ ಸ್ವಾಮಿ ಕೊಲೆ ಪ್ರಕರಣ 13 ಆರೋಪಿಗಳ ಪೊಲೀಸ್ ಕಸ್ಟಡಿ ನಿನ್ನೆಗೆ ಅಂತ್ಯವಾದ ಹಿನ್ನೆಲೆ 13 ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಯಿತು. ಈ ವೇಳೆ ವಾದ ಮಂಡಿಸಿದ ಸರ್ಕಾರದ ಪರ ವಕೀಲರಾದ ಪ್ರಸನ್ನಕುಮಾರ್ ಅವರು  ನಟ ದರ್ಶನ್, , ಲಕ್ಷ್ಮಣ್ , ವಿನಯ್ ಪ್ರದೋಶ್ , ನಾಗರಾಜ್ ಧನರಾಜ್ ಅವರನ್ನು ಇನ್ನಷ್ಟು ವಿಚಾರಣೆ ನಡೆಸಬೇಕಾಗಿರುವುದರಿಂದ ಅವರನ್ನು ನಮ್ಮ ವಶಕ್ಕೆ ನೀಡಬೇಕು ಅಂತಾ ವಾದ ಮಂಡಿಸಿದರು.ಅಲ್ಲದೇ ಎ1 ಪವಿತ್ರಾಗೌಡ, ಎ3 ಪವನ್, ಎ4 ರಾಘವೇಂದ್ರ ಎ 5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ 8 ರವಿಶಂಕರ್ ಲಕ್ಷ್ಮಣ್, ದೀಪಕ್, ಕೇಶವ್  ಅವರ ವಿಚಾರಣೆ ಅಂತ್ಯವಾಗಿದೆ ಎಂದಿದ್ದಾರೆ .ಬಳಿಕ ವಾದ ಆಲಿಸಿದ ಜಡ್ಜ್ . ಅವರು ನಟ ದರ್ಶನ್, , ಲಕ್ಷ್ಮಣ್ , ವಿನಯ್ ಪ್ರದೋಶ್ , ನಾಗರಾಜ್ ಧನರಾಜ್ ಈ 6 ಮಂದಿಯ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿದ್ದಾರೆ.ಅಲ್ಲದೇ ಎ1 ಪವಿತ್ರಗೌಡ ಎ3 ಪವನ್, ಎ4 ರಾಘವೇಂದ್ರ ಎ 5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ 8 ರವಿಶಂಕರ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಅದರಂತೆ  8 ಆರೋಪಿಗಳನ್ನು ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ದರ್ಶನ್ ಪ್ರಾಣ ಸ್ನೇಹಿತೆ ಪವಿತ್ರ ಗೌಡಗೆ ಜೈಲಿನಲ್ಲೂ ಡಿ ಬ್ಯಾರಕ್  ನೀಡಲಾಗಿದೆ. ಪವಿತ್ರ ಅವರಿಗೆ ಇಂದು ಬೆಳಗ್ಗೆ ಕೈದಿ ಸಂಖ್ಯೆ ಕೊಡಲಾಗಿದೆ. ಅದರಂತೆ ಪವಿತ್ರ ಗೌಡಗೆ ವಿಚಾರಣಾಧೀನ ಕೈದಿ ಸಂಖ್ಯೆ 6024 ನ್ನು ನೀಡಲಾಗಿದೆ.

ಜೈಲಿನಲ್ಲೂ ಪವಿತ್ರಾಗೆ “ಡಿ” ಬ್ಯಾರಕ್

ಇನ್ನು ಪವಿತ್ರ ಗೌಡ ಜೈಲಿನಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಯಾರೊಡನೆಯೂ ಮಾತನಾಡುತ್ತಿಲ್ಲ ಎನ್ನಲಾಗಿದ್ದು ನಿನ್ನೆ ರಾತ್ರಿ ಊಟ ಮಾಡದೆ ನಿದ್ದೆ ಮಾಡದೇ ರಾತ್ರಿ ಕಳೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ಬೆಳಗ್ಗೆ ಉಪಹಾರ ಕೂಡ ಸೇವಿಸಿಲ್ಲ ಎನ್ನಲಾಗುತ್ತಿದೆ. ಇಷ್ಟು ದಿನ ಹೈ ಫೈ ಲೈಫ್ ಲೀಡ್ ಮಾಡುತ್ತಿದ್ದ ಪವಿತ್ರ ಗೌಡ ಇದೀಗ ಜೈಲಿನಲ್ಲಿ ನರಕ ಅನುಭವಿಸುವಂತಾಗಿದೆ. ತಾನೇ ಮಾಡಿದ ತಪ್ಪಿಗೆ ಇವತ್ತು ಕಣ್ಣೀರಿನಲ್ಲಿ ದಿನ ಕಳೆಯುವಂತಾಗಿದೆ.